ಬೆಟ್ಟದ ಜೀವಕ್ಕೆ ಪ್ರಶಸ್ತಿ

May 23, 2011 ರ 8:10 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇತ್ತೀಚೆಗೆ ಬೆಟ್ಟದ ಜೀವ ಪುಸ್ತಕದ ಬಗ್ಗೆ ಆನು ಬರೆದಿತ್ತಿದ್ದೆ.

ಈಗ ಆ ಕಾದಂಬರಿಯ ಆಧರಿಸಿದ ಸಿನೆಮಕ್ಕೆ ನಿರ್ದೇಶನ ಮಾಡಿದ  ಶ್ರೀ ಪಿ.ಶೇಷಾದ್ರಿ -ಇವಕ್ಕೆ ಪ್ರಶಸ್ತಿ ಬಯಿಂದಡ.ಸಿನೆಮಾ ಆನು ನೋಡಿದ್ದಿಲ್ಲೆ .ಯಾವಾಗಲಾದರೂ ದೂರದರ್ಶನಲ್ಲಿ ಬಂದರೆ ನೋಡೆಕ್ಕು.ಈ ಸಾಧನೆಗಾಗಿ ಎಲ್ಲರಿಂಗೂ ಅಭಿನಂದನೆಗೊ.

ಮನೆಗೆ ಬಾರದ ದನವ ಹುಡುಕುತ

ಇನನು ಕಂತುವ ಸಮಯ ಕಾಡಿನ

ಘನತರದ ಕತ್ತಲೆಯ ಶೀತದ ನೆಲೆಗೆ ಪಥ ತಪ್ಪಿ

ಅನುಸರಿಸಿ ಹಳ್ಳಿಗರ ಕೆಳಬೈ-

ಲಿನಲಿ ಗೋಪಾಲಯ್ಯನೆಂಬರ

ಮನೆಗೆ ಬಂದಿಳಿದಿದ್ದ ಶಿವರಾಮಯ್ಯ  ಬಸವಳಿದು[೧]

ದಾಟಿದನು ಸಂಕಗಳ ಹೊಳೆಯಲಿ

ಪಾಠ ಕೇಳಿದ ಬದುಕ ಬವಣೆಯ

ತೋಟದಾ ಪರಿಸರದಿ ಸುಳಿದಿಹ ಆಧುನಿಕ ಪರಿಯ

ನೋಟಗಳ,ಸಾಹಸದ ದುಡಿಮೆಯ

ಕಾಟುಮೂಲೆಯ ರೂಪದಲಿ ಕ

ಣ್ಣೋಟದಲಿ ಅಳೆಯುತಲಿ  ಕಳೆದನು ಹಲವು ದಿನಗಳನು[೨]

ದಂಪತಿಗಳಾರೈಕೆಯಲಿ ಜ್ವರ

ತಂಪುಗೊಂಡಿರೆ  ಅವರ ಮನವನು

ಸೊಂಪುಗೊಳಿಸಿದ ಮನೆಗೆ ಬಾರದ ಮಗನ ಸುಳಿವಿಂದ

ಕಂಪಗದ್ದೆಯ ಬಗಲ ಬೆಟ್ಟದ

ಪೆಂಪಿನಲಿ ಕುಣಿವಂತ ಝರಿಗಳ

ತಂಪು ನೀರಿಗೆ ಮನದ ಸಂಕಟ ಕಳೆವ ಬಲವಿರದೇ?[೩]

ಬಿತ್ತು ಬೋನಿಗೆ ವನದ ಹುಲಿಯದೊ

ಇತ್ತ ,ನಾರಾಯಣನು ಶಂಭುವು

ಚಿತ್ತದಲಿ ಎಣಿಸಿದ್ದ ಯೋಚನೆ ಬಯಲುಗೊಂಡಿಹುದು

ಎತ್ತರದ ಗಿರಿಯಷ್ಟು ಹಿರಿತನ

ವೆತ್ತ ಗೋಪಾಲಯ್ಯ ಕಥನಕೆ

ಇತ್ತರದೊ ಮನ್ನಣೆಯ ಕನ್ನಡ ಜನತೆ ಹರ್ಷಿಸಲು[೪]

[ತಾ-೨೨.೫.೧೧ರ ಉದಯವಾಣಿಲಿ ಶೇಷಾದ್ರಿ-ಇವು ಚಿತ್ರೀಕರಣದ ಅನುಭವಂಗಳ ಬರೆದ್ದವು.ಈ ಪದ್ಯ ಆವಾಗ ಹುಟ್ಟಿತ್ತು].

ಬೆಟ್ಟದ ಜೀವಕ್ಕೆ ಪ್ರಶಸ್ತಿ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಗೋಪಾಲಣ್ಣಾ, ನಾಕು ಚರಣಂಗಳಲ್ಲಿ ಬೆಟ್ಟದ ಜೀವ ಕಾದಂಬರಿಯ ಸಾರಾಂಶವ ಚೊಕ್ಕಕ್ಕೆ ಹೇಳಿದ್ದಿ.

  [Reply]

  VN:F [1.9.22_1171]
  Rating: 0 (from 0 votes)
 2. ಮೋಹನಣ್ಣ
  ಮೋಹನಣ್ಣ

  ಬೆಟ್ಟದ ಜೀವ ಆನು ಎರಡೆರಡು ಸರ್ತಿ ಓದಿದ ಕತೆ.ಅದು ಶಿವರಾಮ ಕಾರ೦ತರ ಜೀವನಲ್ಲಏ ಬ೦ದ ಅನುಭವದ ಕತೆ ಹೇಳಿ ಕೇಳಿ ತಿಳುದಿದ್ದಿದ್ದೆ.ಈಗ ಮಗಳಿ೦ಗೆ ಮಡಿಕೇರಿ ಸ೦ಬ೦ದ ಆದ ಮೇಲೆ ಆ ವ್ಯಕ್ತಿಗಳ ಬಗ್ಯೆ ಹೆಚು ತಿಳುದತ್ತು.ಇನ್ನು ಗೋಪಾಲಣ್ಣೋ ಭಾಮಿನೀಲಿ ಮುಳಿಯ ಭಾವ೦ಗೆ ಒಬ್ಬ೦ ಪ್ರತಿಸ್ಪರ್ದಿ ಹುಟ್ಟಿದ್ದದಲ್ಲಾನೆ?ಮನೆಲಿ ಬ೦ದಿಪ್ಪಾಗ ಹೆಚು ಮಾತಾಡ್ಲೆ ಆಯಿದಿಲ್ಲೆ.ಮನೆ ಕಾರ್ಯಕ್ರಮ ಹೇಳೀರೆ ಹಾ೦ಗೇ ಅಲ್ಲದೊ?

  [Reply]

  VA:F [1.9.22_1171]
  Rating: 0 (from 0 votes)
 3. ಆಚಕರೆ ಮಾಣಿ
  ಆಚಕರೆ ಮಾಣಿ

  ಬೆಟ್ಟದ ಜೀವ ಪುಸ್ತಕ ಸಪ್ನಾ ಬುಕ್ ಹೌಸಿಲಿ ಇಲ್ಲೆ…. ಆನು ಕೇಳಿಯಪ್ಪಗ ಒಂದೇ ಇತ್ತದು. ಆನು ತೆಕ್ಕೊಂಡೆ.

  ಆರಿಂಗಾರೂ ಬೇಕಾರೆ ಹೇಳಿ. ತರ್ಸುವ ವ್ಯವಸ್ತೆ ಮಾಡ್ತವಡ.

  ಮತ್ತೆ… ಎನಗೆ ಬ್ಯಾಂಕಿನ ಲೆಕ್ಕಲ್ಲಿ ೧೫ % ಡಿಸ್ಕೌಂಟ್ ಕೊಡ್ತವು.ಆರಿಂಗಾರೂ ಬೇಕಾರೆ ಎನ್ನತ್ರೆ ಕೇಳಿ. ರಿಕ್ಷದ ಚಾರ್ಜು ಒಳಿಗು…

  ಎನ್ನ ಪೊನ್ನಂಬ್ರ ಬರಕ್ಕೊಳ್ಳಿ. 9448784145

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಓದ್ಲೆ ಬೇಕಾದವಕ್ಕೆ ಎನ್ನತ್ರೆ ಇದ್ದು, ಉಚಿತವಾಗಿಯೇ ಕೊಡ್ಲಕ್ಕು.

  [Reply]

  VN:F [1.9.22_1171]
  Rating: 0 (from 0 votes)
 4. ವೆಂಕಟೇಶ

  ಬೆಟ್ಟದ ಜೀವ ಸಿನೇಮವ ಜೂನ್ ೧೭, ಶುಕ್ರವಾರ ಬಿಡುಗಡೆ ಮಾಡುತ್ತವಡ. ಪಿ ಶೇಷಾದ್ರಿ ಬ್ಫೆಲಿಂಗೆ ಹೇಳಿಕೆ ಕೊಡ್ಲೆ ಹೇಳಿದ್ದವು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ವೆಂಕಟ್ ಕೋಟೂರುಸುವರ್ಣಿನೀ ಕೊಣಲೆತೆಕ್ಕುಂಜ ಕುಮಾರ ಮಾವ°ದೊಡ್ಡಭಾವಡಾಮಹೇಶಣ್ಣಅನಿತಾ ನರೇಶ್, ಮಂಚಿಅಕ್ಷರ°ವೇಣೂರಣ್ಣಕಜೆವಸಂತ°ವಿನಯ ಶಂಕರ, ಚೆಕ್ಕೆಮನೆನೀರ್ಕಜೆ ಮಹೇಶವಿಜಯತ್ತೆಕೇಜಿಮಾವ°ವಸಂತರಾಜ್ ಹಳೆಮನೆಒಪ್ಪಕ್ಕಶರ್ಮಪ್ಪಚ್ಚಿಚೆನ್ನೈ ಬಾವ°ಕಾವಿನಮೂಲೆ ಮಾಣಿದೊಡ್ಡಮಾವ°ಪ್ರಕಾಶಪ್ಪಚ್ಚಿನೆಗೆಗಾರ°ಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವಪೆಂಗಣ್ಣ°ಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ