“ಬೆಳದ ಹಾಂಗೆ ಕೊಯಿವೊಂ” {ಹವ್ಯಕ ನುಡಿಗಟ್ಟು-24}

“ಬೆಳದ ಹಾಂಗೆ ಕೊಯಿವೊಂ” {ಹವ್ಯಕ ನುಡಿಗಟ್ಟು-೨೪}

ಒಂದು  ಸರ್ತಿ  ಎನ್ನ ಅಪ್ಪನ  ಮನೆಲಿ  ಏವದೋ  ಒಂದು  ಜೆಂಬಾರದ ದಿನ   ಊಟ ಆವುತ್ತಾ  ಇದ್ದತ್ತು.ನಮ್ಮಸಂಸ್ಕೃತಿ ಹಾಂಗೆ,ತಾಳುಗೊ,ಅವಿಲು,ಚಟ್ನಿ,ಉಪ್ಪಿನಕಾಯಿ,ಚಿತ್ರಾನ್ನ,ಹಪ್ಪಳ-ಸೆಂಡಗೆ, ಮೆಣಸುಕಾಯಿ,   ಸಾರು,ಸಾಂಬಾರು,ಮೇಲಾರ, ಪಾಯಸ, ಭಕ್ಷ್ಯ, ಎಣ್ಣೆತಿಂಡಿ, ಹೀಂಗಿದ್ದರ ಬಡುಸುತ್ತರೊಟ್ಟಿಂಗೆ  ಕೆಲವು ಜೆನ ಚೂರ್ಣಿಕೆ ಹೇಳುಗು.ಅಕೇರಿಗೆ ಮಜ್ಜಿಗೆ;ಅದರೊಟ್ಟಿಂಗೆ ವಾಪಾಸು ಉಪ್ಪಿನಕಾಯಿಯೂ ಬಂತು. ಹೀಂಗಿಪ್ಪಗ  ಕೆಲವು ಜೆನಕ್ಕೆ ಮಜ್ಜಿಗೆ ಮೆಚ್ಚದ್ದವು ಇಕ್ಕಿದ!. ಅವಕ್ಕೆ ಈಚವರಿಂದ ಬೇಗ ಉಂಡಾವುತ್ತೂಳಿ ಬೇರೆ   ಹೇಳೆಕ್ಕೊ!. ಅಷ್ಟೊತ್ತಿಂಗೆ ಅಲ್ಲೆ  ಹಂತಿ ತಲೇಲಿ  ಉಂಡಾದ ಮಾವ ಒಬ್ಬ  ಕೇಳಿದ  ಎನ್ನ ಅಪ್ಪನತ್ರೆ  “ಭಾವಯ್ಯ, ’ಬೆಳದಹಾಂಗೆ ಕೊಯಿವೊ’ ಆಗದೋ?”. ಅಕ್ಕು  ಅಡ್ಡಿ ಇಲ್ಲೆ ಹೇಳದ್ದೆ  ಹೇಂಗೆ?!. ಒಪ್ಪಿಗೆ ಸಿಕ್ಕಿಯಪ್ಪಗ ಹಾಂಗಿದ್ದೊವು  ಒಂದೆರಡು ಜೆನ ಕೈ ತೊಳವಲೆ ಎದ್ದು ಹೋದೊವು.ಆ ಹೊತ್ತಿಂಗೆ  ಅಲ್ಲೆ ನಿಂದೊಂಡಿದ್ದ ಎನ್ನ ಅಪ್ಪನ ಪುಳ್ಳಿಕೂಸೊಂದು  “ಅಜ್ಜಾ…, ಬೆಳದ ಹಾಂಗೆ ಕೊಯಿವದು  ಹೇಳಿದ್ದೆಂತಕಜ್ಜಾ!?”  ಅದೋ..,  ನೆಟ್ಟಿಕಾಯಿಯ, ಫಲ ವಸ್ತುವಿನ ಎಲ್ಲ; ನಾವು  ಸಾದಾರಣ ಬೆಳಕ್ಕೊಂಡು  ಬಂತು ಹೇದಪ್ಪಗ  ಕೊಯಿದು ಬೆಂದಿ ಮಾಡ್ತದೊ, ಉಪಯೋಗಿಸುತ್ತದೊ  ಮಾಡ್ತಿದ. ಹಾಂಗೇ ಇಲ್ಲಿಯೂ ಉಂಡಾದಾಂಗೆ ಕರೇಂದ ಏಳ್ಳಕ್ಕೊ ಕೇಳ್ತಕ್ಕೆ ಬೇಕ್ಕಾಗಿ ಈ ಶಬ್ಧ ಉಪಯೋಗುಸುತ್ತೊವು.”  ಹೇದು  ಅಜ್ಜ ಪುಳ್ಳಿಗೆ  ಸಮಜಾಯಿಸಿದೊವು.

ನಮ್ಮ ಸಂಸ್ಕಾರಲ್ಲಿ  ಉಂಬಲೆ ಕೂಬ್ಬದು. ಉಂಬಲೆ ಸುರುಮಾಡುದು, ಉಂಡಿಕ್ಕಿ ಏಳುದು, ಎಲ್ಲೋರೂ ಒಟ್ಟಿಂಗೆ ಆಯೆಕ್ಕು ಹೇಳ್ತ ರೀತಿ-ರಿವಾಜು ಇದ್ದು. ಅದರ ಮೀರ್ಲಾಗ. ಈ ಸಂದರ್ಭಲ್ಲಿ  ಕೈ ಒಣಗ್ಸೆಂಡು ಕೂಬ್ಬಲೆಡಿಯದ್ದವು  ಎಂಗೊ ಉಂಡಾದೊವು  ಏಳ್ತಿಯೊಂ  ಹೇಳಿ ನೇರ ಹೇಳುವ ಬದಲಿಂಗೆ ಈ ಒಂದು ನುಡಿಗಟ್ಟಿನ ಹೇಳಿಯೊಂಡು ಜಾರಿಯೊಳ್ತವು  ಅಷ್ಟೆ!.

 

ವಿಜಯತ್ತೆ

   

You may also like...

5 Responses

 1. K.Narasimha Bhat Yethadka says:

  ಅಪ್ಪಪ್ಪು.ಈಗ ಬೆಳವಲೂ ಪುರುಸೊತ್ತಿಲ್ಲೆ ವಿಜಯಕ್ಕ.ಅದರಿಂದ ಮದಲೇ ಕೊಯ್ದು ಆವುತ್ತು.

 2. ಕೇಶವ ಫ್ರಕಾಶ says:

  ಅದು ಬೆಳವ ವರಗೆ ಕಾಯಲೆ ಈಗ ಆರಿಂಗೂ ಪುರುಸೋತ್ತೇ ಇಲ್ಲೆ. ಅದೇ ದೊಡ್ಡ ಕಷ್ಟ.

 3. ಚೆನ್ನೈ ಭಾವ° says:

  ಎಂತಪ್ಪ ಅತ್ತೆ ಈ ವೊರಿಶ ಹಪ್ಪಳ ಮಾಡ್ಳೆ ಬೇಗ ಸುರುಮಾಡಿದವೋ ಗ್ರೇಶಿದೆ ಬೇಲಿಕರೇಲಿ ಹೋಪಗ. ಒಳ ಬಂದು ನೊಡ್ಯಪ್ಪಗ ಗೊಂತಾತು ಇದು ಬೆಳದಾಂಗೆ ಕೊಯ್ದದು 😛

 4. ಯಮ್.ಕೆ. says:

  ಮೂಡ್ಲಾಗಿ” ಭಾವನ” ಕಾಣೆಕ್ಕಾದರೆ ”ಉತ್ತರಾಯಣವರೆಗೆ” ಕಾಯಕ್ಕಾತಿದ.

 5. ಯೇ..ಬೆ!! ದಕ್ಷಿಣಾಯನಲ್ಲಿಯೂ ನಾವಿಲ್ಲಿ ಆಂಜಿಗೊಂಡೇ ಇತ್ತಿದ್ದು ಭಾವ. ಬೇರೆ ಅಂಬೆರ್ಪಿಲ್ಲಿ ಇತ್ತಿದ್ದಕಾರಣ ಇಲ್ಲಿ ಚಕ್ಕನಾಟಿ ಕೂದು ಕುಟುಕುಟು ಮಾಡಿ ಸೊರ ಹೆರಡುಸಲೆ ಎಡಿಗಾಯಿದಿಲ್ಲೆ ಅಟ್ಟೆ. ಹಾಂಗಾಗಿ ನಿಂಗೊಗೆ ಕಾಣದ್ದಾಂಗೆ ಆದ್ದಟ್ಟೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *