“ಕಡುದ ಕೈಗೆ ಉಪ್ಪು ಹಾಕದ್ದ ಜಾತಿ”

November 29, 2015 ರ 6:59 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಕಡುದ ಕೈಗೆ ಉಪ್ಪುಹಾಕದ್ದ ಜಾತಿ”-{ಹವ್ಯಕ ನುಡಿಗಟ್ಟು-43}

ಕಡುದ ಕೈಗೆ ಉಪ್ಪು ಹಾಕೀರೆ ಹೇಂಗಕ್ಕು!?.ಗಾಯ ಆದಲಿಂಗೆ ಉಪ್ಪು ಹಾಕದ್ರೇ ಒಳ್ಳೆದು, ಹೇಳುವಿ ನಿಂಗೊ. ಅಲ್ಲೇ ಇಪ್ಪದಿದ ವಿಷಯ!. ನೆರೆ-ಕರೆ, ನೆಂಟ್ರಿಷ್ಟ್ರು, ಬಂಧು-ಬಳಗ, ಹೇಳಿ ನಮ್ಮ,  ಹಾಕು-ಚೋಕಿಂಗೆ, ಆಪತ್ತಿಂಗೆ, ಒದಗುತ್ತೊವು ಬೇಕೂಳಿ  ಮದಲಾಣ ಹೆರಿಯೊವು ಹೇಳುಗಿದ.   ಅದಕ್ಕಾಗಿ ಎಲ್ಲೋರತ್ರೂ  ಒಳ್ಳೆದಲ್ಲಿರೆಕೂಳಿ ಹೇಳ್ತ ಬುದ್ಧಿ ಮಾತು. ಅದು ಮೆಚ್ಚೆಕ್ಕಾದ ವಿಷಯವೂ  ಅಪ್ಪು.  ಹಾಂಗಾರೆ    ನಮ್ಮಲ್ಲಿ ಒಳ್ಳೆವೂ ಇಕ್ಕು. ಕೆಟ್ಟವೂ ಇಕ್ಕು. ಎಲ್ಲೋರ ಗುಣ-ನಡತೆ ಒಳ್ಳೆದಿಕ್ಕು ಹೇಳ್ಲೆ  ಬತ್ತಿಲ್ಲೆಯಿದ.ಕೈಲಿಪ್ಪ ಐದು ಬೆರಳೂ ಒಂದೇರೀತಿ ಇಲ್ಲೆನ್ನೆ! ಹೇಳುಗು ಸಹಿಷ್ಣುಗೊ. ಒಬ್ಬ ಪೈಸಲ್ಲಿ  ಸೋತ, ಇನ್ನೊಬ್ಬ ಆರೋಗ್ಯಲ್ಲಿ ಸೋತ ಹೇಳಿಯಾದರೆ; ಎಡಿಗಾದ ಹಾಂಗೆ  ತಾಂಗುತ್ತೊವೂ ಇಕ್ಕು. ಆ ಹೊಡೆಂಗೇ  ಕಣ್ಣೆತ್ತಿ  ನೋಡದ್ದೊವೂ ಇಕ್ಕು!. ಈ ಎರಡ್ನೇ ಜಾತಿ  ಮನುಷ್ಯರಯಿದ  ’ಕಡುದ ಕೈಗೆ ಉಪ್ಪು ಹಾಕದ್ದ ಜಾತಿ’ ಹೇಳುದು. ಅದೆಂತಕೆ  ಈ ಮಾತು ಕೇಳಿರೆ….’  ಗಾಯ     ಆದಲ್ಲಿ ಅವಂಗೆ ಒಳ್ಳೆತ ಉರಿಯಲೀಳಿ ಮನಸ್ಸಿಲ್ಲಿದ್ದರೂ ಒಂಧೊಡಿ  ಉಪ್ಪಿಂಗೆ  ಚಿಕ್ಕಾಸಾರೂ ಹಾಕೆಕ್ಕನ್ನೆ!. ಉಪದ್ರವನ್ನಾರೂ ಕೊಡುವೊಂ  ಹೇಳೀರೆ ನಯಾಪೈಸೆ ಆದರೂ ಒಂದಾರಿ  ಬಿಚ್ಚೆಕ್ಕನ್ನೇಳಿ  ಮನಸ್ಸಿನೊಳ ಇದ್ದವರ  ಹೀಂಗೆ  ಹೇಳ್ತವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ನುಡಿಗಟ್ಟುಗೊ ಒಂದರಿ ಚಿಂತನೆಗೆ ಒಡ್ಡುಸುತ್ತು. ಆ ಚಿಂತನೆ ಮನಸ್ಸಿಲ್ಲಿ ಏವತ್ತೂ ಜಾಗೃತವಾಗಿರಳಿ ಎಲ್ಲೋರಿಂಗೂ ಹೇಳ್ಸು ನಾವಿಲ್ಲಿಂದ

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಧನ್ಯವಾದ ಚೆನ್ನೈ ಭಾವಂಗೆ . ನಿನಗೆ ಆದರೂ ಇದರ ಓದಿ ಒಂದು ಅನಿಸಿಕೆ ಹಾಕುವೊಂ ಹೇಳಿ ಕಂಡದು ಸಂತೋಷಾತು.

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆದಾಯಿದು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿವಿಜಯತ್ತೆಕೇಜಿಮಾವ°ವಸಂತರಾಜ್ ಹಳೆಮನೆಪವನಜಮಾವಚುಬ್ಬಣ್ಣವೇಣಿಯಕ್ಕ°ವೆಂಕಟ್ ಕೋಟೂರುಗಣೇಶ ಮಾವ°ವಾಣಿ ಚಿಕ್ಕಮ್ಮಬಟ್ಟಮಾವ°ಎರುಂಬು ಅಪ್ಪಚ್ಚಿಚೆನ್ನೈ ಬಾವ°ಚೂರಿಬೈಲು ದೀಪಕ್ಕಕಜೆವಸಂತ°ಡಾಗುಟ್ರಕ್ಕ°ದೀಪಿಕಾಜಯಶ್ರೀ ನೀರಮೂಲೆಸುವರ್ಣಿನೀ ಕೊಣಲೆವೇಣೂರಣ್ಣvreddhiಪೆರ್ಲದಣ್ಣಪೆಂಗಣ್ಣ°ಶರ್ಮಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ