ಕಥೆ ಕಥೆ ಕಾರಣ…-ಕಾರಣವೇ ಇಲ್ಲದ್ದೆ ‘ಒಂದು ಕಥೆ’ !!

October 26, 2010 ರ 6:32 pmಗೆ ನಮ್ಮ ಬರದ್ದು, ಇದುವರೆಗೆ 36 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ದಿನ ಪುರ್ಸೊತ್ತು ಮಾಡಿ ಬೈಲಿನೋರೊಟ್ಟಿಂಗೆ ಮಾತಾಡೆಕ್ಕು ಹೇಳಿ ಸುಮಾರು ದಿನಂದ ಗ್ರೇಶುದು,ಆದರೆ ಪುರ್ಸೊತ್ತೇ ಆಯ್ಕೊಂಡಿತ್ತಿಲ್ಲೆ. ಈಗ ಪುರ್ಸೊತ್ತೇ ಪುರ್ಸೊತ್ತು…ಈ ಅವಕಾಶವ ಬಿಡ್ಲೇಆಗ ಹೇಳಿ ತೀರ್ಮಾನ ಮಾಡಿ, ಒಂದೊಂದೇ ಕಥೆ ಬರವಲೆ ಹೆರಟೆ. ಕಥೆ ಹೇಳುವಗ ನೆಂಪಾತು, ಕಥೆಗಳ ಬಗ್ಗೆಯೇ ರಜ್ಜ ಮಾತಾಡುವ0 ಹೇಳಿ. ನಾವು ಸಣ್ಣಾದಿಪ್ಪಗ ಕಥೆ ಕೆಳಿದಷ್ಟು ಈಗಾಣ ಮಕ್ಕೊಗೆ ಸಿಕ್ಕುತ್ತಿಲ್ಲೆಯೋ ಹೇಳಿ ಎನಗೆ ಕಾಣ್ತು. ಇರಲಿ, ನಾವು ನಮ್ಮ ಬಾಲ್ಯವ ರಜ್ಜ ನೆಂಪು ಮಾಡಿಗೊಂಬ0 :) ಈಗ ಎಲ್ಲೋರೂ ಬೇರೆ ಬೇರೆ ಕೆಲಸಂಗಳಲ್ಲಿ busy. ಒಂದು ಹತ್ತು ನಿಮಿಷ ಎಲ್ಲ ಬಿಟ್ಟು ಹತ್ತೋ ಇಪ್ಪತ್ತೋ ಮೂವತ್ತೋ ವರ್ಷ ಹಿಂದಂಗೆ ಹೋಗಿ ಬಪ್ಪ0, ಆಗದಾ?

ಆನು ಸಣ್ಣಾದಿಪ್ಪಗ ಮನೆಲಿ ಅಮ್ಮ,  ಅಜ್ಜನ ಮನೆಗೆ ಹೋದಪ್ಪಗೆಲ್ಲಾ ಅತ್ತೆ  ತುಂಬಾ ಕಥೆ ಹೇಳುಗು…ಓ ಮೊನ್ನೆ ಎನ್ನ ಅತ್ತಿಗೆಯ ಮಗಳು ಮೂರೂವರೆ ವರ್ಷದ ’ನೀನಾ’ಗೆ ಎನ್ನ ಅಮ್ಮ ಕಥೆ ಹೇಳುವಗ ಎನಗೆ ಎನ್ನ ಹಳೆ ಕಥೆಗೊ ಎಲ್ಲ ನೆಂಪಾತು… ಗುಡುಗುಡುಗುಮ್ಮಟೆರಾಯನ ಕಥೆ, ಪುಣ್ಯಕೋಟಿಯ ಕಥೆ, ಕುದುಕ್ಕನ ಕಥೆ, ರಾಮಾಯಣದ-ಮಹಾಭಾರತದ ಕಥೆ, ಚಂದಾಮಾಮದ ಕಥೆಗೊ, ಅಲಿಬಾಬನ ಕಥೆ, ಪುಚ್ಚೆ-ನಾಯಿ ಕಥೆ…ಹೀಂಗೇ ಎಂತೆಂತದೋ….ಹೆಚ್ಚು ಹಠ ಮಾಡಿರೆ ಹೊಸ ಕಥೆಗೊ ಸೃಷ್ಟಿ ಅಪ್ಪದೂ ಇತ್ತಿದ್ದು ಕೆಲವು ಸರ್ತಿ !!  ಕಥೆ ಹೇಂಗೇ ಇರಲಿ, ಆಶ್ಚರ್ಯಂದ…ಅದು ಕಣ್ಣ ಮುಂದೆ ನಡೆತ್ತಾ ಇದ್ದೋ ಹೇಳುವ ಹಾಂಗೆ ಮೈಯೆಲ್ಲಾ ಕೆಮಿ ಆಗಿ ಕೇಳುದು !! ಮಧ್ಯೆ ಮಧ್ಯೆ ಒಂದೊಂದು ಪ್ರಶ್ನೆ ಕೇಳುದೂ ಇತ್ತು. ಉತ್ತರವೇ ಇಲ್ಲದ್ದ ಪ್ರಶ್ನೆ ಆದರೆ  ಅಮ್ಮ “ಹಾಂಗೆಲ್ಲ ಕೇಳುಲಾಗ, ಸುಮ್ಮನೆ ಕಥೆ ಕೇಳು” ಹೇಳಿ ಜೋರು ಮಾಡುಗು 😉

ಕೆಲವು ಕಥೆಗೊ ಮನಸ್ಸಿಂಗೆ ನಾಟಿ, ನೀತಿಯ ಜೀವನಲ್ಲಿ ಅಳವಡಿಸಿಗೊಂಡರೆ.. ಇನ್ನು ಕೆಲವು ಕಥೆಗಳ ಸತ್ಯ ಹೇಳಿ ನಂಬಿದ್ದರ ಗ್ರೇಶಿ ನೆಗೆ ಬತ್ತು ಈಗ !! ಉದಾಹರಣೆಗೆ, ಪುಣ್ಯಕೋಟಿಯ ಕಥೆ, ಕೇಳಿದವಕ್ಕೆ ಆರಿಂಗಾರೂ ಕಣ್ಣಿಲ್ಲಿ ನೀರು ತುಂಬದ್ದೇ ಇರ..ಹಾಂಗೇ ಎಂದಿಂಗೂ ಅಳಿಯದ್ದೆ ಮನಸ್ಸಿಲ್ಲಿ ಪುಣ್ಯಕೋಟಿ ಜೀವಂತ ಇಕ್ಕು. ಇನ್ನು ಕೆಲವು ಕಥೆಗೊ ಇದ್ದು, ಸಣ್ಣಾದಿಪ್ಪಗ ಅದರ ಕೇಳಿ ಅಸಾಧ್ಯವ ಸತ್ಯ ಹೇಳಿ ನಂಬಿರ್ತು ನಾವು, ಉದಾಹರಣೆಗೆ ಗುಡುಗುಡುಗುಮ್ಮಟೆರಾಯನ ಕಥೆ ಇತ್ಯಾದಿ… ಕೇಳಿದ್ದರ ಎಲ್ಲ ನಂಬುವ ಆ ಮುಗ್ಧತೆ ಈಗ ಇಲ್ಲೆ, ಅದೂ ಅಲ್ಲದ್ದೆ ಪ್ರತಿಯೊಂದು ವಿಚಾರವನ್ನೂ ಹತ್ತು ಸರ್ತಿ ಆಲೋಚನೆ ಮಾಡಿ ವಿಮರ್ಶಿಸಿ ಮತ್ತೆಯೇ ನಂಬುದು ಈಗ! ಅದಿರಲಿ…. ಆನು ಎನಗೆ ನೆಂಪಿದ್ದ ಕಥೆ ಒಂದರ ಹೇಳ್ತೆ, ನಿಂಗಳೂ ನಿಂಗೊಗೆ ನೆಂಪಿದ್ದ ಅಜ್ಜಿಯೋ ಅಮ್ಮನೋ ಆರಾರು ಹೇಳಿದ ಯಾವುದಾರೂ ಒಂದು ಕಥೆಯ ಇಲ್ಲಿ ಹೇಳಿ[ ಒಂದು ಕಾಲು ಗಂಟೆ ಪುರ್ಸೊತ್ತು ಮಾಡಿ ಬರೇರಿ.. ಬರವ ಪ್ರಯತ್ನ ಮಾಡಿ]

ಇದರಿಂದ ಎಂತ ಪ್ರಯೋಜನ ಹೇಳಿ ಕೇಳ್ತೀರಾ? ಪೈಸಿನ ಲಾಭ ಅಂತೂ ಇಲ್ಲೆ, ಆದರೆ…ಒಂದಷ್ಟು ಸಮಯ ನಾವು  ನಮ್ಮ ಹಿಂದಾಣ ನೆಂಪುಗಳ ಹಸಿರು ಮಾಡಿಗೊಂಬಲಕ್ಕು…. ಬೇರೆಲ್ಲ  tension  ಮರತ್ತು ನೆಗೆಮಾಡ್ಲಕ್ಕು…ನಮ್ಮ ಮಕ್ಕೊಗೆ ಪುಳ್ಳಿಯಕ್ಕೊಗೆ ಹೇಳುಲೆ ಹೊಸ/ಹಳತ್ತು ಕಥೆಗೊ  ಸಿಕ್ಕುಗು….. ಹೀಂಗೆ, ಬೆಲೆ ಕಟ್ಟುಲಾಗದ್ದ ಕೆಲವು ಸಂತಸದ ಕ್ಷಣಂಗಳ ನಮ್ಮದಾಗ್ಸಿಗೊಂಬಲಕ್ಕು………………………… ಕೆಲವರಿಂಗೆ ಇದೆಲ್ಲಾ ಮಕ್ಕಳಾಟಿಕೆ ಹೇಳಿ ಕಂಡರೂ…. ಆನಂತೂ always ready for  these things.

ಈಗ ಒಂದು ಕಥೆ ಹೇಳ್ತೆ, ಎಂತದೂ ಪ್ರಶ್ನೆ ಕೇಳದ್ದೆ ಸುಮ್ಮನೆ ಓದೆಕು ಎಲ್ಲೋರೂ.. ಆತ, [ನಿಂಗೊ ಕೇಳುವ ಪ್ರಶ್ನೆಗೆ ಎನ್ನ ಹತ್ತರೆ ಉತ್ತರ ಖಂಡಿತಾ ಇರ ಹೇಳಿ ಎನಗೆ ಗೊಂತಿದ್ದು ;)]

0
ಹಾಂಕಾರದ ಕೆಪ್ಪೆ

ಒಂದು ಊರಿತ್ತಡ, ಅಲ್ಲಿ ಒಂದು ದೊಡಾಆಆಆ…. ಕೆರೆ ಇತ್ತಡ. ಊರಿನ ಜೆನಂಗೊಕ್ಕೆ ಎಲ್ಲದಕ್ಕೂ ಅಲ್ಲಿಂದಲೇ ನೀರು, ಪಾತ್ರೆ ತೊಳೆವಲೆ, ವಸ್ತ್ರ ಒಗವಲೆ, ಮೀವಲೆ, ತೋಟಕ್ಕೆ ನೀರು ಹಾಕುಲೆ, ಎಮ್ಮೆ-ದನ ಮೈ ತೊಳವಲೆ..ಹೀಂಗೆ ಎಲ್ಲದಕ್ಕೂ ಅದೇ ಕೆರೆಯೇ ಗತಿ ಅಡ. ಕೆರೆಲಿ ಒಂದು ಕೆಪ್ಪೆ ಇತ್ತಡ, ಅದಕ್ಕೆ ತುಂಬಾ ಹಾಂಕಾರ ಅಡ. ಅದು ಯಾವಗಲೂ ’ಇದು ಎನ್ನ ಕೆರೆ,ಇದು ಎನ್ನ ಕೆರೆ, ಇಲ್ಲಿ ಬೇರೆ ಆರೂ ಎನ್ನ permission ಇಲ್ಲದ್ದೆ ಬಪ್ಪಲಾಗ’ ಹೇಳಿ ಹೇಳುಗು. ಆದರೆ ಕೆಪ್ಪೆಯ ಮಾತಿನ ಆರು ಕೇಳ್ತವು ಬೇಕನ್ನೆ? ಕೆಪ್ಪೆ ದಿನಾಗ್ಲೂ ಹೀಂಗೇ ಹೇಳುಗಡ ಆದರೆ ಎಂತದೂ ಆಯ್ದಿಲ್ಲೆ ! ಒಂದು ದಿನ ಕೆಪ್ಪೆಗೆ ದೊಡ್ಡ ಕೋಪ ಬಂತಡ…… ಎನ್ನ ಕೆರೆಯ ನೀರಿನ ಎನ್ನ ಅನುಮತಿ ಇಲ್ಲದ್ದೆ ಎಲ್ಲೋರೂ ಉಪಯೋಗ್ಸುತ್ತೀರಾ? ಎನ್ನ ಮಾತಿಂಗೆ ಬೆಲೆಯೇ ಇಲ್ಲೆಯಾ? ಹಾಂಗಾರೆ ಮಾಡ್ತೆ ನಿಂಗೊಗೆ ಬಗೆ ಹೇಳಿ ಹೇಳಿತ್ತಡ..ಮತ್ತೆ ಕೆರೆಯ ನೀರಿನ ಎಲ್ಲ ಕುಡಿವಲೆ ಶುರು ಮಾಡಿತ್ತಡ !! ಅಷ್ಟು ದೊಡ್ಡ ಕೆರೆಯ ನೀರಿನ ಕುಡುದು ಕೆಪ್ಪೆಯ ಹೊಟ್ಟೆ ದೊಡ್ಡ ಅಪ್ಪಲೆ ಶುರು ಆತಡ….ದೊಡ್ಡ… ದೊಡ್ಡ… ದೊಡ್ಡ..ಹೊಟ್ಟೆ ಆತಡ, ಊರಿನ ಜೆನಕ್ಕೆ ತಲೆ ಬೆಶಿ ಆತಡ… ಜೆನ ಎಷ್ಟೇ ಕೇಳಿಗೊಂಡರೂ ಕೆಪ್ಪೆ ಕುಡುದ ಕೆರೆಯ ನೀರಿನ ಹೆರ ಹಾಕಿದ್ದೇ ಇಲ್ಲೆಡ. ಹೀಂಗಾರೆ ನಾವೆಂತ ಮಾಡುದು ನೀರಿಂಗೆ ಹೇಳಿ. ಅಂಬಗ ಊರಿಲ್ಲಿ ಇಪ್ಪ ಬುದ್ಧಿವಂತ ಮಾಣಿ ಒಬ್ಬಂಗೆ ಒಂದು  idea ಬಂತಡ…. ಅಂವ ಹಾಂಕಾರದ ಕೆಪ್ಪೆ ಹತ್ತರೆ ಹೋಗಿ ಅದರ ಹೊಟ್ಟೆಗೆ ಒಂದು ಸೂಜಿಲಿ ಕುತ್ತಿದ0 ಅಡ. ಕೆಪ್ಪೆಯ ಹೊಟ್ಟೆ ಒಟ್ಟೆ ಆಗಿ, ನೀರೆಲ್ಲ ಹೆರ ಬಂದು ಕೆರೆ ತುಂಬಿತ್ತಡ. ಕೆಪ್ಪೆ ಹೊಟ್ಟೆ ಒಡದು ಸತ್ತತ್ತಡ.”

ಈ ಕಥೆಯ ನೀತಿ ಎಂತರ ಹೇಳಿರೆ  ’ಹಾಂಕಾರ ಹೆಚ್ಚಾದರೆ ಎಂದಿಂಗೂ ಒಳ್ಳೆದಲ್ಲ, ನಮ್ಮ ಹತ್ತರೆ ಇಪ್ಪದರ ನಾಲ್ಕು ಜೆನಕ್ಕೆ ಹಂಚಿ ಉಪಯೋಗ್ಸೆಕು’ ಹೇಳಿ.  ಒಂದು ಕೆಪ್ಪೆ ಇಡೀ ಕೆರೆಯ ನೀರು ಕುಡಿವದು ಹೇಂಗೆ? ಕೆಪ್ಪೆ ಮಾತಾಡಿದ್ದು ಹೇಂಗೆ? ಇತ್ಯಾದಿ ಪ್ರಶ್ನೆ ಕೇಳೆಡಿ. ಅದೆಲ್ಲ ಎನಗೂ ಗೊಂತಿಲ್ಲೆ…… ಸಣ್ಣಾದಿಪ್ಪಗ ಕೆಪ್ಪೆ ಇಡೀ ಕೆರೆಯ ನೀರು ಕುಡುತ್ತಡ ಹೇಳುವಗ ಬಾಯಿ ಒಡದು ಕಥೆ ಕೇಳಿಗೊಂಡಿತ್ತಿದ್ದೆ ಆನು, ಹೀಂಗಿದ್ದ ಪ್ರಶ್ನೆಗೊ ಬೈಂದೇ ಇಲ್ಲೆ ತಲೆಗೆ !!

ಇಲ್ಲಿಗೆ ಎನ್ನ ಒಂದು ಕಥೆ ಮುಗುತ್ತು….[ಈ ಕಥೆಯ ಎನಗೆ ಎನ್ನ ಅಜ್ಜನ ಮನೆ ಅತ್ತೆ ಹೇಳಿದ್ದು..ಎನಗೆ ನಾಲ್ಕೋ ಐದೋ ವರ್ಷ ಆದಿಪ್ಪಗ…] ನಿಂಗೊ ಆರಾರು ಪ್ರಯತ್ನ ಮಾಡ್ತೀರಾ?

ಕಥೆ ಕಥೆ ಕಾರಣ...-ಕಾರಣವೇ ಇಲ್ಲದ್ದೆ ‘ಒಂದು ಕಥೆ’ !!, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 36 ಒಪ್ಪಂಗೊ

 1. ವಿಷ್ಣು ನಂದನ
  vishnandana

  Laykitthu kathe.

  Hange sannadippaga Abbe helida kathe yella nempathu. Kelavu nentru kooda manage bandare kathe helugu. Kathe heluvavu bandare koshi appadu.

  Aararu nammlli hiriyaru Havyaka Makkala Katha Sangrha heli yenthadaru pusthakava matthu baraddava?
  Hange yavudoo pusthaka illadre adondu karya ayekkathu. Nammde kathe, thala thalantharntha bandadu namma samskruthiya bhagave aagi hoydu. Aa kathago maratthu hopalaga. Pusthaka roopalli hera tharekku.

  Yentha helthi.

  [Reply]

  VA:F [1.9.22_1171]
  Rating: 0 (from 0 votes)
 2. ಮೋಹನಣ್ಣ

  ಶ್ಯಾಮಣ್ಣೋ ಒ೦ದು ದಬ್ಬಣ ಕೊಟ್ರಾಗದೊ ಹೇಳಿರೆ ಸೂಜಿ ಸಿಕ್ಕಿತ್ತೊ?ಕತೆ ಮು೦ದೆ ಹೋಗಾ.ಇನ್ನು ಪ್ರದೀಪ ಹೇಳಿದ ಹಾ೦ಗಿಪ್ಪ ಪೆರಟ್ಟು ಕತಗೊ ಎಲ್ಲ ಎ೦ಗಳತ್ರ ಹಳೆ ಕಾಲದ್ದು ಸಾಕಷ್ಟು ಇದ್ದು ಆದರೆ ಬೈಲಿನೋರು ಪರಬ್ಬ೦ಗೆ ಪ್ರಾಯ ಹೋಕಿ೦ಗೆ ಇದೆನ್ತರ ಮುದಿ ಪ್ರ೦ದು ಹೇಳ್ಲಾಗಾನೆ ಹೇಳಿ ಅದರ ಎಲ್ಲ ಖಾಸಗಿ ಭೇಟಿಗೆ ಬಾಕಿ ಮಡಗುತ್ತೆ ಆಗದೊ.ಇನ್ನೊದು ಶ್ಯಾಮಣ್ಣ ಹೇಳಿದ ಅಜ್ಜಿ ಕತೆಲಿ ಒ೦ದು ಚೂರು ಅರ್ಥ ಆಯಿದಿಲ್ಲೆ.ಅಜ್ಜಿ ಸಣ್ಣ ಪ್ರಾಯಲ್ಲಿ ಸತ್ತು ಹೋದ್ದದು ಹೇ೦ಗೆ?ಶ್ಯಾಮಣ್ಣ ಏನಾರು ಮಸಲತ್ತು ಮಾಡಿದನೊ?ಅಜ್ಜಿಗೂ ಸಣ್ಣ ಪ್ರಾಯಕ್ಕು ಹೊ೦ದಾಣಿಕೆ ಹೇ೦ಗೆ?ಇನ್ನು ಪುಟ್ಟಣ್ಣ ನ ಕತೆ ಈಗಳೇ ಮುಗುದರೆ ಎ೦ಗಳ ಹಾ೦ಗಿಪ್ಪವು ಇಲ್ಲಿವರೆಗೆ ಎತ್ತಿದ್ದು ಹೇ೦ಗೆ ಹೇಳಿ ಸ೦ಶಯ.ಪ್ರಕಾಶೊ ಬಯಲಿನೋರ ಹೆದರುಸೆಡ ಪ್ರಾಯಕ್ಕೆ ಬ೦ದ ಮಕ್ಕೊ ತು೦ಬಾ ಇದ್ದವು.ನೀನು ಬೀಲ ಹೋದ ಕುದ್ಕನೊ ಬೀಲ ಇದ್ದ ಕುದ್ಕನೊ?ಒಪ್ಪ೦ಗಳೊಟ್ಟಿ೦ಗೆ

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಸೂಜಿ ಸಿಕ್ಕದ್ದೆ ಕಥೆ ಮುಂದೆ ಹೋಗ. ಬ್ಯಾರ್ತಿಯ ಕುಪ್ಪಾಯ ಹೊಲಿವಲೆ ಎಡಿಯ… ಕುಪ್ಪಾಯ ಹೊಲಿವಲೆ ಎಡಿಯದ್ದ್ರೆ ಬ್ಯಾರ್ತಿ ಹುಲ್ಲು ಹೆರವಲೂ, ಸೊಪ್ಪು ಕಟ್ಟ ತಪ್ಪಲೂ ಬಾರ. ಹಾಂಗಾಗಿ ಕತೆ ಮುಂದೆ ಹೋಗದ್ದ್ರೂ ದಬ್ಬಣ ಕೊಟ್ರೆ ಕುಪ್ಪಾಯ ಆದರೂ ಹೊಲಿಗನ್ನೇ… ಹೇಳಿ ಎನ್ನ ಅಭಿಪ್ರಾಯ್…

  [Reply]

  VA:F [1.9.22_1171]
  Rating: 0 (from 0 votes)
 3. ಮೋಹನಣ್ಣ

  ಈಗಾಣ ಬ್ಯಾರ್ತಿಗೊ ಸೊಪ್ಪು ಕಡಿವಲೂ ಇಲ್ಲೆ ತಪ್ಪಲೂ ಇಲ್ಲೆ ಎಲ್ಲಾ ದುಬಾಯಿ ಬ್ಯಾರಿಗಳ ಹೆ೦ಡತ್ತಿಯಕ್ಕೊ.ಹಾ೦ಗಾಗಿ ಕೆಲಸಕ್ಕೆ ಬತ್ತ ಚಿ೦ತೆಯೇ ಇಲ್ಲೆ.ಮಕ್ಕಳ ಮ೦ಕಟ್ಸಲೆ ಕತೆ ಅಷ್ಟೆ ಬ್ಯಾರ್ತಿ ಈಗ ನೆಡು ಇರುಳದರು ಕುಪ್ಪಯ ಹರುದರೆ ಹೋಗಿ ಹೊಸತ್ತು ತಕ್ಕಷ್ಟೆ.ಮತ್ತೆ ದಬ್ಬಣಲ್ಲಿ ಮೆಟ್ಟೊ ಗೋಣಿಯೋ ಹರುದರೆ ಹೊಲಿವಲೆಡಿಗಷ್ಟೆ ಕುಪ್ಪಯಕ್ಕೆ ಸೂಜಿಯೇ ಆಯೇಕಷ್ಟೆ.ಏನಾದರೂದಾರಿ ಇದ್ದರೆ ಹೇಳು.ಒಪ್ಪ೦ಗಳೊಟ್ಟಿ೦ಗೆ

  [Reply]

  ಮುಣ್ಚಿಕಾನ ಭಾವ

  ಪ್ರದೀಪ್ ಮುಣ್ಚಿಕಾನ Reply:

  ಈಗಾಣ ಬ್ಯಾರ್ತಿಗೊ ಕುಪ್ಪಯ ಹಾಕುದು ಕಮ್ಮಿ ಹೇಳಿ ಕಾಣ್ತು… ಆದ ಕಾರಣ ಸೂಜಿ/ದಬ್ಬಣ ಇಲ್ಲದ್ದೆಯೂ ಕತೆ ಮುಂದೆ ಹೋಕು… :-)

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ

  ಕುಪ್ಪಾಯ ಹಾಕುತ್ತವು ಕರಿ ಗೂಡಿನೊಳ.
  ಮದಲಿ೦ಗೆ ಕರಿ ಗೂಡು ಕಮ್ಮಿ ಇತ್ತು ,ಇದು ಆ ಕಾಲದ ಕತೆ ಅದ.
  ಒಪ್ಪ೦ಗಳೊಟ್ಟಿ೦ಗೆ

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಆರಿಂಗೆ ಗೊಂತು!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಬಂಡಾಡಿ ಅಜ್ಜಿಕಳಾಯಿ ಗೀತತ್ತೆಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕಮುಳಿಯ ಭಾವಶರ್ಮಪ್ಪಚ್ಚಿದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಪಟಿಕಲ್ಲಪ್ಪಚ್ಚಿದೀಪಿಕಾವೇಣೂರಣ್ಣವಾಣಿ ಚಿಕ್ಕಮ್ಮಕೇಜಿಮಾವ°ಯೇನಂಕೂಡ್ಳು ಅಣ್ಣಪೆಂಗಣ್ಣ°ಅಕ್ಷರದಣ್ಣಎರುಂಬು ಅಪ್ಪಚ್ಚಿಚೆನ್ನೈ ಬಾವ°ಚೂರಿಬೈಲು ದೀಪಕ್ಕರಾಜಣ್ಣಗೋಪಾಲಣ್ಣಬಟ್ಟಮಾವ°ಕಜೆವಸಂತ°ಸರ್ಪಮಲೆ ಮಾವ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ