ಬ್ರಾಹ್ಮಣ್ಯೇವಾಧಿಕಾರಸ್ತೇ … !!!

ಮನ್ನೆ ಕಳಾಯಿ ಗೀತತ್ತೆ , ದೇಶದ ಬಗ್ಗೆ,  ಆದ್ಯತೆ ಬಗ್ಗೆ ಬರದು,  ನಮ್ಮವರಲ್ಲಿ ಹುಟ್ಟುಸಿದ ವಿಚಾರ ಕ್ರಾಂತಿ, ವಿನಿಮಯ ಅದ್ಭುತವಾಗಿ ಆತು.  ಒಳ್ಳೆ ವಿಮರ್ಶೆಗೊ.  ನೀರ್ಕಜೆ ಅಪ್ಪಚ್ಚಿಯಂತೂ,  ಲೇಖನಂದ ದೊಡ್ಡ ಒಪ್ಪ ಕೊಟ್ಟವು.  ಒಳ್ಳೆ ವಿಚಾರಂಗೊ ಹರುದು ಬಂತು.  ಒಪ್ಪಣ್ಣನ ಬೈಲು ಸಮೃಧ್ಧಿ ಆತು.   ಆನು ರಾಜಕೀಯಂದ ರಜಾ ದೂರ.  ಹಾಂಗಾಗಿ ಮಾತಾಡದ್ದೆ ಕೂದೆ. ಬೇಜಾರು ಮಾಡೆಡಿ.  

ಇದು ಆನು ಬರದ್ದಲ್ಲ.   ಮೂವತ್ತು  ವರ್ಷ ಹಿಂದೆ ಎನ್ನ ತೀರ್ಥರೂಪರಾದ, ದಿವಂಗತ ವಿದ್ವಾನ್  ಬೊಳುಂಬು ಕೃಷ್ಣ ಭಟ್ರು ಬರದ ಒಂದು ಬಿಡಿ ಲೇಖನ ಸಿಕ್ಕಿತ್ತು.  ಅದರ ಇಲ್ಲಿ ಬೈಲಿಲ್ಲಿ ಹಾಕುವೋ ಹೇಳಿ ಕಂಡತ್ತು.  “ಬೊಳುಂಬು ಅಜ್ಜ” ಹೇಳಿರೆ ದೊಡ್ಡಮಾವನ  ಸೋದರ ಮಾವ.   ಅವು ಅಜ್ಜನ  ಬಗ್ಗೆ ಇನ್ನೂ ಹೇಳುಗು.

ಅಂಬಗಾಣ ಕಾಲಕ್ಕೆ ಪ್ರಸ್ತುತವಾದ ವಿಷಯ ಇದು.  ಈಗಳೂ ಕೆಲವು ವಿಷಯಲ್ಲಿ ಇದು ಸರಿ ಹೇಳಿ ಕಾಣುತ್ತು.  ಇರಳಿ.  ಪೀಠಿಕೆಯ ಬಿಟ್ಟು ಮುಂದೆ ಹೋಪೊ.

ಮಂಗಂಗಳ ಹಾಂಗೆ ಚಪಲಚಿತ್ತರೂ, ಪರೋಪದ್ರವಿಗಳೂ ಆದ ಜನಂಗವಕ್ಕೆ  ಶ್ರೇಷ್ಟನೆನಿಸಿ ಕೊಂಡ, ದೇಶದ ಸ್ಥಿತಿಗತಿಗವಕ್ಕೆ ಕಾರಣ ಆದ ಮುಖ್ಯ ಜನನಾಯಕ (ರಾಜಕಾರಣಿ),  ಅದರ  ಬೀಲವನ್ನೇ  ಹಿಡುದು ನೇಲುತ್ತ ಅನನುಭವಿಗಳಾಗೆಂಡಿದ್ದ ತನ್ನ ಶಿಷ್ಯರಿಂಗೆ ಈ ರೀತಿ ತಿಳುಸುತ್ತಾಡ.

“ಶಿಷ್ಯೋತ್ತಮರೇ, ಅಂದು ದ್ವಾಪರಯುಗದಲ್ಲಿ ಶ್ರೀಕೃಷ್ಣ ದೇವನು, ತನ್ನ ಅನುಯಾಯಿಯಾದ ಅರ್ಜುನನಿಗೆ ಮಾಡಿದ ಉಪದೇಶಗಳನ್ನು “ಭಗವದ್ಗೀತೆ”ಯೆಂದು ಎಲ್ಲರೂ ಕರೆಯುತ್ತಾರೆ ಹಾಗೂ ಗೌರವಿಸುತ್ತಾರೆ. (ಜನನಾಯಕ, ಅದು  ನಮ್ಮ ಭಾಷೆಲಿ ಹೇಳಿದ್ದು ಅಲ್ಲ.  ಅದು ಬ್ರಾಹ್ಮಣನೂ ಅಲ್ಲ.  ಹಾಂಗಾಗಿ, ಅದು ಕನ್ನಡಲ್ಲಿ ಹೇಳಿದ್ದರ ನಮ್ಮ ಬೈಲಿನವಕ್ಕೆ ಅರ್ಥ ಆವುತ್ತ ಹಾಂಗೆ ಹವ್ಯಕ ಭಾಷೆಲಿ ಮುಂದುವರಿಸುತ್ತೆ !) ಗೀತೆಲಿ ಹೇಳಿದ ಮಾತುಗೊ ಅಂದ್ರಾಣ ಕಾಲಕ್ಕೆ ಯೋಗ್ಯವಾಗಿದ್ದು, ಈಗಾಣ ಕಾಲಕ್ಕೆ ಸರಿ ಹೊಂದುತ್ತಿಲ್ಲೆ ! ದ್ವಾಪರ ಯುಗಕ್ಕೂ, ಕಲಿಯುಗಕ್ಕೂ ತುಂಬಾ ವ್ಯತ್ಯಾಸ ಇದ್ದ ಕಾರಣ ಇಂದಿಂಗೆ ಹೊಂದುತ್ತ ಹಾಂಗೆ ಹೊಂದುಸೆಂಡು ಉಪದೇಶ ಮಾಡುತ್ತಾ ಇದ್ದೆ.

ಬ್ರಾಹ್ಮಣ್ಯೇವಾಧಿಕಾರಸ್ತೇ ಮಾಪಳೇಷು ಕದಾಚನ |

ಮಾಫಲೇನ ವಿನಾ ಕಾರ್ಯಂ ಮಾನ್ಯವಂತೋ ಹರಿರ್ಗಿರಿ :||

 

“ಶಿಷ್ಯರೇ, ಈ ಜಗತ್ತಿಲ್ಲಿ, ಬ್ರಾಹ್ಮಣರೆಂದು ಕರೆಸಿ ಕೊಂಡು, ಮದ್ಯ ಮಾಂಸಗಳ ತ್ಯಜಿಸಿ, ನೀತಿನಿಷ್ಠೆಲಿ ನೆಡೆತ್ತ ಜನಂಗೊ ಇದ್ದವು. ಅವು ಬುದ್ಧಿ ಜೀವಿಗೊ. ಸೌಮ್ಯಗುಣಭೂಯಿಷ್ಟರು. ಅವರಲ್ಲಿ ನಿಂಗೊ ಏವ ರೀತಿಯ ಅಧಿಕಾರ ತೋರುಸಿದರೂ, ಏವ ಅಪಾಯವೂ ನಿಂಗೊಗೆ ಬಾರ. ಬೇಕಾದಷ್ಟು ಕರಕಂದಾಯಂಗಳ ಅವರಿಂದ ವಸೂಲು ಮಾಡಿ, ಆ ಹಣವ ನಿಂಗಳ, ನಿಂಗಳ ಅನುಯಾಯಿಗಳ ಉದ್ಧಾರಕ್ಕೆ ಉಪಯೋಗಿಸಲೆ ಅಕ್ಕು. ಅವಕ್ಕೆ ಯಾವುದೇ ಅಧಿಕಾರ ಕೊಡೆಡ.  ಹಾಂಗೆ ಕೊಟ್ಟರೆ, ನಿನಗೆ ಸ್ಥಾನ ಭ್ರಷ್ಟನಾಗಿ ಆವ್ತ ಅಪಾಯ ಇದ್ದು. 

ದೇಶಲ್ಲಿ “ಮಾಪಳೆ“ಗೊ ತುಂಬಾ ಸಂಖ್ಯೆಲಿ ಇದ್ದರೂ, ಇತರ ಎಲ್ಲಾ ವರ್ಗದವರ ಸೇರುಸಿ ಅಪ್ಪಗ, ಅವು “ಅಲ್ಪ ಸಂಖ್ಯಾತರು” ಹೇಳಿ ಅವರ ದಿನಿಗೇಳಿ ಅವಕ್ಕೆ ಹೆಚ್ಚಿನ ಅನುಕೂಲತೆಗಳ ಕಲ್ಪಿಸಿ ಕೊಡು.  ಅವರ ಸಂಘಟನೆ ದೊಡ್ಡದು. ಅಲ್ಲದ್ದೆ, ಅವು ತಾಮಸ ಜಾತಿ ಆದ್ದರಿಂದ ಅವರ ಮೇಲೆ ಅಧಿಕಾರ ಚಲಾಯಿಸೆಡ. ಅದೂ ಅಲ್ಲದ್ದೆ, ನಿನ್ನ ಅಧಿಕಾರ ನೀರ ಮೇಲಾಣ ಗುಳ್ಳೆ ಹಾಂಗೆ ಅಸ್ಥಿರವಾದ್ದರಿಂದ, ನಿನ್ನ ಅಧಿಕಾರಾವಧಿಲಿ ಬೇಕಾದಷ್ಟು ಸಂಪಾದನೆ ಮಾಡಿಗೊ.  ನೀನು ಮಾಡ್ತ ಕರ್ಮಕ್ಕೆ ತಕ್ಕ ಹಾಂಗೆ ಹಿರಿದಾದ ಫಲವ ಪಡೆಯದ್ದೆ, ಏವದೇ ಕೆಲಸವ ಮಾಡೆಡ !  “ಶರೀರಮಾದ್ಯಂ, ಖಲುಧರ್ಮ ಸಾಧನಂ” ಹೇಳ್ತ ಹಾಂಗೆ, ನಿನ್ನ ಹಾಂಗೂ ನಿನ್ನ ಕುಟುಂಬದ ಪ್ರಗತಿಗೇ ಆದ್ಯತೆ ಕೊಟ್ಟು ಪ್ರಾಮಾಣಿಕತೆಯ ಪೂರ್ತಿ ಮರೆತು ಬಿಡು !

ಎಲೈ, ಶಿಷ್ಯನೇ, ಅದೂ ಅಲ್ಲದ್ದೆ, ನೀನು ಜನನಾಯಕನಾಗಿ ಮೇಲೆ ಬರೆಕಾದರೆ, ಬುದ್ಧಿಜೀವಿಗಳು, ಶೀಲವಂತರೂ ಆದ ಬ್ರಾಹ್ಮಣರಿಗೆ ಅಗ್ರಸ್ಥಾನವನ್ನು ಕೊಡದೆ, ಅವರನ್ನು ಅವಹೇಳನ ಮಾಡುತ್ತಾ, ನೀಚೋತ್ತಮರೂ, ಏವ ಪಾಪಕಾರ್ಯಕ್ಕೆ ಹೇಸದ್ದವೂ, ಶ್ವಪಚರೂ ಆದವಕ್ಕೆ  ಹರಿಜನ, ಗಿರಿಜನ ಹೇಳಿ  ನಾಮಕರಣ ಮಾಡಿ, ಅವರ ಮುಂದೆ ಮಡಗಿ, ಸರ್ವ ಮಾನ್ಯತೆಯನ್ನೂ ಕೊಡು.  ಇದರಿಂದ ಅವರ ದೆಸೆಂದ ನಿನಗೆ ಬತ್ತ ಬಾಧೆ ಇಲ್ಲದ್ದೆ, ನಿನ್ನ ಸ್ಥಾನ ಗಟ್ಟಿ ಆವುತ್ತು. ಈ ತತ್ವದ  ಆಧಾರದ ಮೇಗೆ “ಘಟನೆ”ಯ ಬರದು, ಪ್ರಜಾಜನರಲ್ಲಿ ಅಂತ:ಕಲಹವ ಉದ್ದೀಪನೆ ಗೊಳುಸಿ, ಆಢಳಿತ ನೆಡೆಸಿದಲ್ಲಿ ನಿನಗೆ ನಿರ್ವಿಘ್ನವಾಗಿ ಜೆನಂಗಳ ಆಳಲೆ ಎಡಿಗು.  ಏವಗ, ಜೆನರಲ್ಲಿ ಒಗ್ಗಟ್ಟು ಹೇಳ್ತದು ಇರ್ತಿಲ್ಲೆಯೋ,  ಅಲ್ಲಿವರೆಗೆ ನಿನ್ನ ಸ್ಥಾನಕ್ಕೆ ಏವ ಚ್ಯುತಿಯೂ ಬಾರ.”

ಹೇಳಿ ಜನನಾಯಕ, ಅದರ ಹಿಂ”ಬಾಲ”ಕರಿಂಗೆ ಹೇಳಿತ್ತಾಡ.   ಇದರ ಬಗ್ಗೆ ನಿಂಗಳ ವಿಮರ್ಶೆಗೆ  ಸ್ವಾಗತ.

ಬೊಳುಂಬು ಮಾವ°

   

You may also like...

14 Responses

 1. ರಘುಮುಳಿಯ says:

  ಮೂವತ್ತು ವರುಷದ ಹಿಂದಿನ ಮಾತಿನ ಹಿ೦”ಬಾಲ”ಕ೦ಗೋ ಅಕ್ಷರಶಃ ಪರಿಪಾಲಿಸಿಗೊಂಡು ಬಂದು ನಮ್ಮ ದೇಶವ ಮುನ್ನಡೆಸುತ್ತಾ ಇದ್ದವು.ಕುರುಶಿ ಗಟ್ಟಿ ಮಾಡಿಗೋ೦ಡಿದ್ದವು.

 2. ಗಣೇಶ ಪೆರ್ವ says:

  ಬೊಳು೦ಬು ಅಪ್ಪಚ್ಚಿ, ಆ ಶ್ಲೋಕವ ನಮ್ಮ ಡಾಮಹೇಶಣ್ಣ ನೋಡಿರೆ, ಬೇರೆ ಅರ್ಥ ಸಿಕ್ಕುಗೋ ಏನೋ?!!

  ನಿನ್ನ ಅಧಿಕಾರ ಬ್ರಾಹ್ಮಣ್ಯದ ಮೇಲೆ ಮಾ೦ತ್ರ, ಮಾಪಳೆಗಳ ಮೇಲೆ ಅಲ್ಲ
  ಕೆಲಸವೇ ಮಾಡದ್ದೆ, ಫಲವೂ ಇಲ್ಲದ್ದೆ, ಹರಿ-ಗಿರಿ-ಜನ೦ಗೊ ಭಾರೀ ಮರ್ಯಾದಸ್ಥರಕ್ಕು,(ಮರ್ಯಾದಸ್ಥರಾಯಿದವು)

  ಹೇಳಿಯೋ ಮಣ್ಣೋ ಹೇಳುಗಾಯ್ಕು. 🙂

  • ಗಣೇಶ ಪೆರ್ವ says:

   ಅಯ್ಯೋ, ನಿ೦ಗಳ ಲೇಖನಲ್ಲಿಪ್ಪ ಅರ್ಥವೇ ಆನು ಹೇಳಿದ ಅರ್ಥಕ್ಕಿ೦ತಲೂ ಹೆಚ್ಚು ಯೋಜ್ಯ. ತಪ್ಪು ತಪ್ಪು ಅರ್ಥ ಮಾಡ್ಯೊ೦ಡದಕ್ಕೆ ಮಹೇಶ ಎನ್ನ ಬಯ್ಯದ್ರೆ ಸಾಕು. ಇಲ್ಲಿ ಒ೦ದರಿ ಕೊಟ್ಟ ಒಪ್ಪವ ಉದ್ದಲೆ ಎಡಿತ್ತಿಲ್ಲೇನೆ!!..
   ಕ್ಷಮಿಸಿ..

  • ಬೊಳುಂಬು ಮಾವ says:

   ಅದೇ, ಆನೂ ಒಂದರಿ ಇದರ ಬೈಲಿಂಗೆ ಹಾಕುವನ್ನ ಮದಲೆ ಮಹೇಶಣ್ಣನ ಹತ್ರೆ ವಿಚಾರುಸುವೋ ಹೇಳಿ ಗ್ರೇಶಿದೆ. ಅವ ಪ್ರಾನ್ಸಿಲ್ಲಿ ಆ ಭಾರೀ ಚಳಿಲಿ, ಅಂಕೆ ಸಂಖ್ಯೆಯ ಸಂಶೋಧನೆಲಿ ಇದ್ದ. ಸುಮ್ಮನೇ ಎನ್ನ ಪೊದ್ರ ಎಂತಕೆ ಹೇಳಿ. ಅದೇ ಅಪ್ಪಾ, ಒಂದೇ ಪದ್ಯಕ್ಕೆ , ಏವ ರೀತಿಲಿ ಬೇಕಾರೂ ಅರ್ಥ ಹೇಳ್ಲಾವುತ್ತಾನೆ. ಮುಳಿಯದ ಭಾವಯ್ಯಂಗೆ ತಾಳಮದ್ದಳೆಲಿ ಹೇಳಿ ಗೊಂತಿಕ್ಕು. ಅಂತೂ ಬೆಶಿ ಬೆಶಿ ಆಗಿ ಒಪ್ಪ ಕೊಟ್ಟದಕ್ಕೆ ಇಬ್ರಿಂಗೂ ಕೃತಜ್ಞತೆಗೊ.

 3. ನೀರ್ಕಜೆ ಅಪ್ಪಚ್ಚಿ says:

  ಇದಾ ಎನಗೆ ಕಂಡದರೆ ಹೇಳ್ತೆ, ಬೇಜಾರು ಮಾಡುಲಾಗ ಆತ ಆರುದೆ..

  ಈ ಲೇಖನವೂ ಸೇರಿದಂತೆ ಬಹುತೇಕ ವಾದಂಗೊ ರಾಜಕೀಯವೇ ಹೊರತು ಮತ್ತೆಂತ ಅಲ್ಲ. ಇಲ್ಲಿ ಬ್ರಾಹ್ಮಣರು ಒಂದು ಪಾರ್ಟಿ, ಇತರ ಜಾತಿಗೊ ಒಂದು ಪಾರ್ಟಿ. ಒಬ್ಬರು ಇನ್ನೊಬ್ಬರ ದೂರುದು. ಬ್ರಾಹ್ಮಣ್ರು ತಮ್ಮ ತಪ್ಪಿನ ಮುಚ್ಚಿ ಕೆಳಜಾತಿಯವರ ದೂರುದು, ಕೆಳ ಜಾತಿಯವು ಬ್ರಾಮರ ದೂರುದು. ಅದಕ್ಕೆ ಇಂಥಾ ಶ್ಲೋಕ ಎಲ್ಲ ಉಪಯೋಗ ಬತ್ತು. ಕೆಳಜಾತಿಯವೂ ಇಂಥಾ ಶ್ಲೋಕ ರಚಿಸದ್ದೇ ಇರ್ತವಿಲ್ಲೆ. ರಾಜಕಾರಣಿಗೊ ಪ್ರಣಾಳಿಕೆ ಬರದ ಹಾಂಗೆ. ಇದಕ್ಕೂ ಈಗ ನಡೆತ್ತಾ ಇಪ್ಪ ರಾಜಕಾರಣಕ್ಕೂ ಹೆಚ್ಚು ವ್ಯತ್ಯಾಸ ಎಂತ ಇಲ್ಲೆ.

  ರಾಜಕಾರಣ ಹೇಂಗೆ ವಿಷವರ್ತುಲದೊಳ ಸಿಕ್ಕಿಗೊಂಡಿದೋ ಈ ಜಾತಿ ವಿಷಯಂಗಳುದೆ ವಿಷವರ್ತುಲದೊಳ ಸಿಕ್ಕಿಗೊಂಡಿದೋ ಹೇಳಿ ಎನಗೆ ಅನ್ಸುದು. ಈ ವಿಷವರ್ತುಲಂದ ಹೆರ ಬಪ್ಪದು ಹೇಂಗೆ ಹೇಳುದರ ಬಗ್ಗೆಯೇ ಯೋಚ್ಸೆಕ್ಕು ಹೊರತು ಒಬ್ಬರನ್ನೊಬ್ಬರು ದೂಷಿಸುತ್ತಾ ಕೂದರೆ ಉಪಯೋಗ ಎಂತ?

  ಧರ್ಮ ಉನ್ನತಿ ಆಯೆಕ್ಕಾರೆ ಬ್ರಾಹ್ಮಣರು ಮಾತ್ರ ಉಧ್ಧಾರ ಆದರೆ ಸಾಲ. ಎಲ್ಲರೂ ಆಯೆಕ್ಕು. ನಾಲ್ಕು ವರ್ಣಂಗೊ ಸಮಾಜದ ಸಹಜ ಸ್ಥಿತಿ. ಇದು ವೇದವಿದಿತ. ಹಾಂಗಾಗಿ ಎಲ್ಲರಲ್ಲೂ ಧರ್ಮ ಜಾಗೃತಿ ಮೂಡೆಕ್ಕು. ಇದರ ಬಗ್ಗೆ ಒಂದು “Satellite view” ಇಲ್ಲದ್ದರೆ ಈ ದೂಷಣೆ ಹೀಂಗೆಯೇ ಮುಂದುವರೆಗು, ಇದರ ಪ್ರಯೋಜನವ ಬೇರೆ ಮತದವು ಪಡೆತ್ತವಷ್ಟೆ.

  ಎಲ್ಲಕ್ಕಿಂತ ಮೊದಲು ನಾವು ಧರ್ಮದ ಪಾರ್ಟಿಯೋ ಅಥವಾ ಬ್ರಾಹ್ಮಣ್ರ (ಜಾತಿ) ಪಾರ್ಟಿಯೋ ಮೊದಲು ಕೇಳಿಗೊಳ್ಳೆಕ್ಕು. ಧರ್ಮದ ಪಾರ್ಟಿ ಆದರೆ ಜಾತಿ ಮರೆತ್ತು, ಜಾತಿ ಪಾರ್ಟಿ ಆದರೆ ಧರ್ಮ ಮರೆತ್ತು. ಯಾವುದು ಬೇಕೋ ಅದು ನಮ್ಮ ಆಯ್ಕೆ.

  • ರಘುಮುಳಿಯ says:

   ಅಪ್ಪಚ್ಚಿ,ಏಕತೆಯ ನಿರೀಕ್ಷೆ ಸರಿಯಾದರೂ ಕಾರ್ಯರೂಪಕ್ಕೆ ಬಾರದ್ದ ವಿಷಯ.ನಮ್ಮ ದೇಶವ ಆಳಿದವು ಎಲ್ಲೋರು ‘ವಿಭಜಿಸಿ ಆಳು’ ಹೇಳುವ ತತ್ವವ ಪಾಲಿಸಿ ಯಶಸ್ವಿ ಆದ್ದದು.
   ಅಲೆಕ್ಸಾ೦ಡರ್ ನಮ್ಮ ದೇಶಕ್ಕೆ ದಾಳಿ ಮಾಡಿ ಅಪ್ಪಗ ಇಲ್ಲಿ ಆನೆಗಳ ,ಸೈನಿಕರ ಕಂಡು ಹೆದರಿದ ಅಡ.ಆನೆಗಳ ಜನ್ಮಲ್ಲಿ ಕಾಣದ್ದ ಮನುಷ್ಯರು ಅವು.ಈ ದೇಶದ ಸಂಪತ್ತಿನ ಸೂರೆ ಮಾಡುಲೆ ಸಾಧ್ಯ ಇಲ್ಲೇ ಹೇಳ್ತಾ ನಿರ್ಧಾರಕ್ಕೆ ಬಂದ ಅಡ. ಆದರೆ ಕಸ್ತಲೆ ಅಪ್ಪಗ ನೋಡಿರೆ ಭಾರತದ ಸೈನಿಕರು ಬೇರೆ ಬೇರೆಯಾಗಿ ಅಡಿಗೆ ಮಾಡೋದು ಕಂಡತ್ತಡ. ಆಶ್ಚರ್ಯಲ್ಲಿ ಕಾರಣ ತಿಳುಕ್ಕೊಂಡಪ್ಪಗ ಗೊಂತಾತು,ಇಲ್ಯಾಣ ಆಹಾರ ಕ್ರಮ ( ಸಸ್ಯಾಹಾರಿ /ಮಾಂಸಾಹಾರಿ),ಜಾತಿಗೋ ಇತ್ಯಾದಿ.ಕೂಡಲೇ ಹೇಳಿದ ಅಡ,ಈ ದೇಶವ ಜೈಸುಲೆ ನವಗೆ ಕಷ್ಟ ಇಲ್ಲೇ ಯುದ್ಧ ಮುಂದುವರಿಸುವ ಹೇಳಿ. ಹೀಂಗೆ ಅನೇಕತೆಲಿ ಏಕತೆಯ ಕಂಡುಗೊಂಡು ಜಗತ್ತಿಂಗೆ ಒಂದು ಆಶ್ಚರ್ಯ ಹೇಳುವ ರೀತಿಲಿ ಬೆಳೆತ್ತಾ ಇಪ್ಪದು ನಮ್ಮ ದೇಶ.
   ಇದು ನುಚ್ಚುನೂರಪ್ಪಲೂ ಕಷ್ಟ ಇಲ್ಲೆ,ಕೆಲವು ಸೇನೆಗೋ ಓರಾಟ ಮಾಡಿರೆ ಸಾಕಕ್ಕು,ಭಾಷೆ ,ನೆಲ ಹೇಳಿ .
   ಪ್ರತಿ ರಾಜ್ಯಲ್ಲಿ ಬೇರೆ ಬೇರೆ ಆಹಾರ,ಜೀವನ ಕ್ರಮಂಗೋ.ಬ್ರಾಹ್ಮಣರಲ್ಲೇ ನೋಡಿರೆ ದಕ್ಷಿಣಕ್ಕೂ ಉತ್ತರ ಭಾರತಕ್ಕೂ ಎಷ್ಟೋ ವ್ಯತ್ಯಾಸ ಕಂಡು ಬತ್ತು.(ಬಂಗಾಳಲ್ಲಿ ಬ್ರಾಹ್ಮರೂ ಮೀನು ತಿಂತವು).
   ಇಂದು ಬ್ರಾಹ್ಮರಲ್ಲೇ ಏಕತೆ ತಪ್ಪದು ಕಷ್ಟ.ಶಿವಳ್ಳಿಯವು ತಾನು ಮೇಲು ಹೇಳುಗು,ಸ್ಥಾನಿಕರ ಸಕಲರೂ ಕೆಳ ತಳ್ಳುಗು.ಮೇಲು ಕೀಳು ಹೇಳುವ ಶಬ್ದ ಇಂದು ಅರ್ಥಹೀನ.ಎಲ್ಲೋರಿಂಗೂ ವಿದ್ಯೆ ಸಿಕ್ಕುತ್ತು,ಸಂಪಾದನೆ ಅವಕಾಶ ಇದ್ದು.
   ಭೇದೋಪಾಯಲ್ಲಿ ರಾಜ್ಯವ ಆಳು ಹೇಳಿ ನಾಯಕ ಬಾಲ೦ಗೊಕ್ಕೆ ಹೇಳೋದು ಸಾಮಾನ್ಯ.ಇಂದಿರಾಗಾಂಧಿಯ ಕಾಲಲ್ಲಿ ಇಂಥಾ ಹಲವು ಘೋಷಣೆಗೋ ಕೇಳಿ ಬಂತು. ಅತಿ ಹೆಚ್ಚು ಲಾಭ ಪಡದ್ದದು ಮುಖಂಡ೦ಗಳೇ ಅಲ್ಲದೋ?
   ‘ಗರೀಬಿ ಹಟಾವೋ ‘ ಹೇಳಿ ಬೊಬ್ಬೆ ಹೊಡದು ಪೈಸೆ ಮಾಡಿದ್ದದು ಅವ್ವೆ, ಬಡವರ ಸಂಖ್ಯೆ ಏನು ಕಮ್ಮಿ ಆಯಿದಿಲ್ಲೆ.
   ಎಲ್ಲವನ್ನೂ ಸ್ವೀಕಾರ ಮಾಡುವ ನಮ್ಮ ಧರ್ಮ ಏಕತೆಯ ಮಾಂತ್ರ ಮರದ್ದು ,ಒಪ್ಪೆಕ್ಕಾದ ವಿಷಯ. ಎಲ್ಲಿಂದ ಏಕತೆಯ ಶುರು ಮಾಡೊದು? ಒಬ್ಬನೇ ದೇವರು ಹೇಳಿ ಶುರು ಮಾಡುವನೋ?ಆರಕ್ಕು ?

   • ನೀರ್ಕಜೆ ಮಹೇಶ says:

    ರಘು ಅಪ್ಪಚ್ಚಿ, ಇಲ್ಲಿ ಚರ್ಚೆ ಚೂರು ಬೇರೆ ವಿಚಾರಲ್ಲಿ ನಡೆತ್ತಾ ಇಪ್ಪದು. ಏಕತೆ ಬರೆಕ್ಕು ಹೇಳಿ ಇಲ್ಲಿ ಆರ ಅಭಿಪ್ರಾಯವೂ ಅಲ್ಲ. ಜಾತಿ ಹೊಡೆದೋಡ್ಸೆಕ್ಕು ಹೇಳಿ ಬಡಬಡಿಕೆಯೂ ಅಲ್ಲ. ಚರ್ಚೆ ಶುರು ಆದ್ದು ಮೀಸಲಾತಿ ವಿಷಯಂದ. ಮತ್ತೆ ರಜಾ ಇತರ ಜಾತಿಯವು ಬ್ರಾಹ್ಮಣರ ಹೇಂಗೆ ತುಳಿತ್ತಾ ಇದ್ದು ಹೇಳುದರ ಬಗ್ಗೆ ಮಾತು ಬಂತು. ಇದಕ್ಕೆ ಪ್ರತಿಯಾಗಿ ಆನು ಹೇಳಿದ್ದು ಶಿಕ್ಷಣವ (ಅದರಲ್ಲೂ ಧಾರ್ಮಿಕ ಶಿಕ್ಷಣ) ಹೇಂಗೆ ಎಲ್ಲರಿಂಗೂ (ಬ್ರಾಹ್ಮಣರಿಂಗೆ ಮಾತ್ರ ಸಾಲ) ಕೊಡೆಕ್ಕು ಹೇಳುದರ ಬಗ್ಗೆ. ಧಾರ್ಮಿಕ ಶಿಕ್ಷಣ ಎಲ್ಲರಿಂಗೂ ಸಿಕ್ಕದ್ದೇ ಇದ್ದರೆ ಕೇವಳ ಹರೀಶಣ್ಣ ಹೇಳಿದ ಹಾಂಗೆ ನಮ್ಮ ಸಮಾಜ ದುರ್ಬಲ ಆವುತ್ತು. ಆದರೆ ಕೊಡುದು ಹೇಂಗೆ ಹೇಳಿ ಇಪ್ಪದೇ ಪ್ರಶ್ನೆ.

    • ರಘುಮುಳಿಯ says:

     ಓ ಎನ್ನ ರೈಲಿನ ಹಳಿಯೇ ಬೇರೆ.
     ಧಾರ್ಮಿಕ ಶಿಕ್ಷಣ ಹೇಳಿರೆ?

 4. Krishnamohana Bhat says:

  ನೀರ್ಕಜೆ ಅಪ್ಪಚ್ಚಿ ರಜ ಬ೦ಗ ಇದ್ದಾನೆ ನಿ೦ಗಳ ವಾದವ ಒಪ್ಪಲೆ ನಿ೦ಗಳ ತೊಳಿತ್ತದೇ ಎನ್ನ ಧರ್ಮ ಹೇಳಿಯೊ೦ಡು ಒ೦ದಷ್ಟು ಜೆನ೦ಗೊ ಸೇರಿ ಗೊ೦ಡು ತೊಳಿವಾಗ ಅದರ ಸಹಿಸೇಕು ಹೇಳೀರೆ ರಜ ಕಷ್ಟ ಇದ್ದು.ಇ೦ದು ಈ ಹರಿ ಗಿರಿ ಹೇಳ್ತವರ ಉದ್ದಾರ ಮಾಡೇಕು ಹೇಳಿ ಹೆರಟವು ಬ್ರಾಹ್ಮಣರೇ ಹಾ೦ಗೆ ಅವ್ವು ಮಾ೦ತ್ರ ಚೂರು ಸಿಕ್ಕಿದ ಚಾನ್ಸಿಲ್ಲಿಯೂ ನಮ್ಮ ತೊಳಿತ್ತಾಇದ್ದವು ನಾವು ಅದರ ಸಹಿಸಿಯು ಅವರ ಹೇಲು ತೆಗವಲೆ ಹೋವುತ್ತಾಇದ್ದು.ಇನ್ನು ಜಾತಿ ಪಾರ್ಟಿ ಧರ್ಮದ ಪಾರ್ಟಿ ಹೇಳುವದು ನಾವು ಧರ್ಮ ಹೇಳುವದರ ಅರ್ಥ ಮಾಡಿಯೋಳದ್ದದರ ಕಾರಣವೇ ಜಾತಿ ಹೇಳುವದು ಮು೦ದೆ ಬ೦ದದು.ನಾವು ಯಾವದರ ಮಾಡೇಕೊ ಅದರ ಮಾಡದ್ದೆ ಅಪ್ಪಗ ಧರ್ಮ ಹಿ೦ದೆ ಬೀಳುತ್ತು ಜಾತಿ ಮು೦ದೆ ಬತ್ತು.ಬಿಡಿ ಹಿ೦ಗೆ ಬರೆತ್ತಾ ಹೋದರೆ ಅದುವೇ ಒ೦ದು ರಾಮಾಯಣ ಅಕ್ಕು.ಬೊಳು೦ಬು ಮಾವ೦ ಮುವತ್ತು ವರ್ಷ ಮದಲೇ ನಿ೦ಗಳ ಅಪ್ಪ೦ ಬರದ ಲೇಖನ ಇ೦ದಿ೦ಗೂ ಪ್ರಸ್ತುತ ಹೇಳೀ ಎನ್ನ ಅಭಿಪ್ರಾಯ.ನೀರ್ಕಜೆ ಅಪ್ಪಚ್ಹಿ ಎನ್ನ ಅಭಿಪ್ರಾಯ ಬರದ್ದಷ್ಟೆ ಬೇಜಾರ ಮಾಡ್ಲೆ ಅಲ್ಲ.ಒಪ್ಪ೦ಗಳೊಟ್ಟಿ೦ಗೆ.

 5. ನೀರ್ಕಜೆ ಅಪ್ಪಚ್ಚಿ says:

  ಬೇಜಾರು ಮಾಡುಲಾಗ ಹೇಳಿ ಆನೇ ಹೇಳಿದ ಮೇಲೆ ಆನು ಬೇಜಾರು ಮಾಡುಲೆ ಗೊಂತಿದ್ದೋ, ಅಲ್ಲದಾ 🙂

  ಇರಳಿ. ಎಲ್ಲೋರೂ ಎನ್ನ ವಾದ ಒಪ್ಪೆಕ್ಕು ಹೇಳಿ ಎನ್ನ ಉದ್ದೇಶವಂತೂ ಖಂಡಿತಾ ಅಲ್ಲ. ಚಾಣಕ್ಯ ಹೇಳಿದ ಹಾಂಗೆ ರಾಜನ ಮಾತಿಂಗೆ ಸಮ್ಮತಿಸದೇ ಇಪ್ಪವನೇ ಅವನ ನಿಜವಾದ ಹಿತೈಶಿ ಹೊರತು ಹೊಗಳು ಭಟ್ಟ ನಿಜವಾದ ಹಿತೈಶಿ ಅಲ್ಲ. ಹಾಂಗಾಗಿ ಎಲ್ಲೋರಿಂಗುದೆ ಎನ್ನ ಮಾತು ಕಹಿ ಅನ್ಸಿದರು ಆನು ಹೇಳುದರ ಹೇಳುತ್ತೆ. ಆರಾರು ಬಾಯಿ ಮುಚ್ಚು ಹೇಳುವನ್ನಾರ.. 🙂

  ಇನ್ನು ತುಳಿವ ವಿಷಯ ಆನು ಮದಲೇ ಹೇಳಿದ ಹಾಂಗೆ ನಾವು ಅವರ ದೂರುದು, ಅವು ನಮ್ಮ ದೂರುದು. ಇಬ್ಬರ ಜಗಳ ಮೂರನೆಯವನ ಲಾಭ. ಆದ ಕಾರಣ ಈ ದೂರುದರ ಬದಲಾಗಿ ಏನಾರು Constructive ಆಗಿ ಕೆಲಸ ಮಾಡುದು ಒಳಿತು ಹೇಳುದಷ್ಟೇ ಎನ್ನ ಅಭಿಮತ.

  ಎಲ್ಲರಿಂಗೂ ಒಳಿತಾಗಲಿ.

  • ಗೋಪಾಲ ಮಾವ says:

   ಜನನಾಯಕ ಅದನ್ನೇ ಹೇಳಿದ್ದದು. ನೀನು ಜನರಲ್ಲಿ ಅಂತ:ಕಲಹವ ಉಂಟು ಮಾಡಿ, ಅವು ಒಗ್ಗಟ್ಟಾಗದ್ದ ಹಾಂಗೆ ಮಾಡಿ, ನಿನ್ನ ಬೇಳೆ ಬೇಯಿಸು, ನಿನ್ನ ಜಾಗೆಯ ಗಟ್ಟಿ ಮಾಡಿಗೊ, ಹೇಳಿ. ಅದೇ ರಾಜಕೀಯ ಹೇಳಿರೆ. ಪೆಟ್ಟು ಮಾಡಿ ಸಾಯ್ತವೆಲ್ಲ ಪಾಪದ ಶ್ರೀ ಸಾಮಾನ್ಯ. ನಮ್ಮ ಎದುರಂಗೆ ಕಾಣ್ತ ಹಾಂಗೆ ವಿರೋಧ ಪಾರ್ಟಿಲಿದ್ದರೂ, ಒಳಂದ ಒಳವೇ ಒಮ್ಮತಲ್ಲಿ ಇಪ್ಪ ನಾಯಕಂಗೊ, ಹೆಗ್ಗಣಂಗಳ ಹಾಂಗೆ ಗೆಣಸಲೆ ಗಮಸುತ್ತಾ ಗಮ್ಮತಿಲ್ಲಿ ಇರ್ತವು.

 6. Venkatesh says:

  ಮೂವತ್ತು ವರ್ಷ ಹಿಂದೆ ಕೂಡ ಹೀಂಗೆ ಇತ್ತಾ? ಈಗ ರಾಜಕೀಯ ಸರಿ ಇಲ್ಲೆ ಹೇಳೊದು ಹಳೇ ಶುದ್ದಿ ಅಂಬಗ !!!

 7. Harish kevala says:

  Meesalathi heludu ondu tarada basmasuranage heludu raajekeeyadavakke eegega pratyaksha anubhava avta iddu.. rajasthanalli meena matte gujjars hechhina meesalathige horata madta iddavu 4 varshanda.. Ide politicsindagi alyana BJP rulinge hotu!!! Obbarige meesalathu hecchu madire innobbange anyaya!. So alyana gujjara meena resravation fight never ending… Idara nodi aadruu namma rajakeyadavakke rajja aadaruu buddi bakka?!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *