ಕಾರ್ಗಾಂಡ

November 29, 2013 ರ 1:33 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

kargaanda
ಕಾರ್ಗಾಂಡ ಕಸ್ತಲೆಲಿ
ಕೊಡಿ ದೀಪ ಬೆಣ್ಚಿಗೆ
ಹುಡುಕುದೆಂತಕೆ ಕನಸು?
ಮಿಡುಕುದೆಂತಕೆ ಮನಸು?

ಕಾರ್ಗಾಂಡ ಕಸ್ತಲೆಲಿ
ಕಲ್ಲು ಕಾಲಿಂಗೆ ಡಂಕಿ
ಎಲ್ಲಿ ಕೊಡಿ ಬೆರಳಿಂಗೆ
ನೆತ್ತರಿನ ಲೇಪ?
ಅಲ್ಲ, ಮನಸಿನ ಒಳವೆ
ನಿಲ್ಲದ್ದ ಕೋಪ?
ಸಲ್ಲದ್ದ ತಾಪ?

ಕಾರ್ಗಾಂಡ ಕಸ್ತಲೆಲಿ
ಅಸಬಡಿವ ಜೀವಕ್ಕೆ
ಏವಾಗ ಹಗಲು?
ಕರಿಗಪ್ಪು ಮುಗಿಲು?
ತೇವ ಇಲ್ಲದ್ದ ಭೂಮಿ
ಯಾವಾಗ ತಂಪು?
ಯಾವಾಗ ಸೊಂಪು?

ಕಾರ್ಗಾಂಡ ಕಸ್ತಲೆಲಿ
ಕುರುಡು ಕಣ್ಣಿಂಗೆಂತ
ಕೆಲಸ? ಬರಡು
ಮಣ್ಣಿಂಗೆಂತ ಸೊಗಡು?
ಬೆಗುಡುತನ ತೋರುಸುವ
ಬುದ್ದಿಗೇಡು?
ಬರಿ ಕಾಡು?

ಕಾರ್ಗಾಂಡ ಕಸ್ತಲೆಲಿ
ಬೆಳ್ಳಿ ನೀರಾಂಜನದ
ಎಣ್ಣೆ ಮುಗುದರೆ ಇನ್ನು
ಬತ್ತಿ ಹೊತ್ತುಸುದೇಂಗೆ?
ಹರುದ ವಸ್ತ್ರದ
ಕೊಡಿಗೆ ಕಿಚ್ಚು
ಹೊತ್ತುಗಾ? ಹೇಂಗೆ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹ್ಹು° ಕಾರ್ಗಾಂಡ ಕಸ್ತಲೆ ಹೇದು ಮೇಗಂದ ಮೇಗೆ ನೋಡಿರೆ ವಿಷ್ಯ ಎಂತದೂ ಇಲ್ಲೆ. ಬರೇ ಕಸ್ತಲೆ ವಿಷ್ಯ. ಆದರೆ ಪ್ರತಿಸಾಲಿಲ್ಲಿ ಅಡಕವಾಗಿಪ್ಪ ಸಾಹಿತ್ಯ ನಿಜವಾಗಿ ಉತ್ಕೃಷ್ಟ. ಅಪರೂಪದ ಈ ಕೃತಿಗೊಂದು ನಮೋ ನಮಃ ಶ್ಯಾಮಣ್ಣ. ಕರೇಲಿ ಇಪ್ಪ ಚಕ್ಕುಲಿ ಕಾರದ ಕಡ್ಡಿಯೂ ಪಷ್ಟಾಯ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ರವಿ ಕಾಣದ್ದನ್ನೂ ಕವಿ ಕಾಣ್ತ-
  ಕಾರ್ಗಾಂಡ ಕಸ್ತಲೆಲೂ
  ಶ್ಯಾಮಣ್ಣ ಕಂಡ
  ಹೊಳಪಿನಾ ಚಿತ್ರಂಗೊ
  ಎಷ್ಟೊಂದು ಚಂದ!

  [Reply]

  VA:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್ ಏತಡ್ಕ

  ಕಾರ್ಗಾಂಡ(ಕರ್ಗೂಡಿ)ಕಸ್ತಲೆಲಿಯೂ ಅಂತರ್ಗತವಾದ ಬೆಣಚ್ಚು ಇದ್ದು ಹೇಳುವುದರ ಮನೋಜ್ಞ ಚಿತ್ರ,ಚಿತ್ರಣ.ಅಭಿನಂದನೆಗೊ ಶ್ಯಾಮಣ್ಣ.

  [Reply]

  VA:F [1.9.22_1171]
  Rating: 0 (from 0 votes)
 4. ಯಮ್.ಕೆ.

  ಕಾರ್ಗಾ೦ಡ ಕಸ್ತೆಲಿಲಿ,
  ——- ದೂರ೦ದ ಕೇಳಿತ್ತು,

  ಒಟ್ರ್ ಟ್ರೀ ಟೀ……………

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಚಿತ್ರಕ್ಕೆ ಕವನವೋ ಅಲ್ಲ ಕವನಕ್ಕೆ ಚಿತ್ರವೊ..? ಒಂದಕ್ಕೊಂದು ಪೂರಕವಾಗಿ ತುಂಬ ಲಾಯಕ ಆಯಿದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿಪುತ್ತೂರಿನ ಪುಟ್ಟಕ್ಕಶೀಲಾಲಕ್ಷ್ಮೀ ಕಾಸರಗೋಡುಶೇಡಿಗುಮ್ಮೆ ಪುಳ್ಳಿಕಳಾಯಿ ಗೀತತ್ತೆಗೋಪಾಲಣ್ಣಗಣೇಶ ಮಾವ°ವಿದ್ವಾನಣ್ಣvreddhiದೊಡ್ಡಭಾವಬಂಡಾಡಿ ಅಜ್ಜಿಡೈಮಂಡು ಭಾವಅಕ್ಷರ°ಯೇನಂಕೂಡ್ಳು ಅಣ್ಣಡಾಮಹೇಶಣ್ಣವಸಂತರಾಜ್ ಹಳೆಮನೆವೆಂಕಟ್ ಕೋಟೂರುಕೊಳಚ್ಚಿಪ್ಪು ಬಾವದೊಡ್ಮನೆ ಭಾವವಿಜಯತ್ತೆಅನು ಉಡುಪುಮೂಲೆಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ