ಕಡ್ಲೆ ಬೇಳೆ ಕರಿ

March 31, 2013 ರ 7:58 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ನಮಸ್ಕಾರ…

                                         ಆನು ಈ ಸರ್ತಿ ಕಡ್ಲೆ  ಬೇಳೆಯ ಕರಿ (ಹೊರ್ದದು) ಮಾಡುವ ವಿಧಾನ ಬೈಲಿಂಗೆ  ತಿಳಿಶುತ್ತೆ… ಇದು ಕಡ್ಲೆ ಬೇಳೆ ಅಲ್ಲದ್ದೇ ಹಸರು ಬೇಳೆ(ಈಗಾಣ ಮೂಂಗ್ ದಾಲ್) ದೊಡ್ಡ ಜಾತಿಯ ಬೆಳಿದು ಇಡೀ ಕಡ್ಲೆದು ಇದೇ ರೀತಿಲಿ ಮಾಡಲೆ ಆವ್ತು…
            ಬೇಕಾದ ಸಾಮಾನುಗ:-
                                                ಕಡ್ಲೆ ಬೇಳೆ -೨ ಕುಡ್ತೆ
                                                ಕರಿ ಬೇವಿನ ಸೊಪ್ಪು-೮ ರಿಂದ ೧O
                                               ಉಪ್ಪು-ಮೆಣಸಿನ ಹೊಡಿ -ರುಚಿಗೆ ತಕ್ಕಷ್ಟುಕಡ್ಲೆ ಬೇಳೆ ಕರಿ
                                                  ತೆಂಗಿನ ಎಣ್ಣೆ -ಅರ್ಧ ಲೀ.
            ಮಾಡುವ ವಿಧಾನ:-
                                      ಕಡ್ಲೆ ಬೇಳೆಯ ೩ ಘಂಟೆಯಷ್ಟು ನೀರಿಲಿ  ಬೊದುಲಿಸಿ ಅರಿಶಿ ತೆಂಗಿನ ಎಣ್ಣೇಲಿ ಅರಿಶಿನ ಬಣ್ಣ ಬಪ್ಪಲ್ಲಿ ವರೆಗೆ ಹೊರಿಯೇಕು. ಇನ್ನೊಂದು ಪಾತ್ರಲ್ಲಿ ಉಪ್ಪು,ಮೆಣಸಿನ ಹೊಡಿ,ಹೊರುದು ಮಡುಗಿದ ಬೇವಿನ ಸೊಪ್ಪಿನ ಲಾಯಿಕ ಬೇರುಸಿ ಹೊರುದು ಮಡುಗಿದ ಕಡ್ಲೆ ಬೇಳೆಗೆ ಎಣ್ಣೆ ಬಳುದಪ್ಪಗ ಹಾಕಿ ಲಾಯಿಕಲ್ಲಿ ಬೆರುಸಿದರೆ ಕಡ್ಲೆ ಬೇಳೆ ಕರಿ ರೆಡಿ..
ಈ ಮೇಲೆ ಹೇಳಿದ ಸಾಮಾನುಗಳ  ಸೇರ್ಸಿಯಪ್ಪಗ ಮಾಡಿದ ಕಡ್ಲೆ ಬೇಳೆ  ಕರಿ ಅಂದಾಜು ಎಂಟು ಜನಕ್ಕೆ ಬಕ್ಕು. ಹೊತ್ತೋಪಗ  ಚಾಯ ಕುಡಿವಲೆ  ಇದು ಭಾರೀ ಲಾಯಿಕ ಆವ್ತು.ಲಾಯಿಕಲ್ಲಿ ಮುಚ್ಚಿ ಮಡುಗಿದರೆ ಒಂದು ವಾರದ ವರೆಗೆ ಹಾಳಾಗದ್ದೆ ಮೃದುವಾಗಿ ಒಳಿತ್ತು. ಆರೋಗ್ಯಕ್ಕೆ ಇದು ಒಳ್ಳೇದು. ಬೇವಿನ ಸೊಪ್ಪು ಹಾಕುವ ಕಾರಣ ಜೀರ್ಣ ಶಕ್ತಿಯೂ ಹೆಚ್ಚುತ್ತು. ಮಕ್ಕೊಗೆ ಇದು ಭಾರೀ ಪ್ರೀತಿ.
                ನಿಂಗಳೂ ಮಾಡಿ ನೋಡಿ. ಹೇಂಗೆ ಆವ್ತು ಹೇಳಿ ಒಪ್ಪಲ್ಲಿ ತಿಳಿಶಿಕ್ಕಿ…
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ವಾವ್ ಚಿಕ್ಕಮ್ಮಾ, ಹೊಸ ಬಗೆ ತಿಂಡಿ…. ಸುರು ಕೇಳಿದ್ದು, ಅಂಬಗ ಈ ಸರ್ತಿ ಊರಿಂಗೆ ಬಂದಿಪ್ಪಗ ಇದರ ತಿಂತೆ ಚಿಕ್ಕಮ್ಮಾ…
  ಗುಹಂಗೆ ಖುಶಿ ಅವ್ತಾ? ಮಾಡೆಕ್ಕು ಅಬ್ಬೆ ಹೇಳ್ತನಾ?

  [Reply]

  VA:F [1.9.22_1171]
  Rating: 0 (from 0 votes)
 2. bhagyashree

  Abbe, heenge hesaru beledu madle avthu, layka avutthu adude. Kadle beLedu try madthe anu.

  [Reply]

  VA:F [1.9.22_1171]
  Rating: 0 (from 0 votes)
 3. ಅಖಿಲ

  ಅಬ್ಬೆ,,,,,ಎನಗೆ ಇದರ ಮಾಡಿ ಕೊಟ್ಟಿದಿ….ಲಾಯಿಕ ಆವ್ತು,,,

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿದೇವಸ್ಯ ಮಾಣಿಒಪ್ಪಕ್ಕವಾಣಿ ಚಿಕ್ಕಮ್ಮಪುತ್ತೂರುಬಾವದೊಡ್ಡಭಾವಸುವರ್ಣಿನೀ ಕೊಣಲೆನೆಗೆಗಾರ°ಪೆರ್ಲದಣ್ಣಅಡ್ಕತ್ತಿಮಾರುಮಾವ°ಚುಬ್ಬಣ್ಣಬಂಡಾಡಿ ಅಜ್ಜಿಮಾಲಕ್ಕ°ತೆಕ್ಕುಂಜ ಕುಮಾರ ಮಾವ°ಜಯಗೌರಿ ಅಕ್ಕ°ಸುಭಗಉಡುಪುಮೂಲೆ ಅಪ್ಪಚ್ಚಿಶುದ್ದಿಕ್ಕಾರ°ಪಟಿಕಲ್ಲಪ್ಪಚ್ಚಿಶ್ರೀಅಕ್ಕ°ಚೂರಿಬೈಲು ದೀಪಕ್ಕಸಂಪಾದಕ°ಮಂಗ್ಳೂರ ಮಾಣಿಪುಣಚ ಡಾಕ್ಟ್ರುಕಜೆವಸಂತ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ