ದೇವರಿದ್ದನ?

January 2, 2014 ರ 3:21 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೇವರಿದ್ದನ?deva

ಎನ್ನ ಕೆಲಸ ಆನು ಮಾಡ್ತೆ
ನಿನ್ನ ಕೆಲಸ ನೀನು ಮಾಡು
ಅವನ ಕೆಲಸ ಅವನೆ ಮಾಡ್ಳಿ
ಇವನ ಕೆಲಸ ಇವನೆ ಮಾಡ್ಳಿ
ಎನ್ನ ಕೆಲಸ, ನಿನ್ನ ಕೆಲಸ
ಅವನ ಕೆಲಸ, ಇವನ ಕೆಲಸ
ಆರೂ ಕೂದು ಮಾಡದ್ರಿದಾ,
ಎಲ್ಲೋರ ಕೆಲಸ ಮಾಡ್ಳೆ
ದೇವರಿದ್ದನ?

ಎಮ್ಮೆಗೊಕ್ಕೆ ಹುಲ್ಲು ಹಾಕು
ದನಕ್ಕಿಷ್ಟು ಹಿಂಡಿಹಾಕು
ನಾಯಿಗೊಕ್ಕೆ ಅಶನ ಹಾಕು
ಕುದುರೆಗೊಕ್ಕೆ ಕುಡುವ ಬೇಶಿ
ಪುಚ್ಚೆಗೊಕ್ಕೆ ಹಾಲು ಹಾಕು
ಕಾಲು ನೀಡಿ ಕೂದರೆಂತ
ಕೆಲಸ ಆರು ಮಾಡುದು?
ಎಲ್ಲೋರ ಕೆಲಸ ಮಾಡ್ಳೆ
ದೇವರಿದ್ದನ?

ಮೊನ್ನೆ ಕಳ್ತು, ನಿನ್ನೆ ಕಳ್ತು
ಇಂದು ಕಳಿಗು ನಾಳೆ ಕಳಿಗು
ದಿನವು ಕಳಿಗು, ವಾರ ಕಳಿಗು
ತಿಂಗಳೋ ವರ್ಷವೋ
ಕಳುದೆ ಕಳಿಗು ಕೂದರೆ
ಕಳುದರೆಂತ ಬಿಟ್ಟರೆಂತ
ಆನು ಕೂಪೆ ಹೇಳಿರೆ
ಎಲ್ಲೋರ ಕೆಲಸ ಮಾಡ್ಳೆ
ದೇವರಿದ್ದನ?

ಕೆಲಸ ಬೇಕು ಉಣ್ಣೆಕ್ಕಾರೆ
ಬೊಗಸೆ ತುಂಬ ತಿನ್ನೆಕ್ಕಾರೆ
ಹೊಟ್ಟೆ ಅಷ್ಟೂ ತುಂಬೆಕ್ಕಾರೆ
ಆನು ನೀನು ಅವಂದೆ ಇವಂದೆ
ನಮ್ಮ ಕೆಲಸ ನಾವೆ ಮಾಡಿ,
ದೇವರೆಂತಕೆ?
ದೇವರಿದ್ದ ಅಲ್ಲಿಯೇ
ಲೋಕ ನೋಡಿ
ಸಲಹುಲೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಭಾಗ್ಯಲಕ್ಷ್ಮಿ

  ಪದ್ಯ ಲಾಯಿಕಾಯಿದು ಶ್ಯಾಮಣ್ಣ . ನಮ್ಮ ಕೆಲಸ ನಾವೆ ಮಾಡಿ, —ಇಲ್ಲಿ ” ಮಾಡ್ವ°” ಹೇಳುವ ಪದ ಹೆಚ್ಚು ಸಮಂಜಸ ಅಲ್ಲದೋ ?
  ಇದರ ಓದಿ ಡಾ . ರಮಾನಂದ ಬನಾರಿಯವರ ”ದೇವರು ” ಹೇಳುವ ಶೀರ್ಷಿಕೆಯ ಕವನ ನೆನಪ್ಪಾವುತ್ತು . ಕೊಳಲು ಹೇಳುವ ಕವನ ಸಂಕಲನ್ನಲ್ಲಿಪ್ಪದು .

  ‘ದೇವರು ದೇವರು’ ಎನ್ನುವೆಯಲ್ಲ;
  ಎಲ್ಲಿದ್ದಾನೆ ? ತೋರಮ್ಮ
  ದೇವಸ್ಥಾನದೊಳಿದ್ದರೆ ಹೋಗಿ
  ನೋಡಿ ಬರುವ ನೀ ಬಾರಮ್ಮ
  ದೇವರು ಎಂದರೆ ಯಾರಮ್ಮ?

  ದೇವರಿಗೇನು ಕೋಪವೆ ? ಅವನು
  ಏತಕೆ ಮಾತಾಡುವುದಿಲ್ಲ ?
  ಕರೆದರೆ ನಾನು ಬರುವುದೇ ಇಲ್ಲ
  ಎಲ್ಲಿದ್ದಾನೊ ತಿಳಿಯೊಲ್ಲ !
  ಒಮ್ಮೆಯು ಚೆ೦ಡಾಡುದುವುದಿಲ್ಲ

  ದೇವರು ಎಂದರೆ ಒಳ್ಳೆಯ ಮನಸು !
  ದೇವರು ಎಂದರೆ ಪ್ರೀತಿ
  ದೇವರು ಎಂದರೆ ಒಳ್ಳೆಯ ನಡತೆ ;
  ಅದುವೇ ಬದುಕುವ ರೀತಿ !
  ಅದುವೇ ಬದುಕುವ ನೀತಿ !

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಪವನಜಮಾವಚೆನ್ನೈ ಬಾವ°ಬೊಳುಂಬು ಮಾವ°ದೊಡ್ಡಮಾವ°ನೆಗೆಗಾರ°ದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಶುದ್ದಿಕ್ಕಾರ°ಕಾವಿನಮೂಲೆ ಮಾಣಿಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಪೆಂಗಣ್ಣ°ನೀರ್ಕಜೆ ಮಹೇಶಚೆನ್ನಬೆಟ್ಟಣ್ಣಕಜೆವಸಂತ°ರಾಜಣ್ಣವಿದ್ವಾನಣ್ಣಅನುಶ್ರೀ ಬಂಡಾಡಿಅಕ್ಷರ°ಅಜ್ಜಕಾನ ಭಾವಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ