“ಕಾಟು ಕೋಳಿಗಿದ್ದೊ ಶಂಕ್ರಾಂತಿ”-{ಹವ್ಯಕ ನುಡಿಗಟ್ಟು-26}

“ಕಾಟು ಕೋಳಿಗಿದ್ದೊ ಶಂಕ್ರಾಂತಿ!” {ಹವ್ಯಕ ನುಡಿಗಟ್ಟು-26}

ಆನು ಸಣ್ಣಾದಿಪ್ಪಗ ದೊಡ್ರಜೆ ಸಿಕ್ಕಿದ ಕೂಡ್ಳೆ ಅಜ್ಜನಮನಗೆ ಹೋಪಿಯೊಂ.ಅಂಬಗ ಈಗಾಣ ಹಾಂಗೆಒಂದೊ ಎರಡೊ ಮಕ್ಕೊ ’ಕಾಳನು-ಬೋಳನು’ ಹೇಳ್ತ ಹಾಂಗೆ, ಅಲ್ಲ!. ಮಾವಂದ್ರ ಮಕ್ಕೊ,ಚಿಕ್ಕಮ್ಮಂದ್ರ ಮಕ್ಕೊ ಹೇದೊಂಡು ಜೆನ ಹನಿಯ ಅಕ್ಕಿದ! ದೊಡಾ ಜಾಲು. ಎಲ್ಲೋರು ಸೇರಿ ಸೊಕ್ಕುವದು[ಆಡುದು]. ಆಟವುದೆ ಏವದೆಲ್ಲ?!.ಪಲ್ಲೆಆಟ[ಕುಂಟೆ-ಬಿಲ್ಲೆ],ಲಗೋರಿ,ಹುಗ್ಗಾಟ,ತಟ್ಟಾಮುಟ್ಟೆ,ಚುಟ್ಟಾಟ,ಕಂಬ-ಕಂಬಾಟ,ಕಬಡಿ,ಕೊಕ್ಕೊ,ಪದ್ಯಬಂಡಿ,ಶಬ್ಧಬಂಡಿ,ಹೀಂಗೆಲ್ಲ, ತರಾವಳಿಇಕ್ಕು.ಈಗ ಹಾಂಗಿದ್ದೆಲ್ಲ ಹೇಳ ಹೆಸರಿಲ್ಲದ್ದಾಂಗಾಯಿದು!.ಮೂರ್ಸಂದಿ ಒರೆಗೆ ಸೊಕ್ಕಿಯಪ್ಪಗ ಬಚ್ಚುತ್ತು,ಹಶುವಾವುತ್ತು. ಬೇಗ ಬೇಗ ಮೀವದು.ಮಿಂದಿಕ್ಕಿ ಬಂದಪ್ಪಗ ಉಣ್ಣದ್ರೆ ಹಶು ತಡವಲೆಡಿತ್ತಿಲ್ಲೆನ್ನೆ!.ಉಂಬಲೆ ಬಟ್ಳು ಮಡಗೆಂಡು ಕೂದರೆ; ಅಲ್ಲೆ ಅಜ್ಜ ಬಂದು,ಉಪ್ನಾನ ಆದ ಮಾಣಿಯಂಗಳತ್ರೆ ಸಂಧ್ಯಾವಂದನೆ ಮಾಡಿ ಆತೊ?ಕೇಳುಗು. ಕೂಸುಗಳತ್ರೆ,ದೇವರ ಸ್ತೋತ್ರ ಹೇಳುಸ್ಸೊ,ಮಗ್ಗಿ ಬಾಯಿಪಾಠವೋ ಆತೊ? ಕೇಳುಗು.ಮೋರೆ ಬಾಡ್ಸೆಂಡು ತಲೆ ಆಡ್ಸಿ ’ಇಲ್ಲೆ’ ಹೇಳ್ತ ಉತ್ತರ ಕೊಟ್ರೆ  “ಕಾಟು ಕೋಳಿಗಿದ್ದೊ ಶಂಕ್ರಾಂತಿ!” ಹೇದೊಂಡು ಅವರಷ್ಟಕೆ ಹೆರ ಹೋಕು.ಅದೆಲ್ಲ ಈಗ ಕೆಲವು ಸರ್ತಿ ನೆಂಪಪ್ಪದಿದ.

ಪ್ರತಿ ತಿಂಗಳು ಸೂರ್ಯ ಒಂದು ರಾಶಿಂದ ಮತ್ತೊಂದು ರಾಶಿಗೆ ಹೋವುತ್ತ ದಿನ[ಶಂಕ್ರಾಂತಿ] ದೇವಸ್ಥಾನಕ್ಕೋಗಿ ಕೈಮುಗುದಿಕ್ಕಿ ಬಪ್ಪದು ನಮ್ಮ ಪ್ರಾಕ್ ಪದ್ಧತಿ.ಇದು ಸತ್ಪರಂಪರೆ. ಕ್ರಮ ತಪ್ಪುಸಿ, ಉದಾಸೀನ ಮಾಡಿದ ಕಾರ್ಯಕ್ಕೆ ಹೆರಿಯೊವು ಗೌರವ ಕೊಡುಸ್ಸು ಕಮ್ಮಿ!. ಒಟ್ಟಿಲ್ಲಿ ಅದದು ಆಯೆಕ್ಕಾದ ಕೆಲಸ,ನೇಮ-ನಿಷ್ಟೆ,ಸಂಸ್ಕಾರ,ಆಗದ್ದೆ ಗೋಶ್ಬಾರಿ ಮಾಡೀರೆ ಈ ನುಡಿಗಟ್ಟಿನ ಉದಾರಣೆ ಕೊಟ್ಟು ಹೇಳ್ತವು.ಹೀಂಗೆ ಹೇಳಿದ್ದರಿಂದ ರಜ ಕೀಳರಿಮೆ ಹುಟ್ಟಿ, ತಿದ್ದಿಗೊಂಬಲಿಪ್ಪ ಲೋಕೋಕ್ತಿ.

ವಿಜಯತ್ತೆ

   

You may also like...

6 Responses

 1. ಹ್ಹಾ° ಎನ್ನ ಅಜ್ಜನ ಮನೆಲಿ ಚೂಂಟಾಟ ಹೇದೂ ಒಂದು ಆಡಿಯೊಂಡಿತ್ತಿದ್ದೆಯೋ. ಅಕೇರಿಗೆ ಆರಾರು ಬೆ..ರ್ರೇನೆ ರಾಗ ಎಳಕ್ಕೊಂಡು ಹಿರಿಯೋರತ್ರೆ ದೂರು ಕೊಟ್ಟಲ್ಯಂಗೆ ಆಟ ಕೈದು ಅಪ್ಪದು :ದ

  ಕಾಟು ಕೋಳಿಯ ಶಂಕ್ರಾಂತಿ ಕತೆ ಈಗ ಗೊಂತಾತದ. ಹರೇ ರಾಮ.

 2. ಚೂಂಟಾಟ! ಇತ್ತಿದ್ದಪ್ಪು. ಅದುಮಾಂತ್ರ ಕೋಪ ಬಂದಿಪ್ಪಾಗ ಆಡ್ತ ಆಟ ವೋ?!.ಚೆನ್ನೈ ಭಾವಂ ನೆಂಪು ಮಾಡುವಗ ಇನ್ನು ಕೆಲವು ನೆಂಪಾವುತ್ತು. ಹಾಂಗೆ ದೃಷ್ಟಿ ಕೀಳದ್ದೆ ಎದುರಾಳಿಯ ನೋಡುದು, ಮತ್ತೆ..ಕಣ್ಣರೆಪ್ಪೆಯ ಹೆರಾಂಗೆ ಮಡುಸಿ ಮಡಗಿ ಕಣ್ಣುಕೆಂಪು ಮಾಡ್ತ ಆಟ ಇದ್ದತ್ತು.ಇನ್ನು ಮತ್ತೆ ನೆಂಪು ಮಾಡುವೊಂ ಆಗದೊ.

 3. N. S. Keshava Prakash says:

  ಈಗ ಊರಿನ ಕೋಳಿಗು ಸಂಕ್ರಾಂತಿ ಇದ್ದ ಹಂಗೆ ಕಾಣುತ್ಥಿಲ್ಲೆ !!!!!!!

 4. ಅಪ್ಪು. ಕೇಶವ ಪ್ರಕಾಶ ಹೇಳ್ತ ಹಾಂಗೆ ಕೆಲವು ನುಡಿಗಟ್ಟುಗಳ ವೈಖರಿಯ ಬದಲುಸೆಕ್ಕಾದ ಪರಿಸ್ಥಿತಿ ಬತ್ತೋ ಹೇದು!?.

 5. S.K.Gopalakrishna Bhat says:

  ಊರ ಕೋಳಿಗೆ ಸಂಕ್ರಾಂತಿ ದಿನ ಎಂತಾದರೂ ವಿಶೇಷ ಮಾಡಿಕೊಂಡು ಇತ್ತಿದ್ದವಾ ? ಕೋಳಿ ಸಾಂಕಿದವರ ಹತ್ತರೆ ಕೇಳಿ ನೋಡುವೋ.

 6. ಗೋಪಾಲಂಗೆ ಧನ್ಯವಾದ. ಊರದ್ದು ಹೇಳಿಯಪ್ಪಗ ಒಳ್ಳೆದು ಹೇದಿದ್ದನ್ನೆ! ’ಕಾಟು’ ಹೇಳಿಯಪ್ಪದ್ದೆ ರಜ ಸಣ್ಣಕೆ ಬೈದು ಎಚ್ಚರಿಕೆ ಕೊಡುಸ್ಸು ಮದಲಾವಣರ ಭಾಷೆ!.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *