“ತಗ್ಗಿದವಂಗೊಂದು ಗುದ್ದು”-{ಹವ್ಯಕ ನುಡಿಗಟ್ಟು-23}

“ತಗ್ಗಿದವಂಗೊಂದು ಗುದ್ದು”—[ಹವ್ಯಕ ನುಡಿಗಟ್ಟು-23]

“ಏ..,ಪಮ್ಮಿ. ನೀನೀಗ ಅವರೊಟ್ಟಿಂಗೆ ಸೊಕ್ಕಲೆ ಹೋಗೆಡ, ಎನಗೆ ಪಾತ್ರ ತೊಳವಲೆ ರಜ ಸೇರು” ನಾಲ್ಕೈದು ಮಗಳಕ್ಕಳ ಪೈಕಿಲಿ ಕೆಲಸಲ್ಲಿ ಹುಶಾರಿದ್ದ ಹತ್ತು ವರ್ಷದ ಮಗಳ ದೆನಿಗೇದತ್ತು ಅಬ್ಬೆ.
ಮದಲಾಣ ಕಾಲಲ್ಲಿ ಅಬ್ಬೆ-ಅಪ್ಪಂಗೆ ಏಳು,ಎಂಟು ಮಕ್ಕೊ ಇಕ್ಕಿದ.ಕೈಲಿದ್ದ ಎಲ್ಲಾ ಬೆರಳುಗಳೂ ಒಂದೇ ಹಾಂಗಿರನ್ನೆ!.ಹಾಂಗೇ ಎಲ್ಲಾ ಮಕ್ಕಳ ಬುದ್ಧಿಯೂ ಒಂದೇ ಹಾಂಗಿರ!. ಕೆಲವು ಮಕ್ಕೊ ಪಾಪಕೆ ಇದ್ದರೆ; ಹೇಳಿದ ಹಾಂಗೆ ಕೇಳೀರೆ,ಇನ್ನು ಕೆಲವು ಜೋರಿಕ್ಕು!. ಅದಲ್ಲೂ ಕೂಸುಗಳಲ್ಲಿ ಕೆಲವು ಸೌಮ್ಯ ಸ್ವಭಾವಲ್ಲಿ ತಗ್ಗಿ-ಬಗ್ಗಿ ಎಲ್ಲ ಕೆಲಸವನ್ನೂ ಮಾಡಿಯೊಂಡು ಬಾಕಿ ಒಡ ಹುಟ್ಟುಗಳ ಚಾಕ್ರಿ ಮಾಡ್ತಾ ಅಬ್ಬಗೋ ಅಪ್ಪಂಗೋ ಸಕಾಯ ಮಾಡುಗು. ಶಾಲಗೆ ರಜೆ ಇದ್ದ ದಿನ ಮಕ್ಕೊಲ್ಲ ಸೇರಿ ಆಟ ಆಡ್ಳೆ ಹೆರಟಪ್ಪಗ ಈ ಸಕಾಯ ಮಾಡ್ತ ಕೂಸಿಂಗೆ ಒಳುದವರೊಟ್ಟಿಂಗೆ ಆಡ್ಳೆ ಹೋಪಲೆ ಆಶೆ ಆಗದ್ದಿಕ್ಕೊ?ಆದರೆ ಅಬ್ಬೆಪ್ಪನ ಅಡ್ಡಿ ಇಕ್ಕು.”ಆ ಕೆಲಸ ಒಂದಾರಿ ಮಾಡು,ಈ ಕೆಲಸ ಆಯಿದಿಲ್ಲೆ. ಈಗ ನೀನು ಆಡ್ಳೆ ಹೋಗೆಡ” ಹೇದು ತಗಾದೆ ತೆಗಗು.ಅಷ್ಟಪ್ಪಗ ದಾಕ್ಷಿಣ್ಯಲ್ಲಿಯೋ ಹೆರಿಯೊವರ ಪರಂಚಾಟಲ್ಲಿಯೋ ಹೇಳಿದಾಂಗೆ ಕೇಟರೂ ಆ ಮನುಷ್ಯಂಗೆ ’ಅಯ್ಯೋ ಆನು ಕೆಲಸಲ್ಲಿ ಸಕಾಯ ಮಾಡೀರು ಎನ ಬೈಗಳು’!. ಆಚ ಮಕ್ಕೊಲ್ಲ ಸುಭಗರಾದವು.ಆನು ಮಾತ್ರ ನಿಷ್ಟುರ!. ಹೇದೊಂಡು ಮನಸ್ಸಿನೊಳವೇ ಮರುಗುಗು.
ಹೀಂಗಿದ್ದ ಉದಾಹರಣೆ ಆಫೀಸುಗಳಲ್ಲಿ,ಸರಕಾರಿ ಕಛೇರಿಲಿ, ಶಾಲಗಳಲ್ಲಿ,ಸಂಸ್ಥೆಲಿ, ಹೀಂಗೆ ಸಮಷ್ಠಿ ಗೈವಲ್ಲಿ ಎಲ್ಲಾ ಕಡೆಲಿಯೂ ಸೂಕ್ಷ್ಮಕ್ಕೆ ಕಾಂಬಲೆ ಸಿಕ್ಕುಗು!. ಮಾಡಿದವೇ ಮಾಡೆಕ್ಕು.ಒಳುದೊವು ಕೆಲಸಕ್ಕೆ ಕಳ್ಳ ಕಟ್ಟಿ ಮೇಲ್ಮೆ ತೆಗವ ಜಾಣರಾಗೆಂಡಿಕ್ಕು!!. ಎಂತ ಹೇಳ್ತಿ?

ವಿಜಯತ್ತೆ

   

You may also like...

4 Responses

  1. ಮಂಜುನಾಥ ಪ್ರಸಾದ says:

    ಒಳ್ಳೆ ನುಡಿಗಟ್ಟು ಅಕ್ಕ . ಮದಲಾಣ ಕೂಡು ಕುಟುಂಬಲ್ಲಿ ಹೀಂಗಿದ್ದ ಅನುಭವ ಬೇಕಾದಷ್ಟು ಸಿಕ್ಕುಗಲ್ಲೊ.

  2. ಶುಭಲಕ್ಷ್ಮೀ ಯಾಜಿ says:

    ಹರೇರಾಮ, ಒಳ್ಳೆ ನುಡಿಗಟ್ಟು ವಿಜಯತ್ತೆ

  3. savitha says:

    ಒಳ್ಳೆಯ ನುಡಿಗಟ್ಟು .ಬರದ್ದು ಲಾಯಿಕ ಆಯಿದು ದೊಡ್ಡತ್ತೆ.

  4. ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *