“ಪ್ರೀತಿಗೆ ಮನಸ್ಸು ಮುಂದೆ, ಕೋಪಕ್ಕೆ ಮಾತು ಮುಂದೆ”-{ಹವ್ಯಕ ನುಡಿಗಟ್ಟು-53}

ಪ್ರೀತಿಗೆ ಮನಸ್ಸು ಮುಂದೆ, ಕೋಪಕ್ಕೆ ಮಾತುಮುಂದೆ-{ಹವ್ಯಕ ನುಡಿಗಟ್ಟು-53}

ಎಂತರಪ್ಪ ಇದು ಪ್ರೀತಿಗೆ ಮನಸ್ಸು ಮುಂದೆ….ಕೋಪಕ್ಕೆ…ಮಾತು… ?

ಹಾಂ..ಅಪ್ಪು,ಒಂದಾರಿ ನಾವು ನೆಂಪು ಮಾಡಿಯೊಂಬೊಂ.ಅಬ್ಬೆಯ ಅಪ್ಪುಗೆಯ!. ಮಕ್ಕಳಲ್ಲಿ, ಬೇರೆ ಎಲ್ಲರಿಂದಲೂ ಹೆಚ್ಚು ಪ್ರೀತಿ ಹೆತ್ತಬ್ಬಗೆ!. ಅಪ್ಪ ಬಯ್ಯಲಿ.., ಅಥವಾ ಆರೇ ಬೈಯಲಿ..ಮಕ್ಕೊ ಮದಾಲು ಓಡೆಂಡು ಬಪ್ಪದು ಅಬ್ಬೆ ಇದ್ದಲಿಂಗೆ.ಅಲ್ಲಿ ಮಾತಿರ. ಆದರೆ ಮೌನವೇ ಮಾತಾಡುಗು.ಬೆನ್ನು ಉದ್ದುಗು, ತಲೆ ನೇವರುಸುಗು.ಕೋಪ ತೆಳಿವಾಡಪ್ಪಲೆ  ತಿಂಬಲೆ ಕೊಡುಗು.ಮಕ್ಕಳ ಮನಸ್ಸಿಂಗೆ ಇಷ್ಟು ಸಾಕಲ್ಲೊ!?.

ಇನ್ನು,ಅತೀ ಆತ್ಮೀಯರು ಆರಾದರೂ ಅಪರೂಪಕ್ಕೆ ಅನಿರೀಕ್ಷಿತವಾಗಿ ನಮ್ಮಲ್ಲಿಗೆ ಬಂದರೋ ಭೇಟಿಯಾದರೋ ಮನಸ್ಸು ತುಂಬಿ ಬಕ್ಕು. ಉದಾಃ ಕೊಟ್ಟ ಮಗಳಕ್ಕೊ ಪುಳ್ಳಿಯಕ್ಕಳ ಕರಕ್ಕೊಂಡು [ಮದಲಾಣ ಕಾಲಲ್ಲಿ ಫೋನಿಲ್ಲೆ. ಕಾಗದ ಸಿಕ್ಕೀರೆ ಸಿಕ್ಕಿತ್ತು. ಇಲ್ಲದ್ರೆ ಇಲ್ಲೇಯಿದ] ಬಂದವೂಳಿ ಆದರೆ ಅಬ್ಬೆ-ಅಪ್ಪನ ಮನಸ್ಸಿಂಗಾವುತ್ತ ಸಂತೋಷ ಅಷ್ಟಿಷ್ಟಲ್ಲ!. ಅರೆಕ್ಷಣ ಮಾತೇ ಹೆರಡ.ಮನಸ್ಸಿನ , ಮೋರೆಯ ಕಳೆ ನೋಡಿರೆ ಗೊಂತಕ್ಕದು!.

ಆದರೆ ಮನುಷ್ಯರಿಂಗೆ  ಕೋಪ ಬಂದರೋಂ, ಮದಾಲು ಬೈಗಳು. ಮತ್ತೆ ಪೆಟ್ಟು. ಅದಕ್ಕಿಂತಲೂ ಮುಂದಾಣ ಹೆಜ್ಜೆ..  ದ್ವೇಷ!. ಈ ದ್ವೇಷಲ್ಲಿದ್ದನ್ನೆ.. ಮಾತಿಂಗೆ ಬದಲಾಗಿ ಕೃತಿಯೂ ಇಕ್ಕು. ಅದು ಪ್ರೀತಿಲಿ ಉಕ್ಕುತ್ತ ಕೃತಿ ಅಲ್ಲ!.ನೆರೆ-ಕರೆಲಿ, ದಾಯಾದಿಗಳಲ್ಲಿ ನಾವು ಕಾಣುತ್ತಿರುತ್ತು. ಇತ್ತಿತ್ತ್ಲಾಗಿ ನೆರೆ-ಕರೆ ದಾಯಾದಿಗಳಲ್ಲಿ  ದ್ವೇಷ ಕಡಮ್ಮೆ ಆಯಿದು ಹೇಳುವೊಂ. ಆದರೆ ಈ ಪಾಲಿಂದ ಎರಟಿ; ಮಠ-ಮಂದಿರಂಗಳ ಮೇಗೆ ದುರಾಶೆ, ದ್ವೇಷ ತಿರುಗಿದ್ದೋ ಉಮ್ಮಪ್ಪ!!!.

ವಿಜಯತ್ತೆ

   

You may also like...

2 Responses

  1. ಚೆನ್ನೈ ಭಾವ° says:

    ಇದರ ಓದಿಂಡಿಪ್ಪಗ ಆಚಕರೆ ಪುಟ್ಟ° ಬಂದೋನು ಓದಿಕ್ಕಿ ಅಬ್ಬಗೆ ಮನಸ್ಸು ಮುಂದೆ ಅಪ್ಪಂಗೆ ಕೋಪ ಮುಂದೆ ಹೇದೋಂಡು ಹೋದ° ವಿಜಯತ್ತೆ!! ಉಮ್ಮ ಮನಗೆತ್ತಿಯಪ್ಪಗ ಎಂತಾವುತ್ತೋ ಇನ್ನವಂಗೆ! 😛

  2. ಒಳ್ಳೆ ಒಪ್ಪ ಚೆನ್ನೈಭಾವ ! ಹೆದರೆಡಿ, ಅಪ್ಪನ ಕೋಪಕ್ಕೆ ಆಚಕರೆ ಪುಟ್ಟ ಬಲಿಯಾಗಂ ಅಬ್ಬೆ ಒಟ್ಟಿಂಗಿದ್ದಲ್ಲೋ !.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *