ಪಥ್ಯ/ವ್ಯಾಯಾಮ

ಆನು ಏವತ್ತೂ ಬಸ್ಸಿಳುದು ಕೆಲಸಕ್ಕೆ ನೆಡಕ್ಕೊಂಡು ಹೋಪಗ ನಟೇಶ ಸಿಕ್ಕುಗು.ಅವಂಗೆಂತಾರೂ ಎನ್ನ ಕೆಣಕ್ಕದ್ದೆ ಒರಕ್ಕು ಬಾರ.ಅವನ ನೋಡಿರೆ ಎನಗೂ ಎಂತಾರೂ ಹೇಳದ್ದೆ ಎಡಿಯ.ಎನಗೆ ಮೂಗು ನೋಡ್ತ ಹೊಟ್ಟೆ ಕಂಡ್ರೆ,ಅದುದೇ ಸಣ್ಣ ಪ್ರಾಯದವರಲ್ಲಿ,ಕೋಪವೇ ಬಕ್ಕು.ನಿನ್ನೆ ಸುರು ಮಾಡಿದ°,ಆನೀಗ ಉದಿಯಪ್ಪಗ ಎದ್ದಿಕ್ಕಿ ನೆಡವಲೆ ಸುರು ಮಾಡಿದ್ದೆ,ನೋಡಿ ಒಂದು ತಿಂಗಳಿಲ್ಲಿ ಸಪುರ ಆಗಿ ತೋರ್ಸುತ್ತೆ,ಇರುಳು ಉಂಬದೂ ನಿಲ್ಸಿದ್ದೆ,ಭಾರೀ ಡಯಟ್ ಮಾಡ್ಳೆ ಸುರು ಮಾಡಿದ್ದೆ……ಇತ್ಯಾದಿ.ನವಗೆ ನೆಗೆ ತಡೆಯ.ವಿಷಯ ಗೊಂತಿಲ್ಲದ್ದರೆ ಗೊಂತಿಪ್ಪವರ ಕೇಳುದರಲ್ಲಿ ಎಂತ ತಪ್ಪೋ,ನಾಚಿಕೆಯೋ ನವಗರಡಿಯ.
ನಮ್ಮಲ್ಲಿ ವ್ಯಾಯಮ ಹೇಳಿರೆ ಹೇಂಗೆ,ಡಯಟ್ ಮಾಡುದು ಹೇಂಗೆ ಹೇಳಿ ಸರಿಯಾದ ಕಲ್ಪನೆ ಇದ್ದ ಹಾಂಗೆ ಕಾಣ್ತಿಲ್ಲೆ.ಡಯಾಬಿಟಿಸ್ ಇದ್ದವರ ಹತ್ತರೆ ಪಥ್ಯ ಮಾಡಿ ಹೇಳಿರೆ ಆನು ಶಕ್ಕರೆ ತಿಂತೇ ಇಲ್ಲೆ ಹೇಳ್ತವಷ್ಟೇ ಅಲ್ಲದ್ದೆ ಬೇರೆಂತ ಪಥ್ಯ ಮಾಡೆಕ್ಕು ಹೇಳಿ ಹೇಳ್ಲೆ ಡಾಕ್ಟ್ರಕ್ಕೊಗೆ ಪುರುಸೊತ್ತೂ ಇಲ್ಲೆ,ಕೇಳುವ ಜೆನವೂ ಇಲ್ಲೆ,ಹಾಂಗಾರೆ ದಾರಿ ಎಂತರ,ದೇವರಿಂಗೆ ಗೊಂತು.
ನಮ್ಮ ಆಹಾರಲ್ಲಿ ಎಲ್ಲೊರಿಂಗೂ ಗೊಂತಿಪ್ಪ ಹಾಂಗೆ ಶಕ್ತಿ ಕೊಡ್ತ ಮೂರು ವಸ್ತುಗೊ,ಕಾರ್ಬೊಹೈಡ್ರೇಟ್/ಶರ್ಕರಪಿಷ್ಟ,ಪ್ರೋಟೀನ್,ಸಸಾರಜನಕ(ಸಸಾರ ಅಲ್ಲ:)) ಮತ್ತೆ ಫ್ಯಾಟ್/ಕೊಬ್ಬು.ಕೊಬ್ಬಿಲ್ಲಿ ೯ ಕ್ಯಾಲರಿ ಇದ್ದರೆ ಬಾಕಿ ಎರಡ್ರಲ್ಲಿಯೂ ಸುಮಾರು ೪ ಕ್ಯಾಲರಿ ಪ್ರತಿ ಗ್ರಾಮಿಲ್ಲಿ ಇಕ್ಕು.ನಮ್ಮ ಶರೀರಕ್ಕೆ ದಿನಕ್ಕೆಷ್ಟು ಕ್ಯಾಲರಿ ಬೇಕು ಹೇಳ್ತದರ ನಿಘಂಟು ಮಾಡದ್ದೆ ಪಥ್ಯ ಮಾಡಲೆ ಎಡಿಯ/ಮಾಡಿರೆ ಪ್ರಯೋಜನದ ಬದಲು ಉಪದ್ರವೇ ಅಕ್ಕಷ್ಟೆ.
ಇಂದ್ರಾಣ ಕಾಲಲ್ಲಿ ಶಾರೀರಿಕ ಕೆಲಸದ ಬದಲು ಕೂದೇ ಇಪ್ಪವಕ್ಕೆ ದಿನಕ್ಕೆ ನಮ್ಮ ತೂಕದ ಪ್ರತಿ ಕಿಲೋಗ್ರಾಮಿಂಗೆ ೨೫ ರಿಂದ ೩೦ ಕ್ಯಾಲರಿ ಶಕ್ತಿ ಬೇಕು.ಹೇಳಿರೆ ಸರಾಸರಿ ೬೫ ಕಿಲದ ಮನುಷ್ಯಂಗೆ ೧೭೦೦ ರಿಂದ ೧೮೦೦ ಕ್ಯಾಲರಿ ಬೇಕು.ಅಮೆರಿಕನ್ ಡಯಬಿಟಿಸ್ ಅಸೋಸಿಯೇಶನ್ ಹೇಳ್ತ ಸಂಸ್ತೆ ಹೇಳ್ತ ಪ್ರಕಾರ ೩೦/೪೦/೩೦ ಪ್ರಮಣಲ್ಲಿ ಕೊಬ್ಬು/ಪಿಷ್ಟ/ಸಸಾರಜನಕ(ಫ್ಯಾಟ್/ಪಿಷ್ಟ/ಪ್ರೋಟೀನ್) ತೆಕ್ಕೊಳೆಕ್ಕು.ಅದರ ನಾವೀಗ ರಜಾ ತಿದ್ದುಪಡಿ ಮಾಡಿ ಕೊಬ್ಬು ೨೦% ಸಾಕು ಹೇಳಿ ಮಾಡಿದ್ದು.ಪಿಷ್ಟದ ಪ್ರಮಾಣ ೫೦%೦ಗೆ ಏರ್ಸಿದ್ದು.
ಅಂಬಗ ನಾವು ತಿಂಬ ಆಹಾರಲ್ಲಿ ಏವದು ಯಾವ ಪ್ರಮಾಣಲ್ಲಿದ್ದು ಹೇಳಿ ಗೊಂತಾಯೆಕ್ಕಲ್ಲದೊ?ನಮ್ಮ ಆಹಾರಂಗಳಲ್ಲಿ ಯಾವದು ಎಷ್ಟಿದ್ದು, ಯಾವ ವ್ಯಾಮಲ್ಲಿ ಎಷ್ಟು ಕ್ಯಾಲರಿ ಖರ್ಚಕ್ಕು ಹೇಳಿ ಎನ್ನ ಬ್ಲೋಗಿಲ್ಲಿ ವಿವರವಾಗಿ ಹಾಕಿದ್ದೆ,ಅದರ ಇಲ್ಲಿ ಬರವಲೆ ಕಷ್ಟ.
ನಮ್ಮ ಇರೆಕ್ಕಾದ ತೂಕಂದ ಹೆಚ್ಚಿಪ್ಪವು ಎಂತ ಮಾಡ್ಲಕ್ಕು?
ಆಹಾರ ಕಮ್ಮಿ ಮಾಡುದರಿಂದ ಜವ್ವನಿಗರಿಂಗೆ ವ್ಯಾಯಮ ಮಾಡುದೇ ಒಳ್ಳೆದು.ವ್ಯಾಯಮದ ಗುರಿ ಹೇಂಗಿರೆಕ್ಕು?
ತಿಂಗಳಿಂಗೆ ಒಂದು ಕೇಜಿ(ಮಾವ ಅಲ್ಲ!)ಕಮ್ಮಿ ಮಾಡಿಯೊಂಬಲೆ ಪ್ರಯತ್ನ ಸಾಕು,ಅದರಿಂದ ಹೆಚ್ಚು ಸಾಧನೆ ಬೇಡ.ಅಂಬಗ ದಿನಕ್ಕೆ ೩೦ ರಿಂದ ೪೦ ಗ್ರಾಮಿನಷ್ಟು ಕಮ್ಮಿ ಆಯೆಕ್ಕು.ಅಷ್ಟಾಯೆಕ್ಕಾದರೆ ದಿನಾ ೩೬೦ ಕ್ಯಾಲರಿ ಹೆಚ್ಚು ಖರ್ಚಾಯೆಕ್ಕು.ಒಂದು ಘಂಟಗೆ ಆರು ಕಿಲೋಮೀಟರ್ ನೆಡದರೆ ಇಷ್ಟು ಖರ್ಚಕ್ಕು.
ಪಥ್ಯ ಮಾಡ್ತರೆ ಹೇಂಗೆ?
ಯೇವಗಳೂ ಪಥ್ಯ ಮಾಡುವವು ಸಕ್ಕರೆಯ ಅಂಶ ಕಮ್ಮಿ ಮಾಡೆಕ್ಕಲ್ಲದ್ದೆ ಪ್ರೋಟೀನ್ ಅಲ್ಲ.ಕೊಬ್ಬಿನ ಅಲ್ಪ ಪ್ರಮಾಣಲ್ಲಿ ತೆಕ್ಕೊಳೆಕ್ಕೇ.
ಸುಲಾಬದ ದಾರಿ ಹೇಳಿರೆ ಸಕ್ಕರೆಯ ಬಿಟ್ಟೇ ಬಿಡುದು.ಒಬ್ಬ° ದಿನಲ್ಲಿ ನಾಲ್ಕು ಸರ್ತಿ ಕಾಪಿಯೋ ಚಾಯವೋ ಕುಡಿವವ° ಕಮ್ಮಿಲಿ ೪೦ ಗ್ರಾಮ್ ಸಕ್ಕರೆ ಉಪಯೋಗ ಮಾಡ್ತ,೧೬೦ ಕ್ಯಾಲರಿ ಅಲ್ಲಿ ಕಮ್ಮಿ ಆತದ!ಅನಾವಶ್ಯಕ ಡಬ್ಬಿಲಿಪ್ಪ ತಿಂಡಿ ತಿಂಬದರ ಬಿಟ್ಟು ಇರುಳಿಂಗೆ ಅಶನ ಒಂದು ಮುಷ್ಟಿ ಕಮ್ಮಿ ಮಾಡಿ ಬೆಂದಿ ಬಾಗಲ್ಲಿ ಹೊಟ್ಟೆ ತುಂಬ್ಸಿರೆ ಆತು!
ಡಯಬಿಟಿಸ್ ಇಪ್ಪವಕ್ಕೆ ಮಾಂತ್ರ ಅವನ ಸ್ತಿತಿ ನೋಡಿಯೇ ಪಥ್ಯ ಹೇಳುದು ಒಳ್ಳೆದು.
ಅಂತೂ ನಾವಿಂದು ತಿಂಬದರ ಕಮ್ಮಿ ಮಾಡದ್ದೆ ಬೇರೆ ದಾರಿಯೇ ಇಲ್ಲೆ.ಆನು ಎನ್ನ ಸುರುವಾಣ ಇಪ್ಪತ್ತೈದು ವರ್ಷಲ್ಲಿ ನೋಡಿದಷ್ಟು ಬೀಪಿ,ಡಯಬಿಟಿಸ್ ಕೇಸುಗಳ ಕಳುದ ಐದು ವರ್ಷಲ್ಲಿ ನೋಡಿದ್ದೆ ಹೇಳಿರೆ ಆರಿಂಗಾರೂ ಅರ್ಥ ಅಕ್ಕು ನಮ್ಮ ಸಮಸ್ಯೆ ಎಷ್ಟಿದ್ದು,ನಮ್ಮ ದೇಶ ಜಗತ್ತಿಲ್ಲೇ ಹೆಚ್ಚು ಡಯಬಿಟಿಸ್ ರೋಗಿಗಳ ದೇಶ ಹೇಳಿ ಅಪ್ಪಲಿದ್ದು ಹೇಳ್ತದು.
ಒತ್ತಾಯ ಮಾಡಿ ಪಾಯ್ಸ ತಿನ್ಸಿರೆ ಎಂತಕ್ಕು?(ಎರಡು ಸೌಟು ಪಾಯಸಲ್ಲಿ ನಮ್ಮ ಒಂದು ಹೊತ್ತಿನ ಊಟಲ್ಲಿಪ್ಪಷ್ಟು ಕ್ಯಾಲರಿ ಇರ್ತು ಹೇಳುದು ಇಲ್ಲಿ ಪ್ರಸ್ತುತ ಅಲ್ಲದೋ?
ಎನ್ನ ಬ್ಲೋಗಿನ ಸಂಕೋಲೆ ಇದಾ,kgbhatvittal.blogspot.com

ಕೇಜಿಮಾವ°

   

You may also like...

11 Responses

 1. Krishnamohana Bhat says:

  ಆನು ಸಣ್ಣ ಪ್ರಾಯಲ್ಲಿ ಹನ್ನೆರಡು ಚಪಾತಿ ತಿ೦ದೊ೦ಡ್ಡಿದ್ದಿದ್ದೆ ಹಾ೦ಗೆ ಸರಿಯಾಗಿ ಸೂರ್ಯ ನಮಸ್ಕಾರವೂದೆ ಮಾಡಿಯೊ೦ಡಿದ್ದಿದ್ದೆ ಅ೦ದು ಇ೦ದು ಕೆಲರಿ ನೋಡಿ ತಿ೦ಬಲೆ ಎನಗೆ ಗೊ೦ತಿಲ್ಲೆ.ಆರೋಗ್ಯಕ್ಕೆ ಈ ವರೆಗೆ ಯಾವ ತೊ೦ದರೆಯು ಇಲ್ಲೆ.ಆಪ್ರಾಯಲ್ಲಿ ಎಪ್ಪತೈದು ಕಿಲೊವಿನ ನೆಲ೦ದ ಹಾ೦ಗೆ ಎತ್ತಿಯೊ೦ಡಿತ್ತಿದ್ದೆ.ಈಗ ಹೇಳೀರೆ ನ೦ಬವು.ಅ೦ದೂ ಅಷ್ಟೆ ಕಾ೦ಬಲೆ ತೋರ ಇತ್ತಿದ್ದಿಲ್ಲೆ.ಇರಳಿ ಒಳ್ಳೆ ವಿಷಯ ಒಳ್ಳೆ ಲೇಖನ.ಒಪ್ಪ೦ಗಳೊಟ್ಟಿ೦ಗೆ

  • ಬೊಳುಂಬು ಮಾವ says:

   ಜವ್ವನಲ್ಲಿ ನಿಂಗೊ 75 ಕಿಲೊ ನೆಗ್ಗಿದ್ದಿ ಹೇಳಿರೆ ಎನಗೆ ನಿಜವಾಗಿಯೂ ನಂಬಿಕೆ ಬತ್ತಿಲ್ಲೆ ಮಾವ. ನಿಜವಾಗಿಯು ?..

 2. ಲೈಕ ಆಯಿದು ಮಾವ ಬರದ್ದದು.

 3. ಓದಿ ಪ್ರಯೋಜನ ಆರಿಂಗಾರೂ ಆದರೆ ಬರದ್ದಕ್ಕೆ ಸಾರ್ಥಕ ಅಲ್ಲದ್ದೆ ಲಾಯಕಾಯಿದು ಹೇಳಿರೆ ಅಲ್ಲ.ಇಂದು ನಮ್ಮ ಆರೋಗ್ಯ ಹಾಳಾವುತ್ತಾ ಇದ್ದು,ಬೇಜಾರಾವುತ್ತು ಅಳಿಯೋ.

 4. ಬೊಳುಂಬು ಮಾವ says:

  ಎರಡು ಸೌಟು ಪಾಯಸ ಹೇಳಿರೆ ನಾವು ಮಾಡೆಕಾದ ಒಂದು ಹೊತ್ತಿನ ಊಟಕ್ಕೆ ಸಮ ಹೇಳಿ ಹೇಳ್ತಾ ಕೇಜಿ ಮಾವ ಎಲ್ಲೋರಿಂಗು ಅರ್ಥ ಆವ್ತ ಹಾಂಗೆ, ಕೆಲರಿ ಲೆಕ್ಕಾಚಾರವ ಹೇಳಿದ್ದವು. ಅಕ್ಕರೆಲಿ ಸಕ್ಕರೆ ಮುಕ್ಕಿರೆ ಇಲ್ಲದ್ದ “ಸೀಕು” ಎಲ್ಲ ಬಕ್ಕು, ಅದಕ್ಕೆ ಸಿಕ್ಕು ಹಾಕೆಳೆಡಿ ಹೇಳಿ ಜಾಗ್ರತೆ ಹೇಳಿದ್ದವು ಡಾಕ್ಟ್ರು ಮಾವ. ಅವು ಹೇಳಿದ ಹಾಂಗೆ ನೆಡವೊ.

 5. ಸುಲಾಬಲ್ಲಿ ಪಥ್ಯ ಮಾಡುದು ಹೇಂಗೆ ಹೇಳಿ ವಿವರಿಸಿದ್ದಕ್ಕೆ ಕೇಜಿಮಾವಂಗೆ ಧನ್ಯವಾದಂಗೊ. ಮತ್ತೆ ಕೇಜಿ ಹೆಚ್ಚು ಮಾಡುಲೆ ಮೇಲೆ ತಿಳಿಸಿದ್ದರ ವಿರುದ್ಧ ರೀತಿಲಿ ಪಥ್ಯ ಮಾಡಿದರೆ ಸಾಕನ್ನೆ…??? 😉
  ಒಪ್ಪಂಗಳೊಟ್ಟಿಂಗೆ…

 6. ಶರ್ಮಪ್ಪಚ್ಚಿ says:

  ತೂಕ ಇಳುಸುಲೆ ಹಲವಾರು advertisement ಗೊ ಬಪ್ಪದರಲ್ಲಿ, ಕೆಲವೇ ದಿನಂಗಳಲ್ಲಿ ತುಂಬಾ ತೂಕ ಇಳುಸಲೆ (10-15 kg) ಆವ್ತು ಹೇಳಿ ಹೇಳ್ತವು. ಅದರ ಪ್ರಯೋಗಕ್ಕೆ ಇಳುದು ತೊಂದರೆ ಅನುಭವಿಸಿದವು ಇದ್ದವು. ತಿಂಗಳಿಂಗೆ ಒಂದು ಕಿಲೋದಷ್ಟು ಇಳುಸಲೆ ಎಂತ ಮಾಡ್ಲಕ್ಕು ಹೇಳಿ ಲಾಯ್ಕಲ್ಲಿ ತಿಳಿಸಿಕೊಟ್ಟಿದಿ. ಧೃಢ ಮನಸ್ಸು ಇದ್ದರೆ ತೂಕ ಕಮ್ಮಿ ಮಾಡ್ಲೆ ಬೇಕಾದ ಸೂತ್ರಂಗಳನ್ನು ತಿಳಿಸಿ ಕೊಟ್ಟದಕ್ಕೆ ಧನ್ಯವಾದಂಗೊ.
  ಸಕ್ಕರೆ ಆಗ ಹೇಳಿರೆ ಬೆಲ್ಲ ಅಕ್ಕು ಹೇಳಿ ಪಥ್ಯ ಮಾಡುವವು ಇದ್ದವು.ಕಾಪಿಗೆ ಸಕ್ಕರೆ ಹಾಕದ್ದೆ ಕುಡಿಯಿರಿ ಹೇಳಿ ಡಾಕ್ಟ್ರು ಒಬ್ಬರಿಂಗೆ ಸಲಹೆ ಮಾಡಿದವು. ಅವು ಅದ್ರ strict ಆಗಿ ಕಾರ್ಯಗತ ಮಾಡಿದವು. ಹೋದಲ್ಲೆಲ್ಲಾ ಚಪ್ಪೆ ಕಾಪಿ ಮಾಡ್ಸಿ ಕುಡುದವು. ಆದರೆ ಸಿಹಿ ತಿಂಡಿ, ಪಾಯಸ ಬಿಟ್ಟಿದವಿಲ್ಲೆ.!!!

  • ಎಲ್ಲೋರೂ ಶಕ್ಕರೆ ತಿಂಬಲಾಗ ಹೇಳಿರೆ ಸಕ್ಕರೆಯ ಅಂಶ ಇಪ್ಪದರ ಯಾವದರನ್ನೂ ಆಗ ಹೇಳಿ ಅರ್ಥ ಮಾಡಿಯೊಳ್ತವಿಲ್ಲೆ,ಅಷ್ಟು ಗೊಂತಿಕ್ಕನ್ನೆ ಹೇಳಿ ದಾಕ್ಟ್ರಕ್ಕೊ ತಿಳ್ಕೊಳ್ತವು,ಚಪ್ಪೆ ಕಾಪಿ ಕುಡುದು ಪಾಯಸ ತಿಂಗು ಹೇಳಿ ತಲಗೆ ಹೋಯೆಕ್ಕನ್ನೆ.ಇನ್ನು ಪಥ್ಯ ಹೇಳುವಗ ಬಿಡುಸಿ ಹೇಳೆಕ್ಕವುತ್ತು,ಆನು ಹೇಳ್ತೆ ಆದರೆ ಕೇಳ್ತವು ಕಮ್ಮಿ,ಕಾಯಿಲೆ ಬಪ್ಪ ಮದಲೇ ಪಥ್ಯ ಮಾಡುದು ನವಗೆ ಅರ್ಥ ಆಗದ್ದ ಸಂಗತಿ,ಬಂದ ಮೇಲೆ ಮಾಡುದು ರಜಾ ಕಷ್ಟವೇ,ತಿಂಬಲಾಗ ಹೇಳಿಅಪ್ಪಗ ಕೊದಿ ಅಪ್ಪದು ಎಂಗೊಗೆ ಗೊಂತಿಪ್ಪ ವಿಚಾರವೇ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *