“ಕಡುದ ನೀರು ಕಟ್ಟಕ್ಕೆ ಬಾರ”- {ಹವ್ಯಕ ನುಡಿಗಟ್ಟು–21}

November 23, 2014 ರ 6:13 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಕಡುದ ನೀರು ಕಟ್ಟಕ್ಕೆ ಬಾರ”—[ಹವ್ಯಕ ನುಡಿಗಟ್ಟು—21]
ಮದಲಿಂಗೆ ಅಡಕ್ಕೆ ತೋಟ ಹೇಳಿರೆ ತೋಡು,ಹಳ್ಳ,ಹೊಳೆ, ಹೀಂಗೆ ನೀರಿನ ಹರಿವು ಇಪ್ಪಲ್ಲಿಯೇ ಮಾಡುಸ್ಸಿದ. ಬೇಸಗೆ ಬಂದಪ್ಪದ್ದೆ ಅದಕ್ಕೆ ಕಟ್ಟ ಕಟ್ಟಿಕ್ಕಿ ಎರ್ಕಿದ ನೀರಿನ;ತೋಟದ ಓಳಿಗೆ ಹರಿವಲೆ ಬಿಟ್ಟು ತೋಟದ ತಟ್ಟಿಂಗೆಲ್ಲ ಹಾಳೆ ಕಿಳ್ಳಿಲಿ ಚೇಪುಗು.ಕಟ್ಟಲ್ಲಿ ನೀರು ಕಮ್ಮಿಆಗಿ ಹರಿವು ನಿಂದಪ್ಪಗ ಒಂದೋ ಜೊಟ್ಟೆ ಮೊಗದು ಹಾಕುಗು[ಈಗಾಣವಕ್ಕೆ ’ಜೊಟ್ಟೆ’ ’ತೊಯಿದಂಬೆ’ ಹೇಳಿರೆ ಗೊಂತಕ್ಕೊ!ಉಮ್ಮಪ್ಪ].ಜೊಟ್ಟಗೆ ಮೂರು ಜೆನ ಬೇಕು.ಎರಡುಜೆನ ಎಳವಲೆ, ಒಬ್ಬ ಮೊಗಚ್ಚಲೆ. ಅಲ್ಲದ್ರೆ ತೊಯಿದಂಬೆಲಿ ತೋಟದ ಓಳಿಗೆ ಹಾಕಿ ತೋಕುಗು.ಇದಕ್ಕೆ ಒಬ್ಬನೆ ಸಾಕು.ಇದಲ್ಲಿ ಜ್ಜೊಟ್ಟೆಯಷ್ಟು ನೀರು ಬಾರ!. ಮತ್ತೆ-ಮತ್ತೆ ಪಂಪು,ಎಂಜಿನು ಬಂತು. ಗುಡ್ಡಗಳಲ್ಲೂ ಕೊಳವೆ ಬಾವಿ ಮಾಡಿ, ತೋಟ ಮಡಗಿದೊವು!.ಕೆಲವು ಸರ್ತಿ ಅಕಾಲಲ್ಲಿ ಮಳೆಂದಾಗಿಯೋ ಕಟ್ಟಿದ ಕಟ್ಟ ಕಡಿಗಿದ.ಎರ್ಕಿದ ನೀರೆಲ್ಲ ಕಡುದು ಹೋಗಿ ಓಪಾಸು ಕಟ್ಟೆಕ್ಕಾಗಿ ಬಕ್ಕು.ಆದರೆ ಈ ಕಡುದು ಹೋದ ನೀರು ಮತ್ತೆ ಸಿಕ್ಕಯಿದ. ಓಪಾಸು ಎರ್ಕಿಯೇ ಆಯೆಕ್ಕಷ್ಟೆ!.ಹೀಂಗಿದ್ದ ಅನುಭವಿಗೊ ನಮ್ಮ ಹೆರಿಯೊವು ಈ ನುಡಿಗಟ್ಟಿನ ಮಾಡಿದೊವು.
ಇಂತಹನುಡಿಗಟ್ಟುಗೊ ಬರೇ ಶಭಾರ್ಥ ಮಾಂತ್ರ ಅಲ್ಲ! ಅದಲ್ಲಿ ಒಳಾರ್ಥದ ವಿಚಾರ ಇಪ್ಪದು!. ಅನುಭವಾಮೃತ ಹೇಳ್ಲಕ್ಕು. ಮುಗುದು ಹೋದ ಸಮಯಕ್ಕೆ, ಕೈತಪ್ಪಿಹೋದ ಸಂಪತ್ತಿಂಗೆ,ಅತ್ಯಾಚಾರ,ಅನಾಚಾರಂಗಳಲ್ಲಿ ಮರ್ಯಾದಿ ಹೋದರೆ, ವಿಶೇಷವಾಗಿ ಓಡಿಹೋದ ಜವ್ವಂತಿ ಕೂಸಿನ ವಿಷಯಕ್ಕೆ, ಹೀಂಗೆ ಸುಮಾರು ಸಂದರ್ಭಲ್ಲೆಲ್ಲ ಒಟ್ಟಾರೆ ಪೂರ್ವ ಸ್ಥಿತಿಗೆ ಬಾರದ್ದ ವಿಷಯಕ್ಕೆಲ್ಲ ಈ ನುಡಿಗಟ್ಟಿನ ಉಪಯೋಗುಸುತ್ತೊವು. ಎಷ್ಟು ಅರ್ಥವತ್ತಾಗಿದ್ದಲ್ಲೊ ಹೇಳಿ ಈ ನುಡಿಗಟ್ಟು!? ಅಪ್ಪು ನಮ್ಮ ಆಸ್ತಿಯಾದ ಕಾಯೆಕ್ಕಾದ ಕಟ್ಟವ ಕಡಿವಲೆ ಬಿಡ್ಳಾಗ!.ಆದಷ್ಟು ಜತನಲ್ಲಿ ಕಾಯೆಕ್ಕು.ಆದರೆ ಎಷ್ಟೇ ಜಾಗತೆ ವಹಿಸೀರು ಕೆಲವು ಸರ್ತಿ ಕಾರ್ಯ ಮಿಂಚಿಹೋವುತ್ತನ್ನೆ!!.ಅದಕ್ಕಾಗಿಯೇ ಜೀವನಲ್ಲಿ; ಮತ್ತೆ,ಮತ್ತೆ ನೆಂಪು ಮಾಡಿಗೊಳೆಕ್ಕು. ಎಂತ ಹೇಳ್ತಿ?.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. naveena.krishna
  Naveena Krishna Mungila

  ನುಡಿಗಟ್ಟು ತುಂಬ ಅರ್ಥ ಪೂರ್ಣವಾಗಿದ್ದು ದೊಡ್ಡಮ್ಮ.

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ‘ಕಡುದ ನೀರು ಕಟ್ಟಕ್ಕೆ ಬಾರ’.ಹಾಂಗೇ ಒಡದ ಮುತ್ತು,ಆಡಿದ ಮಾತು ವಾಪಾಸು ಬಾರ.ಒಳ್ಳೆದಾಯಿದು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹರೇರಾಮ , ಧನ್ಯವಾದಂಗೊ ನರಸಿಂಹಣ್ಣ , ತುಂಬಾ ದಿನ ಆತು ನಿಂಗಳ ಇಲ್ಲಿ ಕಾಣದ್ದೆ! ನವೀನಂಗು ಧನ್ಯವಾದ .

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಅನುಶ್ರೀ ಬಂಡಾಡಿಡೈಮಂಡು ಭಾವಜಯಗೌರಿ ಅಕ್ಕ°ಅಜ್ಜಕಾನ ಭಾವಶ್ರೀಅಕ್ಕ°ಜಯಶ್ರೀ ನೀರಮೂಲೆvreddhiಪುಟ್ಟಬಾವ°ಬಟ್ಟಮಾವ°ಪುತ್ತೂರುಬಾವಕಜೆವಸಂತ°ಡಾಗುಟ್ರಕ್ಕ°ಗೋಪಾಲಣ್ಣನೆಗೆಗಾರ°ವೇಣೂರಣ್ಣಚುಬ್ಬಣ್ಣಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿಸಂಪಾದಕ°ವಿದ್ವಾನಣ್ಣಸುವರ್ಣಿನೀ ಕೊಣಲೆದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ