ಪರಿಚಯ

November 28, 2010 ರ 4:57 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮವು ಎಲ್ಲಾ ಕ್ಷೇತ್ರಲ್ಲಿಯೂ ಹೆಸರು ಮಾಡಿಯೊಂಡಿಪ್ಪದು ಹೊಸ ಶುದ್ದಿ ಏನೂ ಅಲ್ಲಾದ.ಎಂಗಳ ಮುಗುಳಿ ಸುಬ್ಬಣ್ಣ ಭಟ್ರು ರಜಾ ವಿಷೇಶ.

ಕನ್ನಡ ಪೇಪರು ಓದುವವು ಇತ್ತೀಜಗೆ ಇವರ ವಿಷಯ ಓದಿಪ್ಪಿ.

ವಿಟ್ಳದ ಹತ್ತರೆ ಕೊಡಂಗೆ ಹೇಳ್ತಲ್ಲಿ ವಿಶ್ರಾಂತ ಅಲ್ಲ ಕೆಲಸಂದ ನಿವೃತ್ತ ಜೀವನ ನೆಡೆತ್ತಾ ಇದ್ದು ಇವರದ್ದು,ಹಾಂಗೆ ಹೇಳಿ ಸುಮ್ಮನೆ ಕೂಪ ಜಾತಿ ಅಲ್ಲ.ಸುರತ್ಕಲ್ಲಿಲ್ಲಿ ಎನ್ ಐ ಟಿ ಕೆ ಲಿ ಕ್ರಯೋಜೆನಿಕ್ಸ್ ಹೇಳುತ್ತ ವಿಷಯಲ್ಲಿ ಎಮ್ ಟೆಕ್ ಮತ್ತು ಪಿ ಹೆಚ್ ಡಿ ಮಾಡುತ್ತ ಮಕ್ಕೊಗೆ ಕಲಿಶುತ್ತಾ ಇದ್ದವು.

ನಲುವತ್ತು ವರ್ಷ ಇಸ್ರೋಲ್ಲಿ ಕ್ರಯೋಜೆನಿಕ್ಸ್ ವಿಭಾಗದ ಡೈರೆಕ್ಟರ್ ಆಗಿತ್ತಿದ್ದವು.ನಮ್ಮ ರಾಷ್ಟ್ರಪತಿ ಆಗಿತ್ತಿದ್ದ ಅಬ್ದುಲ್ ಕಲಾಮ್ ಅವರೊಟ್ಟಿಂಗೇ ೨೦ ವರ್ಷ ಕೆಲಸ ಮಾಡಿದ್ದವು,ಹಾಂಗೆ ಹೇಳಿ ಆರ ಹತ್ರೂ ಹೇಳಿಯೊಂಡು ಬಪ್ಪ ಜೆನ ಅಲ್ಲ.

ಯಾವಗಲೋ ಒಂದರಿ ಅಸೌಖ್ಯಂದಾಗಿ ಅವರ ನೋಡೆಕ್ಕಾಗಿ ಬಂದು ಎನಗೆ ಪರಿಚಯ ಆತು.ತಿರುವನಂತಪುರಕ್ಕೆ ಬನ್ನಿ ಹೇಳಿ ಅವು ಕೊಟ್ಟ ಕಾರ್ಡ್ ನೋಡಿಯೇ ಅವು ಅಷ್ಟು ದೊಡ್ಡ ಕೆಲಸಲ್ಲಿಪ್ಪದು ಹೇಳಿ ನವಗೆ ಗೊಂತಾದ್ದು.

ಊರಿಂಗೆ ಬಂದಿಪ್ಪಲೆ ಹೇಳಿ ಮನೆ ಕಟ್ಟುಸುವಾಗ ಸುಬ್ಬಣ್ಣ ಭಟ್ರು ಹದ್ನೈದು ವರ್ಷ ಹಿಂದೆಯೇ  ಮನಗೆ ಕರೆಂಟಿಂಗೆ ಸೋಲಾರ್ ವಿದ್ಯುತ್ ವ್ಯವಸ್ತೆ ಮಾಡಿತ್ತಿದ್ದವು,ಮಳೆಗಾಲಲ್ಲಿ ಹೇಂಗಪ್ಪ ಕರೆಂಟು ಹೇಳಿ ಕೇಳಿಯಪ್ಪಗಳೇ ನವಗೆ ಗೊಂತಾದ್ದದು ಸೋಲಾರ್ ಬೆಶಿ ನೀರಿಂಗೆ ಮಾಂತ್ರ ಬೆಶಿಲು ಬೇಕಾದ್ದು,ಕರೆಂಟಿಂಗಲ್ಲ ಹೇಳಿ.ಇವರಲ್ಲಿ ಇಡೀ ಮನಗೆ ಕರೆಂಟು ಸೋಲಾರಿಂದೇ,ಫೇನು,ಗ್ರೈಂಡರು,ಮಿಕ್ಸಿ,ಲೈಟು ಎಲ್ಲವೂ.

ಇವರ ಬಗ್ಗೆ ಕೆಲವು ಪೇಪರುಗಳಲ್ಲಿ ಬಯಿಂದು,ಆದರೆ ಆರುದೇ ಇವರ ಸೌರ ವಿದ್ಯುತ್ತಿನ ಬಗ್ಗೆ ಬರದ್ದು ನೋಡಿದ್ದಿಲ್ಲೆ.

ವಿಜ್ಞಾನಿ ಆದ ಕಾರಣ ಸಹಜವಾಗಿಯೇ ತಲೆ ಹೊಸ ವಿಷಯಂಗಳ ಬಗ್ಗೆ ಕೆಲಸ ಮಾಡ್ತನ್ನೆ,ಸುಬ್ಬಣ್ಣ ಭಟ್ರು ಅಡಕ್ಕೆ ಒಣಗುಸಲೆ ಪ್ಲೇಸ್ಟಿಕ್ಕಿನ ಮನೆ ಮಾಡಿದವು,ಎಲ್ಲೊರೂ ಮಾಡಿದವೇ,ಆದರೆ ಇವರದ್ದು ಮಾಂತ್ರ ಅಡಕ್ಕೆ ಒಣಗುಸಲೆ ಭಾರೀ ಲಾಯಕ ಹೇಳಿ ನೋಡಿದವು ಹೇಳಿದವು,ನವಗೆ ಅದೆಲ್ಲ ಅರಡಿಯ.

ನಮ್ಮ ಪ್ರಾಚೀನ ಹೇಳಿರೆ ವೇದ ಕಾಲದ ಗಣಿತದ ಬಗ್ಗೆ ಅದ್ಭುತ ಪಾಂಡಿತ್ಯ ಇಪ್ಪ ಸುಬ್ಬಣ್ಣ ಭಟ್ರಿಂಗೆ ಗೊಂತಿಲ್ಲದ್ದ ವಿಷಯ ಇರ,ಕುತೂಹಲ ಇಲ್ಲದ್ದ ವಿಷ್ಯವೂ ಇಲ್ಲೆ.

ರಶ್ಯದ ಮೋಸ್ಕೋ ವಿಶ್ವವಿದ್ಯನಿಲಯಲ್ಲಿ ಕೆಲಸ ಮಾಡಿ ಅನುಭವ ಇಪ್ಪ ಇವಕ್ಕೆ ವೇದ ಗಣಿತದ ಪುಸ್ತಕ ರಶ್ಯನ್ ಭಾಶೆಲಿ ಬರದ ಹೆಗ್ಗಳಿಕೆ ಇದ್ದು,ಹಾಂಗೆ ಹೇಳಿ ಇದು ಆರಿಂಗೂ ಗೊಂತಿರ,ಅವರ ಒಟ್ಟಿಂಗೆ ಕೆಲಸ ಮಾಡಿದವಕ್ಕೆ ಬಿಟ್ಟು.

ಅವು ಎನ್ನ ಹತ್ತರೆ ಆರೋಗ್ಯದ ಬಗ್ಗೆ ಸಲಹೆಗೆ ಬಂದರೆ ಎನಗೆ ಒಂಥರಾ ಅಳುಕು,ಅವರ ಎಲಾ ಪ್ರಶ್ನೆಗೊಕ್ಕೆ ಉತ್ತರ ಕೊಡೆಕಲ್ಲದೋ! ಯೋಚನೆ ಮಾಡ್ತ ಕಂಪ್ಯುಟರ್ ಮಾಡ್ಳೆ ಇನ್ನೂ ಏಕೆ ಆಯಿದಿಲ್ಲೆ ಹೇಳಿ ಎನಗೆ ಮೆದುಳಿನ ಬಗ್ಗೆ ಪಾಠ ಮಡಿದ್ದು ಇದೇ ಸುಬ್ಬಣ್ಣ ಭಟ್ರು!

ಸೋಲಾರ್ ಪವರ್,ಅಡಕ್ಕೆ ಒಣಗುಸುವ ಮನೆ ಅಲ್ಲದ್ದೆ ಈಗ ಒಂದು ನಾಲ್ಕು ಲಕ್ಶ (ಸ್ವಂತ)ಖರ್ಚಿಲ್ಲಿ ಸೌರ/ಜಲ/ವಾಯು ವಿದ್ಯುತ್ ಉತ್ಪಾದನೆ ಮಾಡುವ ಒಂದು ಪ್ರೋಜೆಕ್ಟಿಂಗೆ ಕೈ ಹಾಕಿದ್ದವು,ಬಹುಶ ಮಗನ ಮದುವೆಯ ಗೌಜಿಲಿ ರಜಾ ನಿಧಾನ ಆವುತ್ತೋ ಏನೋ.ಎಷ್ಟು ಸಣ್ಣ ಮಕ್ಕಳ ಹತ್ತರೂ ಲಾಯಕಲ್ಲಿ ಮತಾಡುವ ಇವರ ಹಳ್ಳಿಲಿ ಮಾಡಿದ ಜನಕ್ಕೆ ಉಪಯೋಗ ಅಪ್ಪ ಹಾಂಗಿಪ್ಪ ಕೆಲಸವ ಕಣ್ಣಿಲ್ಲಿ ನೋಡೆಕ್ಕಾರೆ ಶನಿವಾರ ಒಂದು ದಿನ  ವಿಟ್ಳಂದ ಎರಡು ಕಿ.ಮೀ ದೂರಲ್ಲಿಪ್ಪ ಇವರ ರಜತಗಿರಿ ಮನಗೆ ಹೋಪಲಕ್ಕು.ಫೋನ್ ಮಾಡಿ ಕೇಳಿ ಹೋಗಿ.

ಡಿಪ್ಲೊಮೇಟಿಕ್ ಪಾಸ್ ಪೋರ್ಟ್ ಇಪ್ಪ ವ್ಯಕ್ತಿ ನಾವು ನೋಡಿದ್ದು ಇವರ ಮಾಂತ್ರ! ಫೋ ನಂಬ್ರ-08255239081.

ಪರಿಚಯ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  ಮುಗುಳಿ ಸುಬ್ಬಣ್ಣ ಭಟ್ಟರ ಪರಿಚಯ ಮಾಡಿಕೊಟ್ಟ ಕೇಜಿಮಾವ೦ಗೆ ಅನಂತ ಧನ್ಯವಾದಂಗ…

  “ಊರಿಂಗೆ ಬಂದಿಪ್ಪಲೆ ಹೇಳಿ ಮನೆ ಕಟ್ಟುಸುವಾಗ ಸುಬ್ಬಣ್ಣ ಭಟ್ರು ಹದ್ನೈದು ವರ್ಷ ಹಿಂದೆಯೇ ಮನಗೆ ಕರೆಂಟಿಂಗೆ ಸೋಲಾರ್ ವಿದ್ಯುತ್ ವ್ಯವಸ್ತೆ ಮಾಡಿತ್ತಿದ್ದವು,ಮಳೆಗಾಲಲ್ಲಿ ಹೇಂಗಪ್ಪ ಕರೆಂಟು ಹೇಳಿ ಕೇಳಿಯಪ್ಪಗಳೇ ನವಗೆ ಗೊಂತಾದ್ದದು ಸೋಲಾರ್ ಬೆಶಿ ನೀರಿಂಗೆ ಮಾಂತ್ರ ಬೆಶಿಲು ಬೇಕಾದ್ದು,ಕರೆಂಟಿಂಗಲ್ಲ ಹೇಳಿ.ಇವರಲ್ಲಿ ಇಡೀ ಮನಗೆ ಕರೆಂಟು ಸೋಲಾರಿಂದೇ,ಫೇನು,ಗ್ರೈಂಡರು,ಮಿಕ್ಸಿ,ಲೈಟು ಎಲ್ಲವೂ.”

  “ನಮ್ಮ ಪ್ರಾಚೀನ ಹೇಳಿರೆ ವೇದ ಕಾಲದ ಗಣಿತದ ಬಗ್ಗೆ ಅದ್ಭುತ ಪಾಂಡಿತ್ಯ ಇಪ್ಪ ಸುಬ್ಬಣ್ಣ ಭಟ್ರಿಂಗೆ ಗೊಂತಿಲ್ಲದ್ದ ವಿಷಯ ಇರ,ಕುತೂಹಲ ಇಲ್ಲದ್ದ ವಿಷ್ಯವೂ ಇಲ್ಲೆ.”

  “ಸೋಲಾರ್ ಪವರ್,ಅಡಕ್ಕೆ ಒಣಗುಸುವ ಮನೆ ಅಲ್ಲದ್ದೆ ಈಗ ಒಂದು ನಾಲ್ಕು ಲಕ್ಶ (ಸ್ವಂತ)ಖರ್ಚಿಲ್ಲಿ ಸೌರ/ಜಲ/ವಾಯು ವಿದ್ಯುತ್ ಉತ್ಪಾದನೆ ಮಾಡುವ ಒಂದು ಪ್ರೋಜೆಕ್ಟಿಂಗೆ ಕೈ ಹಾಕಿದ್ದವು”

  ಹೀಂಗಿದ್ದ ವಿಷಯಂಗ ಎಂಗೊಗೆಲ್ಲ ತುಂಬಾ… ತುಂಬಾ… ಆಸಕ್ತಿಯ ವಿಷಯಂಗ… ಬೈಲಿಲ್ಲಿ ಈ ವಿಷಯಂಗ ಬಪ್ಪ ಹಾಂಗೆ ಎಂತಾರೂ ಮಾಡುಲೆ ಎಡಿಗೋ… ಅನಂತ ಧನ್ಯವಾದಂಗ…

  [Reply]

  VA:F [1.9.22_1171]
  Rating: 0 (from 0 votes)
 2. ಕೇಜಿಮಾವ°
  ಕೆ.ಜಿ.ಭಟ್

  ತುಂಬಾ ಹತ್ತರೆ ಇದ್ದವು ಬೈಲಿಂಗೆ,ಅವರ ವಿಷಯ ಎಲ್ಲ ಬರೆಯೆಕ್ಕಾರೆ ಒಂದು ಪುಸ್ತಕವೇ ಬೇಕಕ್ಕು.ತುಂಬ ಸರಳ ಮನುಷ್ಯ°.ಆಸಕ್ತಿ ಇದ್ದರೆ ಅವರ ಭೇಟಿ ಅಪ್ಪದು ಕಷ್ಟ ಏನಲ್ಲ.ಮದಲೇ ತಿಳಿಶಿ ಹೋಯೆಕ್ಕಷ್ಟೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಪವನಜಮಾವಹಳೆಮನೆ ಅಣ್ಣಶಾ...ರೀವೆಂಕಟ್ ಕೋಟೂರುವಾಣಿ ಚಿಕ್ಕಮ್ಮಚೆನ್ನೈ ಬಾವ°ಕಾವಿನಮೂಲೆ ಮಾಣಿರಾಜಣ್ಣಸುಭಗನೆಗೆಗಾರ°ಕಳಾಯಿ ಗೀತತ್ತೆಅನುಶ್ರೀ ಬಂಡಾಡಿನೀರ್ಕಜೆ ಮಹೇಶಕಜೆವಸಂತ°ಶಾಂತತ್ತೆಶ್ರೀಅಕ್ಕ°ದೀಪಿಕಾಮಾಲಕ್ಕ°ಶುದ್ದಿಕ್ಕಾರ°ಸರ್ಪಮಲೆ ಮಾವ°ಪುಣಚ ಡಾಕ್ಟ್ರುಬಟ್ಟಮಾವ°ಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ