ಕಂಟ ಪುಚ್ಚೆ ಪ್ರಸಂಗವು

February 25, 2015 ರ 5:34 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರೆಸ್ಸು ಇಪ್ಪ ಜಾಗೆಗೆ “ಪ್ರೆಸ್ಸು ಕೋರ್ನರು” ಹೇಳಿ ಹೆಸರು.

ಪ್ರೆಸ್ಸಿನ ಹಿಂದಾಣ ಹೊಡೇಲಿ ಹಳೇ ಕಾಲದ ಓಡಿನ ಕೆಲವು ರೂಮುಗ ಇದ್ದು. ಮೊದಲಿಂಗೆ ಅದು ಕಾಸುತೂರುಬಾ ಮೆಡಿಕಲ್ಲು ಕೋಲೇಜಿಲಿ ಕಲಿವ ಮಕ್ಕಳ ಹೋಸ್ಟೇಲು ಆಗಿತ್ತಡ. ಅಲ್ಲಿ ಪ್ರೆಸ್ಸು ಆದ ಮೇಲೆ ಪ್ರೆಸ್ಸಿನವು ಅದರ ತೆಕ್ಕೊಂಡು ಅದಕ್ಕೆ “ಪ್ರೆಸ್ಸು ಕೋಟ್ರಾಸು” ಹೇಳಿ ಹೆಸರು ಮಡುಗಿದವು.

ಅಲ್ಲೇ ಒಂದು ರೂಮಿಲಿ ಕಿಶೋರ° ಇಪ್ಪದು. ಅದಕ್ಕೆ ಬಾಡಿಗೆ ಎಂತ ಕೊಡ್ಳೆ ಇಲ್ಲೆ. ಪ್ರೆಸ್ಸಿಲಿ ಕೆಲಸ ಮಾಡುವ್ವವಕ್ಕೆ ವಾಸಕ್ಕೆ ಇಪ್ಪಲೆ ಅದರ ಕೊಡುದು.

ಕಿಶೋರಂದೆ ಅದೇ ಪ್ರೆಸ್ಸಿಲಿ ಕೆಲಸ ಮಾಡುದು. ಮೇಸ್ತ್ರಿ ಕೆಲಸ ಹೇಳ್ಲಕ್ಕು. ಕೆಲಸದ ಹೆಸರು ಹೇಳ್ತರೆ ಸುಪ್ರೈಸರು ಹೇಳ್ತವು. ಅವನ ಐಡೆಂಟಿಟಿ ಕಾರ್ಡಿಲಿ “ಕಿಶೋರ ಕೃಷ್ಣ, ಸುಪೆರ್ವೈಸೆರ್ ” ಹೇಳಿ ಬರಕ್ಕೊಂಡಿದ್ದು. ಆದರೆ ಕೆಲಸ ಮೇಸ್ತ್ರಿದೆ. ಅಲ್ಲಿ ಕೆಲಸ ಮಾಡುವ ಕೂಸುಗಳ ಮೇಪು ಮಾಡುದು. ಸಂಬಳ ಕಮ್ಮಿ ಇತ್ತಿದ್ದ ಕಾರಣ ಕಿಶೋರಂಗೆ ಅಲ್ಲಿ ಸೇರ್ಲೆ ಸುರುವಿಂಗೆ ಮನಸ್ಸೇ ಇತ್ತಿಲ್ಲೆ. ಮತ್ತೆ ಕೂಸುಗಳ ಮೇಪು ಮಾಡುದು ಹೇಳಿ ಗೊಂತಾದ ಮೇಲೆ ಸಂಬಳ ಕಮ್ಮಿ ಇದ್ದರೂ ಅಡ್ಡಿ ಇಲ್ಲೆ ಹೇಳಿ ಕೆಲಸಕ್ಕೆ ಅವ° ಸೇರಿದ್ದು, ಲೈನು ಹಾಕುಲಾವುತ್ತಲ್ಲ.

ಊರಿನ ಹೆಚ್ಚಿನ ಕೂಸುಗೊಕ್ಕೆ ಸುರುವಿಂಗೆ ಕೆಲಸ ಸಿಕ್ಕುದು ಇದೇ ಪ್ರೆಸ್ಸಿಲಿ. ಪುಸ್ತಕಂಗಳ ಅಟ್ಟಿ ಕಟ್ಟುದು, ತೆಕ್ಕೊಂಡು ಹೋಗಿ ಅತ್ತಿತ್ತೆ ಮಡುಗುದು, ಕಾಗದದ ಅಟ್ಟಿಗಳ ಕೊಂಡೋಪದು, ಹೀಂಗಿಪ್ಪ ಕೆಲಸಂಗಳ ಈ ಕೂಸುಗೊಕ್ಕೆ ಕೊಡುದು, ಮಾಡ್ಸುದು ಕಿಶೋರನ ಕೆಲಸ. ಅವರ ನೋಡಿಗೊಂಡು, ಅವರೊಟ್ಟಿಂಗೆ ಚೆಪ್ಪೆ ಗುದ್ದಿ ಗೊಂಡು, ಅವರ ಗಾಳಿಗೆ ಹಿಡ್ಕೊಂಡು, ಕೆಲಸ ಮಾಡ್ಸುದು ಹೇಳಿರೆ ಕಿಶೋರಂಗೆ ಗಮ್ಮತ್ತು. ಅಂಬಗ ಅಲ್ಲಿ ಕೆಲಸ ಮಾಡುವಗ ಅವಂಗೆ ಏವ ಕೂಸುದೇ ತಾಗಿದ್ದಿಲ್ಲೆಯ ಹೇಳಿ ಕೇಳೆಡಿ. ಒಂದು ಸರ್ತಿ ಒಂದು ಕೊಂಕಣ್ದಿ ತಾಗಿತ್ತಿದ್ದು. ಆ ಕತೆ ಇನ್ನೊಂದರಿ ಹೇಳ್ತೆ.

ಕಿಶೋರ° ಹಾಲು ತೆಕ್ಕೊಂಬದು ದಿನಕ್ಕೆ ಅರ್ಧ ಲೀಟರು ಮಾಂತ್ರ. ಅವಂಗೆ ಒಬ್ಬಂಗೆ ಅಷ್ಟು ಸಾಕಾವುತ್ತು. ರೂಮಿಲಿ ಅವಂದೇ, ಅವನ ರೂಮುಮೇಟು ತನಿಯಪ್ಪನುದೆ ಇಬ್ರೇ ಇಪ್ಪದು. ತನಿಯಪ್ಪ ಹೇಳಿರೆ ಪೂಜಾರಿ. ಅದರ ಹೆಸರಿನ ಅದು “ತಣಿಯಪ್ಪ” ಹೇಳಿ ಹೇಳಿಗೊಂಬದು. ಅದು ‘ನ’ಕಾರಕ್ಕೆ ‘ಣ’ಕಾರವನ್ನುದೇ, ‘ಲ’ ಕಾರಕ್ಕೆ ‘ಳ’ ಕಾರವನ್ನುದೇ ಹೇಳುದು. ಉದಾಹರಣೆಗೆ “ಹುಲಿಕಲ್ಲು ಘಾಟ್” ಹೇಳಿ ಇದ್ದರೆ ಅದರ “ಹುಳಿಕಳ್ಳು ಘಾಟು” ಹೇಳುಗು. ಈ ತನಿಯಪ್ಪ, ಅರ್ಧ ಲೀಟರು ಹಾಲು ಅದಕ್ಕೆ ತೆಕ್ಕೊಳ್ತು. ತೆಕ್ಕೊಂಬದು ಬೇರೆ ಬೇರೆ ಆದರೂ ಒಟ್ಟು ಮಾಡಿ ಕಾಯಿಶುದು. ಮತ್ತೆ ನೆರವು ಎರದು ಮೊಸರು ಮಾಡುದು. ಮೊಸರು ಮಾಡುವ ಕೆಲಸ ಕಿಶೋರಂದೆ. ಎಂತಕೆ ಹೇಳಿರೆ ತಣಿಯಪ್ಪಂಗೆ ಮೊಸರು ಮಾಡುವ ಹಿಡಿಪ್ಪು ಸಿಕ್ಕಿದ್ದಿಲ್ಲೆ. ಹುಳಿ ಬರುಸಿ ಕಳ್ಳು ಆದರೂ ಮಾಡುಗು, ಆದರೆ ಹುಳಿ ಬರುಸಿ ಮೊಸರು ಮಾಡ್ಳೆ ಅದರ ಕೈಲಿ ಎಡಿಯ. ರೂಮಿಲಿ ಒಂದು ದಿನ ಕಿಶೋರ° ಅಡಿಗೆ ಮಾಡಿರೆ ತಣಿಯಪ್ಪ ಇನ್ನೊಂದು ದಿನ ಅಡಿಗೆ ಮಾಡುದು. ಒಬ್ಬ° ಒಂದು ದಿನ ಪಾತ್ರೆ ತೊಳದರೆ ಇನ್ನೊಬ್ಬ° ಇನ್ನೊಂದಿನ ಪಾತ್ರೆ ತೊಳವದು.

ಮೊದಲು ಒಂದು ಅಜ್ಜಿ ಇವಕ್ಕೆ ಹಾಲು ಕೊಟ್ಟುಗೊಂಡು ಇತ್ತು. ಅದರ ಹಾಲು ದಿನ ಕಳುದ ಹಾಂಗೆ ನೀರು ನೀರು ಅಪ್ಪದು. ಕೇಳಿರೆ “ದನ ಹೆಚ್ಚು ನೀರು ಕುಡುದರೆ ಆನೆಂತ ಮಾಡ್ಳಾವುತ್ತು” ಹೇಳಿ ಕೇಳುಗು. ಕಡೆಂಗೆ ಒಂದಿನ ಅದರ ಬಿಟ್ಟು ಪೆಕೇಟು ಹಾಲು ತಪ್ಪಲೆ ಸುರು ಮಾಡಿದವು.

ಹಾಲು ಬಪ್ಪದು ಉದಿಯಪ್ಪಗ. ಬಂದ ಹಾಲಿನ ಕಾಯಿಷಿ ಚಾ ಮಾಡಿ ಕುಡುದು, ತಣಿಯಪ್ಪಂಗುದೇ ಚಾ ಮಾಡಿ ಮಡುಗಿ, ಒಳುದ ಹಾಲಿನ ಒಂದು ಪಾತ್ರೆಲಿ ಮಡುಗುವ ಕ್ರಮ. ತನಿಯಪ್ಪಂದು ಹೆಚ್ಚಾಗಿ ಕಸ್ತಲಪ್ಪಗಾಣ ಶಿಫ್ಟು. ಅದು ರೂಮಿಂಗೆ ಎತ್ತುದು ಕಸ್ತಲಪ್ಪಗ ಎರಡು ಗಂಟೆ ಅಕ್ಕು. ಹಾಂಗೆ ಅದು ಉದಿಯಪ್ಪಗ ಇವ° ಏಳುವ ಹೊತ್ತಿಂಗೆ ಗೊರಕ್ಕೆ ಹೊಡಕ್ಕೊಂಡು ಇಕ್ಕು. ಅದರ ಇವ° ಏಳುಸುವ ಕ್ರಮ ಇಲ್ಲೆ. ಇವನ ಕೆಲಸ ಮುಗುಸಿ ಇವ° ಸೀದಾ ಆಪೀಸಿಂಗೆ ಹೋಪದು.

ಪಾತ್ರೆಲಿ ಮಡುಗಿದ ಹಾಲಿಲಿ ಹೊತ್ತೋಪಗ ತಣಿಯಪ್ಪ ಚಾ ಮಾಡಿ , ಇವಂಗುದೇ ಮಡುಗಿಕ್ಕಿ, ಹೋವುತ್ತು. ಕಸ್ತಲಪ್ಪಗ ಒಳುದ ಹಾಲಿಂಗೆ ನೆರವು ಎರದು ಮಡುಗಿರೆ, ಮಾರ್ಣೇ ದಿನಕ್ಕೆ ಅದು ಮೊಸರು ಆಗಿರ್ತು. ಉಂಬಗ ಅಶನಕ್ಕೆ ಅದರನ್ನೇ ಹಾಯ್ಕೊಂಡು, ಮನೆಂಗ ತಂದ ಮಾವಿನ ಮೆಡಿ ಉಪ್ಪಿನ ಕಾಯಿ ಹಾಕಿಕೊಂಬದು.PuchchePrasanga

ಹೀಂಗೆ ನಡಕ್ಕೊಂಡು ಬತ್ತಾ ಇಪ್ಪಗ… ಒಂದು ದಿನ ಉದಿಯಪ್ಪಗ ಕಿಶೋರ° ಮೊಸರಿನ ಪಾತ್ರೆ ನೋಡಿರೆ, ಪಾತ್ರೆ ಮುಚ್ಚಲು ರಟ್ಟಿದ್ದು. ಒಳ ಮೊಸರು ಇಲ್ಲೆ.

ಕಿಶೋರಂಗೆ ತಣಿಯಪ್ಪನ ಮೇಲೆ ಭಯಂಕರ ಪಿಸುರು ಎಳಗಿತ್ತು. ” ಮಂಗ, ಪೂರ ಮೊಸರಿನ ಉರ್ಪಿ ಮನುಗಿದ್ದು.” ಅದರ ನೋಡಿರೆ, ಗುಡಿ ಹೆಟ್ಟಿ ಒರಗಿದ್ದು.

ಒಂದು ನಿಮಿಷ ಕಿಶೋರಂಗೆ ಎಂತ ಮಾಡೆಕ್ಕು ಹೇಳಿಯೇ ಗೊಂತಾಯಿದಿಲ್ಲೆ. ಅದರ ಹತ್ತರೆ ಕೇಳಿಯೇ ಆಯೆಕ್ಕಷ್ಟೆ. ಎಂತಕೆ ಪೂರ ಮೊಸರು ಕುಡ್ದು? ಇನ್ನೂ ಉಂಬಲೆ ಮೊಸರಿಂಗೆ ಎಂತ ಮಾಡುದು?

“ಎ ತಣಿಯಪ್ಪ, ಏಳಾ… ನಿನಗೆಂತ ಮಂಡೆ ಸಮ ಇಲ್ಲೆಯಾ?” ತಣಿಯಪ್ಪನ ದರ ದರ ಹಂದಾಡಿಸಿ ಏಳ್ಸಿದ°.

“ಹಾಂ..ಹೂಂ … ಎಂತದಾ?” ತಣಿಯಪ್ಪ ಅತ್ಲಾಗಿ ಇತ್ಲಾಗಿ ಹೊರಳುತ್ತಲ್ಲದ್ದೆ ಏಳ್ತಿಲ್ಲೆ. ಏಳ್ಲೆ ಒರಕ್ಕು ಬಿಡೆಕ್ಕನ್ನೆ.

“ಏಳಾ…. ಮಂಗ… ಮೊಸರು ಪೂರಾ ಕುಡುದು ಮುಗುಸಿದ್ದೆನ್ನೆ… ಮಂಡೆ ಸಮ ಇದ್ದಾ ಇಲ್ಲೆಯಾ?” ಕಿಶೋರನ ಪಿಸುರು ಸರಿ ಎಳಗಿದ್ದು. ತಣಿಯಪ್ಪನ ಹೊದಕ್ಕೆ ಎಳದು ಹಾಕಿದ.

ತಣಿಯಪ್ಪ ಕಣ್ಣು ಪುರುಂಚಿಕೊಂಡು ಎದ್ದು ಕೂದತ್ತು. “ಎಂತದಾ ನಿನ್ನ ಕರ್ ಕರಿ?”

“ನಿನಗೆ ಸ್ವಯ ಇದ್ದ? ಅಲ್ಲ… ಮೊಸರು ಎಲ್ಲ ಉರ್ಪಿ ಮುಗುಸಿ ಕುದ್ಕನ ಹಾಂಗೆ ಒರಗಿದ್ದೆ ಅಲ್ಲದಾ? ಇನ್ನೂ ಉಂಬಲೆ ಎಂತ ಮಾಡುದು?”

“ಆರು ಮೊಸರು ಉರ್ಪಿದ್ದು?”

“ನೀನೇ… ಇನ್ನಾರು?”

“ಎಂತ ಮೊಸರು ಇಲ್ಲೆಯಾ?” ಮಾಡ್ಲೆ ಎಡಿಯದ್ರೂ ತಣಿಯಪ್ಪಂಗೆ ಮೊಸರು ಉಂಬಲೆ ಬೇಕು.

“ಆದೇ ನಿನ್ನತ್ರೆ ಕೇಳಿದ್ದು, ಮೊಸರು ಪೂರ ನೀನೇ ಅಲ್ಲದಾ ಉರ್ಪಿದ್ದು?”

ತಣಿಯಪ್ಪಂಗೆ ರಜಾ ಹೊತ್ತು ಕಕಮಕ ಆತು.

“ಎ… ಆಣು ಉರ್ಪಿದ್ದಿಲ್ಲೆ. ನೀಣೆ ಉರ್ಪಿಕ್ಕಿ ಎಣ್ಣ ಮೇಲೆ ಹಾಕುತ್ತೆಯ?” ತಣಿಯಪ್ಪಂಗು ಪಿಸುರು ಎಳಗಿತ್ತು.

ಈಗ ಕಕಮಕ ಆದ್ದು ಕಿಶೋರಂಗೆ.

“ನೋಡು ಇಲ್ಲಿ ಮೊಸರು ಇಲ್ಲೆ. ನೀನು ಮುಗುಶಿದ್ದಿಲ್ಲೆ ಹೇಳಿ ಆದರೆ ಮೊಸರು ಎಲ್ಲಿಗೆ ಹೋತು?”

ತಣಿಯಪ್ಪ ಎದ್ದಿಕ್ಕಿ ಬಂದು ಮೊಸರಿನ ಪಾತ್ರೆಯ ಒಳ ನೋಡಿತ್ತು. ಮೊಸರಿಲ್ಲೆ.

ಕಿಶೋರನ ಮೋರೆ ನೋಡಿತ್ತು.

“ನೋಡು ಆಣು ಮೊಸರು ಕುಡ್ದಿಲ್ಲೆ. ನೀಣೆ ಕುಡುಡಿರೆಕ್ಕು… ಇಲ್ಲದ್ರೆ ಬೇರೆಂತಾತು?”

“ಎಲಾ ಕತೆಯೇ… ನೀನುದೆ ಕುಡ್ದಿಲ್ಲೆ, ಆನುದೇ ಕುಡ್ದಿಲ್ಲೆ ಅಂಬಗ ಪಾತ್ರೆಲಿ ಇತ್ತ ಮೊಸರು ಎಂತಾತು?”

ಈಗ ಇಬ್ರಿಂಗೂ ಮಂಡೆಬೆಸಿ ಸುರು ಆತು. ಪಾತ್ರೆಲಿ ಇತ್ತಿದ್ದ ಮೊಸರು ಎಂತಾತು?

ಅವರ ರೂಮು ಇದ್ದಲ್ದ? ಅದು ಹಳೆಕಾಲದ ಕಟ್ಟೋಣ. ಮದಲಿಂಗೆ ಅದು ಮಕ್ಕಳ ಹೋಶ್ಟೇಲು ಆಗಿತ್ತಲ್ಲದಾ? ಆ ಕಾಲಲ್ಲಿ ಯಾವದೋ ಒಂದು ಹುಡುಗ° ಪರೀಕ್ಷೆಲಿ ಪೈಲು ಆದ್ದಕ್ಕೆ ಕೊರಳಿಂಗೆ ಬಳ್ಳಿ ತೆಕ್ಕೊಂಡು ಸತ್ತೋಗಿತ್ತು ಹೇಳಿ ಅಲ್ಲಿ ಮೊದಲೇ ಗಾಳಿ ಸುದ್ದಿ ಇತ್ತು. ಬಹುಶ ಆ ಹುಡುಗ° ಬೂತವೋ ಪ್ರೇತವೋ ಆಗಿ ಆ ಮೊಸರಿನ ಕುಡುದಿಕ್ಕಾ ಹೇಳಿ ಒಂದು ಸಲ ಕಿಶೋರಂಗೆ ಗುಮಾನಿ ಆತು. ಆದರೆ ಬೂತ ಪ್ರೇತಂಗೊಕ್ಕೆ ಮೊಸರು ಕುಡಿವಲೆ ಎಡಿಗಾ? ಹಾಂಗೆ ಎಲ್ಲಿಯಾದರೂ ಕುಡಿತ್ತು ಹೇಳಿಯೇ ಗ್ರೇಶಿದರೂ ಅದು ಅವಕ್ಕೆ ಕರಗುದು ಹೇಂಗೆ? ಮತ್ತೆ ಅವ° ಅದರ ತಣಿಯಪ್ಪಂಗೆ ಹೇಳ್ಲೆ ಹೋಯಿದಾಯಿಲ್ಲೆ. ಅದು ಅಪ್ಪು ಹೇಳಿ ಗ್ರೇಶಿ ರೂಮಿಂದಲೇ ಓಡಿ ಹೋಕು.

ಇಬ್ರುದೇ ರಜಾ ಹೊತ್ತು ಕೂದು ಆಲೋಚನೆ ಮಾಡಿದವು. ಕಡೇಂಗೆ ತಣಿಯಪ್ಪಂಗೆ ರಪ್ಪ ಅಂದಾಜಾತು. ಒಂದೊಂದು ಸರ್ತಿ ಅಪ್ರೂಪಕ್ಕೆ ಅದಕ್ಕೆ ಹಾಂಗಪ್ಪದಿದ್ದು.

“ಗೊತ್ತಾಯ್ತ… ಅದು ಪುಚ್ಚೆ…”

ಕಿಶೋರಂಗು ಅದು ತಲೆಗೆ ಹೊಕ್ಕಿತ್ತು. ನಿಂಗ ಎಂತರ ನೋಡುದು ಹಾಂಗೆ? ಪುಚ್ಚೆ ತಲೆಗೆ ಹೊಕ್ಕಿದ್ದಲ್ಲ. ವಿಷಯ ತಲೆಗೆ ಹೊಕ್ಕಿತ್ತು ಹೇಳಿ ಅನು ಹೇಳಿದ್ದು. ಪೆದಂಬು ಆಲೋಚನೆ ಮಾಡೆಡಿ.

ಅಪ್ಪು. ಆಚ ಈಚ ಹೊಡೆಯಾಣ ರೂಮಿನವು ಹೇಳುದರ ಇವುದೇ ಕೇಳಿದ್ದವು, ಈಗೀಗ ಒಂದು ಪುಚ್ಚೆ ಬಂದು ಉಪದ್ರ ಕೊಡ್ಳೆ ಸುರು ಮಾಡಿದ್ದಡ. ಕಂಟ ಪುಚ್ಚೆ ಅಡ. ದೊಡಾ ಪುಚ್ಚೆ ಅಡ. ದೊಡ್ಡ ಪಟ್ಟೆ ಹುಲಿಯಷ್ಟು ದೊಡ್ಡ ಇದ್ದಡ. ಹಳದಿ ಮೈಲಿ ಕಪ್ಪು ಕಪ್ಪು ಪಟ್ಟೆ ಇದ್ದಡ. ಹಾಂಗೆ ಇವುದೇ ಸುದ್ದಿ ಕೇಳಿದ್ದವು. ಕೇಳಿ ನೆಗೆದೆ ಮಾಡಿದ್ದವು. ಅಲ್ಲ?… ಕಪ್ಪು ಕಪ್ಪು ಪಟ್ಟೆ ಇಪ್ಪ, ಹಳದಿ ಮೈ ಇಪ್ಪ, ಹುಲಿಯಷ್ಟು ದೊಡ್ಡ ಇದ್ದರೆ ಅದು ಪುಚ್ಚೆ ಅಪ್ಪದು ಹೇಂಗೆ? ಹುಲಿಯೇ ಆಯೆಕ್ಕಷ್ಟೆ ಅಲ್ಲದಾ? ಹೇಳುವವು ಎಷ್ಟುದೇ ಉತ್ಪ್ರೇಕ್ಷೆ ಮಾಡುಗು. ನಾವೆಂತ ನಂಬೆಕ್ಕು ಹೇಳಿ ಇಲ್ಲೆನ್ನೆ?

ಹಾಂಗೆ ಇಬ್ರುದೇ ಕೂದು ಆಲೋಚನೆ ಮಾಡಿ ಮೊಸರಿನ ಕದ್ದು ಕುಡುದ್ದು ಆ ಕಂಟಪುಚ್ಚೆಯೆ ಹೇಳಿ ನಿರ್ಧಾರಕ್ಕೆ ಬಂದವು.

ಅಲ್ಲಿಗೆ ಒಂದು ಹೊಸ ಮಂಡೆ ಬೆಶಿ ಸುರು ಆತು. ಆ ಪುಚ್ಚೆಯ ಬಾಯಿಂದ ಮೊಸರಿನ ಒಳುಶಿ ಕೊಂಬದು ಹೇಂಗೆ? ಹಾಂಗೆ ಹೇಳಿದರೆ, ಪುಚ್ಚೆಯ ಬಾಯಿಗೆ ಮೊಸರು ಹೋದ ಮತ್ತೆ ಅಲ್ಲ, ಪುಚ್ಚೆಗೆ ಸಿಕ್ಕದ್ದ ಹಾಂಗೆ ಒಳುಸಿಕೊಂಬದು ಹೇಂಗೆ ಹೇಳಿ.

“ಪುಚ್ಚೆಯ ಕೊರಳಿಂಗೆ ಒಂದು ಗಂಟೆ ಕಟ್ಟುವ” ತಣಿಯಪ್ಪ ಹೇಳಿತ್ತು.
“ಆರು ಗಂಟೆ ಕಟ್ಟುದು?”
“ನೀನೇ ಕಟ್ಟೆಕ್ಕಷ್ಟೆ. ಎನಗೆ ನೈಟು ಡೂಟಿ ಇದ್ದು. ಆಪೀಸಿಂಗೆ ಹೋಯೆಕ್ಕು.”
“ನಿನಗೆ ತಲೆ ಸರಿ ಇದ್ದ? ಗಂಟೆ ಕಟ್ಟೆಕ್ಕಾರೆ ಅದು ಕೈಗೆ ಸಿಕ್ಕೆಕ್ಕಲ್ಲದಾ? ಸಿಕ್ಕೆಕ್ಕಾರೆ ಅದರ ಹಿಡಿಯೆಡದಾ? ಹೇಂಗೆ ಹಿಡಿವದು?”
“ನಾವು ಉರ್ಳು ಮಡುಗುವ” ತಣಿಯಪ್ಪ ಹೇಳಿತ್ತು. ಅದಕ್ಕೆ ಕಾಡಿಲಿ ಹಂದಿಗೊಕ್ಕೆ ಉರ್ಳು ಮಡುಗಿ ಗೊಂತಿದ್ದು.
“ಅಪ್ಪು, ಉರ್ಳು ಮಡುಗುದು. ಉರ್ಳು ನಿನ್ನ ಕೊರಳಿಂಗೆ ಮಡುಗುದು. ಮಂಗ, ಉರ್ಳಿಂಗೆಲ್ಲ ಸಿಕುತ್ತಾ ಅದು?”
“ಓ ಸಿಕ್ಕುತ್ತು”
“ಎಂತರ ಸಿಕ್ಕುತ್ತು?”
“ಅದೇ ಮಂಗ ಉರ್ಳಿಂಗೆ ಸಿಕ್ಕುತ್ತು. ಎಂಗಳ ಊರಿಲಿ ಅನು ಮಡುಗಿದ ಉರ್ಳಿಂಗೆ ಎಷ್ಟೋ ಸರ್ತಿ ಮಂಗ ಸಿಕ್ಕಿದ್ದು”
“ಥತ್, ನಿನ್ನ, ಅನು ಮಂಗ ಹೇಳಿ ನಿನಗೆ ಬೈದ್ದು ಮಾರಾಯಾ, ಉರ್ಳಿಂಗೆ ಸಿಕ್ಕುದಕ್ಕಲ್ಲ…”
“ಓ ಹಾಂಗಾ?”
“ಎಂತ ಮಾಡುದು ಈ ಪುಚ್ಚೆಗೆ?”
“ಕತ್ತರಿ ಮಡುಗಿರೆ ಎಂತ?”
“ಕತ್ತರಿ ಮಡುಗುದು ಎಲಿಗೆ. ಪುಚ್ಚೆಗಲ್ಲ”
“ಮೊಸರಿಂಗೆ ಎಂಡ್ರೆಕ್ಸು ಹಾಕಿ ಮಡುಗುವನಾ?”
“ಪುಚ್ಚೆಯ ಕೊಲ್ಲುಲಾಗ. ಸಾಯ್ವಗ ಕೈಕ್ಕಾಲು ಕುತ್ತ ಆವುತ್ತಡ”
“ಪುಚ್ಚೆಯ ಕೈಕ್ಕಾಲು ಕುತ್ತ ಆದರೆ ನವಗೆಂತ?”
“ಪುಚ್ಚೆದಲ್ಲ ಮಾರಾಯ, ಕೊಂದೋರಿನ ಕೈಕ್ಕಾಲು ಕುತ್ತ ಅಪ್ಪದಡ”
“ಮತ್ತೆಂತ ಮಾಡುದು? ಬೋರ್ಡು ಹಾಕುವನ?”
“ಎಂತ ಬೋರ್ಡು?”
“ಪುಚ್ಚೆಗೆ ಪ್ರವೇಶವಿಲ್ಲ ಹೇಳಿ ಬೋರ್ಡು ಹಾಕುವನ?”
“ಹಾಕುವ° ಹಾಕುವ°. ಮತ್ತುದೇ ಪುಚ್ಚೆ ಬಂದರೆ ಅದೇ ಬೋರ್ಡಿಲಿ ನಿನ್ನ ಮಂಡೆಗೆ ಬಡಿವ°. ಅಕ್ಕಾ?”
“ನಾಯಿ ಸಾಂಕುವನಾ?”
“ನಾಯಿಯಾ? ರೂಮಿಲಿ ನಾಯಿ ಸಾಂಕುಲಾವುತ್ತಾ? ಅಷ್ಟಕ್ಕೂ ನೀನೆ ಇಪ್ಪಗ ಬೇರೆ ನಾಯಿ ಎಂತಕೆ?”
“ಎ… ಹೋಗಾ… ಆಣೆಂತ ಹೇಳಿರೂ ಣಿಣಗಾವುತ್ತಿಲ್ಲೆ . ಣೀಣೆ ಎಂತ ಬೇಕಾರೂ ಮಾಡಿಗ” ಪಿಸುರು ತಣಿಯಪ್ಪಂಗು ಎಳಗುತ್ತು, ಕಿಶೋರಂಗೆ ಮಾಂತ್ರ ಅಲ್ಲ ಆತಾ. ತಣಿಯಪ್ಪ ವಾಪಾಸು ಗುಡಿ ಹೆಟ್ಟಿ ಮನುಗಿತ್ತು.

——————————————–

ಪುಚ್ಚೆ ಕಾಟ ಸುರು ಆದರೆ ಅಪ್ಪ ತಾಪತ್ರಯ ಸಹಿಸುಲೆಡಿಯ. ಇಂದು ಮೊಸರು ಕದ್ದು ಕುಡಿವ ಪುಚ್ಚೆ ನಾಳೆ ಹಾಲು ಕದ್ದು ಕುಡಿಗು. ಮತ್ತೆ ಮಾಡಿ ಮಡಿಗಿದ ಅಶನ, ಹೆಜ್ಜೆಯನ್ನು ಮುಕ್ಕಿಕ್ಕಿ ಹೋಕು. ಹಾಂಗಾಗಿ ಈ ಪುಚ್ಚೆ ಕಾಟ ಸುರುವಿಂಗೇ ನಿಲ್ಸೆಕ್ಕು ಹೇಳಿ ಕಿಶೋರ° ನಿರ್ಧಾರ ಮಾಡಿದ°.

ಹಾಂಗೇಳಿ ನಿರ್ಧಾರ ಮಾಡಿದರೆ ಸಾಕಾವುತ್ತಾ? ಎಂತಾರು ಮಾಡೆಕ್ಕು ಮಾಡೆಕ್ಕೇ ಅಲ್ಲದಾ? ಕಿಶೋರ° ಪುಚ್ಚೆ ಎಲ್ಲಿಂದ ಬಪ್ಪದು ಹೇಳಿ, ಪುಚ್ಚೆ ಬಪ್ಪ ದಾರಿಯ ಹುಡ್ಕಿದ°. ಹಳೇ ಕಾಲದ ರೂಮುಗ. ಎತ್ತರಕ್ಕೆ ಕಟ್ಟಿದ್ದವು. (ಬಹುಶ ಹಳೇ ಹೋಶ್ಟೇಲಿನ ರೂಮುಗ ಅಲ್ಲದಾ? ಫೈಲಾದ ಮಕ್ಕ ಕೊರಳಿಂಗೆ ಬಳ್ಳಿ ತೆಕ್ಕೊಂಬದು ಬೇಡ ಹೇಳಿ, ಮಾಡಿನ ಕೊಬೆ ಕೈಗೆ ಸಿಕ್ಕದ್ದ ಹಾಂಗೆ ಎತ್ತರಕ್ಕೆ ಕಟ್ಟಿದ್ದಾಯಿಕ್ಕು. ಆದರೆ ಪ್ರಯೋಜನಕ್ಕೆ ಬೈಂದಿಲ್ಲೆ. ಕೆಲವು ಬಳ್ಳಿ ತೆಕ್ಕೊಂಡಿದವಡ. ) ಓಡಿನ ಕೆಳಾಣ ಹೊಡೇಲಿ ಇಪ್ಪ ಒಟ್ಟೆಯ ಹಾಂಗೆ ಇಪ್ಪ ಜಾಗೆಲಿ ಈ ಪುಚ್ಚೆ ಒಳ ನುಗ್ಗುದಾದಿಕ್ಕು ಹೇಳಿ ಅಲ್ಲಿಗೆಲ್ಲ ಹಳೇ ಪೇಪರು, ಗೋಣಿ ತುಂಡು ಎಲ್ಲ ತುರ್ಕಿಸಿ ಒಟ್ಟೆಗಳ ಬಂದ್ ಮಾಡಿದ°. ಹಳೇ ಪೇಪರು, ಗೋಣಿ ತುಂಡು ಪ್ರೆಸ್ಸಿಲಿ ಬೇಕಾಷ್ಟು ಸಿಕ್ಕುತ್ತು ಅವಂಗೆ.

ಆದರೆ ಪ್ರಯೋಜನ ಎಂತೂ ಇಲ್ಲೆ. ಮಾರ್ಣೇದಿನ ಮೊಸರು ಪುನಾ ಕಾಲಿ ಆಯಿದು. ಆ ಪುಚ್ಚೆಗೆ ಒಳ ನುಗ್ಗುವ ಕೆಣಿ ಗೊಂತಿದ್ದು.

ಹಾಂಗೆ ಕಿಶೋರ° ಎಂತೆಂತದೋ ಉಪಾಯ ಮಾಡಿದ°. ಉಹೂಂ, ಪುಚ್ಚೆ ಅವಂದಲೂ ಉಶಾರಿ ಇದ್ದು.

ಇನ್ನೂ ಬೇರೆ ದಾರಿ ಇಲ್ಲೆ. ಕಾದು ಕೂದೇ ಬಡಿಯೆಕ್ಕಷ್ಟೆ ಹೇಳಿ ನಿರ್ಧಾರ ಮಾಡಿದ°.

ಅವನ ಫ್ರೆಂಡು ಒಬ್ಬ ಸಂಗದ ಶಾಕೆಗೆ ಹೋಪವ ಇತ್ತಿದ್ದ° . ಈ ಶಾಕೆಗೆ ಹೋಪವು ಕೈಲಿ ಒಂದು ದಂಟೆ ಹಿಡ್ಕೊಳ್ತವು, ಬೆದುರಿಂದು, ಹಾಂಗಿಪ್ಪ ಒಂದು ದಂಟೆ ಅವನತ್ರವು ಇತ್ತು. ಏವಗಳೂ ಅವ° ಕಿಶೋರನ ರೂಮಿಲಿಯೇ ಆ ದಂಟೆಯ ಮಡುಗುದು. ಈ ಪುಚ್ಚೆಗೆ ಅದಲ್ಲಿಯೇ ಬಡುದು ಹಾಕೆಕ್ಕು ಹೇಳಿ ಕಿಶೋರ° ತೀರ್ಮಾನ ಮಾಡಿದ°.

ಹಾಂಗೆ ಕಸ್ತಲಪ್ಪಗ ಮಂಚದ ಮೇಗೆ, ಹತ್ತರೆ ದಂಟೆಯ ಮಡಿಕ್ಕೊಂಡು ಗುಡಿಹೆಟ್ಟಿ ಕೂದ°. ಒಟ್ಟಿಂಗೆ ಒಂದು ಸ್ಟೀಲಿಂದು ಟೋರ್ಚು. ಎವರೆಡಿ ಕಂಪೆನಿದು. ಅದಕ್ಕೆ ಎರಡು ಬೆಟ್ರಿ ಹಾಕುಲಿದ್ದು. ಅದರನ್ನುದೇ ಹತ್ತರೆ ಮಡಿಕ್ಕೊಂಡ°. ನರ ಬಕ್ಷಕ ಹುಲಿಯ ಬೋಂಟೆ ಮಾಡ್ಳೆ ಕೂದೋರ ಹಾಂಗೆ ಕೂದ°.  ಸಾಧಾರಣ ಹನ್ನೆರಡು ಗಂಟೆವರೆಗೆ ಕೂದಿತ್ತಿದ್ದ°. ಮತ್ತೆ ಎಷ್ಟೊತ್ತಿಂಗೆ ವರಕ್ಕು ಬಂತೋ ಅವಂಗೆ ಅರಡಿಯ. ರಪ್ಪ ಎಚ್ಚರ ಅಪ್ಪಗ ಉದಿ ಆಯಿದು. ಮೊಸರಿನ ಪಾತ್ರೆ ನೋಡುವಾಗ ಮೊಸರು ಕಾಲಿ ಆಯಿದು.

ಹೀಂಗೆ ಒಂದು ಎರಡು ಮೂರು ದಿನ ಆತು. ಮತ್ತೆ ರಜಾ ಅಭ್ಯಾಸ ಆತಲ್ದ… ಹಾಂಗೆ ಒಂದು ದಿನ ಕಸ್ತಲೆಗೆ ಗುಡಿ ಹೆಟ್ಟಿ ಕೂದಿಪ್ಪಗ….

ಕಡು ಕಸ್ತಲೆಲಿ ಕಿಶೋರ° ಕಾದು ಕೂಯಿದ°. ಅವಂಗೆ ಸಣ್ಣಕ್ಕೆ ಪರ ಪರ ಶಬ್ದ ಕೇಳಿತ್ತು. ಉಸುಲು ಬಿಗಿಹಿಡುದು ಕೆಮಿಕೊಟ್ಟು ಕೇಳಿದ°. ಅಪ್ಪು… ಮೊಸರಿನ ಪಾತ್ರೆ ಹತ್ತರೆ ಶಬ್ದ. ಪುಚ್ಚೆ ಬಂದು ಮೆಲ್ಲಂಗೆ ಪಾತ್ರೆಯ ಮುಚ್ಚಲಿನ ರಟ್ಟುಸುತ್ತ ಇದ್ದು. ಕಿಶೋರ° ಟೋರ್ಚಿನ ಕೈಲಿ ಬಿಗಿ ಹಿಡುದು, ರಪ್ಪ ಸುಚ್ಚು ಹಾಕಿ ನೋಡಿದ°. ಜಿಗ್ಗನೆ ಬಿದ್ದ ಬೆಣ್ಚಿಗೆ ಮೊಸರಿನ ಪಾತ್ರೆ ಹತ್ತರೆ ಪುಚ್ಚೆ ಕಂಡತ್ತು. ಇವನ ಬೆಣ್ಚಿ ಬಿದ್ದದೆ ಅದು ಸೀದಾ ತಣಿಯಪ್ಪನ ಮಂಚದ ಮೇಗಂಗೆ ಹಾರಿತ್ತು.

ಇವ° ಕೈಗೆ ದಂಟೆಯ ತೆಕ್ಕೊಂಡದೆ ಎಳದ್ದು ತಣಿಯಪ್ಪನ ಮಂಚದ ಮೇಗೆ, ಪುಚ್ಚೆ ಹಾರಿದಲ್ಲಿಂಗೆ ಎಳದು ಬೀಜಿ ಬಡುದ°. ಟಪ್ ಹೇಳಿ ಶಬ್ದ ಕೇಳಿತ್ತು, ಒಟ್ಟಿಂಗೆ “ಯೇವ್” ಹೇಳಿ ಬೊಬ್ಬೆ ಕೇಳಿತ್ತು. ಕಿಶೋರಂಗೆ ಒಂದರಿಯೇ ತೆಗಲೆ “ಧಸಕ್” ಹೇಳಿತ್ತು. ರಪ್ಪನೆ ಟೋರ್ಚು ಕೈಗೆ ತೆಕ್ಕೊಂಡು ಬೆಣ್ಚಿ ಹಾಕಿ ನೋಡಿರೇ, ಎಂತ ಕಂಡದು? ಈ ತಣಿಯಪ್ಪ ಎಷ್ಟೊತ್ತಿಂಗೆ ಬಂದು ಅದರ ಮಂಚಲ್ಲಿ ಮನುಗಿದ್ದೋ ಇವಂಗೆ ಅರಡಿಯ…. ಇವನ ದಂಟೆಯ ಪೆಟ್ಟು ಸೀದಾ ತಣಿಯಪ್ಪನ ತಲೆಗೆ ಬಿದ್ದು, ಮಂಡೆ ಎರಡು ಬಾಗ ಆಯಿದು, ಮೆದುಳು ಹೆರ ಬಯಿಂದು….. ಕಿಶೋರಂಗೆ ಕಣ್ಣು ಕಸ್ತಲೆ ಕಟ್ಟಿತ್ತು…..

ಕಿಶೋರಂಗೆ ಕೋರ್ಟಿಲಿ ಜಾಮೀನು ಕೊಟ್ಟು ಬಿಡುಸುಲೆ ಇದ್ದರೆ, ಬಪ್ಪ ವಾರ ನಿಂಗ ಬತ್ತಿರ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಬಪ್ಪ ವಾರ ಕೊಂಕಣ್ದಿಗೆ ತಾಗಿದ ಕತೆ ಹೇಳುವಿ ಗ್ರೇಶಿರೆ, ನಿಂಗೊ ಕೋರ್ಟಿಂಗೆ ದೆನುಗೇಳುದೋ, ಭಾವಾ…

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಅದೆಂತ? ಕೊಂಕಣ್ದಿ ಮೇಲೆ ಅಷ್ಟು ಕುತೂಹಲ?

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಶ್ಯಾಮಣ್ಣನ ಕತೆ ಇಲ್ಲದ್ದೆ ದಿನ ಸುಮಾರು ಆತು ಹೇಳಿ ಗ್ರೇಶಿಗೊಂಡಿಪ್ಪಗ ಹೊಸ ಪ್ರಸಂಗ ಬಂತದಾ .. ಓಡಿನ ಕಟ್ಟೋಣ, ಪ್ರೆಸ್ಸು ,ಅದರ್ಲಿ ಕೆಲಸ ಮಾಡ್ತ ಗಡಿಬಿಡಿ , ತಣಿಯಪ್ಪನ ಮಾತುಕತೆ ,ಪುಚ್ಚೆಯ ವರ್ಣನೆ – ಒಂದೋ ಎರಡೋ ? ಎಲ್ಲವೂ ನಮ್ಮ ಎದುರು ನೆಡೆತ್ತಾ ಇಪ್ಪ ಹಾಂಗೆ ಬರವ ಈ ಶೈಲಿಗೆ ನಮೋ ನಮೋ ..
  ಇನ್ನು ದ೦ಟೆಪೆಟ್ಟಿನ ಫಲ ಎಂತದು ಹೇಳಿ ಕಾವ ಕೆಲಸ ಆತು ..

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ದಂಟೆ ಪೆಟ್ಟಿನ ಫಲ ಎಂತರ ಹೇಳಿ ಕಾವಲೆ ಎಂತ ಇದ್ದು ಭಾವ…? ಪೆಟ್ಟು ಬಿದ್ದ ಕೂಡ್ಳೆ ಗೊಂತಾವ್ತಲ್ಲದೋ? :)

  [Reply]

  VN:F [1.9.22_1171]
  Rating: 0 (from 0 votes)
 3. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮೀ ಜಿ ಪ್ರಸಾದ

  ಕಥೆ ಲಾಯಕ ಇದ್ದು ಬಪ್ಪ ವಾರಕೆ ಕಾಯದ್ದೆ ಬೇರೆ ದಾರಿ ಇಲ್ಲೇ

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಕಿಶೋರನ ಕತೆ ಎಂತಾತು ಹೇಳಿ ಕಾವದೋ? ಅವನ ಕತೆ ಕೈಲಾಸವೋ ಹೇಳಿ?

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಶ್ಯಾಮಣ್ಣ ನ ಕಥೆ ಸೂಪರ್ ಆಯಿದು. ಪೆನ್ಸಿಲು, ಚೈನಿನ ಹಾಂಗೇ ಇದುದೆ ಒಳ್ಳೆ ರೈಸುಗು ಖಂಡಿತ. ಶ್ಯಾಮಣ್ಣನ ಬರವ ಶೈಲಿ ಸುಪ್ರಸಿದ್ದ ನಗೆಬರಹಗಾರ ನರಸಿಂಹ ಮೂರ್ತಿಯ (“ಮಂದಸ್ಮಿತ”) ಶೈಲಿಯೇ ಇದ್ದು. “ಕಾಸು ತೂರು ಬಾ” ಶಬ್ದ ಪ್ರಯೋಗ ಓದಿ ನೆಗೆಬಂದು ತಡೆಯ. ಸರಿಯಾಗಿಯೇ ಇದ್ದು. ಚೆ. ಒಟ್ರಾಸಿ ತಣಿಯಪ್ಪನ ದೇಹ ತಣುದು ಹೋಗದ್ರೆ ಸಾಕು. ಕಿಶೋರನ ಗ್ರೇಶಿ ಬೇಜಾರಾತು.
  ಶ್ಯಾಮಣ್ಣಾ, ಆ ಕೊಂಕಣ್ತಿ ಪ್ರೇಮ ಪ್ರಸಂಗ, ಧಾರಾವಾಹಿ ಆಗಿಯೇ ಹೆರ ಬರಲಿ ಆತೊ ?

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಬೊಳುಂಬು ಭಾವ ಎಂತ ಕೊಂಕಣ್ದಿಗೆ ಕಣ್ಣು ಹಾಕಿದ್ದು? 😉

  [Reply]

  VN:F [1.9.22_1171]
  Rating: 0 (from 0 votes)
 5. ಡೈಮಂಡು ಭಾವ

  ಅದಾ ಶ್ಯಾಮಣ್ಣ ಕಂಟ ಪುಚ್ಚೆಯ ತೆಕ್ಕೊಂಡು ಬಂದು ಬೈಲಿಂಗೆ ಬಿಟ್ಟವು. ಹು ಹು ಹು.. ಕೊಶೀ ಆತು ಸರಾಗವಾಗಿ ಓದಿಸಿತ್ತು….

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಕಂಟ ಪುಚ್ಚೆಯ ತೆಕ್ಕೊಂಡು ಬಂದು ಬೈಲಿಂಗೆ ಬಿಟ್ಟವು) ಈಗ ವಾಪಾಸು ಹಿಡಿಯೆಕ್ಕನ್ನೇ? :)

  [Reply]

  VN:F [1.9.22_1171]
  Rating: 0 (from 0 votes)
 6. ಇಂದಿರತ್ತೆ
  indiratte

  ಕಂಟಪುಚ್ಚೆಗೆ ಹೇಳಿ ಸಮಾ ಮಡುಗಿದ್ದು ಕಿಶೋರನ ಕಂಠಕ್ಕೇ ಬತ್ತಾ ಹೇಂಗೆ ಶ್ಯಾಮಣ್ಣಾ , ಕತೆ ಭಾರೀ ರೈಸುತ್ತ ಅಂದಾಜು ಕಾಣ್ತು – ಧಾರಾವಾಹಿಯಾಗಿ ಬರಲಿ…..

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಧಾರಾವಾಹಿಯಾಗಿ ಬರಲಿ) ಅಯ್ಯೋ ದೇವರೆ… ಪುಚ್ಚೆ ದಾರಾವಾಹಿ ಬರದಾ ಹೇಳಿ ಹೇಳುಗನ್ನೇ?

  [Reply]

  VN:F [1.9.22_1171]
  Rating: 0 (from 0 votes)
 7. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಶಾಮಣ್ನಾ ..ಇನ್ನು ಕಂಟ ಪುಚ್ಚೆ ಗೆ ಆಯುಸ್ಸು ಮುಟ್ಟಿತ್ತೋ?

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಅಲ್ಲ ಬಾಲಣ್ಣ… ತನಿಯಪ್ಪನ ಕಂಟ ಪುಚ್ಚೆ ಹೇಳಿ ಹೇಳುದೋ?

  [Reply]

  VA:F [1.9.22_1171]
  Rating: 0 (from 0 votes)
 8. ಚೆನ್ನೈ ಬಾವ°
  ಚೆನ್ನೈ ಭಾವ°

  ನಿಂಗೊಲ್ಲ ಆ ಪುಚ್ಚೆ ಕಿಶೋರ ತನಿಯಪ್ಪ ಕೊಂಕಣ್ತಿ ಹಿಂದೆಯೇ ನಿಂದಿದಿ. ಎನಗಿಲ್ಲಿ ಆ ಹಳೆ ಹಂಚಿನ ಕಟ್ಟೋಣಲ್ಲಿ ಎಲಿ ಏಕೆ ಇಲ್ಲದ್ದು ಹೇದು ಆವುತ್ತು!!

  ಅದೆಂತಕೆ ಜಾಮೀನಿಂಗೆ ಈಗಳೇ ಅಂಬೇರ್ಪಾದ್ಸು! ಅಂಬಗ ತಣಿಯಪ್ಪ…..?!!

  ಶ್ಯಾಮಣ್ಣ ಪುಚ್ಚೆ ಹಾರಿದ್ದು, ಕಿಶೋರನ ಲೈಟಿನ ಬೆಣಚ್ಚಿ ಬಿದ್ದದು , ಕಿಶೋರ ದಂಟು ನೆಗ್ಗಿ ಜೆಪ್ಪಿದ್ದು ರೈಸಿದ್ದಪ್ಪ! ಒಟ್ಟಾರೆ ಮಂಡೆ ಹೋಳಾತನ್ನೆ. ಹೋಳು ಮಂಡೆಲಿಯೇ ಬಪ್ಪವಾರಕ್ಕೊರಗೆ ಕಾದು ಕೂಬಾಂಗಾತೀಗ.

  ಅಪ್ಪೋ ಶ್ಯಾಮಣ್ಣ ಅದೂ…. ಕಂಟ ಪುಚ್ಚೆಯೇ ಹೇದು ಹೇಂಗೆ ನಿಗಂಟು ಮಾಡಿದ್ಸದವು ?!! 😛

  ಮದಲಾಣಾಂಗೆ ಶ್ಯಾಮಣ್ಣನ ಕಥನ ಶೈಲಿ ರೈಸಿದ್ದು. ಬಪ್ಪವಾರಕ್ಕಿನ್ನು

  ಹ್ಹಾ°… ಹೇದಾಂಗೆ ಚಿತ್ರ ಪಷ್ಟಾಯ್ದು

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಎಲಿ ಇತ್ತಿದ್ದು ಭಾವ. ಎಲಿ ಇದ್ದರೇ ಪುಚ್ಚೆ ಇಪ್ಪದಲ್ಲದೋ? ಮತ್ತೆ ಮಂಗು ಪುಚ್ಚೆ ಆದರೆ ಹಾಂಗೆಲ್ಲ ಕದ್ದು ತಿಂಬಲೆ ಹೋವುತ್ತಿಲ್ಲೆ. ಜೆನಂಗಳ ನಡುವಿಲೇ ಸೇಳೆ ಮಾಡಿಗೊಂಡು ತಿರುಗಿಗೊಂಡು ಇರ್ತು. ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 9. ದೊಡ್ಡಭಾವ
  ದೊಡ್ಡಭಾವ°

  ಶ್ಯಾಮಣ್ಣನ ಕಥೆಲಿ ಈ ಸರ್ತಿ ಆನು ಒಂದು ಸಂಗತಿಯ ಗುರುತಿಸಿದ್ದೆ.
  ತನಿಯಪ್ಪ ಪೂಜಾರಿಗೆ ನಮ್ಮ ಭಾಷೆ ಬತ್ತು.
  ಹವ್ಯಕರಲ್ಲದ್ದವಕ್ಕೂ, ಹವ್ಯಕ ಭಾಷೆ ಚೆಂದಕೆ ಬತ್ತು ಹೇಳಿ ನಾವು ಅನೇಕ ಜನಂಗಳ ಗುರುತಿಸಿದ್ದು.
  ಈ ಸರ್ತಿಯಾಣ ವಿಷು ವಿಶೇಷ ಸ್ಪರ್ಧೆಯ ಕಾಲಕ್ಕೆ,
  ಬೈಲಿನ ಹಾಲಾವಲೆಗಳ ಸ್ವಾರಸ್ಯಕರ ಕಥನ.
  ತುಂಬಾ ಒಳ್ಳೆದಾಯಿದು.

  [Reply]

  VA:F [1.9.22_1171]
  Rating: 0 (from 0 votes)
 10. ಶ್ಯಾಮಣ್ಣ
  ಶ್ಯಾಮಣ್ಣ

  (ತನಿಯಪ್ಪ ಪೂಜಾರಿಗೆ ನಮ್ಮ ಭಾಷೆ ಬತ್ತು). ಅದು ಹಾಂಗಲ್ಲ. ಅದು ಕನ್ನಡಲ್ಲಿ ಮಾತಾಡಿದ್ದದರ ಆನು ಹವ್ಯಕಕ್ಕೆ ಅನುವಾದ ಮಾಡಿದ್ದು. :) ಅಷ್ಟೆ.

  [Reply]

  12111198139 28120 Reply:

  ಅದು ಹಾಂಗ* :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಬೊಳುಂಬು ಮಾವ°ಶ್ರೀಅಕ್ಕ°ಅಜ್ಜಕಾನ ಭಾವಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿವೇಣೂರಣ್ಣಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಶಾ...ರೀಅಡ್ಕತ್ತಿಮಾರುಮಾವ°ಗಣೇಶ ಮಾವ°ಅಕ್ಷರ°ವಿದ್ವಾನಣ್ಣಬಂಡಾಡಿ ಅಜ್ಜಿಮುಳಿಯ ಭಾವಪವನಜಮಾವಸುವರ್ಣಿನೀ ಕೊಣಲೆಚೆನ್ನಬೆಟ್ಟಣ್ಣvreddhiಪೆರ್ಲದಣ್ಣದೊಡ್ಡಮಾವ°ಶುದ್ದಿಕ್ಕಾರ°ನೀರ್ಕಜೆ ಮಹೇಶದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ