“ತಣ್ಣನೆ ಆದರೂ ತಣಿಶಿ ತಿನ್ನೆಕ್ಕು”-(ಹವ್ಯಕ ನುಡಿಗಟ್ಟು–13)

August 19, 2014 ರ 6:03 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ತಣ್ಣನೆ ಆದರೂ ತಣಿಶಿ ತಿನ್ನೆಕ್ಕು” (ಹವ್ಯಕ ನುಡಿಗಟ್ಟು-13)

ಆನುಶಾಲಗೆ ಹೋಪ ಸಮಯಲ್ಲಿ  ಎನ್ನ ಅಪ್ಪನ ಮನೆಮನೆಂದ(ನೀರ್ಚಾಲು ಗ್ರಾಮದ ಶಂಕರಮೂಲೆ)ಪೇಟಗೆ, ಈಗಾಣ ಹಾಂಗೆ ಅಡಿಗಡಿಗೆ ಬಸ್ಸು ಸರ್ವೀಸ್ ಇದ್ದತ್ತಿಲ್ಲೆಯಿದ. ಎಸ್.ಎಸ್.ಎಲ್.ಸಿ ಮುಗುದಪ್ಪಗ ಮನೆಲಿ ಕೂಬ್ಬದು, ಆ ಸಮೆಲಿ ಅಬ್ಬಗೆ ಮನೆಕೆಲಸಕ್ಕೆ ಸಕಾಯ ಮಾಡ್ಯೊಂಡು ಅಡಿಗೆ ಕೆಲಸ ಕಲಿವದು!,ಹೀಂಗಿರುತ್ತಾ  ಕೆಲವು ಸರ್ತಿ ಎಲ್ಯಾರು ಹೋಪಲಿರುತ್ತನ್ನೆ! ಉದಿಯಪ್ಪಗ ಆರು ಗಂಟಗೆ ಮುಂಡಿತ್ತಡ್ಕಂದ  ಕಾಸರಗೋಡಿಂಗೆ ಹೋವುತ್ತ ಬಸ್ಸಿಕ್ಕು. ಅದು ತಪ್ಪೀರೆ ಮತ್ತೆ ಮಜ್ಜಾನಮೇಗೇ ಉಳ್ಳೊ! ಉದಿಯಪ್ಪಗ 5-30ಕ್ಕೆ ಹೆರಡೆಕ್ಕಿದ.ಒಂದಾರಿ ಹೀಂಗೆ ಹೆರಡುತ್ತ ಗೌಜಿ!.ಅಪ್ಪನ ಒಟ್ಟಿಂಗೆ ಎಲ್ಲಿಗೋ ಹೋಪದು!.ಅಬ್ಬೆ ಮುನ್ನಾಣು ದಿನವೇ ಎಂತದೋ ಕೊಟ್ಟಿಗೆ ಮಾಡಿ ಮಡಗಿದ್ದು.ಕಿಚ್ಚಾಕಿ ಬೇಶಿದ ಕೆಲಸ ಎನ್ನದು.! ಎಂಗೊ ತಿಂಬಲೆ ಬಿಡುಸಿ ನೋಡುವಗ ಅದು ಸರೀ ಬೇಯಿಂದಿಲ್ಲೆ!. “ಎನಗೆ ಇದು ಬೇಡ. ರಜ ಅವಲಕ್ಕಿ ಕೊಡು  ಮಸರು ಹಾಕಿ ತಿಂತೆ” ಹೇಳಿದೊವು ಅಪ್ಪಂ. ಆನು ರಜ ತಣ್ಣನೆ ಮಸರು ತಿಂತೆ ಹೇಳಿಗೊಂಡು ತಣ್ಣನೆ ರಜ ಬೆಶಿ ಮಾಡ್ಳೆ ಹೆರಟೆ. ಅಷ್ಟಪ್ಪಗ  “ಇದಾ.. ಮೋಳೆ.., ತಣ್ಣನೆ ಆದರೂ ತಣಿಶಿ ತಿನ್ನೆಕ್ಕು. ಹೇಳುಗು ಮದಲಾಣವು. ಅದರ ಬೆಶಿ ಮಾಡೀರೆ ಅದರ ಸತ್ವ ಹೋತು”. ಹೇಳುತ್ತಾ ಎನ್ನಪ್ಪ. “ಇದರ ವಿಮರ್ಶೆ ಮಾಡೀರೆ; ಮನಸ್ಸಿಂಗೆ ಒತ್ತಡ ಹಾಕಿಯೊಂಬಲಾಗ ಹೇಳ್ತ ಪಾಠವೂ ಇದ್ದಿದಲ್ಲಿ”. ಹೇಳಿದೊವು. ಈಗ ತಣ್ಣನೆ ಉಂಬ ಸಂದರ್ಭಲ್ಲಿ ಮಾತ್ರ ಅಲ್ಲ  ಹೆಚ್ಚು ಕೆಲಸದ ಒತ್ತಡ  ಬೀಳುವಗಳೂ ಅಪ್ಪ  ಹೇಳಿದ ಈ ಮಾತು ನೆಂಪಾವುತ್ತಿದ.ಒಟ್ಟಿಲ್ಲಿ ಇದು ತಣ್ಣನೆ ಉಂಬ ವಿಷಯಕ್ಕೆ ಮಾಂತ್ರ ಅಲ್ಲ. ಸಹನೆ ತೆಕ್ಕೊಂಬಲಿದ್ದ ಸಿಹಿ ನುಡಿಯೂ ಆವುತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ತಣಿಶುದು ಹೇಳಿದರೆ ಸಮಸ್ಥಿತಿಗೆ ತಪ್ಪದು ಎಂಬ ಅರ್ಥವೂ ಇದ್ದು. ಅದಕ್ಕೆ ತಣ್ಣನೆಯನ್ನೂ ತಣಿಶಿ ಉಂಬದು ಅಥವಾ ತಣ್ಣೀರನ್ನೂ ತಣಿಶಿ ಕುಡಿವದು ಅಥವಾ ತಾಳ್ಮೆಲಿ ಇಪ್ಪದು .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಮುಳಿಯ ಭಾವವೆಂಕಟ್ ಕೋಟೂರುಪೆರ್ಲದಣ್ಣದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಶೀಲಾಲಕ್ಷ್ಮೀ ಕಾಸರಗೋಡುವಸಂತರಾಜ್ ಹಳೆಮನೆಚೆನ್ನೈ ಬಾವ°ಡಾಗುಟ್ರಕ್ಕ°ಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಪಟಿಕಲ್ಲಪ್ಪಚ್ಚಿದೊಡ್ಮನೆ ಭಾವಪ್ರಕಾಶಪ್ಪಚ್ಚಿಪುತ್ತೂರುಬಾವಕೇಜಿಮಾವ°ಅಕ್ಷರ°ಅಜ್ಜಕಾನ ಭಾವಶಾಂತತ್ತೆಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಶ್ಯಾಮಣ್ಣದೊಡ್ಡಭಾವಅಡ್ಕತ್ತಿಮಾರುಮಾವ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ