“ಕೂಗದ್ದ ಕುಞ್ಞಿಗೆ ಮಲೆಹಾಲು ಸಿಕ್ಕ”-(ಹವ್ಯಕ ನುಡಿಗಟ್ಟು-89)

May 25, 2017 ರ 12:18 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಕೂಗದ್ದ ಕುಞ್ಞಿಗೆ ಮಲೆಹಾಲು ಸಿಕ್ಕ-(ಹವ್ಯಕ ನುಡಿಗಟ್ಟು-89)

ಗಡಿನಾಡ ಕನ್ನಡಿಗರಿಂಗೆ , ಮಲೆಯಾಳ ಭಾಷೆಯ ಹೇರಿಕೆಯ ವಿರುದ್ಧ ಮನ್ನೆ ಕಾಸರಗೋಡು ಕಲೆಕ್ಟರೇಟ್ ಆಫೀಸಿನ ಸುತ್ತೂ ಕನ್ನಡಿಗರ ಹೋರಾಟದ ಸಮಯಲ್ಲಿ ಇದು ನೆಂಪಾದ್ದು ವಿಜಯತ್ತಗೆ. ಗಡಿನಾಡ ಕನ್ನಡಿಗರು ಕೂಗಿ, ಕುಟ್ಟಿ,ಬೊಬ್ಬೆ ಹಾಕದ್ದೆ ಸರಕಾರಕ್ಕೆ ಬೆಶಿ ಮುಟ್ಟುಸದ್ದೆ ವಿನಾ ಎಚ್ಚೆತ್ತುಗೊಳ್ತಿಲ್ಲೆ. ಆದರೂ ಫಲಿತಾಂಶ ಇನ್ನು ನೋಡೆಕ್ಕಷ್ಟೆ ಹೇಳುವೊಂ.

ಈ ಗಾದೆ ಸುರುವಾದ್ದೆಂತಕೆ?.ಮದಲಾಣ ಕಾಲಲ್ಲಿ ಕೂಡು ಕುಟುಂಬ.ಕರೆಂಟಿಲ್ಲೆ,ಗೇಸಿಲ್ಲೆ, ಮನೆ ತುಂಬ ಜೆನ ಇಪ್ಪಗ ಹೆಮ್ಮಕ್ಕೊಗೂ ಕೈತುಂಬಾ ಕೆಲಸ.ಈ ಕಾಲದಾಂಗೆ ಕುಟುಂಬಯೋಜನೆ ಇಲ್ಲೆ!. ಒಬ್ಬೊಬ್ಬ ದಂಪತಿಗೆ ಹತ್ತು,ಹನ್ನೆರಡು ಮಕ್ಕೊ ಇಕ್ಕು.ಮಕ್ಕಳ,ಮನೆಯವರ ,ನೆಂಟ್ರಿಷ್ಟರ ಎಲ್ಲಾ ಸುಧರ್ಸೆಂಡು ಮನೆಕೆಲಸವನ್ನೂ ಮಾಡೆಂಡು ಬಪ್ಪಾಗ ಹೆಮ್ಮಕ್ಕೊಗೆ ಸಾಕೋ ಸಾಕಕ್ಕು. ಹಾಂಗಿದ್ದ ಸಂದರ್ಭಲ್ಲಿ ಕುಞ್ಞಿ ಮಕ್ಕೊ ಕೂಗದ್ರೆ, ಅವರ ಕರಕ್ಕೊಂಬಲೆ ಹೆಮ್ಮಕ್ಕೊಗೆ ಗೊಡವೆ ಆಗಿ ಬೇಕೇ?.ಅಜ್ಜಿಯಕ್ಕೊ ಇದ್ದರೆ, “ಆ ಮಾಣಿ ಕೂಗದ್ರೆ, ನೀನವನ ಬುಡಕ್ಕೆ ಬಪ್ಪಲೇ ಇಲ್ಲ್ಯೊ ಕೂಸೇ”ಹೇಳುಗಿದಾ!.  ಆ ಕಾಲಲ್ಲಿ ಹುಟ್ಟಿದ ಗಾದೆ ಇದು. ಇದರ ಪರೋಕ್ಷವಾಗಿ ಹೀಂಗಿದ್ದಕ್ಕೆ ಉಪಯೋಗ ಮಾಡುದು.ಒಟ್ಟಿಲ್ಲಿ ಸರಕಾರ ಆಗಲೀ ಮೇಗಾಣ ಆಫೀಸರಾಗಲೀ  ಬೆಶಿಮುಟ್ಟುಸದ್ದೆ ಒತ್ತಡ ಹಾಕದ್ದೆ ವಿನಾ ಕೆಲಸ ಆಗ ಹೇಳ್ವ ವಿಷಯಕ್ಕೆಲ್ಲ  ಈ ನುಡಿಗಟ್ಟಿನ ಉಪಯೋಗುಸುತ್ತೊವು.

                             ———–೦———-

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

  1. Venugopal Kambaru

    ಅಪ್ಪು. ಆ ಕಾಲವೇ ಲಾಯಕ ಇದ್ದತ್ತು. ಹೋರಾಟ ಇನ್ನೂ ಜೋರು ಬೇಕಕ್ಕು.

    [Reply]

    VA:F [1.9.22_1171]
    Rating: 0 (from 0 votes)
  2. ಶರ್ಮಪ್ಪಚ್ಚಿ
    ಶ್ರೀಕೃಷ್ಣ ಶರ್ಮ

    ಕೂಗದ್ದ ಮಕ್ಕೊಗೆ ಹಾಲು ಸಿಕ್ಕ. ಕಾಸರಗೋಡಿಲ್ಲಿ ಎಷ್ಟು ಕಕೂಗಿದರೂ ಕೇಳೆಕ್ಕಾದವಕ್ಕೆ ಕೇಳ್ತಿಲ್ಲೆ. ಎಲ್ಲರೂ ಒಟ್ಟು ಸೇರಿ ಕೂಗುವ ಆ ಶಕ್ತಿಯ ದೇವರು ಕೊಡಲಿ ಹೇಳಿ ಮದಾಲು ಕೂಗುವೊ°.
    ಒಳ್ಳೆ ನುಡಿಗಟ್ಟು.

    [Reply]

    ವಿಜಯತ್ತೆ

    ವಿಜಯತ್ತೆ Reply:

    ಭಾವಯ್ಯ ನಿಂಗಳೆಲ್ಲರ ಶುಭಹಾರೈಕೆ ನಿಜವಾಗಲಿ .ನಮ್ಮ ಶ್ರೀಗುರು ದೇವರ ಅನುಗ್ರಹ ಸಿಕ್ಕಲಿ. ಮಲೆಯಾಳಿಗಳ ಮಲತಾಯಿ ಧೋರಣೆಗೆ ಅಂತಿಮಕಾಲ ಬಂದು ಗಡಿನಾಡ ಕನ್ನಡಿಗರಿಂಗೆ ನ್ಯಾಯ ಒದಗಲಿ.

    [Reply]

    VN:F [1.9.22_1171]
    Rating: 0 (from 0 votes)

    pattaje shivara?ma bhat Reply:

    ಪಿಣರಾಯಿ ಕಂಜಿಯ ಕೊರವಲೆ ಹೋದಿಕ್ಕು ಹಾಂಗಾಗಿ ಅದಕ್ಕೆ ಕೇಳ

    [Reply]

    VA:F [1.9.22_1171]
    Rating: 0 (from 0 votes)
  3. ಬೊಳುಂಬು ಗೋಪಾಲ

    ಸರಿಯಾದ ಸಮಯಕ್ಕೆ ಸರಿಯಾದ ನುಡಿಗಟ್ಟು. ಒರಂಜದ್ದೆ ಇದ್ದರೆ ಏವ ಕಾರ್ಯವುದೆ ಆಗ. ನಿನಗೆ ಬೇಕಾರೆ ನೀನು ಕೇಳಿ ತೆಕ್ಕೊಳೆಕು. ಇಲ್ಲದ್ರೆ ಆರುದೆ ನಿನ್ನ ಮೂಸಿಯೂ ನೋಡವು.

    [Reply]

    ವಿಜಯತ್ತೆ

    ವಿಜಯತ್ತೆ Reply:

    ಬೊಳುಂಬು ಗೋಪಾಲಂಗೆ. ಇಲ್ಲಿ ಹಕ್ಕು ಕೇಳುದು ಗೋಪಾಲ. ಒರೆಂಜುದು ಹೇಳುದರ ಅರ್ಥ ರಜಾ ವೆತ್ಯಾಸ ಇದ್ದು.ಒರೆಂಜುದು ಹೇಳಿರೆ; ಯಾಚಿಸುದು.ಆಗಲಿ ಸ್ಪಂಧಿಸಿದ್ದು ಕೊಶಿಯಾತು.

    [Reply]

    VN:F [1.9.22_1171]
    Rating: 0 (from 0 votes)
  4. ಬೊಳುಂಬು ಗೋಪಾಲ

    ಹಕ್ಕು ಕೇಳುವಗ ಒಪ್ಪದ್ದೇ ಇಪ್ಪಗ, ಒರಂಜೆಕಾಗಿ ಬಪ್ಪದು ನಮ್ಮ ಕರ್ಮ ಹೇಳೆಕಾಗಿ ಬತ್ತಿಲ್ಲೆಯೊ ಅಕ್ಕ ?

    [Reply]

    ವಿಜಯತ್ತೆ

    ವಿಜಯತ್ತೆ Reply:

    ಮತ್ತೆ ವಿನಯತೆ ಇಲ್ಲೇ ಅಲ್ಲೋ . ಮತ್ತೆ, ಹಕ್ಕು ಸಾಧುಸುದು . ಈಗಾಣ ಭಾಷೇಲಿ ಹರತಾಳ ಅಲ್ಲೋ?. “ನಾವು ನಿಮ್ಮಲ್ಲಿ ಯಾಚನೆಗೆ ಬಂದಿಲ್ಲ. ನಮ್ಮ ಹಕ್ಕನ್ನು ಉಳಿಸೋದಕ್ಕೆ ಹೋರಾಡುತ್ತೇವೆ”. ಹೇಳಿ ಮನ್ನೆ ಬೊಬ್ಬೆ ಹಾಕಿದ್ದು ನಾವು.ಅಂಬಗ ಇದು ನೆಂಪಾತಿದ ವಿಜಯತ್ತಗೆ.

    [Reply]

    VN:F [1.9.22_1171]
    Rating: 0 (from 0 votes)
  5. ಚೆನ್ನೈ ಬಾವ°

    ಬೆಶಿ ಮಾಡ್ತರೆ ಬೆಶಿ ಮುಟ್ಟೆಕ್ಕಪ್ಪ.. ಇಲ್ಲದ್ದರೆ ನಾಟುತ್ತಿಲ್ಲೆ

    [Reply]

    ವಿಜಯತ್ತೆ

    ವಿಜಯತ್ತೆ Reply:

    ಸರಿಯಾಗಿ ಹೇಳಿದೆ ಚೆನ್ನೈಭಾವಾ . ನಮ್ಮ ಈ ಕೆಲವೆಲ್ಲ ಬೆಷಿಗೊ ಇನ್ನು ಏವಗ ಆನೆ ಚರ್ಮದವಕ್ಕೆ ಮುಟ್ಟುತ್ತೋ? “ಎತ್ತು ಏರಿಗೆಳೆದರೆ ಗೋಣ ನೀರಿಂಗೆಳೆತ್ತು” ಹೇಳಿದಾಂಗೆ ಕಾಣುತ್ತು ಇಂದ್ರಾಣ ಪರಿಸ್ಥಿತಿ.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಪವನಜಮಾವಪುತ್ತೂರುಬಾವಅನಿತಾ ನರೇಶ್, ಮಂಚಿಶ್ಯಾಮಣ್ಣಚೆನ್ನೈ ಬಾವ°ಶ್ರೀಅಕ್ಕ°ಪೆರ್ಲದಣ್ಣವಸಂತರಾಜ್ ಹಳೆಮನೆಮಂಗ್ಳೂರ ಮಾಣಿಅಡ್ಕತ್ತಿಮಾರುಮಾವ°ಪೆಂಗಣ್ಣ°ವಿಜಯತ್ತೆಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕಶರ್ಮಪ್ಪಚ್ಚಿಶಾ...ರೀಅನುಶ್ರೀ ಬಂಡಾಡಿಡಾಗುಟ್ರಕ್ಕ°ವೆಂಕಟ್ ಕೋಟೂರುವಿದ್ವಾನಣ್ಣಬೋಸ ಬಾವಚುಬ್ಬಣ್ಣವೇಣಿಯಕ್ಕ°ರಾಜಣ್ಣನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ