“ಒಣಕ್ಕೆಂದ ನಾರು ತೆಗವ ಜಾತಿ” (ಹವ್ಯಕ ನುಡಿಗಟ್ಟು–8)

July 15, 2014 ರ 5:30 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

’ಒಣಕ್ಕೆಂದ ನಾರು ತೆಗವ ಜಾತಿ’ (ಹವ್ಯಕ ನುಡಿಗಟ್ಟು—8 )

ಎಂಗೊ ಸಣ್ಣದಿಪ್ಪಗ  ಎನ್ನಪ್ಪ,ಎರಡು ಜೆನ ದೊಡ್ಡಪ್ಪಂದ್ರು, ದೊಡ್ಡಬ್ಬೆಕ್ಕೊ,ಇವರೆಲ್ಲೋರ ಮಕ್ಕೊ,ಹೇಳಿ  ಕೂಡು ಕುಟುಂಬಯಿದ.     ಮನೆ ಸದಸ್ಯರ ಲೆಕ್ಕ ಹಾಕುವಗ 35 ಜೆನ ಆವುತ್ತು. ಅಲ್ಲಿ ಉದ್ಯೋಗಸ್ತರು ಹೇಳಿ  ಆರೂ ಇಲ್ಲೆ ಆ ಕಾಲಲ್ಲಿ. ಎಲ್ಲವೂ ನಾಲ್ಕು ಅಡಕ್ಕೆ ಮರಂದಲೆ ಆಯೆಕ್ಕು.ಎಂಗೊ ಕಲಿವಗ ಹೈಸ್ಕೂಲಿಲ್ಲಿ  ಫೀಸು ಇದ್ದತ್ತು. ಅಂಬಗ ಪೈಸಿಂಗೆ ತಾಪತ್ರಯ. ಆ  ಒಂತಿಗೆ, ಈ ಒಂತಿಗೆ ಹೇದೊಂಡು  ಎಡೆ ಬಿಡದ್ದೆ ಕಲೆಕ್ಷನಿಂಗೆ ಬಪ್ಪಾಗ ಎನ್ನ ದೊಡ್ಡಪ್ಪ ಹೇಳುಗು   “ಒಣಕ್ಕೆಂದ  ನಾರು ತೆಗವಲೆ   ಹೆರಟ್ರೆ ಎಂತ ಮಾಡುಸ್ಸಪ್ಪ!”

ಅಪ್ಪು, ಒಣಕ್ಕೆ ಹೇದರೆ ಭತ್ತ ಮೆರಿವಲೆ ಉಪಯೋಗುಸುವ ಸಾದನ.ಅದರ ತೆಂಗಿನ ಮರಂದ ಮಾಡುವದು.ಅದರಲ್ಲಿ ’ನಾರು’ ಇಲ್ಲೆಯಿದ!.  ಹಶುವಪ್ಪಗ  ಹೊಟ್ಟಗೆ ಬೀಳುತ್ತ ಅಶನಕ್ಕೆ ಬೇಕಾಗಿ ಗೈವ  ಒಣಕ್ಕೆ! ಅದರಲ್ಲಿ ನಾರು ಇಲ್ಲದ್ರೂ ನಾರು ತೆಗವದು ಹೇದೊಂಡು ಕೆತ್ತಲೆ ಹೆರಟ್ರೆ ;ಒಣಕ್ಕೆ ನಾಶ ಆಗಿ ಹೋಕನ್ನೆಪ್ಪಾ!.

ಊರಿಲ್ಲಿ ಕಡುಬಡವರು, ಮಧ್ಯಮ ವರ್ಗ, ಶ್ರೀಮಂತರು  ಹೀಂಗೆ ಆರ್ಥಿಕತೆಂದ  ನೋಡಿರೆ   ಮೂರು   ತರಲ್ಲಿ  ಇಕ್ಕು.  ದೊಡ್ಡೋರ ಹತ್ರಂದ, ಪೈಸ ಇದ್ದ ಧನಿಕರ ಕೈಂದ, ಕೇಳೆಕ್ಕಲ್ಲದ್ದೆ;  ಇಲ್ಲದ್ದ  ಪಾಪದವರ ಹತ್ರಂದ ಕೇಳೀರೆ ಎಲ್ಲಿಂದ ಕೊಡುವದು ಹೇಳ್ವ ಮಾತೇ ಈ ಹೇಳಿಕೆ,  ಬರೇ ಒಂತಿಗೆ-ಸಂತಿಗ್ಗೆ ಮಾಂತ್ರ  ಅನ್ವೈಸುದಲ್ಲ ಇದು. ಕೆಲವುಜೆನ ಕೊಡುತ್ತವು ಹೇಳಿತ್ಕಂಡ್ರೆ ಈಡು ಮೂಡಿಲ್ಲದ್ದೆ ವಸೂಲಿಮಾಡುಗು!. ಯಾವುದೇ ವಸ್ತು ತೀರಾ ಕಮ್ಮಿ ಇಪ್ಪವರತ್ರಂದ ಎಳದು ತೆಗವ ಹಾಂಗೆ ಮಾಡ್ಳಾಗ ಹೇಳುವ ಅಂತರಾಳದ ತಿರುಳಿದು.

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಮುಳಿಯ ಭಾವ
  raghu muliya

  ತುಂಬಾ ಅರ್ಥಪೂರ್ಣ ನುಡಿಗಟ್ಟು .. ಧನ್ಯವಾದ ಅತ್ತೆ .

  [Reply]

  VA:F [1.9.22_1171]
  Rating: 0 (from 0 votes)
 2. Laxmisha Shankaramoole

  ಧನ್ಯವಾದ , ರಘುವಿಂಗೆ

  [Reply]

  VA:F [1.9.22_1171]
  Rating: 0 (from 0 votes)
 3. Laxmisha Shankaramoole

  ಹರೇರಾಮ, ಧನ್ಯವಾದ ರಘು,

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀದೀಪಿಕಾಅಕ್ಷರ°ತೆಕ್ಕುಂಜ ಕುಮಾರ ಮಾವ°ಪವನಜಮಾವಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಮುಳಿಯ ಭಾವಶೀಲಾಲಕ್ಷ್ಮೀ ಕಾಸರಗೋಡುಕೇಜಿಮಾವ°ಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಡಾಗುಟ್ರಕ್ಕ°ಗಣೇಶ ಮಾವ°ಮಂಗ್ಳೂರ ಮಾಣಿಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಮಾಷ್ಟ್ರುಮಾವ°vreddhiಪೆರ್ಲದಣ್ಣದೊಡ್ಡಭಾವಬಟ್ಟಮಾವ°ಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ