‘ಕುಟ್ಟುಗಹಾಲು ಹಾಳಪ್ಪಲೆ ತೊಟ್ಟು ಹುಳಿಸಾಕು’ (ಹವ್ಯಕ ನುಡಿಗಟ್ಟು-10)

July 29, 2014 ರ 7:22 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

–“ಕುಟ್ಟುಗ ಹಾಲು, ಹಾಳಪ್ಪಲೆ ತೊಟ್ಟು ಹುಳಿ ಸಾಕು”—(ಹವ್ಯಕ ನುಡಿಗಟ್ಟು-1೦)

ಕೆಲವು ವರ್ಷ ಹಿಂದಣ ಮಾತಿದು. ಒಳ್ಳೆಕೂಡು ಕುಟುಂಬ. ನಾಲ್ಕೈದು ಮಾಣಿಯಂಗೊ,ಐದಾರು ಕೂಸುಗೊ ಆಗಿ ಸಾಮರಸ್ಯಲ್ಲಿ  ಬಾಳಿ ಬೆಳಗೆಂಡಿದ್ದ ಮನೆಯದು. ಎಲ್ಲಾ ಕೂಸುಗಳನ್ನೂ ಮದುವೆ ಮಾಡಿ ಕೊಟ್ಟು ಮಾಣಿಯಂಗಕ್ಕೂ ಮದುವೆ ಮಾಡಿ ತನ್ನ ಜವಾಬ್ದಾರಿ ಮುಗುಶಿ ಉಸ್ಸಪ್ಪ ಹೇಳಿ, ಮನೆ ಎಜಮಾನ ಸಂತೋಷದ ನಿಟ್ಟುಸಿರು  ಬಿಟ್ಟಿತ್ತಿದ್ದ. ಇದ್ದಕ್ಕಿದ್ದ ಹಾಂಗೆ ಏವದೋ ಕಾರಣಕ್ಕೆ ಮನೆಒಳ ಹೆಮ್ಮಕ್ಕೊಗೆ  ಒಳಂದೊಳವೇ ಮುರುಗಲೆ ಸುರುವಾತು ಹೇಳ್ತದು ಎಜಮಾನಂಗೆ ಗೊಂತಾತು.

ಕಾರಣ ಸಣ್ಣದೆ! ಸದ್ಯ ಮದುವೆಯಾಗಿ ಬಂದ ತಂಗಗೆ, ಅದರ ಪೈಕಿ ನೆಂಟ್ರಲ್ಲಿಗೆ ಒಂದು ಉಪನಯನಕ್ಕೆ ಹೋಪಲೆಡಿಗಾಯಿದಿಲ್ಲೆ!.ಒಂದು ’ಹೆರಗೆ’ ಮತ್ತೊಂದು ಬಾಣಂತಿ. ಮತ್ತೆರಡು ಮನೆಲಿಲ್ಲೆ. ಹೀಂಗಿಪ್ಪಗ ಮನೆಲಿದ್ದವರತ್ರೆ ತನ್ನ ಕೋಪವ ತೋರ್ಸಿಗೊಂಡತ್ತು. ಮಾತು ಬಿಟ್ಟತ್ತು. ಕೆಲವು ಜೆನಕ್ಕೆ ತಾಳ್ಮೆ ಕಮ್ಮಿ ಅಲ್ಲೊ?ಅಂತೂ ಮನೆ ಎಜಮಾನಂಗೊರೆಗೆ ಎತ್ತಿತ್ತದು ಸುದ್ದಿ!.ಆದರೆ ಅವಂಗೆ ವಿವೇಕ ಇದ್ದತ್ತು. ಆಸೊಸೆಯನ್ನೂ  ಮತ್ತಿದ್ದವರನ್ನೂ ದೆನಿಗೇಳಿ ಕೂರ್ಸಿಗೊಂಡು ಹೇಳಿದ. “ನೋಡಿ ಸೊಸೆಕ್ಕಳೇ, ಇದು ಎಲ್ಲೋರು ಒರ್ಮೆಲಿ ಬಾಳಿ ಬೆಳಗಿದ ಮನೆ. ಸಣ್ಣ-ಸಣ್ಣ ಕಾರಣಕ್ಕೆ ನಮ್ಮ ಕುಶಿವಾಶಿ ಆಗದ್ದೆ, ಸಣ್ಣ-ಸಣ್ಣ ವೆತ್ಯಾಸವೋ ಕೆಲವು ಸರ್ತಿ ಆಗಿ ಹೋಕು. ಅದರ ಅಲ್ಲಿಗಲ್ಲಿಗೇ ಬಿಟ್ಟು ಬಿಡೆಕು.ದಿನದ ಹಾಂಗೆ ದಿನ ಇರಯಿದ!. ಒಂದು ಕುಟ್ಟುಗ ಹಾಲು ಹಾಳಾಯೆಕ್ಕಾರೆ ಒಂದು ತೊಟ್ಟು ಹುಳಿ ಸಾಕು. ನಾವು ಹಾಲಿಂಗೆ ಹುಳಿ ಹಿಂಡ್ಳಾಗ. ಆದರೆ.. ಹೆಪ್ಪು ಹಾಕೆಕ್ಕು!. ಹೆಪ್ಪು ಹಾಕುಸ್ಸು ಬೇರೆ. ಹುಳಿ ಹಿಂಡುಸ್ಸು ಬೇರೆ!. ಹಾಲಿನ ಹಾಂಗಿದ್ದ ನಮ್ಮ ಕೂಡುಕುಟುಂಬವ ಹೆಪ್ಪು ಹಾಕಿ ಮತ್ತೂ ರುಚಿ ಗಟ್ಟಾಗಿ ಗಟ್ಟಿ ಮಾಡೆಕ್ಕಿದ. ಇನ್ನು ಹೀಂಗಾಗ ಹೇಳಿ ಜಾನುತ್ತೆ.” ಹೀಂಗೆ ಬುದ್ದಿ ಮಾತು ಹೇಳಿದ. ಮತ್ತೆ ಮುಗಿಲು ಮುಸುಕ್ಕಿದ  ಮನೆ  ತೆಳುದತ್ತು.ಎಜಮಾನ ಕೊಟ್ಟ ವಿಶ್ಲೇಷಣೆ ಸಲಹೆ ಒಳ್ಳೆದಿದ್ದಲ್ಲೊ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. K.Narasimha Bhat Yethadka

  ಇದರನ್ನೇ ಮನ್ನೆ ಗುರುಗೊ ರಾಮಕಥೆಲಿಯೂ ಹೇಳಿದ್ದವು.’ಹಂಡೆ ಹಾಲಿಂಗೆ ಹುಂಡು ಹುಳಿ ಹಿಂಡಿದ ಹಾಂಗೆ’ ಹೇಳಿ.ಕೋಪದ ಕೈಗೆ ಬುದ್ಧಿ ಕೊಟ್ರೆ ಮತ್ತೆ ಪಶ್ಚಾತ್ತಾಪ ಪಡೆಕಕ್ಕು.ಒಳ್ಳೆ ನುಡಿಗಟ್ಟು.

  [Reply]

  VA:F [1.9.22_1171]
  Rating: 0 (from 0 votes)
 2. manjunatha

  ಭಾರೀ ಒಳ್ಳೆಯ ನುಡಿಗಟ್ಟು ಮಾಂತ್ರ ಅಲ್ಲ ಅದರ ಸಂದರ್ಭ ಉದಾಹರಣೆ ಕೊಟ್ಟದೂ ಅಷ್ಟೇ ಒಳ್ಳೆದಾಯ್ವಿದು.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಅಪ್ಪು ನರಸಿಂಹಣ್ಣ, ಶ್ರೀ ಗುರುಗೊ ಹೇಳಿದ್ದದರ ಓದಿಯಪ್ಪಗ ಎನ ಇದು ನೆಂಪಾದ್ದು..

  [Reply]

  VN:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮೀ ಜಿ ಪ್ರಸಾದ

  ಒಳ್ಳೆ ನುಡಿಗಟ್ಟು ವಿಜಯಕ್ಕ ನಿರೂಪಣೆ ದೆ ತುಂಬಾ ಲಾಯಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಬೋಸ ಬಾವಗೋಪಾಲಣ್ಣಎರುಂಬು ಅಪ್ಪಚ್ಚಿಚೂರಿಬೈಲು ದೀಪಕ್ಕದೊಡ್ಡಭಾವಮುಳಿಯ ಭಾವಶುದ್ದಿಕ್ಕಾರ°ಚುಬ್ಬಣ್ಣಪವನಜಮಾವಜಯಶ್ರೀ ನೀರಮೂಲೆಡಾಗುಟ್ರಕ್ಕ°ರಾಜಣ್ಣಪುತ್ತೂರುಬಾವವಾಣಿ ಚಿಕ್ಕಮ್ಮಶೇಡಿಗುಮ್ಮೆ ಪುಳ್ಳಿಪಟಿಕಲ್ಲಪ್ಪಚ್ಚಿವಿಜಯತ್ತೆತೆಕ್ಕುಂಜ ಕುಮಾರ ಮಾವ°ವಸಂತರಾಜ್ ಹಳೆಮನೆಪುಟ್ಟಬಾವ°ಚೆನ್ನಬೆಟ್ಟಣ್ಣಬೊಳುಂಬು ಮಾವ°ಚೆನ್ನೈ ಬಾವ°ನೆಗೆಗಾರ°ವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ