“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-76)

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”(ಹವ್ಯಕ ನುಡಿಗಟ್ಟು-76)

ಇದ್ರೆಡೆಲಿ ಎನ್ನ ಮಾನಸ ಪುತ್ರಿ ಒಂದರ ಮದುವಗೆ ಹೋಯೆಕ್ಕಾಗಿ ಬಂತು. ಅದು ಹೊಸನಗರ,ನಿಟ್ಟೂರು ರಾಮೇಶ್ವರ ದೇವಸ್ಥಾನಲ್ಲಿ. ಎರಡು ದಿನ ಮುಂಚಿತವಾಗಿ ಬರ್ಲೇಬೇಕೂಳಿ ಒತ್ತಾಯ ಇದ್ದರೂ ಮುನ್ನಾಣದಿನ ಹೋಗದ್ರೆ ಎಲ್ಲೋರು ಉಂಡಿಕ್ಕಿ ಎದ್ದಮತ್ತೆ ಹೋದಾಂಗಕ್ಕಷ್ಟೆ!. ಅಂತೂ ನಾವು ಮುನ್ನಾದಿನ ಇಲ್ಲಿಂದ ಉದಿಯಪ್ಪಗಳೇ ಹೆರಟರೂ ಅಲ್ಲಿಗೆ, ಮದ್ಯಾಂತಿರುಗಿ ಮೂರು ಗಂಟಗೆ ಎತ್ತಿತ್ತು ಹೇಳುವೊᵒ. ಮದುವೆ,ಆರತಕ್ಷತೆ, ಹೇಳಿ ಎಲ್ಲಾ ಸಾಂಗವಾಗಿ ಕಳಾತು.

ಅಲ್ಲಿಗೊರೆಗೆ ಹೋದರೆ, ಮತ್ತೆ ಹೊನ್ನಾವರಲ್ಲೂ  ಹೀಂಗಿದ್ದ ಮಗಳಿದ್ದು. “ಇಲ್ಲಿಗೆ ಬಾರದ್ದೆ ಹೋಪಲೆಡಿಯ” ಹೇಳಿ ಮದಲೇ ತಾಕೀತೂ ಇದ್ದು ಅವರ ಮನೆವರದ್ದು. ಮದುವಗೆ ಬಂದವರೊಟ್ಟಿಂಗೆ  ಅಲ್ಲಿಗೂ ನಾವು ಒಚ್ಚಿತ್ತು.

“ ನಿಂಗೊ ಅಪರೂಪಕ್ಕೆ ಬಪ್ಪದು.ನಾಲ್ಕು ದಿನ ಅಲ್ಲದ್ರೆ ಎರಡು ದಿನಾದ್ರೂ ಎಂಗಳೊಟ್ಟಿಂಗಿಪ್ಪಲೇ ಬೇಕು”. ಆ ಮಗಳ ಅಜ್ಜಿಯ ಉವಾಚ!. ಎನ್ನ ತೊಂದರಗೊ, ಊರಿಲ್ಲಿ ಬೇರೆ ಹೋಯೆಕ್ಕಾದ ಕಾರ್ಯಕ್ರಮಂಗಳ ಪಟ್ಟಿ ಹೇಳಿರೆ; ಅವಕ್ಕೆ ದಾಖಲೇ ಆವುತ್ತಿಲ್ಲೆ.ಅದರ ಗಣ್ಯಕ್ಕೆ ತಾರದ್ದೆ ಅವರದ್ದು ’ಅದೇ ಹತ್ತಿ ಅದೇ ನೂಲು’. ಅಲ್ಲಿ ಕೂಬ್ಬಲೂ ಅಲ್ಲ. ಹೆರಡ್ಳೂ ಎಡಿಯದ್ದ ಪರಿಸ್ಥಿತಿ!. ಹೀಂಗಿದ್ದಕ್ಕೆ  ಎನ್ನ ಅಪ್ಪ ಮದಲಿಂಗೆ ಹೇಳಿಂಡಿದ್ದ ಮಾತು ನೆಂಪಾತು.  “ಬಳ್ಳಿ ಇಲ್ಲದ್ದೆ ಕಟ್ಟಿಹಾಕುದು ಹೇಳಿರೆ ಹೀಂಗಿದ”, ಹೇಳಿ ಹೀಂಗಿದ್ದ ಉದಾರಣೆಲಿ ಹೇಳುಗು..

ಹೆರಟತ್ತೋ ಅಲ್ಲಿಯಾಣವಕ್ಕೆ ತೀರಾ ಬೇಜಾರಕ್ಕು!. ಹಾಂಗೇಳೆಂಡು ಕೂದತ್ತೋ ಎನ್ನ ಕಾರ್ಯಂಗೊ ಕೆಡುಗು!!.

“ಬಳ್ಳಿಲ್ಲದ್ದೆ ಕಟ್ಟಿ ಹಾಕಿದ ಪರಿಸ್ಥಿತಿ” ನಿಂಗೊಗೂ ಆಗಿಕ್ಕಲ್ಲೊ?.

——-೦——

 

ವಿಜಯತ್ತೆ

   

You may also like...

10 Responses

 1. Venugopal Kambaru says:

  ಲಾಯಕ ಆಯಿದು

 2. ವೇಣು ಗೋಪಾಲ ಭಾವ, ಓದಿ ಒಪ್ಪಕೊಟ್ಟದಕ್ಕೆ ಧನ್ಯವಾದ. ನಿನಗೆ ಇಂತಾ ಸಂದರ್ಭ ಬಯಿಂದಿಲ್ಯೋ?

 3. ಗೋಪಾಲ ಬೊಳುಂಬು says:

  ಹೀಂಗಿಪ್ಪ ಸಂದರ್ಭ ಅಂಬಗಂಬಗ ಬತ್ತು. ಕೆಲವೊಂದರಿ ಮಾತಿಲ್ಲೇ ಕೊರೆತ್ತವು ಸಿಕ್ಕಿದರುದೆ ಹೀಂಗೆ ಆವ್ತು. ನವಗೆ ಗಡಿಬಿಡಿಯ ಕೆಲಸಂಗೊ. ಕೊರೆತ್ತವಕ್ಕೆ ಅವರದ್ದೇ ಕತೆಗೊ. ಅದು ಬೇಗ ಮುಗಿಗೊ, ಅದುದೆ ಇಲ್ಲೆ. ಅವರ ಮಾತುಗವಕ್ಕೆ ತಲೆಆಡುಸಿ ಬೇಕಪ್ಪಗ ನೆಗೆ ಮಾಡೆಂಡು ಅಲ್ಲಿಂದ ಜಾರಲೂ ಆಗದ್ದೆ ಪಡುವ ಅವಸ್ಥೆ ಆರಿಂಗೂ ಬೇಡ.

 4. S.K.Gopalakrishna Bhat says:

  ಒಳ್ಳೆ ನುಡಿಗಟ್ಟು.ತಾಳಮದ್ದಳೆಲೂ ಕೆಲವರು ಎದುರು ಅರ್ಥದವರ ಬಳ್ಳಿ ಇಲ್ಲದ್ದೆ ಕಟ್ಟಿಹಾಕುತ್ತವು

 5. ಖಂಡಿತವಾಗಿಯೂ ಅಪ್ಪಾದ ಮಾತು

 6. ಎನಗಿಲ್ಲಿ ಸಂತೋಷ ಎರಡೂ ಜೆನ ಗೋಪಾಲಂದ್ರು ಸಿಕ್ಕುತ್ತೊವು,ಆದರೀಗ ಮೂರುಜೆನ ಬಯಿಂದೊವು.ಬಹು ಸಂತೋಷ! !!

 7. Shashiprabha karnik says:

  ಕಟ್ಟದ್ದ ಕಟ್ಟ ಬಿಡುಸು ವ ದು ತುಂ ಬ ಕ ಷ್ಟ

 8. ಬೈಲಿಂಗೆ ಬಂದರೆ ಬಳ್ಳಿಲ್ಲದೆ ಕಟ್ಟಿಹಾಕಿದಾಂಗೆ ಆವುತ್ತಪ್ಪ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *