“ಕೈಲಿ ಬೆಣ್ಣೆ ಮಡಗೆಂಡು ತುಪ್ಪ ಹುಡುಕ್ಕಿದಾಂಗೆ”-(ಹವ್ಯಕ ನುಡಿಗಟ್ಟು-100)

                   “ಕೈಲಿ ಬೆಣ್ಣೆಮಡಗೆಂಡು ತುಪ್ಪ ಹುಡುಕ್ಕಿದಾಂಗೆ”-(ಹವ್ಯಕ ನುಡಿಗಟ್ಟು-100)

ಕೈಲಿ ಬೆಣ್ಣೆ ಮಡಗೆಂಡು ತುಪ್ಪಕ್ಕೆ ಹುಡುಕ್ಕಿದಾಂಗೆ ಎಂತದಪ್ಪ ಇದರ ಅರ್ಥ.ಅದುವೋ ಹೇಂಗೆ ನೋಡುವೊಂ.

ಮದಲಿಂಗೆ ಒಂದಾರಿ ಅಪ್ಪನ ಕಾಂಬಲೇದು ಅಪ್ಪನ ಚಙಾಯಿ ಒಬ್ಬ ಬಂದ. ಹೀಂಗೆ ಮಾತಾಡ್ತಾ “ಶಂಭುಕುಞ್ಞಿ ಭಾವ, ಎನ್ನ ಮಗಳಿಂಗೆಲ್ಲಿಯಾರೂ ಒಂದು ಪೊದು ಇದ್ದರೆ ಸಂಧಾನ ಹಾಕು”. ಹೇಳಿದ. ಅಷ್ಟಪ್ಪಗ  ಎನ್ನಪ್ಪ  “ಈಚಣ್ಣಭಾವ, ಕೈಲಿ ಬೆಣ್ಣೆ ಮಡಗೆಂಡು ಊರೆಲ್ಲ ತುಪ್ಪಕ್ಕೆ ಹುಡುಕ್ಕಿದಾಂಗಾತನ್ನೆ ನಿನ್ನ ಕತೆ. ನಿನ್ನ ತಂಗೆಯ ಮಗನೇ ಇದ್ದಾನ್ನೆ. ಅವಂಗೇ ದಾರೆ ಎರದು ಕೊಡು ಹೇಳಿದೊವು.

ಈ ಗಾದೆಯ ಬಿಡುಸುದೇಂಗೇಳಿ, ಓದುಗರಿಂಗೆ ಗೊಂತಪ್ಪಲೆ ಕಷ್ಟ ಇಲ್ಲೆ.ಸೋದರಿಕೆಲೇ ಮಾಣಿ ಇಪ್ಪಾಗ ಬೇರೆ ಹುಡುಕ್ಕುದೆಂತಕೇಳಿ  ಆಪ್ಪನ ವಾದ. ಬೆಣ್ಣೆ ಬೆಶಿ ಮಾಡಿ,ಹದ ಪಾಕ ಮಾಡಿರೆ ಕೂಡ್ಳೆ ತುಪ್ಪ. ಹೀಂಗಿಪ್ಪಗ  ಬೇರೆಲ್ಲ ತುಪ್ಪ ಕೇಳೆಡನ್ನೆ!!.ಸಂಬಂದಕ್ಕೆ ಅವರ ಮನಸ್ಸು ಹೇಂಗೇಳಿಪ್ಪದು ಮತ್ತಾಣ ಪ್ರಶ್ನೆ. ಇನ್ನೊಂದು ಉದಾಹರಣೆ ಇದಕ್ಕೆ..

ಅಪ್ಪ ಹೇಳೆಂಡಿದ್ದ ಮಾತು ವಿಜಯತ್ತಗೆ ನೆಂಪಾದ್ದು ಮನ್ನೆಯಿದ. ದೊಡ್ಡ ತಮ್ಮನ ಷಷ್ಟಿಪೂರ್ತಿ ಕಳುದ ದಿನ ತಮ್ಮಂದ್ರ ಒಟ್ಟಿಂಗೆ ನಾವುದೆ ಅಲ್ಲಿ ಟಂಬಿತ್ತು. ಮಾರಣೆದಿನ ಉದಿಯಪ್ಪಗ ಮಳೆ ಸೊಯಿಪ್ಪಿತ್ತದ ನಿನ್ನೆಯಾಣಿಂದಲೂ ಹೆಚ್ಚಿಗೆ!. ಎನ್ನಪ್ಪನ ಮನೆ ಒಂದು ಹೊಂಡ.ದೊಡ್ಡತಮ್ಮ ಈಗ ಸದ್ಯ ಕಾರು ತೆಗದ್ದದು.ಅವಂಗೆ ಸರಾಗ ಕೊಂಡೋಪಲೆಡಿತ್ತು. ಹೊಂಡಂದ ಮೇಗೆ ಹತ್ತುಸುತ್ತಷ್ಟು ಅಭ್ಯಾಸ ಆಯೆಕ್ಕಟ್ಟೆ. ಎರಡ್ನೇ ತಮ್ಮ ಊರಿಂಗೆ ಕಾರು ತಯಿಂದಾಯಿಲ್ಲೆ.ಮೂರನೆವ ನಿನ್ನೆಯೇ ಹೋಗಿ ಆಯಿದು.  ಅಂಬಗ.., ಒಂದು ಅಟೋರಿಕ್ಷಾ ಬಪ್ಪಲೆ ಫೋನುಮಾಡು. ಹೇಳಿದೆ. ಅಷ್ಟಪ್ಪಗ ಎರಡ್ನೇವ “ಅಕ್ಕ ಕೈಲಿ ಬೆಣ್ಣೆ ಮಡಗೆಂಡು ತುಪ್ಪ ಹುಡುಕ್ಕುದೆಂತಕೆ!. ಹೇಂಗೂ ಅಳಿಯ ನವೀನ ಇದ್ದಾನ್ನೆ. ಅವನನ್ನೂ ಒಟಿಂಗೆ ಕರಕ್ಕೊಂಡ್ರೆ, ಅಣ್ಣಂಗೆ ಧೈರ್ಯವೂ ಆತು. ಅಣ್ಣನ ಹೊಸಕಾರಿಲ್ಲಿ ನಿನ ಕೂದಾಂಗೂ ಆತು”. ಹೇಳುವಗ ,ಅಪ್ಪದು ಕಂಡತ್ತು. ಅವನತ್ರೆ ಹೇಳಿ,  ಆ ಏರ್ಪಾಡಿಲ್ಲಿ ಹೆರಟೂ ಆತು.  

ಕೆಲವು ಸರ್ತಿ  ನಮ್ಮಲ್ಲೇ ಅನುಕೂಲಾವುತ್ತ ಸೌಲಭ್ಯ ಇದ್ದರೂ ಅದು ನಮ್ಮ ತಲಗೆ ಹೋಗದ್ದೆ; ಬೇರೆ ವ್ಯವಸ್ಥಗೆ ನಾವು ಲೆಕ್ಕ ಹಾಕುತ್ತ ಸಂದರ್ಭಕ್ಕೆ ಈ ಮಾತಿನ ಬಳಕೆ ಮಾಡ್ತವು.

                                    ——–೦——–

ವಿಜಯತ್ತೆ

   

You may also like...

6 Responses

 1. K.Narasimha Bhat Yethadka says:

  ಒಳ್ಳೆ ಗಾದೆಯೊಟ್ಟಿಂಗೆ ಶತಕ ಬಾರ್ಸಿದ ವಿಜಯಕ್ಕನ ಸಾಧನಗೆ ಅಭಿನಂದನೆಗೊ.

 2. ಬೊಳುಂಬು ಗೋಪಾಲ says:

  ಒಳ್ಳೆ ನುಡಿಗಟ್ಟು. ವಿವರಣೆಯೂ ಲಾಯಕಿತ್ತು. ವಿಜಯಕ್ಕ ಶತಕ ಬಾರುಸಿದ್ದಕ್ಕೆ ಅಭಿನಂದನೆಗೊ.

 3. ನರಸಿಂಹಣ್ಣ ಹಾಂಗೂ ಬೊಳುಂಬು ಗೋಪಾಲಂಗೆ; ಆತ್ಮೀಯತೆಯ ಧನ್ಯವಾದ

 4. ಶರ್ಮಪ್ಪಚ್ಚಿ says:

  ಶತಕದ ಸಂಭ್ರಮಲ್ಲಿ ಅರ್ಥವತ್ತಾದ ನುಡಿಗಟ್ಟು.
  ವಿಜಯತ್ತಿಗೆ, ಅಭಿನಂದನೆಗೊ

 5. S.K.Gopalakrishna Bhat says:

  ಅಭಿನಂದನೆ ಚಿಕ್ಕಮ್ಮ..ಶತಕ ಆತು. ಪುಸ್ತಕ ಮಾಡ್ಲಕ್ಕು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *