ಕೊಡೆಯಾಲದ ಕಾವುಬೈಲಿನ ಧನುಪೂಜೆ

ಕಳುದ ಶುಕ್ರವಾರ ಒಪ್ಪಣ್ಣನ ಲೇಖನ ಓದಿ ಅಪ್ಪಗ, ಬೈಲಿನ ಹೆಚ್ಚಿನ ಜೆನಕ್ಕೂ ಒಂದಾರಿ ಆದರೂ ಧನುಪೂಜೆ ಕಾಂಬಲೇ ಬೇಕು ಹೇಳಿ ಆದಿಕ್ಕು.
ಕೆಲವು ಜೆನ ಮನೆ ಹತ್ರೆ ದೇವಸ್ಥಾನ ಇಲ್ಲದ್ದವು ಮನೆಲೇ ಕೂದೊಂಡು ೧೦೦೮ ಪಂಚಾಕ್ಷರಿ ಜೆಪ ಮಾಡಿದವಾಯ್ಕು.
ಮನ್ನೆಂದಲೇ ಗ್ರೇಶುತ್ತಾ ಇದ್ದೆ.  ಉದಿಯಪ್ಪಳೆ ಎದ್ದು ಒಂದೆರಡು ದಿನ ಆದರೂ ಪೂಜೆಗೆ ಹೋಯೆಕು ಹೇಳಿ.

ಎಂತಾರೂ ಅದು ಇದು ಹೇಳಿ ಕಾರಣ ಹೇಳಿ ಹೋಪಲಾತಿಲ್ಲೆ. ಇಂದು ಈ ವರ್ಷದ  ಕಡೇಣ ಧನುಪೂಜೆ.
ರಂಗಮಾವನನ್ನೆ ಮನಸ್ಸಿಲ್ಲಿ ಗ್ರಹಿಸೆಂಡು, ಎದ್ದು ಕೂದು,  ಮಿಂದು ಹತ್ರಾಣ ಕಾವುಬೈಲು ದೇವಸ್ಥಾನಲ್ಲಿ ನೆಡತ್ತ ಉದಿಯಪ್ಪಾಣ ಪೂಜೆಗೆ ಹೋದೆ.

ಸಣ್ಣ ಸಣ್ಣ ಮಕ್ಕಳೂ, ಅಪ್ಪ ಅಮ್ಮನ ಜೆತೆಲಿ ದೇವಸ್ಥಾನಕ್ಕೆ ಬತ್ತಾ ಇದ್ದದು ಕಂಡು ಎನಗೆ ತುಂಬಾ ನಾಚಿಕೆ ಆತು.
ಚೆ. ಆನು ಈ ಒಂದು ತಿಂಗಳು ಒರಕ್ಕಿಂಗೆ ಆಶೆ ಮಾಡಿ ಧನುಪೂಜೆಗೆ ಬಯಿಂದಿಲ್ಲೆ ಆನೆ ಹೇಳಿ.   ಇಂದು ಕಡೇಣ ಧನು ಪೂಜೆ ಹೇಳಿ ಆಯ್ಕು.  ೫.೧೫ಕ್ಕೇ ಜೆನ ಸೇರಿದ್ದವು.
ರಜಾ ಗದ್ದಲ ಜಾಸ್ತಿಯೇ ಇತ್ತು.   ಪ್ರಶಾಂತತೆ ಹೇಳ್ಲೆ ಎಡಿಯ.  ಆದರೂ ಆ ಉದಿಯಪ್ಪಾಣ ತಂಪಾದ ವಾತಾವರಣಲ್ಲಿ ನೆಡೆದ ಪಂಚಲಿಂಗೇಶ್ವರನ ಪೂಜೆಯ ನೋಡಿ ಮನಸ್ಸಿಂಗೆ ಕೊಶಿ ಆತು.
ಪುಳ್ಳೆ ಕಾಲಕ್ಕೆ ಏಳಲೆ, ದೇವಸ್ಥಾನಕ್ಕೆ ಹೋಪಲೆ,  ಧನುಮಾಸಕ್ಕೆ ಕಾಯೆಕು ಹೇಳಿ ಇಲ್ಲೆ ಹೇಳಿಯೂ ಕಂಡತ್ತು.

ಕೃಷ್ಣಮೋಹನಣ್ಣ ಹೇಳಿದ ಹಾಂಗೆ,  ದೇವಸ್ಥಾನಲ್ಲಿ ಧನಸಂಗ್ರಹಣೆಯೂ ನೆಡೆತ್ತಾ ಇತ್ತು.
ಪೈಸೆ ಇಲ್ಲದ್ದೆ ಕಾರ್ಯ ಇದ್ದೊ ?
ಉದಿಯಪ್ಪಾಗ ಆರು ಗಂಟೆ ಅಪ್ಪಗ ಸಾಧಾರಣ  ಐನ್ನೂರಕ್ಕಿಂತಲೂ ಹೆಚ್ಚು ಜೆನ ಸೇರಿತ್ತು ಅಲ್ಲಿ.

ಪ್ರಸಾದ ವಿತರಣೆ ಕಳುದು,  ಸಜ್ಜಿಗೆ, ಪುಡ್ಡಿಂಗ್ ವ್ಯವಸ್ಥೆಯೂ ಇತ್ತು. (ಜೆನ ಸೇರುಸಲೆ ಇನ್ನೊಂದು ಕೆಣಿ ಇದು!)  ಇನ್ನು ಮನಗೆ ಹೋಗಿ ಹೆಮ್ಮಕ್ಕೊ, ತಯಾರು ಮಾಡುತ್ತು ಬೇಡ ಹೇಳಿಯೋ ಎಂತೊ.
ಅಲ್ಯಾಣ, ಕ್ಯೂ, ಗಜಿಬಿಜಿ, ಸಾಮೂಹಿಕ ಸಂತರ್ಪಣೆ ಕಂಡು,  ತಿಂಡಿ ಬೇಡ ಹೇಳಿ ಸೀದಾ ಮನಗೆ ಹೋದೆಯೊ (ಮನೆಲಿ ಬೆಶಿ ಬೆಶಿ ಸೇಮಗೆ, ರಸಾಯನ ಇತ್ತೂ ಹೇಳ್ತದು ಇನ್ನೊಂದು ಗುಟ್ಟು  !)

ದೇವರ ಮೇಲೆ ಜೆನರ ಭಕ್ತಿ ಹೆಚ್ಚುತ್ತಾ ಇದ್ದದು ಕಾಂಬಗ ಮನಸ್ಸಿಲ್ಲಿ ಸಂತೋಷ ಆವುತ್ತು.
ಈ ರೀತಿಲಿ ಆದರೂ  ಲೋಕಲ್ಲಿ ಶಾಂತಿ, ನೆಮ್ಮದಿ ನೆಲಸಲಿ ಹೇಳಿ ಆಶಿಸುವೊ. ಒಪ್ಪಣ್ಣನ ಲೇಖನಕ್ಕೆ ಮತ್ತೊಂದರಿ ಒಪ್ಪ ಕೊಡುತ್ತ ಇದ್ದೆ.

ಆನು ದೇವಸ್ಥಾನಕ್ಕೆ ಹೋಯಿದಿಲ್ಲೆ, ಸುಮ್ಮನೆ ಬಡಾಯಿ ಬಿಡುತ್ತ ಹೇಳೀ ನಿಂಗೊ ಗ್ರೇಶುತ್ತು ಬೇಡ.
ಅದಕ್ಕೆ ಬೇಕಾಗಿ ಪೂರ್ವ ತಯಾರಿ ಮಾಡಿ, ಕೆಮರಾ ಹಿಡುಕ್ಕೊಂಡೇ ಹೋದೆ, ಕೆಲವು ಪಟ ಕ್ಲಿಕ್ಕಿಸಿದೆ.  ಒಂದೆರಡು ಪಟವ ಇಲ್ಲಿ  ಕಟ್ಟಿ ತೂಗಿದ್ದೆ.

ಅಕ್ಕಂಬಗ ಕಾಂಬೊ.

~
ಬೊಳುಂಬು ಗೋಪಾಲ ಮಾವ

ಬೊಳುಂಬು ಮಾವ°

   

You may also like...

5 Responses

 1. [ಬೆಶಿ ಬೆಶಿ ಸೇಮಗೆ, ರಸಾಯನ ]
  ಯಬ್ಬ!! ರಸಾಯನವೂ ಬೆಶಿ ಇದ್ದತ್ತೋ!! ನಿಂಗ ಬಿಡೆಯಿ ಮಾವ! ಭಯಂಕರ!! 😉

 2. ಪಟ ಚೆಂದ ಬಯಿಂದು ಮಾವಾ! ಚೆಂದಕ್ಕೆ ಧನುಪೂಜೆಯ ಶುದ್ದಿ ಕೊಟ್ಟಿದಿ! ಎನಗೆ ಚಳಿ ಬಿಟ್ಟಿದಿಲ್ಲೆ,ಹೋಯೆಕ್ಕು ಹೇಳಿ ಗ್ರೇಶಿದ್ದು ಮಾತ್ರ.. ನಿಂಗ ಆದರು ಬೈಲಿಂಗೆ ಶುದ್ದಿ ಹೇಳಿದಿ ಅನ್ನೆ.. 🙂 ಒಳ್ಳೆದಾತು!! 🙂

 3. ಮಾಣಿ says:

  ಲೇಖನ ಒಳ್ಳೇದಾಯಿದು, ಪಟ೦ಗಳೂ ಚೆ೦ದ ಬಯಿ೦ದು, ಅದರಲ್ಲೂ ಮು೦ಜಾವದ ಪಟ ಭಾರೀ ಇಷ್ಟ ಆತು..

 4. ಬೊಳುಂಬುಮಾವಾ..
  ಒಳ್ಳೆ ಶುದ್ದಿ, ಚೆಂದ ಚೆಂದದ ಪಟಂಗಳುದೇ!
  ಬೈಲಿಂಗೆ ಧನುಪೂಜೆಯ ತೋರುಸಿಕೊಟ್ಟಿ, ಎಲ್ಲೋರುದೇ ಬಂದ ಹಾಂಗಾತದಾ!

  {ಉದಿಯಪ್ಪಳೆ }
  ನಿಂಗಳ ಹೀಂಗ್ರುತ್ತ ಪದಪ್ರಯೋಗ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
  ನಾವು ಮಾತಾಡುತ್ತ ನಮುನೆಯೇ ಬರೆತ್ತಿ. ಉದಿಯಪ್ಪ(ಗ)ಳೆ – ಶಬ್ದವ ಅಂಬೆರ್ಪಿಂಗೆ ಹೇಳ್ತದು ಹಾಂಗೇ ಅಲ್ಲದೋ?

  ಹೇಳಿದಾಂಗೆ ಸೇಮಗೆಯ ಕತೆ ಎಂತಾತು, ಹೇಳಿದ್ದೇ ಇಲ್ಲಿ ಮತ್ತೆ….?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *