ನಂಗೊ ಹ್ಯಾಪಿಯಾಗಿರೊ (ಹವ್ಯಕಂಗ್ಲೀಷ್ ಪದ್ಯ)

May 25, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಷ್ಟನೆಲ್ಲಾ ನುಂಕಂಡು
ಬಾಯ್ತುಂಬಾ ನಕ್ಕೊಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ವಿದ್ಯೆನೆಲ್ಲಾ ಕಲ್ತಕಂಡು
ನೌಕ್ರಿ ಚಾಕ್ರಿ ಹಿಡ್ಕಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಮದ್ವೆಯೆಲ್ಲಾ ಮಾಡ್ಕಂಡು
ಗೃಹಿಣಿಯಾಗಿ ಇದ್ಕಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಮಕ್ಳನೆಲ್ಲಾ ಹಡ್ಕಂಡು
ಪ್ರೀತಿಂದಾ ಬೆಳ್ಸಕಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಗೃಹಿಣಿಯಾಗಿ ಮನೆವಳ್ಗೆ
ಅಧಿಕಾರಿಣಿ ಕಛೇರಿವಳ್ಗೆ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಗಂಡ್ನಾಸೆ ಪೂರಾ ಮಾಡೊ
ಅತ್ತೆ ಮಾವ್ನಾ ಸೇವೆ ಮಾಡೊ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಹೆಣ್ಣು ಅಂದ್ರೆ ಭೂಮಿ ತೂಕಾ
ಸಹನೆ ತಾಳ್ಮೆ ಲಕ್ಷ್ಮಿ ರೂಪಾ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಗಂಡಸ್ರಿಂದಾ ಸಹಾಯಾ ತಕೊ
ಸಂಸಾರ್ದೆಲ್ಲಾ ಭಾರಾ ತಕೊ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಗಂಡು ಹೆಣ್ಣು ಸಂಸಾರ್ದ ಕಣ್ಣು
ಪ್ರಪಂಚಾ ಬೆಳ್ಸೊ ಚಂದಣಿ ಹಣ್ಣು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಹೆಣ್ಣೇ ಮನೆಯಾಒಡತಿ
ದಿನಾಕಳ್ದಾಂಗ್ ಬಡ್ತಿ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ಭಾರತದಂಥ ಕಂಟ್ರೀಲಿ
ಪಿತೃಪ್ರಧಾನ ಫ್ಯಾಮಿಲೀಲಿ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

ನಂಗೊ ಹ್ಯಾಪಿಯಿಂದಾಯಿದ್ರೆ
ಪರರೂ ಹ್ಯಾಪಿಯಿಂದಾ ಇರ್ತೊ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಲಾಯಕ ಆಯ್ದು ಪದ್ಯ ಮತ್ತೆ ಆಶಯ

  [Reply]

  VA:F [1.9.22_1171]
  Rating: 0 (from 0 votes)
 2. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  laayka aauidu padya

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ಸಂದೇಶ ತುಂಬಾ ಲಾಯಕಿದ್ದು. ಯೋಗರಾಜ ಭಟ್ಟರ ಲೈಫ್ ಇಷ್ಟೇನೆ ಪದ್ಯ ನೆಂಪಾತು.

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಹರೇರಾಮ, ಕಲ್ಪನಾ, ಒಳ್ಳೆ ಸಂದೇಶ ಸಾರುವ ಪದ್ಯ ಬರದ್ದೆ. ಮದುವೆ ಬೇಡ ಹೇಳುವವಕ್ಕೆ, ಮಕ್ಕೊ ಬೇಡ ಹೇಳುವವಕ್ಕೆ, ಗೃಹಿಣಿಯಾಗಿರೋ ಹೇಳಿ. ಹೀಂಗಿದ್ದೆಲ್ಲ ಇದ್ದು. ಇದೀಗ ಇಂಗ್ಲಿಷ್ ಶಬ್ಧ ಸೇರ್ಸೀರೆ, ಇನ್ನು ದ. ಕ ಹವಿಗನ್ನಡಲ್ಲಿ ಬರವಲೆ ಪ್ರಯತ್ನ ಮಾಡು ಕೂಸೇ. ಶುಭವಾಗಲಿ.

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ

  ಒಳ್ಳೆ ಆಶಯದ ಪದ್ಯ. ಕೊಶೀ ಆತು.

  [Reply]

  VA:F [1.9.22_1171]
  Rating: 0 (from 0 votes)
 6. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಕಲ್ಪನಾ, ಹರೇ ರಾಮ; ನಿನ್ನ್ ಕಲ್ಪನೆ ಘನಾದಿದ್ದು! ನಿನ್ನ್ ಪದ್ಯ ಓದ್ಕ೦ಡ್ ಬಾರೀ ಕುಶಿಯಾತು ಸದ್ಯವಾದರೆ ಇನ್ ಮು೦ದೆ ನಮ್ ಭಾಷೆಲಿ ಬರ್ವಲೆ ಪ್ರಯತ್ನ ಮಾಡು ತಿಳತ್ತೊ.ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಕಲ್ಪನಕ್ಕ ಬರದ
  ಪದ್ಯಂಗಳ ಓದಿ
  ಹ್ಯಾಪ್ಪಿಯಾದಿಯೊ ನಾವು ಹ್ಯಾಪ್ಪಿಯಾದೆಯೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಗಣೇಶ ಮಾವ°ವೇಣಿಯಕ್ಕ°ಮುಳಿಯ ಭಾವವಿದ್ವಾನಣ್ಣಬಂಡಾಡಿ ಅಜ್ಜಿಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಬೋಸ ಬಾವಪುತ್ತೂರುಬಾವಹಳೆಮನೆ ಅಣ್ಣದೊಡ್ಡಮಾವ°ದೇವಸ್ಯ ಮಾಣಿಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°ಕಾವಿನಮೂಲೆ ಮಾಣಿಶರ್ಮಪ್ಪಚ್ಚಿಅನುಶ್ರೀ ಬಂಡಾಡಿತೆಕ್ಕುಂಜ ಕುಮಾರ ಮಾವ°ಚೂರಿಬೈಲು ದೀಪಕ್ಕಪೆಂಗಣ್ಣ°ಒಪ್ಪಕ್ಕಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ