ಪ್ರವಾಸ ಕಥನದ ಬಿಡುಗಡೆ

April 22, 2011 ರ 9:13 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

phot of book release
ಪುಸ್ತಕದ ಲೋಕಾರ್ಪಣೆ

ಶ್ರೀಮತಿ ಸರಸ್ವತಿ ಶಂಕರ್ ಬರೆದ ಪ್ರವಾಸ ಕಥನ ‘ಚಿನ್ನದ ನಾಡಿಂದ ಹೊನ್ನ ದ್ವಾರದತ್ತ ‘ ಕಳೆದ ೨೪ಕ್ಕೆ ಬೆಂಗಳೂರಿಲಿ ನಡೆದ ಕಾರ್ಯ ಕ್ರಮಲ್ಲಿ ಲೋಕಾರ್ಪಣೆ ಆತು.ರವಿ ಪ್ರಕಾಶನ,ಬೆಂಗಳೂರು -ಇವು ಪ್ರಕಾಶಕರು-ಪ್ರಕಟಿಸಿದ್ದ ಒಟ್ಟು ಐದು ಗ್ರಂಥಂಗೊ ಅಂದು ಅಲ್ಲಿ ಬಿಡುಗಡೆ ಆಯಿದು.

ಕೆಲವು ಊರುಗೊಕ್ಕೆ ಭೇಟಿ  [ದೇಶವಿದೇಶಲ್ಲಿ] ನೀಡಿದ ಇವು,ತುಂಬಾ ಶ್ರಮಪಟ್ಟು ಮಾಹಿತಿ ಸಂಗ್ರಹ ಮಾಡಿ ಈ ಕೃತಿ ಬರೆದ್ದವು.ಇದರಲ್ಲಿ ಹಲವು ಲೇಖನಂಗೊ ಈಗಾಗಲೇ ಪತ್ರಿಕೆಗಳಲ್ಲಿಯೂ ಪ್ರಕಟ ಆಯಿದು.ಈಗ ಪುಸ್ತಕರೂಪಲ್ಲಿ ಬಂತು.

ಈ ಕಾರ್ಯಕ್ರಮದ ಅಧ್ಯಕ್ಷತೆ ಹಿರಿಯ ಶಿಕ್ಷಣವೇತ್ತ ಪ್ರೊ॥ಕೆ.ಇ.ರಾಧಾಕೃಷ್ಣ ವಹಿಸಿದವು.ಕೃತಿ ಬಿಡುಗಡೆ ಮಾಡಿದವರು ನಾಡಿನ ಹೆಸರಾಂತ ಸಾಹಿತಿ-ಡಾ॥ನಾ.ಮೊಗಸಾಲೆ.

ವಿದ್ವಾಂಸ ಡಾ।।ಕಬ್ಬಿನಾಲೆ ವಸಂತ ಭಾರದ್ವಾಜ ಮುಖ್ಯ ಅತಿಥಿಯಾಗಿ ಇತ್ತಿದ್ದವು.

ಪಟಲ್ಲಿ ಎಡಂದ ಬಲತ್ತಿಂಗೆ ನೋಡಿದರೆ ಎರಡನೆಯವು ಸರಸ್ವತಿ ಶಂಕರ್.

ಸರಸ್ವತಿ ಶಂಕರ್ ಬರೆದ ಎರಡು ಕಥಾಸಂಕಲನ [ತೆನೆಗಳು ಮತ್ತೆ ಸುಮಸಂಚಯ] ಮತ್ತೆ ಎರಡು ಕಾದಂಬರಿ [ಜ್ವಾಲೆ ಮತ್ತೆ ಬಿರುಗಾಳಿ ] ಈ ಮೊದಲು ಪ್ರಕಟ ಆಯಿದು.

ಕುಂಬಳೆಯ ಶೇಡಿಗುಮ್ಮೆ ಕೃಷ್ಣ ಭಟ್ಟರ ಮಗಳಾದ ಇವು ,ಬೆಂಗಳೂರಿಲಿದ್ದವು. ಒಂದು ಖಾಸಗಿ ಕೋಲೇಜಿಲಿಗಣಿತ ಉಪನ್ಯಾಸಕಿ ಆಗಿ ನಿವೃತ್ತರು.ಇವರ ಪತಿ ಡಾ॥ಶಂಕರ ಭಟ್,ಸುಳ್ಯ[ಇವು ಬಂಟ್ವಾಳ ತಾಲೂಕಿನ ಮಂಚಿ ಸುಳ್ಯದವು] ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಪ್ರೊಫೆಸರ್ ಆಗಿ,ನಿವೃತ್ತರು.ಇವೂ ಕೂಡಾ  ಸಸ್ಯಶಾಸ್ತ್ರ ಮತ್ತೆ ಸೂಕ್ಷ್ಮಜೀವಿಶಾಸ್ತ್ರ ಕುರಿತಾದ ಹಲವಾರು ಪಾಠಪುಸ್ತಕ ಬರೆದ್ದವು.ಇಬ್ಬರೂ ಸಾಹಿತ್ಯಾಸಕ್ತಿ ಇಪ್ಪವರು.

ಸರಸ್ವತಿ ಶಂಕರ್ ಗೆ ಈ ಕೃತಿ ಬರೆವಲೆ ಪ್ರೋತ್ಸಾಹ ಕೊಟ್ಟು ,ಒಂದು ಒಳ್ಳೆ ಕೃತಿ ಬೆಳಕಿಂಗೆ ಬಪ್ಪ ಹಾಂಗೆ ಮಾಡಿದ್ದರಲ್ಲಿ ಅವರ ಯಜಮಾನರ ಪಾತ್ರ ದೊಡ್ಡದು.

ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಇವರಿಬ್ಬರಿಂದಲೂ  ನಡೆಯಲಿ ಹೇಳಿ ಹಾರೈಸುವೊ.

ಪ್ರವಾಸ ಕಥನದ ಬಿಡುಗಡೆ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಈ ಕಾರ್ಯಕ್ರಮವ ನೋಡುಲೆ ಆನೂ ಹೋಗಿತ್ತಿದ್ದೆ.ಪೂರ್ವದ ಥೈಲೇ೦ಡಿ೦ದ ಪಶ್ಚಿಮದ ಅಮೇರಿಕ ವರೆಗೆ ಪ್ರವಾಸ ಮಾಡಿ ವಿಶಿಷ್ಟ ರೀತಿಲಿ ಈ ಪುಸ್ತಕ ಬರದ್ದವು.ಈ ದ೦ಪತಿಗಳ ಸರಳತೆ ನವಗೆಲ್ಲ ಮಾದರಿ ಆಯೆಕ್ಕಾದ್ದು.
  ಸರಸ್ವತಿ ಅತ್ತೆಯ ಕಥಾಸ೦ಕಲನ೦ಗೊಕ್ಕೆ ಕೆಲವು ಪ್ರಶಸ್ತಿಗಳೂ ಸಿಕ್ಕಿದ್ದು ಅಲ್ಲದೋ ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಅವರ ಕಾದಂಬರಿ ಬಿರುಗಾಳಿ-ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಹಾರ್ನಹಳ್ಳಿ ಗೌರಮ್ಮ ಮಂಜಪ್ಪ ದತ್ತಿನಿಧಿ ಪ್ರಶಸ್ತಿ ೨೦೦೯ರ ವರ್ಷಕ್ಕೆ ಸಿಕ್ಕಿದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಚೆನ್ನೈ ಬಾವ°ಶುದ್ದಿಕ್ಕಾರ°ಸಂಪಾದಕ°ವೆಂಕಟ್ ಕೋಟೂರುಅಡ್ಕತ್ತಿಮಾರುಮಾವ°ವೇಣಿಯಕ್ಕ°ದೀಪಿಕಾದೊಡ್ಡಮಾವ°ಚುಬ್ಬಣ್ಣಯೇನಂಕೂಡ್ಳು ಅಣ್ಣಅಕ್ಷರ°ಸುವರ್ಣಿನೀ ಕೊಣಲೆಸುಭಗಕೇಜಿಮಾವ°ಶಾಂತತ್ತೆಅನುಶ್ರೀ ಬಂಡಾಡಿಪುತ್ತೂರಿನ ಪುಟ್ಟಕ್ಕಗೋಪಾಲಣ್ಣಅನಿತಾ ನರೇಶ್, ಮಂಚಿಡಾಮಹೇಶಣ್ಣಅಜ್ಜಕಾನ ಭಾವಬೋಸ ಬಾವಪಟಿಕಲ್ಲಪ್ಪಚ್ಚಿಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ