“ನಂದನ ಬದುಕ್ಕು, ನರಿ-ನಾಯಿ ತಿಂದು ಹೋತು-(ಹವ್ಯಕ ನುಡಿಗಟ್ಟು-73)

“ನಂದನ ಬದುಕ್ಕು, ನರಿ-ನಾಯಿ ತಿಂದು ಹೋತು”-(ಹವ್ಯಕ ನುಡಿಗಟ್ಟು-73)

ಆಶೆಮಾಡಿ ಕೂಡಿಮಡಗಿದವರ ಪೈಸ ಸುಖಾಸುಮ್ಮನೆ ಹಾಳಪ್ಪಗ  ಎನ್ನಜ್ಜᵒ ಹೇಳುದು, ಕೇಳಿದ್ದೆ ಆನು ಸಣ್ಣದಿಪ್ಪಗ. “ನಂದನ ಬದುಕ್ಕು ನರಿ-ನಾಯಿ ತಿಂದು ಹೋತು” ಹೇಳ್ತಾಂಗಾತನ್ನೆ!ಹೇದು. ನರಿ-ನಾಯಿ ತಿಂಬದು ಹೇಳ್ವದೆಂತಕೆ…!.ಒಬ್ಬನ ಸೊತ್ತು ಅವನ ಮಕ್ಕೊ, ಕುಟುಂಬಸ್ಥರು ಅನುಭವಿಸೆಕ್ಕಾದೊವು. ಹಾಂಗೇ ಒಬ್ಬ ಸತ್ತರೂ ಅಷ್ಟೆ; ಅವನ ದಹನಕಾರ್ಯ, ಉತ್ತರಕ್ರಿಯಾದಿಗಳ , ಮಾಡೆಕ್ಕಾದವು ಮಾಡದ್ದೆ, ನರಿ,ನಾಯಿ,ಹದ್ದು  ತಿಂಬಲಾಗ.   ಇಲ್ಲಿ  ’ನಂದನ’  ಹೇಳಿರೆ, ಪೈಸೆಕ್ಕಾರᵒ ಹೇಳುವ ಅರ್ಥ.ನ್ಯಾಯಲ್ಲಿಯೋ ಅನ್ಯಾಯಲ್ಲಿಯೋ ಏವದೇ ರೂಪಲ್ಲಿಯೂ ಅಕ್ಕು. ಒಟ್ಟಾರೆ ಪೈಸ ಜೆಮೆ ಆಯೆಕ್ಕು. ಹೇಳ್ತ ಇರಾದೆ ಕೆಲವು ಜೆನಕ್ಕಿರುತ್ತು.

’ಆಶೆ ಬೇಕು,ಆದರೆ ದುರಾಶೆ ಇಪ್ಪಲಾಗ’ ಹೇಳುಗು ಹೆರಿಯೊವು. ಕಪ್ಪುಹಣ ಬೆಣ್ಚಿಗೆ ಬಪ್ಪಲೆಬೇಕಾಗಿ, ಇದರೆಡೆಲಿ  ಮೋದಿ ಅಜ್ಜᵒ ಕೈಕೊಂಡ ಅತ್ಯುತ್ತಮ ಕ್ರಮ ಹೇದು ನಮ್ಮ ದೇಶದ ಮುಕ್ಕಾಲು ಪಾಲು ಜೆನವೂ ಅನುಮೋದಿಸಿದವಡ. ಅನ್ಯಾಯಲ್ಲಿ ಜೆಮೆಮಾಡಿದೊವು, ಸಮುದ್ರಕ್ಕೆ ಕೊಂಡೋಗಿ ಸೊರುಗಿದವಡ!. ಸೂಟುಮಣ್ಣಿಂಗೆ ಹಾಕಿದವಡ!!.ಮಣ್ಣಡಿಲಿ ಹುಗುದವಡ!!. ಉಮ್ಮಪ್ಪ.. ನವ ಗೊಂತಿಲ್ಲೆ ನಿಜ ವಿವರ!!. ಅಂತೂ ಸದುಪಯೋಗ ಮಾಡದ್ದೆ ಹಾಳು ಮಾಡಿದ್ದಪ್ಪು.  ಈ ಶುದ್ದಿಗಳ ಕೇಟಪ್ಪಗ “ಅಯ್ಯೋ ದೇವರೇ, ಅದೆಷ್ಟು ಶಾಲಗೊ ಇದ್ದು!, ಅದೆಷ್ಟು ಗೆತಿ ಇಲ್ಲದ್ದ ಮಕ್ಕೊ ಇದ್ದವು!!ಅದೆಷ್ಟು ಅನಾಥಾಶ್ರಮ ಇದ್ದು!!!. ಕಾನೂನು ಬಪ್ಪಲೆ ಮದಲೆ ಇವಕ್ಕೆಲ್ಲ ರೆಜ,ರೆಜ ಹಂಚಲೆ ಒಳ್ಳೆ ಬುದ್ಧಿ  ಬಂದಿದ್ರೆ!; ಶೇಖರಿಸಿ  ಮಡಗಿದವರ ಪಾಪದಕೊಡ ಒಂದಿಷ್ಟಾದರೂ ಖಾಲಿ ಆವುತಿತು.ತೆಕ್ಕಂಡವಕ್ಕೂ ಆರ್ಥಿಕ ಅಡಚಣೆ ರೆಜ ಕಮ್ಮಿ ಆವುತಿತು”.  ಹೇಳಿ ಮನಸ್ಸಿಂಗಾದ್ದಂತೂ ಸತ್ಯ. ಹೀಂಗೆ ಅನ್ಯಾಯಲ್ಲಿ ಕೂಡಿ ಮಡಗಿದ ಪೈಸ   ಆರ  ಉಪಯೋಗಕ್ಕೂ ಬಾರದ್ದೆ ಹಾಳಪ್ಪದಕ್ಕೇ “ನಂದನ ಬದುಕ್ಕು ನರಿ-ನಾಯಿ ತಿಂದು ಹೋತು” ಹೇಳ್ತವು ಹೆರಿಯೊವು .

-—೦—-

ಲೇಖಿಕೆ—ವಿಜಯತ್ತೆ.(ವಿಜಯಾಸುಬ್ರಹ್ಮಣ್ಯ)

ವಿಜಯತ್ತೆ

   

You may also like...

9 Responses

 1. ಶ್ಯಾಮಣ್ಣ says:

  ನಿಂಗಳ ವಿವರಣೆ ಸರಿ ಇದ್ದರೂ ಹಿನ್ನಲೆ ಹಾಂಗಲ್ಲ. ನಂದಾವರಲ್ಲಿ ( ಪಾಣೆ ಮಂಗಳೂರು ಹತ್ತರೆ) ನಂದರಾಯ ಹೇಳ್ತ ಮನುಷ್ಯ ಆಳಿಕೊಂಡು ಇತ್ತಿದ್ದು. ಅದು ಹರಿಜನ. ಅದರ ಮೇಲೆ ಬಂಗರಸ ಹೇಳ್ತ ಇನ್ನೊಂದು ಅರಸ ಯುದ್ಧ ಮಾಡ್ತು. ಆವಾಗ ನಂದರಾಯ ಹರಿಜನ ಆದ ಕಾರಣ ಅದರ ಸಹಾಯಕ್ಕೆ ಆರೂ ಬತ್ತವಿಲ್ಲೆ. ಹಾಂಗಾಗಿ ಅದು ಸೋಲ್ತು. ಜೆನಂಗ ಅದರ ಅರಮನೆಯ ಲೂಟಿ ಮಾಡ್ತವು. ಹಾಂಗಾಗಿ “ನಂದರಾಯನ ಬದುಕು ನರಿ ನಾಯಿ ತಿಂದೋತು” ಹೇಳ್ತ ಮಾತು ಚಾಲ್ತಿಗೆ ಬಂತು

 2. Venugopal Kambaru says:

  ಆನೂ ಈ ನುಡಿಗಟ್ಟು ಕೇಳಿದ್ದೆ. ವಿವರಣೆ ಲಾಯಕ ಆಯಿದು.

 3. ಚೆನ್ನೈ ಭಾವ° says:

  ಬಚ್ಚಿಟ್ಟದ್ದು ಪರರಿಂಗೆ ಹೇಳ್ತು ಲೊಟ್ಟೆ ಆತಪ್ಪೋ ! 😛

 4. ಒಪ್ಪ ಕೊಟ್ಟ, ಕಂಬಾರು ಭಾವಂಗೆ ಧನ್ಯವಾದಂಗೊ. ಮತ್ತೆ ಶಾಮಣ್ಣ ಹೇಳಿದ ಬಂಗರಸ ಹೇಳ್ತ ಜೆನ ಇದ್ದಿದ್ದ ಸಂಗತಿ ಓದಿದ ನೆಂಪಿದ್ದು. ಆದರೆ, ನಂದರಾಯನತ್ರೆ ಯುದ್ಧಮಾಡಿ ಸೋಲುಸುವದು, ಹಾಂಗಾಗಿ ಈ ನುಡಿಗಟ್ಟು ಉಂಟಾದ್ದು ಹೇಳ್ವ ವಿಚಾರ ಗೊಂತಿದ್ದತ್ತಿಲ್ಲೆ. ಶಾಮಣ್ಣ…, ಬಚ್ಚಿಟ್ಟಿದ್ದು ಒಂದು ಹಂತಕ್ಕೆ ಪರರಿಂಗೆ, ಆ ಹಂತ ತಪ್ಪೀರೆ……! ಹೀಂಗೆಲ್ಲ ಆಗೆಂಡಿಕ್ಕಲ್ಲೊ.

 5. S.K.Gopalakrishna Bhat says:

  ಬೇಕಲ ರಾಮನಾಯಕರ ನಾಡ ಕತೆಗಳು ಹೇಳುವ ಪುಸ್ತಕಲ್ಲಿ ನಂದರಾಯನ ಕತೆ ಇದ್ದು. ಆ ರಾಜ ಕ್ರೂರಿ. ಅರಮನೆಯ ಉದ್ಯಾನದ ಮಾವಿನ ಮರದ ಹಣ್ಣಿನ ಒಂದು ಹುಡುಗಿ ತಿಂದದ್ದಕ್ಕೆ ಆ ಕೂಸಿನ ತಲೆಯ ಚಂದ್ರಾಯುಧಲ್ಲಿ ಹಾರಿಸಿ ಬಿಟ್ಟತ್ತಡಾ ಅದು ! ಅಷ್ಟು ಕ್ರೂರಿ. ಅದರಲ್ಲಿ ಬಂಗರಸರು ಸೋಲಿಸಿದ್ದು ಹೇಳಿ ಇಲ್ಲೇ. ಕೊಸವರಿಂದ ಅವನ ವಂಶ ಅಳಿಯಿತು- ಹೇಳಿ ಸಂಕ್ಷಿಪ್ತವಾಗಿ ಇದ್ದು.

 6. ಗೋಪಾಲ, ನಿನ್ನತ್ರಂದ ಚುಟುಕಾಗಿ ಆ ವಿಷಯ ಸಿಕ್ಕಿತ್ತದ.( ಎನಗೆ ಸಣ್ಣದಿಪ್ಪಗ ನಂದರಾಯ ಹೇಳಿರೆ , ಒಂದು ಪೈಸೆಕ್ಕಾರ ಹೇಳುಸ್ಸು ಕೇಳಿದ್ದದು ).

 7. sheelalakshmi says:

  ವಿಜಯಕ್ಕ , ಈ ನುಡಿಗಟ್ಟಿನಿಂದಾಗಿ ಶಾಮಣ್ಣನ ಮೂಲಕ ನಂದ ವಂಶದ ಬಗ್ಗೆಯೂ ನುಡಿಗಟ್ಟಿನ ಮೂಲದ ಬಗ್ಗೆಯೂ ತಿಳ್ಕೊಂಡ ಹಾಂಗಾತು. ಶಾಮಣ್ಣ , Nanda dynasty – controversial history ಓದಿದೆ. ಧನ್ಯವಾದಂಗೊ

 8. ಶ್ಯಾಮಣ್ಣಂಗೂ ಶೀಲಂಗೂ ಗೋಪಾಲಂಗೂ ಧನ್ಯವಾದಂಗೊ.(ನಂದರಾಯನ ಇತಿಹಾಸ ಆನು ಓದೆಕ್ಕಷ್ಟೆ)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *