ದೇವ್ರೆ ದೇವ್ರೆ

January 31, 2016 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೇವ್ರೆ ದೇವ್ರೆ ಕಣ್ ಬಿಡೊ
ಕಲಿಯುಗ್ದ ಜನ್ರಾ ನೀ ಇಲ್ ನೋಡೋ||

ಯೆಲ್ಲೆಂದ್ರಲ್ಲಿ ಕಿತ್ತಾಟ ಜಗಳಾಟ
ಯೋಚ್ನೆ ಮಾಡ್ದ್ರೆ ಎದೆವೊಡೆತು
ಜನಜಂಗುಳಿ ಬಳಲಾಟ||

ನೆಮ್ಮದಿಯಿಲ್ಲೆ ವಿಶ್ರಾಂತಿಯಿಲ್ಲೆ
ದುಡ್ತ ಮಾಡದ್ರೂ ಸಾಲಾ ಕೈ ಬಿಡ್ತಿಲ್ಲೆ
ನೌಕರಿ ಅಂದ್ರೂ ತಿಂಗ್ಳ ತುದೀಲಿ ದುಡ್ಡಿರ್ತಿಲ್ಲೆ
ಸಾಲ ಕಟ್ಟು ಕಂತು ಯಾವತ್ತೂ ಮುಗೀತಿಲ್ಲೆ||

ಸಾಕಾಯ್ದೊ ದೇವಾ ಈ ಜೀವ್ನಾ
ತೇಕಿ ತೇಕಿ ಯೆಗ್ರ ಬಿದ್ರೂ ನೀ
ಕಣ್ ಬಿಡ್ತಿಲ್ಯಲೊ ತಂದೆ
ನೆಮ್ಮದಿ ಶಾಂತಿ ಜಗತ್ತಲ್ಲಿ ಇರ್ಲಿ ಮಾರಾಯಾ||

ನನ್ನ ಮನೆವರೆಗೂ ಅದೇ ಕಾಣ್ಲಿ ಶಿವುರಾಯ
ಗಂಗೆ ಹರಿಸು ನೀರ್ ಕುಡಿಸು
ಮಳೆ ಬೆಳೆ ಛಲೋ ಅಫಾಂಗ್ ವರಾ ಕರುಣಿಸು
ತಂದೆ ನಿನ್ನ ವಾತ್ಸಲ್ಯ ಪ್ರಪಂಚಕ್ಕಿರ್ಲೋ||

ವಂದೆ ತೋಟ್ದ ಹೂವಾಂಗೆ ನಗು ತಾರೋ
ವಟ್ಟಿಗ್ ಬಾಳ್ವೆ ನಡೆಸ್ವಾಂಗೆ ಸ್ನೇಹಾ ಬೆಳ್ಸೊ
ಜನಾ ಜನಾ ನಂಬ್ಕಿಂದಾ ಬದ್ಕವಾಂಗ್ ಮಾಡೊ
ಕಪಟಾ ಮೋಸಾ ವಂಚನೆ ಯಾವ್ದು ಬೇಡಾ||

ದೇವ್ರ ರಾಜ್ಯ ಸಾಧು ಸಾಮ್ರಾಜ್ಯ ಸುಭೀಕ್ಷ ಈ ಪ್ರಪಂಚಾ
ಕಣ್ ಬಿಟ್ರೆ ಖುಶಿ ದೃಶ್ಯಾ ಪ್ರೀತಿಯಿಂದಾ ದೇವ್ರ ಸ್ಪರ್ಶಾ
ಅಧ್ಯಾತ್ಮದಲ್ಲಿ ನಂಬ್ಕೆಯಿಟ್ಟು ವಿಜ್ಞಾನದಲ್ಲಿ ಪ್ರಗತಿಕೊಟ್ಟು
ಜೀವ್ನಾದಲ್ಲಿ ಸಂತಸಾಪಟ್ಟು ಆಧುನಿಕತೆ ಹಳೇಕತೆ ಮಿಶ್ರಣದಲ್ಲಿ
ಮನುಷ್ಯನ ತೇಲ್ಸು ತಂದೆ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ವಿಜಯತ್ತೆ

    ಕಲ್ಪನಾ ಅರುಣನ ಮೊರೆ ಚೆನ್ನಾಗಿ ಬಿಂಬಿತವಾಯಿದು .ಉತ್ತರ ಕನ್ನಡದ ಭಾಷೆ ಕುಶಿ ತಂತು.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಶ್ಯಾಮಣ್ಣಪೆರ್ಲದಣ್ಣಬಟ್ಟಮಾವ°ಪುಟ್ಟಬಾವ°ಬಂಡಾಡಿ ಅಜ್ಜಿಅನಿತಾ ನರೇಶ್, ಮಂಚಿಚೆನ್ನೈ ಬಾವ°ವಾಣಿ ಚಿಕ್ಕಮ್ಮಪೆಂಗಣ್ಣ°ಬೊಳುಂಬು ಮಾವ°ದೊಡ್ಡಭಾವಜಯಶ್ರೀ ನೀರಮೂಲೆತೆಕ್ಕುಂಜ ಕುಮಾರ ಮಾವ°ಚುಬ್ಬಣ್ಣಅನುಶ್ರೀ ಬಂಡಾಡಿವಿಜಯತ್ತೆಡಾಮಹೇಶಣ್ಣಸುವರ್ಣಿನೀ ಕೊಣಲೆಸರ್ಪಮಲೆ ಮಾವ°ಶೀಲಾಲಕ್ಷ್ಮೀ ಕಾಸರಗೋಡುಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ವಿದ್ವಾನಣ್ಣದೀಪಿಕಾಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ