ಚೋಪ್ಡಿ…….

February 8, 2013 ರ 11:23 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಮೊನ್ನೆ ಒಂದು ಸಟ್ಟುಮುಡಿ ಗೆ ಹೋಗಿತ್ತಿದ್ದೆ ಇದಾ…. ಅಲ್ಯಾಣ ಕತೆ ಇದು…

ಸಟ್ಟುಮುಡಿ  ಕಸ್ತಲೆಗೆ… ಮಧ್ಯಾನ್ನ  ಕೆಂಜಾರಿಲಿ  ಸಗಣವೇಶ (ಸ+ಗಣವೇಶ)ಭೂಷಿತನಾಗಿ ಭಾಗವಹಿಸುಲೆ ಇತ್ತಿದ್ದು ಇದ, ಹಾಂಗಾಗಿ ಮದುವೆಗೆ ಹೋಪಲೆ ಆಗಿತ್ತಿತ್ತಿದ್ದಿಲ್ಲೆ. ಹಾಂಗೆ ಎಂಟು ಗಂಟೆ ಹೊತ್ತಿಂಗೆ ಪತ್ನೀ, ಪುತ್ರಿ ಸಮೇತನಾಗಿ ಕಾರಿಲಿ ಹೆರಟತ್ತು. ಕಾರಿಲಿ ಎಂತಕೆ ಹೇಳಿರೆ ನಮ್ಮ ಲೆವೆಲು ಮೈಂಟೇನು ಮಾಡೆಕ್ಕಲ್ಲದೋ…

ಎಂಟೂವರೆಗೆ ಹಾಲಿಂಗೆ ಎತ್ತಿತ್ತು. ಮಜ್ಜಿಗೆಗೆ ಅಲ್ಲದೋ ಕೇಳೆಡಿ. ಅದು ಇಂಗ್ಲೀಷಿನ ಹಾಲ್. ಹೋಗಿ ಕಾರಿಂದ ಇಳುದ ಕೂಡ್ಲೆ ಹೆಂಡತ್ತಿ ಕೈಂದ ಕುಂಡೆಗೆ ಎರಡು ಪೆಟ್ಟು ಬಿದ್ದತ್ತು.. ;(  ಎಂತ ಹೇಳಿರೆ ಕಾರಿನ ಸೀಟಿಂದ ಪೇಂಟಿಂಗೆ ಧೂಳು ಹಿಡ್ದಡ, ಆ ಧೂಳಿನ ಕುಡುಗಿದ್ದಡ… ಹೂಂ… ಈ ಹೆಂಡತ್ತಿಯಕ್ಕೊಗೆ ಇದೇ ಕೆಲಸ.. ಎಲ್ಲಿ ಗೆಂಡನ ಪೇಂಟಿಂಗೆ ಧೂಳು ಹಿಡುದ್ದು, ಎಲ್ಲಿ ಅಂಗಿಗೆ ಮಣ್ಣು ಹಿಡ್ದು….. ಪಿರಿ, ಪಿರಿ….;(

ಒಳ ಹೋತು. ಊಟ ಆಗ್ಯೊಂಡು ಇತ್ತಿದ್ದು. ನಾವುದೆ ಒಂದು ಸೀಟಿಲಿ ಕೂದು ಉಂಡತ್ತು. (ಬಟ್ರು ಬುಕ್ಕ ದಾಯೆ ಪೋಪುನೆ? ಕೇಳುಗು, ಬಟ್ಯ)  ಮದು ಮಕ್ಕೊಗೆ ವಿಷ್ ಮಾಡಿ ಹೆರ ಬಂತು.

ಅಲ್ಲಿ ಚಪ್ಪಲಿ ಮಡುಗುವ ದಾರಿ ಉದ್ದಕ್ಕೆ  ಮೂರು ಫೀಟು ಅಗಲಕ್ಕೆ ಇತ್ತಿದ್ದು. (ಅಂದಾಜಿ  ಅಷ್ಟೆ,  ನಿಂಗ ಅಳತ್ತೆ ಮಾಡ್ಲೆ ಹೋದಿರಾ? ಕೇಳ್ಲಾಗ. ಪೆದಂಬು ಹೇಳ್ತವು) ಎರಡೂ ಹೊಡೆಲಿ ಉದ್ದಕ್ಕೆ, ಸೊಂಟದಷ್ಟೆತ್ತರಕ್ಕೆ ಚಿಟ್ಟೆ… ಚಿಟ್ಟೆಂದ ಹೆರಾಣ ಹೊಡೆಂಗೆ, ಚಿಟ್ಟೆಗೆ ತಾಗಿದಾಂಗೆ ಹೂಗಿನ ಗಿಡಂಗ… ಅಲ್ಲಿ ಲೈಟು ಇತ್ತಿಲ್ಲೆ… ಕಸ್ತಲೆ ಕಸ್ತಲೆ…

ಎಂಗ ಚಪ್ಪಲಿ ಹಾಕಿಕೊಂಡು ವಾಪಾಸು  ಬಪ್ಪಗ ಎರಡು ಜೆನ ಜೆವ್ವನಿಗರು ಎಂತರನ್ನೋ ಹುಡುಕ್ಕುತ್ತಾ ಇದ್ದವು, ಆ ಗಿಡಂಗಳ ಎಡೇಲಿ, ಮೊಬೈಲಿನ ಲೈಟು ಹಾಕಿಕೊಂಡು! ಎಂತ ಇಕ್ಕಪ್ಪಾ?

ಒಬ್ಬಃ  ” ನೀನು ಮಡುಗಿದ್ದೆಲ್ಲಿ ಮಾರಾಯ?”

ಇಬ್ಬಃ  “ಇಲ್ಲೇ ಚಿಟ್ಟೆ ಮೇಲೆ ಮಡುಗಿತ್ತಿದ್ದೆ… ಈಗಿಲ್ಲೆ… ”

ಒಬ್ಬಃ ” ಅಂಬಗ ಇಲ್ಲೇ ಇರೆಕ್ಕಿತ್ತನ್ನೆ?”

ಇಬ್ಬಃ ” ಇದ… ಈಗ ಮಡುಗಿ, ಅತ್ಲಾಗಿ ತಿರಿಗಿ, ಇತ್ಲಾಗಿ ತಿರಿಗೆಕ್ಕಾರೆ ಇಲ್ಲೆ…  ಆರೋ ತೆಗೆದಿರೆಕ್ಕು… ಇಲ್ಲದ್ರೆ ಗಿಡಂಗಳ ಎಡೇಲಿ ಬಿದ್ದಿರೆಕ್ಕು..”

ಒಬ್ಬಃ  ” ಅಷ್ಟು ಬೇಗ ಆರು ತೆಗೆತ್ತವು…. ಅಲ್ಲೆ ಆಚೊಡೆಂಗೆ ಬಿದ್ದಿಕ್ಕು… ಸರೀ ಹುಡ್ಕು….”

ಎಂತ ಇಕ್ಕಪ್ಪಾ? ಇವು ಹುಡ್ಕುದು? ಬಹುಷ  ನೊಬೈಲು ಇಕ್ಕು… ಅಲ್ಲದಾ? ಈಗಾಣ ಮಕ್ಕ ಎಲ್ಲಾ ಹೀಂಗೇ. ಮೊಬೈಲಿಲಿ ಯಾವಾಗಳೂ ಗುರುಟಿಕೊಂಡು ಇಪ್ಪದು, ಅದರ ಎಲ್ಯಾರು ಮಡುಗುದು, ಅದಲ್ಲಿಂದ ಕಾಣೆ ಅಪ್ಪದು, ಮಾಮೂಲು ಅಲ್ಲದೋ?

ಮೊಬೈಲು ಕಾಣೆ ಆದರೆ, ಹುಡ್ಕುಲೆ ನಮ್ಮತ್ರೆ  ಕೆಣಿ ಇದ್ದು.

ಈ  ನೆಗೆಚಿತ್ರ ಬರವವು  ಇದ್ದವಲ್ಲದಾ? ಅವಕ್ಕೆ ಅಧಿಕಪ್ರಸಂಗ ಜಾಸ್ತಿ… ( ಅದಿಲ್ಲದ್ರೆ ಚಿತ್ರ ಬಿಡಿಸುಲೆ ಐಡಿಯ ಬರೆಕ್ಕಲ್ಲದಾ?)

ನಾವು ಅವಕ್ಕೆ ರಜ ಸಹಾಯ ಮಾಡಿರೆಂತ? ಅಲ್ಲದ?

” ನಿಂಗ ಅದಕ್ಕೊಂದು ಕಾಲ್ ಕೊಡಿ, ಎಲ್ಲಿದ್ದರು ಅದು ಆನಿಲ್ಲಿದ್ದೆ ಹೇಳ್ತು” – ನಮ್ಮದು ಅವಕ್ಕೆ ಪುಕ್ಕಟೆ ಸಲಹೆ. (ಅದಕ್ಕೆಂತ ಪೈಶೆ ಕೊಡೆಕ್ಕಾ?)

ಇಬ್ಬಃ “ಎಂತ!!?”

ನಾವುಃ “ಅದಕ್ಕೆ ನಿಂಗಳ ಕೈಲಿಪ್ಪ ಮೊಬೈಲಿಂದ ಒಂದು ಕಾಲ್ ಕೊಡಿ, ಅದು ಎಲ್ಲಿ ಗಿಡಂಗಳ ಎಡೆಲಿ ಇದ್ದರು, ರಿಂಗ್ ಆವುತ್ತು”

ಇಬ್ಬಃ ” ಅದಕ್ಕೆ ಕಾಲ್ ಕೊಡುದಾ?”

ನಾವುಃ ” ಅಪ್ಪು, ಕಾಲ್ ಕೊಡಿ”

ಇಬ್ಬಃ ” !!!!!!!!!????? ” ( ನಿಂದು ಮೊರೆ ನೋಡ್ಲೆ ಸುರು ಮಾಡಿದ)

ನವಗೆ ಈಗ ರೆಜ ಸಂಶಯ ಬಂತು.

ನಾವುಃ ” ನಿಂಗ ಎಂತರ ಹುಡ್ಕುದು?”

ಇಬ್ಬಃ “ಚಪ್ಪಲಿ…..”

ನವಗೆ ಬೇಕಾತಾ… ಅಧಿಕಪ್ರಸಂಗ????

 

 

 

 

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಹಹಹಹಾಅಹಾಹಹಾಹಾಅಹಹಾಅಹಹಾ

  [Reply]

  VA:F [1.9.22_1171]
  Rating: 0 (from 0 votes)
 2. ವೆಂಕಟೇಶ
  ವೆಂಕಟೇಶ

  ಕಾಲು ಕೊಟ್ಟ ಕೂಡಲೇ ಎಳಕ್ಕೊಂಬ ಹಾಂಗಿಪ್ಪ ಚಪ್ಪಲಿ ಮುಂದಂಗೆ ಬತ್ತೋ ಏನೋ…

  [Reply]

  VA:F [1.9.22_1171]
  Rating: +1 (from 1 vote)
 3. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ಪರೋಪಕಾರಿ ಶ್ಯಾಮಣ್ಣನ ಕಥೆ ಸೂಪರ್ ಆಯಿದು. ಪೆರ್ವದಣ್ಣಂಗೆ ನೆಗೆ ಬಂದ ಹಾಂಗೆ ಎನಗುದೆ ಬಂತು.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಪ್ಪೋ ಶಾಮಣ್ಣ, ಇಬ್ಬ ಹಾಂಗೆ ಹೇಳಿದ ಮತ್ತೆ ನಿಂಗಳ ಅಂಗಿ ಬೆನ್ನಾರೆ ಧೂಳು ಕಂಡಿದಿಲೆನ್ನೆ ನಿಂಗಳ ಹೆಂಡತ್ತಿಗೆ.

  [Reply]

  VN:F [1.9.22_1171]
  Rating: 0 (from 0 votes)
 5. ಮುಣ್ಚಿಕಾನ ಭಾವ

  ಈ ಕಥೆ ಓದಿಯಪ್ಪಗ ಆನು ಎನ್ನ ಚಪ್ಪಲಿಗೆ ಒಂದು ಜಿಪಿಎಸ್ ಸಿಸ್ಟಂ (GPS Device) ಅಂಟಿಸಿದರೆ ಎಂತಾ ಹೇಳಿ ಯೋಚಿಸುತ್ತಾ ಇದ್ದೆ. ಅಷ್ಟಪ್ಪಗ ನಮ್ಮ ಮೊಬೈಲಿಲಿ ಟ್ರೇಸು (Trace) ಮಾಡುಲೆ ಅಕ್ಕು ಇದಾ… :)

  [Reply]

  VA:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಿರೂಪಣೆ ಲಾಯಿಕ ಆಯಿದು.
  ಎಂಗಳ ಮೊಬೈಲಿಲ್ಲಿ ಆ ವ್ಯವಸ್ಥೆ ಇಲ್ಲೆ, ನಿಂಗಳದ್ದಲ್ಲಿ ಇದ್ದರೆ ಒಂದರಿ ಇತ್ತೆ ಕೊಟ್ಟಿಕ್ಕಿ ಹೇಳಿದ್ದವಿಲ್ಲೆನ್ನೆ!!!

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘು ಮುಳಿಯ

  ಹ..ಹಾ..ಲಾಯ್ಕ ಇದ್ದು ಕತೆ,ಶ್ಯಾಮಣ್ಣ.
  ಅನುಪ್ಪತ್ಯ೦ದ ಹೆರ ಬ೦ದಪ್ಪಗ ಕೈಲಿ ಇಪ್ಪ ಸ್ವಿಚ್ಚಿನ ಒತ್ತೊಗ ಕಾರು “ಕೊ೦ಯಿಕ್” ಹೇಳ್ತ ಹಾ೦ಗೆ, ಮೆಟ್ಟಿ೦ಗೂ ಒ೦ದು ವೆವಸ್ಥೆ ಆಯೇಕಾತು,ಮು೦ದೆ ಅದೂ ಬಕ್ಕು..

  [Reply]

  VA:F [1.9.22_1171]
  Rating: 0 (from 0 votes)
 8. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  vyavaste bappalu saku.

  [Reply]

  VN:F [1.9.22_1171]
  Rating: 0 (from 0 votes)
 9. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಶಾಮಣ್ಣಾ, ನಿಂಗೊ ಹೇಳಿದ ಹಾಂಗೇ ಅದಕ್ಕೆ (ಮೆಟ್ಟಿಂಗೆ) ಆರೋ” ಕಾಲು ” ಕೊಟ್ಟದು ಖಂಡಿತಾ. ಹಾ ಆಹ ! ಹಾ…

  ಲಾಯಕ ಆಯಿದು ,ಒಂದು ನೆಗೆ ಚಿತ್ರ ಇದ್ದಿದ್ದರೆ …

  [Reply]

  VN:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಉಡುಪುಮೂಲೆ ಅಪ್ಪಚ್ಚಿಪೆರ್ಲದಣ್ಣಗೋಪಾಲಣ್ಣಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿವಿಜಯತ್ತೆರಾಜಣ್ಣಸಂಪಾದಕ°ಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಚೆನ್ನೈ ಬಾವ°ಪುತ್ತೂರುಬಾವತೆಕ್ಕುಂಜ ಕುಮಾರ ಮಾವ°vreddhiಚುಬ್ಬಣ್ಣಶುದ್ದಿಕ್ಕಾರ°ಮುಳಿಯ ಭಾವಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಪೆಂಗಣ್ಣ°ಸರ್ಪಮಲೆ ಮಾವ°ಶಾ...ರೀಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ