“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-99)

ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-99)

ನ್ನಪ್ಪ ಮಗಳಕ್ಕಳ ಮನಗೆ ಬತ್ತರೆ ಒಂದು ದಿನ ನಿಂಬಾಂಗೆ ಬಪ್ಪದು.ಬಂದ ದಿನವೇ ಹೋಪಲೂ ಇಲ್ಲೆ. ಎಂಗೊ ಬಿಡ್ಳೂ ಇಲ್ಲೆ. ಹೀಂಗಿಪ್ಪಗ ಒಂದು ದಿನ ಮಧ್ಯಾಹ್ನ ಬಂದೊವು ;ಉಂಡಿಕ್ಕಿ ರಜ್ಜ ಹೊತ್ತು ಪಟ್ಟಾಂಗ ಹೊಡದಿಕ್ಕಿ ,  “ನೀನು ಚಾಯ ಮಾಡ್ತರೆ ಮಾಡು, ಆನು ಹೋವುತ್ತೆ ಮೋಳೆ”. ಹೇಳುವಗ ಎನ  ಆಶ್ಚರ್ಯ!.

“ಹೇಂ..!,  ಇದೆಂತ  ಇಂದು ಹೀಂಗೆ!?. ಅಂಬಗ ..,ನಿಂಗಳ ಅಳಿಯ  ಬಪ್ಪಲ್ಲಿವರೆಗೂ ನಿಲ್ಲುತ್ತಿಲ್ಲಿರೋ?”

“ಅವ  ಬಪ್ಪನ್ನಾರ ನಿಂದರೆ.., ಮತ್ತಿಂದು  ಆನು ಮನಗೆ ಹೋದಾಂಗೆ…!. ನಾಳೆ ತೋಟಕ್ಕೆ ಮದ್ದು ಬಿಡ್ಳೆ ಬಕ್ಕು. ಇಂದೇ ಬನ್ನಿ ಹೇಳಿದ  ಹೆರಡುವಾಗ  ಒಪ್ಪಣ್ಣ”.( ಓದುಗರೇ  ಈ ಬಯಲಿನ ಒಪ್ಪಣ್ಣ ಅಲ್ಲ!,ಆ ಬಯಲಿನವ. ಎನ್ನ ತಮ್ಮ).

“ ನಿಂಗೊ ಬಂದ ಶುದ್ದಿ ಹೇಳುವಗ; ಮಾವನ ಕಳುಗಿ ಕೊಟ್ಟದೆಂತಕೇಳಿ   ಕೇಳಿರೆ…!”

“ಇದಾ, ನೀ ಎನ್ನ ಬಳ್ಳಿ ಇಲ್ಲದ್ದೆ  ಕಟ್ಟಿ ಹಾಕೆಡ. ಮದ್ದು ಬಿಡ್ಳೆ ಬಂದರೆ; ಸುಣ್ಣ ಕೊದುಶಲೋ , ಮದ್ದು  ತೋಡಿ ಕೊಡ್ಳೋ ಜೆನ ಬೇಕಾವುತ್ತು. ಹೆರಟಪ್ಪಗ ಹೇಳ್ತᵒ  ಒಪ್ಪಣ್ಣ. ಒಂದು ವಾರ ಕಳುದು ಬತ್ತೆ. ಹೇಳಿ  ಬಾಯಿ ಮುಚ್ಚುಸುವಗ ಆನು ಸುಮ್ಮನಾದೆ(ಆ ಕಾಲಲ್ಲಿ ಫೋನಿಲ್ಲೆ. ಎನ್ನಪ್ಪ  ಈ ಲೋಕ  ಬಿಟ್ಟದು 1998ರಲ್ಲಿ. 1996 ರಲ್ಲೇ ಅಲ್ಲಿಯೂ ಇಲ್ಲಿಯೂ ಫೋನು ಬಂದರೂ ಈ ಸಂದರ್ಭ ಅದರಿಂದ ಮದಲೇ) 

 ’ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು’. ಈಗ ಎನಗೆ ಅರ್ಥಾತು. ಇದು ಅಪ್ಪ ಹೆಚ್ಚಾಗಿ ಬಳಕೆ ಮಾಡುವ  ಮಾತು.ಈ  ವಾಕ್ಯಲ್ಲಿ ಓದುಗರಿಂಗೂ ಅರ್ಥ ಆಗಿಕ್ಕು.  ಆಗದ್ರೆ ಹೇಳೀತೆ.

ಅಪ್ಪಂಗೆ , ಮಗಳು ಒತ್ತಾಯ ಮಾಡುವಗ ಕೂರೆಕ್ಕೂಳಿ ಮನಸ್ಸಿದ್ದರೂ ಕೂಬ್ಬಲೆ ನಿವೃತ್ತಿ ಇಲ್ಲದ್ದ ಪರಿಸ್ಥಿತಿ.

ಈ ನುಡಿಯ ಕೆಲವಾರು ಸಂದರ್ಭಲ್ಲಿ ಬಳಕೆ ಮಾಡ್ಳಕ್ಕು. ಹೀಂಗೆ ಒಳ್ಳೆ ವಿಷಯಕ್ಕೂ ಅರೆ ಮನಸ್ಸಿನ ಸಂಧಿಗ್ಧತೆಗೂ ಬಳಸುತ್ತೊವು. ಆಚಮನೆ ಅಣ್ಣ  ಪೇಟಗೆ  ಹೆರಟು ಕಾರು ಗೇಟಿಂದ ಹೆರ ಕಂಡಪ್ಪಗ ಈಚಮನೆ  ಅಕ್ಕಂಗೆ ಅಂದಾಜಪ್ಪದು “ಅವನತ್ರೆ ಎನ್ನ ಬಿ.ಪಿ. ಮಾತ್ರೆ ತಪ್ಪಲೆ ಹೇಳಿರೆಂತಾಳಿ!. ಮದ್ದಿನ ಚೀಟು ತಪ್ಪಲೆ ಒಳಹೋದ ಅಕ್ಕನ ಎಷ್ಟೊತ್ತಾರೂ ಚೀಟು ತೆಕ್ಕಂಡು ಹೆರ ಬಪ್ಪದು ಕಾಣ. ಅಷ್ಟಪ್ಪಗ ಈ ಕಾದುಕೂದವಂಗೆ …ಛೇ..ಬಳ್ಳಿ ಇಲ್ಲದ್ದೆ ಕಟ್ಟಿ ಹಾಕಿದಾಂಗಾತನ್ನೆ!!.ಹೇದಪ್ಪದು.ಹೋಪಲೂ ಗೊಂತಿಲ್ಲೆ. ನಿಂದರೆ ತಡವೂ ಆವುತ್ತು!!!.

ಎಂತ ಹೇಳ್ತಿ, ನಿಂಗೊಗೆ  ಹೀಂಗಿದ್ದ ಸಂದರ್ಭ ಎಷ್ಟೋ ಸರ್ತಿ ಬಂದಿಕ್ಕು.

                        ————-೦———–

 

 

 

ವಿಜಯತ್ತೆ

   

You may also like...

8 Responses

 1. ಶರ್ಮಪ್ಪಚ್ಚಿ says:

  ಮಗಳಕ್ಕಳಲ್ಲಿಗೆ ಹೋದರೆ ಬಳ್ಳಿ ಇಲ್ಲದ್ದೆ ಕಟ್ಟಿ ಹಾಕ್ತವು.
  ಕೆಸವಿನ ಬುಡಲ್ಲಿ ಕಂಜಿ ಕಟ್ಟಿಕ್ಕಿ ಬಂದ ಹಾಂಗೆ ಅಂಬೆರ್ಪು ಎಂತ ಕೇಳಿದರೆ, ನಾವಲ್ಲಿಯೇ ಬಾಕಿ

  • ಶರ್ಮಭಾವಂಗೆ ಈಗ ಮಗಳಕ್ಕಳ ಮನಗೆ ಹೋಪ ಬಾಂಧವ್ಯ ಇದ್ದದ . ಮಗಳಿಂದ ಹೆಚ್ಚಿಗೆ ಪುಳ್ಳಿಯ ಕಾಂಬಲೆ ತುಡಿತ ಆವುತ್ತಲ್ಲೊ ಭಾವ. ಪುಳ್ಳಿಯ ಬಗ್ಗೆ ನೀನು ಬರದ ಪದ್ಯಲ್ಲಿ ಅದು ಬಿಂಬಿತ ಆವುತ್ತು.ಮನೆಲಿದ್ದ ಅಜ್ಜ-ಅಜ್ಜಿಗೂ ಅವರವರ ಮಕ್ಕಳಿಂದ ಹೆಚ್ಚಿಗೆ ಅಕರಾಸ್ಥೆ ಪುಳ್ಳಿಯ ಹತ್ರಾಡ.ಲೋಕದ ಅನುಭವ.

   • pattaje shivarama bhat says:

    ಒಪ್ಪಣ್ಣ ಊರಿಲ್ಲಿ ಇಲ್ಲಿಯಾ ಹೇದು. ಪುಟಂಗೊ ಎಲ್ಲ ಖಾಲಿ ಖಾಲಿ.

 2. ಯಮ್.ಕೆ. says:

  ಬಳ್ಳಿ ಇಲ್ಲದ್ದೆ ಮಾಲೆ ಕಟ್ಟಿದ್ದು ೯೯ ಆತನ್ನೆ.

 3. ಬೊಳುಂಬು ಗೋಪಾಲ says:

  ತುಂಬಾ ಅರ್ಜೆಂಟಿಲ್ಲಿ ಇಪ್ಪಗ ಹೀಂಗೆ ಕಟ್ಟಿ ಹಾಕುತ್ತವು ಸಿಕ್ಕಿರೆ ತಿಂಬಲೂ ಎಡಿಯ ತುಪ್ಪಲೂ ಎಡಿಯ ಹೇಳಿ ಆವ್ತದ. ನುಡಿಯೊಪ್ಪ ಹೇಳಿರೆ ಒಳ್ಳೆ ನುಡಿಯೊಪ್ಪ. ವಿಜಯಕ್ಕ ಶತಕ ಬಾರುಸಲೆ ಬ್ಯಾಟು ನೆಗ್ಗಿ ಹಿಡುದ್ದವದ. ಆನು ಕೈ ತಟ್ಟಲೂ ತಯಾರಾಯಿದೆ. ನಿಂಗೊ ?

  • ಯಬ…ಯಬ… ಇನ್ನೀಗ ಇನ್ನೊಂದು ನುಡಿಗಟ್ಟು ನೆಂಪು ಮಾಡಿಸ್ಸು ಒಳ್ಳೆದಾತು. ” ತುಪ್ಪಲೂ ಅಲ್ಲ, ನುಂಗಲೂ ಅಲ್ಲ”. ಹೇಳಿ ಗಾದೆ ಇಪ್ಪದಪ್ಪು. ಅದರ ಅರ್ಥ ಚೂರು ವೆತ್ಯಾಸ ಬೊಳಿಂಬು ಗೋಪಾಲ.

 4. K.Narasimha Bhat Yethadka says:

  ಆನೂ ತಯಾರಾಯಿದೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *