ಕೂಸ್ನದಿಕ್ಕೊಗೆ…

November 23, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗ್ನ ಕಾಲ್ದ ಕೂಸ್ನದಿಕ್ಕೊ ಯೆಂತಕ್ ಹೀಂಗಾಯ್ದ?

ತಂಗ್ಳತನ ವಳ್ಸಕಂಬ್ಲೆ ಬೇಜಾರ ಮಾಡ್ಕಂಡ್ದ?

 

ಜಾತಿಗೀತಿ ಬೇಡ ಹೇಳಿ ನಿರ್ಣಯ ಮಾಡಿದ್ದೊ

ಬೇರೆ ಜಾತಿ ಗಂಡ್‍ಮಕ್ಳ ಮದ್ವೆಯಾಗ್ತಿದ್ದೊ

 

ಕೂಸ್ನದಿಕ್ಕೆ ನೀತಿ ಮಾತ ಬಗೇಲಿ ಕೇಳ್ತ್ರಾ?

ಜಾತಿ ಧರ್ಮ ವಳಿಸೋ ಬಗ್ಗೆ ಕಿವಿಕೊಡ್ತ್ರಾ?

 

ಸಮಾಜದೊಳ್ಗೆ ಹೋದಾಗೆಲ್ಲಾ ಜಾತೆ ಮರೆವೊ

ನೌಕ್ರಿ ಮಾಡ್ವಾಗೂ ಎಲ್ರ ಕೂಡಿ ಬೆರೆವೊ

 

ನಂನಂ ಮನೆಗೆ ಬಂದ್ರೆ ಜಾತಿ ಅಂದ್ಕಂಬೊ

ಸಂಸಾರ ಸಾಗರ್ದಲ್ಲಿ ಹವ್ಯಕತನವ ಮೆರೆವೊ

 

ಜಾತಿಸಂಕರದಲ್ಲಿ ನಾವು ಕಳೆಯುಲಾಗ

ಭಾರತ ದೇಶದ ಸಂಸ್ಕೃತಿ ಮರೆಯುಲಾಗ

 

ಜಾತಿ ಧರ್ಮಯೆಲ್ಲಾ ನಮ್ನ ಮೀರಿ ಇದ್ದು

ಒಬ್ಬಿಬ್ರು ಕೂಡಿ ಅದ್ನ ಬೇರೆ ಮಾಡುಲೆಲ್ಲಾಗ್ತು?

 

ಹಳೇ ಕಾಲ್ದ ವಿಚಾರಯೆಲ್ಲಾ ಬದ್ಲಾದ್ರೂನೂ

ಈ ನಮ್ನಿ ಜಾತಿ ಪದ್ದತಿ ಎಲ್ರ ಹತ್ರೂನೂ

 

ಇದ್ರೆಯೆಲ್ಲಿ ಹಾಳಾಗ್ತು ಸಂಸ್ಕೃತಿನೂ

ಬೆಳೆತಾ ಇರ್ತು ಹವ್ಯಕ ವಂಶವೃಕ್ಷನೂ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಈಗೀಗ ಹೊಸ ಪದ್ದತಿಯೊಂದು ಸುರುವಾಯಿದು. ಮಕ್ಕಳ ಕೈಲಿ(ಗಂಡಿರಲಿ, ಹೆಣ್ಣಿರಲಿ) ಯಾವುದೇ ಮನೆ ಕೆಲಸವ ಮಾಡುಸುತ್ತವಿಲ್ಲೆ. ಸದಾ ಕಾಲ ಓದುವದು, ಟ್ಯೂಷನ್,ಹೋಮ್ವರ್ಕು ಮಾಡಿಸಿ ಮಕ್ಕೊಗೆ ಸಂಧ್ಯಾವಂದನೆ, ದೇವರ ನಾಮ ಕಲಿವಲೆ ಪುರುಸೊತ್ತಿಲ್ಲದ್ದಾಂಗೆ ಅಪ್ಪ , ಅಮ್ಮ ಒತ್ತಾಯ ಮಾಡ್ತವು. ಮುಂದೆ ಬೆಳದು ದೊಡ್ಡೋರಪ್ಪಗ ಅವರಲ್ಲಿ ಯಾವುದೇ ಸಂಸ್ಕಾರ ಇರ್ತುಲ್ಲೆ. ತನ್ನತನ ಇಲ್ಲದ್ದ ಮನಸ್ಸಿಲ್ಲಿ ಹಿರಿಯರ ಬಗ್ಗೆ ಗೌರವವಾಗಲೀ ಜಾತಿ ನೀತಿಯಾಗಲೀ ಇರ್ತುಲ್ಲೆ. “ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ” ಗಾದೆಯ ಹಾಂಗೆ ದೊಡ್ಡೋರಾದ ಮೇಲೆ ಅವರ ತಿದ್ದುಲೆ ಎಡಿತ್ತಿಲ್ಲೆ. ಇಪ್ಪ ಒಂದೋ ಎರಡೋ ಮಕ್ಕಳ ಎದುರು ಹಾಕಿಕೊಂಬಲೆ ಅಪ್ಪ ಅಮ್ಮಂಗೆ ಎಡಿಯದ್ದೇ ಅಸಹಾಯಕ ಸ್ಥಿತಿಲಿರ್ತವು. ಅದುವೇ ಈ ಸಮಸ್ಯೆಗೆ ಕಾರಣ. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಲಕ್ಷ್ಮಿ ಜಿ.ಪ್ರಸಾದ

  ಪದ್ಯ ಭಾರೀ ಲಾಯಕ್ಕು ಇದ್ದು ಒಳ್ಳೆ ಸಂದೇಶವೂ ಇದ್ದು ಇಷ್ಟು ಚೆಂದದ ಪದ್ಯ ಬರದ ಅಕ್ಕಂಗೆ ಕಲ್ಪನಾ ಅರುಣ್ ಗೆ ಅಭಿನಂದನೆಗ

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಕಳಕಳಿ ಪದ್ಯ ಲಾಯಕ ಆಯ್ದು

  [Reply]

  VA:F [1.9.22_1171]
  Rating: 0 (from 0 votes)
 4. ಕಲ್ಪನಾ ಅರುಣ್
  kalpanaarun

  ತಮ್ಮ ಅಬಿಪ್ರಾಯಗಲಳಿಗೆ ಸ್ವಾಗತ. ನನ್ನ ಕ್ರತಜ್ನತೆಯನ್ನೊ ಹೇಳಲು ಬಯಸುತ್ತೇನೆ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಮಕ್ಕೊಗೆ ಒಳ್ಳೆ ಸಂದೇಶ.

  [Reply]

  VA:F [1.9.22_1171]
  Rating: 0 (from 0 votes)
 6. ಶ್ಯಾಮಣ್ಣ
  ಶ್ಯಾಮಣ್ಣ

  ಈ ಹವ್ಯಕ ಬಾಷೆ ಯಾವ ಊರಿಂದಾತು? ಗೊಂತಾತಿಲ್ಲೆನ್ನೇ….

  [Reply]

  VN:F [1.9.22_1171]
  Rating: 0 (from 0 votes)
 7. ಕಲ್ಪನಾ ಅರುಣ್
  kalpanaarun

  ಹೆಲೊ ಶಾಮಣ್ಣ ನಾನು ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದವಳು. ಬೆಂಗಳೂರಿನಲ್ಲಿ ಇದ್ದೆ. ಇದು ಕರ್ಕಿ ಬಾಶೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ಕೇಜಿಮಾವ°ಶ್ಯಾಮಣ್ಣತೆಕ್ಕುಂಜ ಕುಮಾರ ಮಾವ°ದೀಪಿಕಾvreddhiವಸಂತರಾಜ್ ಹಳೆಮನೆಶುದ್ದಿಕ್ಕಾರ°ಕೊಳಚ್ಚಿಪ್ಪು ಬಾವಪವನಜಮಾವಶೇಡಿಗುಮ್ಮೆ ಪುಳ್ಳಿಒಪ್ಪಕ್ಕನೆಗೆಗಾರ°ವಾಣಿ ಚಿಕ್ಕಮ್ಮಅಕ್ಷರ°ಪುಣಚ ಡಾಕ್ಟ್ರುನೀರ್ಕಜೆ ಮಹೇಶರಾಜಣ್ಣಅನಿತಾ ನರೇಶ್, ಮಂಚಿಎರುಂಬು ಅಪ್ಪಚ್ಚಿವೆಂಕಟ್ ಕೋಟೂರುವೇಣೂರಣ್ಣಶಾಂತತ್ತೆಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ