“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

June 5, 2017 ರ 10:52 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

ನೆರೆಕರೆ, ನೆಂಟ್ರಿಷ್ಟರೂಳಿ ಭೇಟಿಯಪ್ಪಗ, ಸುಖ-ದುಕ್ಕ ಕೇಳುವದು ಇಪ್ಪದೇ. ಹೀಂಗೊಂದು ಜೆಂಬಾರಕ್ಕೆ ಆನು ಹೋದ ಸಂದರ್ಭಲ್ಲಿ ; “ಅಪ್ಪೊ ಭಾವಯ್ಯಾ ಮನ್ನೆ ಆರೋ ಕುಳವಾರು ಬಂದು ಕೂಸಿನ ನೋಡಿಕ್ಕಿ ಹೋಯಿದವಾಡ, ಎಂತಾತದು?” ಕೇಳಿದ  ಒಬ್ಬ .

“ಅದೆಂತರ  ಅಪ್ಪದು! ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ ಮಾಡಿದ್ದ ಸಂಧಾನ ಹಾಕಿದವ!”

ಈ ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ ಹೇಳಿರೆ ಎಂತ ಅರ್ಥ!?, ಅಪ್ಪನತ್ರೆ ಕೇಳಿದೆ. ಅದಕ್ಕೆ ಅವು ಹೇಳಿದೊವು

“ನೋಡು,ಮೋಳೇ  ಬೆಳೂಲ ರಾಶಿಲಿ ಹಲಸಿನ ಕಾಯಿ ಕಡುದು ಕಡಿಮಾಡಿ ಹಾಕಿ ನೋಡು! ಅದು ನಿನ ಉಪಕಾರಕ್ಕೆ ಸಿಕ್ಕ. ಹಲಸಿನಕಾಯಿ ಮೇಣಕ್ಕೆ ಬೆಳೂಲು ಅಂಟಿ ನಿಂದು ನಿನ ಅದರ ಎಳಕ್ಕಲೆ ಕಷ್ಟ!, ಆವಲೂ ಎಡಿಯ!!.

“ಮಾಡಿದ ಕೆಲಸ ಸರೀ ಸುಸೂತ್ರ ಆಗದ್ದಕ್ಕಿದ ಈ ಮಾತು ಹೇಳುವದು”, ಹೇಳಿದವು ಎನ್ನಪ್ಪ. ಈ ಮಾತಿನ ನಿಂಗಳ ಹೆರಿಯವೂ ಹೇಳುವದು ಕೇಳಿಪ್ಪಿ, ಎಂತ ಹೇಳ್ತಿ?.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶರ್ಮಪ್ಪಚ್ಚಿ

  ವಿಜಯತ್ತಿಗೆ,
  ಆನು ಈ ನುಡಿಗಟ್ಟು ಕೇಳಿತ್ತಿದ್ದೆ. ಆದರೆ ಸರಿಯಾಗಿಅರ್ಥ ಆದ್ದು ನೀನು ವಿವರಿಸಿದ ಮತ್ತೆಯೇ
  ಧನ್ಯವಾದಂಗೊ

  [Reply]

  ವಿಜಯತ್ತೆ

  ವಿಜಯತ್ತೆ Reply:

  ಶರ್ಮಭಾವ, ಎನಗೆ ಹೀಂಗಿದ್ದೆಲ್ಲ ಎನ್ನ ಅಪ್ಪನತ್ರಂದ ಬಂದ ಬಳುವಳಿ. ನಿನ ಗೊಂತಿದ್ದಾಂಗೆ; ಅವು ಮಾತು ಮಾತಿಂಗೆ ಗಾದೆ -ನುಡಿಗಟ್ಟು ಹೇಳಿ ಸಮಜಾತಿಶಿಕೆ ಕೊಡುಗಿದ.

  [Reply]

  VN:F [1.9.22_1171]
  Rating: 0 (from 0 votes)
 2. ಪಟ್ಟಾಜೆ ಶಂಕರ ಭಟ್

  ಗಾದೆ ಒಳ್ಳೆ ದಿದ್ದು. ಆನು ಈ ಗಾದೆಯ ಮದಲು ಕೇಳಿ ದ್ದಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 3. ಪಟ್ಟಾಜೆ ಶಂಕರ ಭಟ್

  ಚೆನ್ನೈ ಭಾವ ಹೇದರೆ ಅರ್ತಿಕಜೆ ಶ್ರೀ ಕೃಷ್ಣ ಭಾವನೊ ಎಂತ?

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಲಾಯ್ಕ ಗಾದೆ ,ಸಮರ್ಥ ವಿವರ.ಚಿಕ್ಕಮ್ಮ ಇದೆಲ್ಲ ಪುಸ್ತಕ ಮಾಡಿ

  [Reply]

  ವಿಜಯತ್ತೆ

  ವಿಜಯತ್ತೆ Reply:

  ನಿನ್ನ ಸಲಹೆ ಒಳ್ಳೆದು ಗೋಪಾಲ . ಮಾಡೆಕ್ಕುಳಿ ಆಲೋಚನೆ ಇದ್ದು……,ಆದರೆ ….!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಗೋಪಾಲಣ್ಣಕಾವಿನಮೂಲೆ ಮಾಣಿಶಾಂತತ್ತೆನೀರ್ಕಜೆ ಮಹೇಶಸುವರ್ಣಿನೀ ಕೊಣಲೆಮಂಗ್ಳೂರ ಮಾಣಿಬೊಳುಂಬು ಮಾವ°ಸಂಪಾದಕ°ವಸಂತರಾಜ್ ಹಳೆಮನೆಚುಬ್ಬಣ್ಣಅನುಶ್ರೀ ಬಂಡಾಡಿದೊಡ್ಮನೆ ಭಾವಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಅಕ್ಷರದಣ್ಣಪಟಿಕಲ್ಲಪ್ಪಚ್ಚಿಶ್ಯಾಮಣ್ಣವೇಣೂರಣ್ಣಹಳೆಮನೆ ಅಣ್ಣಜಯಶ್ರೀ ನೀರಮೂಲೆಪುಟ್ಟಬಾವ°ರಾಜಣ್ಣದೊಡ್ಡಭಾವಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ