“ತಲಗೆರದ ನೀರು ಕಾಲಿಂಗೆ ಇಳಿಯದ್ದೆ ಇರ” ( ಹವ್ಯಕ ನುಡಿಗಟ್ಟು–4)

“ತಲಗೆರದ ನೀರು ಕಾಲಿಂಗಿಳಿಯದ್ದೆ ಇರ” (ಹವ್ಯಕ ನುಡಿಗಟ್ಟು—4)

ಒಂದು ಆತ್ಮೀಯರ ಮನಗೆ ಹೋಗಿತ್ತಿದ್ದೆ. ಹಳ್ಳಿ ಮನೆ. ಎನ್ನ ಜೋಸ್ತಿಯ ಮಗಳು ಅಪ್ಪನ ಮನಗೆ ಬಯಿಂದು.  ಅಬ್ಬೆ ಹತ್ರೆ ಅದರ ಸುಖ-ದುಃಖ ಹೇಳ್ತಾ ಇದ್ದತ್ತು.ಮಗಳು ಗೆಂಡನ ಮನೆಲಿ ಹಿರಿಸೊಸೆ. ಅತ್ಯೋರು ಇಲ್ಲೆ.ಮನೆವಾರ್ತೆ ನೋಡಿಗೊಂಡು, ಕೊಂಡುನೆಡೆಶೆಕ್ಕಾದ ಮನೆ ಸೊಸೆ.ಮೈದುನಂಗೆ ಮದುವೆ ಆಗಿ ತಂಗೆ ಬಯಿಂದು. ಅದು ಸರಕಾರಿ ಶಾಲೆಲಿ ಟೀಚರು. ಅದಕ್ಕೆ ರಜ ಅಹಂಭಾವ,ದರ್ಪ ಎಲ್ಲ ಇದ್ದು  ಹೇಳ್ತವಿಷಯ ಗೊಂತಾತು.ಈ ಹಿರಿ ಸೊಸಗೆ ಸಾಮರಸ್ಯಲ್ಲಿ ಹೋಯೆಕ್ಕೂಳಿ ಇದ್ದರೂ ತಂಗೆತ್ರೆ ಏಗಿಯೊಂಬಲೆ ಕಷ್ಟ ಆವುತ್ತು. ಎನ್ನಚಙಾಯಿ ಎನ್ನತ್ರೆ ಕೇಳಿತ್ತು  “ಹೇಂಗೆ ಮಾತಾಡಿರೂ ದರ್ಪ ತೋರ್ಸುತ್ತಾಡ ಇದರ ತಂಗೆ!. ವಿಜಯಕ್ಕ..,ಹೀಂಗಿದ್ದವರ ಎಡೆಲಿ ಹೇಂಗೆ ಹೊಂದಿಗೊಂಡು ಹೋಪದು ಹೇಳಿ?” ಅಬ್ಬೆಒಟ್ಟಿಂಗೆ ಮಗಳೂ ದೆನಿಗೂಡ್ಸಿ,ಎನ್ನ ಮೋರೆ ನೋಡಿಯಪ್ಪಗ ; ಎಂತ ಸಮಾದಾನ ಹೇಳೆಕ್ಕಿದಕ್ಕೆ….? ಯೋಚಿಸಿದೆ.

“ಬಹುಶ ಶಾಲೆಲಿ ಅದರ ವಿದ್ಯಾರ್ಥಿಗಳತ್ರೆ ಮಾತಾಡಿ ಅದೇ ವರಸೆಯ ನಿನ್ನತ್ರೆ ತೋರ್ಸುವದಾಗಿಪ್ಪಲೂ ಸಾಕು.ಎಡಿಗಾಷ್ಟು ಈ ಮಾತಿನ ಹಾಸ್ಯರೂಪಲ್ಲಿ ಹೇಳಿ  ತಂಗಗೆ ವಿವೇಕ ಹುಟ್ಟುವಾಂಗೆ ಮಾಡೆಕ್ಕಿದ.ಯಾವುದಕ್ಕೂ ಬಗ್ಗದಿದ್ದರೆ; “ತಲಗೆರದ ನೀರು ಕಾಲಿಂಗಿಳಿಯದ್ದಿರ” ಹೇಳ್ತ ಮಾತೊಂದಿದ್ದು. ಕೆಲಾವು ಜೆನ ಸಂದರ್ಭಸಿಕ್ಕಿ,ಮಾತಾಡುವಾಗೆಲ್ಲ  ಹೇಳ್ಸು ಕೇಳಿದ್ದೆ.ಅದನ್ನೇ ನೆಂಪುಮಾಡಿಗೊಂಡರೆ, ನಿನ್ನ ಮನಸ್ಸು ಸಮತೋಲನಲ್ಲಿಪ್ಪಲೆ ಒಳ್ಳೆದು.

“ಹಾಂಗೇಳಿರೆ ಎಂತರ..?” ಎನ್ನ ಮೋರೆಯನ್ನೇ ನೋಡಿತ್ತು.

“ ತಲೆ ಹೇಳಿರೆ   ಹೆರಿ ಜಾಗೆ.ಅದಕ್ಕೆ ಬಿದ್ದ ನೀರು ಕೆಳ ಕಾಲಿಂಗಿಳಿವಲೇ ಬೇಕನ್ನೆ! ನೀನೀಗ ಅದಕ್ಕೆ ಹೆರಿಯೋಳು.ಮುಂದೆ ಭವಿಷ್ಯದ ದಿನಂಗಳಲ್ಲಿ  ಒಂದಲ್ಲ ಒಂದು ರೂಪಲ್ಲಿ ಅದು ಹೆರಿಯೋಳಾಗಿಯೇ ಆವುತ್ತು.ಆ ಸಂದರ್ಭಲ್ಲಿ ಇದೇ ಅವಕಾಶ ಅದಕ್ಕೆ ಸಿಕ್ಕುತ್ತು ಹೇಳ್ತ ಅರ್ಥ”. ಆದರೆ…ನೀನು ಸತ್ಯರೀತಿಲಿ ಇದ್ದೇಳಿಯಾದರೆಅದಕ್ಕೆಅದರಿಂದ ದುಷ್ಪರಿಣಾಮ ಅಕ್ಕು. ಇಲ್ಲಿ ಒಂದು ಮಾತು ಹೇಳ್ಲೆ ಕಾಣುತ್ತೆನಗೆ ಹೆರಿಯವು ನವಗೆ ತೀರಾ ಅಸಮಾಧಾನ ಮಾಡಿ ಮಾಡಿ ಮಾತಾಡುವಾಗ ’ಎನ್ನ ಕೆಮಿ ಕಾಶಿಗೋಯಿದು’  ಹೇಳಿ ಸುಮ್ಮನೆ ಕೂದರೆ ತತ್ಕಾಲಕ್ಕೆ ವಾತಾವರಣ ಶಾಂತ ಆವುತ್ತಲ್ಲದ್ದೆಆರಿಂಗೂ ಅದರಿಂದ ತೊಂದರೆ ಇಲ್ಲೆ. ಆದರೆ ಇಲ್ಲಿ ಹಾಂಗಲ್ಲ. ಹೆರಿಯವು ಸತ್ಯರೀತಿಲಿ ಇದ್ದವೂಳಿಯಾದರೆ ಕಿರಿಯವಕ್ಕೆ ದುಷ್ಪರಿಣಾಮ ಆವುತ್ತು. ಅದಕ್ಕಾಗಿಯೇ ನಮ್ಮ ಸನಾತನ ಸಂಸ್ಕಾರಲ್ಲಿಪ್ಪದು ಹೆರಿಯವರತ್ರೆ ವಿನಯ, ವಿಧೇಯತೆ ಬೇಕು  ಹೇಳಿಪ್ಪದು.

.ಎನ್ನ ಮಾತು ಅದರ ತಲೆ ಒಳ ಕೆಲಸ ಮಾಡ್ಳೆ ತೊಡಗಿತ್ತು.

ವಿಜಯತ್ತೆ

   

You may also like...

2 Responses

 1. ಶಾರದಾಗೌರೀ says:

  ವಿಜಯತ್ತೆ, ಇದು ಪಷ್ಟಿದ್ದು.
  ಯಾವುದೇ ಕೆಲಸ ಆದರೂ ನಾವು ಮಾಡಿದ್ದದು ತಿರುಗಿ ಬಾರದ್ದೆ ಇರ್ತಿಲ್ಲೆ ಅಲ್ಲದಾ? ಎಂತಾದರೂ ಅನ್ಯಾಯ ಮಾಡಿದರೆ ಮನೆಲಿ ಈ ಮಾತು ಹೇಳುಗಿದಾ.
  ದಿನ ಇದ್ದ ಹಾಂಗೆ ಇನ್ನೊಂದು ದಿನ ಇರ್ತಿಲ್ಲೆ. ಕಷ್ಟ ಇದ್ದರೆ ಸುಖ ಬಂದೇ ಬಕ್ಕು, ತಾಳ್ಮೆ ಇದ್ದರೆ.
  ವಿವರವಾಗಿ ಬರದ್ದದು ಲಾಯ್ಕಾಯಿದು.

 2. Naveen says:

  ನುಡಿಕಟ್ಟುಗಳ ಸರಣಿ ಭಾರಿ ಲಾಯಕ ಇದ್ದು ದೊಡ್ಡಮ್ಮ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *