ಕನಸು

August 31, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾರೋ ತಮ್ಮಾ ನಾನು ನೀನು ಹೋಪೋ ಹಳ್ಳೀಗೆ
ಜಮೀನು ಮನೆ ಮಾಡ್ಕಂಡಿ ಖುಶಿಯಾಗ್ ಇಪ್ಪೂಲೇ||

ಅಡ್ಕೆ ತೆಂಗು ಬಾಳೆ ನೆಟ್ಕಂಡ್ ಬೆಳ್ಯಾ ಬೆಳೆವೊ
ಭತ್ತ ಶೇಂಗಾ ಹೆಸ್ರು ಉದ್ದು ಬಿತ್ತಿ ಬೆಳೆವೊ||

ತೋಟದಲ್ಲಂತೂ ಎಲೆ ಬಳ್ಳಿ ಉದ್ದಕ್ ಹಬ್ಬಿರ್ಲಿ
ಕಾಳಮೆಣ್ಸು ಯಾಲಕ್ಕಿ ಅಲ್ಲಲ್ಲಿ ಬೆಳೆದಿರ್ಲಿ||

ಬೆಳೆ ಬೆಳ್ದಾಂಗ್ ಪೇಟೆಗೆ ತಗೊಂಡೋಪ್ಲೆ ಜೀಪ್ ವಂದಿರ್ಲಿ
ಚೊಕ್ಕಾದ್ ಚೆಂದಾದ್ ಮನೇಲಿಪ್ಪೊ ಯೋಗಾ ನಂಗಿರ್ಲಿ||

ಹಳ್ಳೀ ಅಂದ್ರೆ ಪ್ರಶಾಂತತೆ ನೆಮ್ಮದಿ ಜಾಗಾ
ತೋಟಾ ಗದ್ದೆ ಇದ್ದಬುಟ್ರೆ ತಂಪೀಂದೇ ಗಾನಾ||

ಆರಾಮಾಗಿ ಉಸ್ರಾಡುಲೇ ವಳ್ಳೆ ಗಾಳಿ ಇರೋ
ನೀರು, ಹಾಲು, ಮೊಸರು, ಮಜ್ಜಿಗೆ ರುಚಿಯಾಗಿರೊ||

ಹಳ್ಳೀಲಂದ್ರೆ ಇರ್ತು ಯೆಲ್ಲಾ ಮನೇವಳ್ಗೆ
ಚಾಕ್ರಿಗೀಕ್ರೀಗ್ ಆಳಿದ್ರೆ ಸಹಾಯದಂಗೆ||

ಹಳ್ಳೀ ಜೀವ್ನ ಕಂದಾಚಾರ ಸಂಭ್ರಮಕ್ಕಿದ್ದಾಂಗೆ
ಹಬ್ಬಾ ಹುಣ್ಮೆ ಶ್ರಾದ್ಧ ತಿಥಿವರ್ಷಕ್ಕೊಂದಸಾರೆ||

ಹೋಪು ಬಪ್ಪು ಸಂಸ್ಕಾರ ನೆಂಟರಿಷ್ಟ್ರಿಗೆ
ಪೇಟೆಲಿಪ್ಪ ಒಂಟಿತನಾ ದೂರಾ ಆದಾಂಗೆ||

ನೆಮ್ಮದಿ ಖುಶಿ ಆಶಾ ಪಾಶಾ ಹಳ್ಳೀವಳ್ಗೆಯಾ
ಜನಾಯೆಲ್ಲಾ ಕೂಡ್ದಾಗ ಮಳ್ಳ ಹರೊದೆಯಾ||

ಹಳ್ಳೀಗೋದ್ರೆ ಕಳ್ಕಂಡಾಂಗೆ ಶೀಕು ಸಂಕ್ಟವಾ
ರುಮಾಲಾ ಕಟ್ಕಂಡ್ ತೋಟಾ ತಿರಗ್ದ್ರೆ ವ್ಯಾಯಾಮದಾಂಗೆಯಾ|

ಹಳ್ಳೀಲಿಪ್ಪೊ ತಮ್ಮಾ ಬಾರೋ ನನ್ನ ಸಂಗ್ತಿಗೆ
ನಾನು ನೀನು ಮನೆ ಕಟ್ಟೊ ಸಂಪ್ರದಾಯದಾಂಗೆ||

ನನ್ನ ನಿನ್ನ ಸಂಸಾರ ನಡೆಸುಲಪ್ಪಂಗೆ
ವಯಸ್ಸಾದ ಮನ್ಸಿಗೆಲ್ಲಾ ಶಾಂತಿ ಸಿಗ್ವಾಂಗೆ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಡೈಮಂಡು ಭಾವದೊಡ್ಡಮಾವ°ಕೇಜಿಮಾವ°ಸುವರ್ಣಿನೀ ಕೊಣಲೆವೇಣಿಯಕ್ಕ°ಅಕ್ಷರ°ನೀರ್ಕಜೆ ಮಹೇಶಅಜ್ಜಕಾನ ಭಾವವೇಣೂರಣ್ಣವಿದ್ವಾನಣ್ಣಅಕ್ಷರದಣ್ಣಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಮಾಲಕ್ಕ°ಎರುಂಬು ಅಪ್ಪಚ್ಚಿಗಣೇಶ ಮಾವ°ದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿಹಳೆಮನೆ ಅಣ್ಣಸಂಪಾದಕ°ಕಾವಿನಮೂಲೆ ಮಾಣಿಸುಭಗಪಟಿಕಲ್ಲಪ್ಪಚ್ಚಿವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ