“ಕೆಸವಿನೆಲೆಲಿ ಕಂಜಿ ಕಟ್ಟಿ ಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104)

“ಕೆಸವಿನೆಲೆಲಿ ಕಂಜಿ ಕಟ್ಟಿಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104)

ಬೆಂಗಳೂರಿಲ್ಲಿ ಉದ್ಯೋಗಲ್ಲಿದ್ದ ಒಬ್ಬᵒ ಮಾವᵒ  ಅಪರೂಪಕ್ಕೆ ಮನಗೆ ಬಂದಿತ್ತಿದ್ದᵒ.ಮಕ್ಕೊಗೆ ತಿಂಬಲೆ ಬಿಸ್ಕೇಟ್,ಹಣ್ಣುಗಳ ಹಂಚಿಕ್ಕಿ; ಕತೆ,ಜೋಕು ಹೇಳುತ್ತಾ ರಂಜಿಸಿದ ಮಾವನತ್ರೆ…, ಎಂಗೊಗೆ ಮಕ್ಕೊಗೆಲ್ಲಾ ಕೊಶಿಯೋ ಕೊಶಿ.ಮದ್ಯಾಹ್ನಕ್ಕೆ ತಾಳು,ಮೇಲಾರ,ಸಾರು, ಕೊದಿಲಿನೊಟ್ಟಿಂಗೆ ಪಾಯಸದೂಟ ಮಾಡಿ ಬಡುಸಿತ್ತು ಅಬ್ಬೆ, ಅಪರೂಪಕ್ಕೆ ಬಂದ ಅಣ್ಣಂಗೆ!.

ಉಂಡಪ್ಪಗ “ಇನ್ನು ಕಾಂಬೊᵒ ಹೇಳೆಂಡು ಕೊಡೆ ಕಂಕಚ್ಚಿಗೊಂಡು ಹೆರಟೊವು ಮಾವᵒ.

“ಇದೆಂತ ಭಾವ..ಕೆಸವಿನೆಲೆಲಿ ಕಂಜಿ ಕಟ್ಟಿಹಾಕಿಕ್ಕಿ ಬಂದಾಂಗೆ  ಮಾಡ್ತಿ?” ಅಪ್ಪᵒ ಕೇಳಿಯಪ್ಪಗ..

“ಅದೆಂತ ಭಾವಯ್ಯ, ಕೆಸವಿನೆಲೆಲಿ ಕಂಜಿ ಕಟ್ಟಿಹಾಕುದು..ಹೇಳಿರೆ!?”ಮಾವನ ಚೋದ್ಯ!.

“ಮಲೆ ತಿಂಬ ಕಂಜಿಗೊ ಹುಲ್ಲು ಮೇವಲೆ ಸುರುಮಾಡುವಗ; ಮನೆ ಹತ್ತರೆ ಒಳಮ್ಮೆ ಹಾಕುದು ಹೇಳಿ ಉದ್ದಾದ ಬಳ್ಳಿ ಹಾಕಿ; ಒಂದು ಗಟ್ಟಿ ಗುಂಟಕ್ಕೆ ಕಟ್ಟಿಹಾಕ್ತವು.ಆ ಕಂಜಿ ಅಲ್ಲಿ ಭದ್ರವಾಗಿ ಮೇದೊಂಡಿರುತ್ತು. ಕಟ್ಟಿದ ಗೂಟ ಗಟ್ಟಿ ಇಲ್ಲದ್ರೆ ಅದು ಬಿಡುಸೆಂಡು ಎಲ್ಲೆಲ್ಲಿಗೋ ಹೋಗದೊ!. ಕೆಸವು ಹೇಳಿರೆ; ಬರೇ ಎಳಸು. ಅದಲ್ಲಿ ಕಂಜಿ ಕಟ್ಟಿಹಾಕೀರೆ: ಅದು ಎಷ್ಟು ಹೊತ್ತು ಭದ್ರವಾಗಿ ಅಲ್ಲಿ ಇಪ್ಪಲೆಡಿಗು!? ಆ ತುಡಿತದ ಅಂಬ್ರೆಪು ಹೇಳ್ತ ಅರ್ಥ ಕೊಡುತ್ತು ಈ ಮಾತು.”

“ಓಹೋ ಕಂಜಿಯ ಕಟ್ಟಿಹಾಕದ್ರೂ ನಾಳಂಗೆ ಉದಿಯಪ್ಪಗ ಆನು ಆಫೀಸು ಎತ್ತದ್ರೆ ಎನ್ನ ಕಟ್ಟಿಹಾಕುಗು!” ಹೇಳಿ ಮಾವನ ಸಮರ್ಥನಗೆ ಅಪ್ಪᵒ ಒಪ್ಪಲೇ ಬೇಕಾತು ಹೇಳುವೊᵒ.

ಗ್ರೇಶದ್ದೆ ಅತಿಥಿಗೊ ಅತೀ ಅಂಬ್ರೇಪು ಮಾಡಿ ಹೋಪಲೆ ಹೆರಡುವಗ ಈ ಮಾತಿನ ಬಳಕೆ ಮಾಡ್ತವು.

—–೦——

 

 

ವಿಜಯತ್ತೆ

   

You may also like...

13 Responses

 1. ಊರಿಂಗೆ ಬಂದಿಪ್ಪಗೆಲ್ಲ ಎನಗೆ ಸಿಕ್ಕುದು ಇದು. ನಮ್ಮಲ್ಲಿಗೆ ಊರಿಂದ ಬಂದಪ್ಪಗ ಕೊಡುದೂ ಇದನ್ನೇ

 2. ಹರೇರಾಮ, ಚೆನ್ನೈ ಭಾವ. ಎಂತರ ಊರಿಂಗೆ ಬಂದಪ್ಪಗ ಸಿಕ್ಕುದೂ ಕೊಡುದೂ ಗೊಂತಾಯ್ದಿಲ್ಲೆನ್ನೆ!?. ಕೆಸವೋ!!

 3. Venugopal Kambaru says:

  ಲಾಯಕ ಆಯಿದು. ಅಪರೂಪದ ಗಾದೆ ಮಾತು ನೆನಪಿಸಿ ಕೊಡುವ ನಿಂಗಳ ಪ್ರಯತ್ನಕ್ಕೆ ಒಂದು ನಮಸ್ಕಾರ

 4. ಶರ್ಮಪ್ಪಚ್ಚಿ says:

  ಕೆಲವು ಸರ್ತಿ ಕೆಸುವಿನೆಲಿಲಿ ಕಂಜಿ ಕಟ್ಟಿ ಹಾಕಿದ ಹಾಂಗೆ ಮಾಡೆಕ್ಕವ್ತು. ಇಲ್ಲದ್ದರೆ ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುತ್ತವು.

 5. Shyamanna says:

  ಅದು ಕೆಸವಿನ ಎಲೆಲಿ ಕಂಜಿ ಕಟ್ಟುದು ಅಲ್ಲ… ಕೆಸವಿನ ಬುಡಕ್ಕೆ ಕಂಜಿ ಕಟ್ಟುದು…

  • ಕೆಸವಿನ ಬುಡಲ್ಲಿ ಆಯಿಕ್ಕುಶಾಮಣ್ಣ . ಆದರೆ, ಎಲ್ಲೋರ ಬಾಯಿಲಿ ಕೆಸವಿನೆಲೆಲಿ ಹೇಳಿ ಆಯಿದು.

   • Shyamanna says:

    ಎಂಗಳ ಹೊಡೆಲಿ ಆರುದೇ ಹಾಂಗೆ ಹೇಳ್ತವಿಲ್ಲೆ. ಕೆಸವಿನ ಬುಡಕ್ಕೆ ಕಂಜಿ ಕಟ್ಟುದು ಅಥವಾ ಕೆಸವಿನ ಕಾಲಿಂಗೆ ಎಮ್ಮೆ ಕಟ್ಟುದು ಹೇಳಿಯೇ ಹೇಳುದು. ಕೆಸವಿನ ಎಲೆಲಿ ಕಂಜಿ ಕಟ್ಟುದು ಹೇಳಿ ಹೇಳುದರ ಅನು ಇಷ್ಟರವರೆಗೆ ಆರ ಬಾಯಿಲಿಯೂ ಕೇಳಿದ್ದಿಲ್ಲೆ.

 6. pattaje shivarama bhat says:

  ಬಾಣರೇ , ದೆತ್ತಿ, ಇದ್ದೆ, ಉಳ್ಳಾಯ, ನಾಗೇರೆ ಈ ಶಬ್ದನ್ಗಳ ಮೂಲ rupa/ಅರ್ಥದ ಬಗ್ಗೆ ವಿಜಯಕ್ಕನ ಹತ್ತರೆ ಏನಾರು ಮಾಹಿತಿ ಇಕ್ಕೋ.

 7. pattaje shivarama bhat says:

  ಒನ್ ಮೋರ್ ಪಾರ್ಥೇರೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *