ಭರಣಿ ಒಡದ ಮುದಿಯಜ್ಜ

June 21, 2013 ರ 8:51 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನ್ನ ಒಬ್ಬ ಮಲೆಯಾಳಿ ‘ಜೋಸ್ತಿ’ ಹೇಳಿದ ಕತೆಯ ರಜ್ಜ ಬದಲಿಸಿ ಈ ಕೆಳ ಹೇಳಿದ್ದೆ –

ಒಬ್ಬಂಗೆ ದೊಡ್ಡ ಸಂಸಾರದ ಹೊಣೆ ಇತ್ತು – ಎಂಟು ಮಕ್ಕ (ನಾಲ್ಕು ಗಂಡು, ನಾಲ್ಕು ಹೆಣ್ಣು). ಮನೆಲಿ ಅವನೂ, ಹೆಂಡತ್ತಿಯೂ, ಅತ್ತೆಯೂ ಸೇರಿ ಹನ್ನೊಂದು ಜೆನರ ಸಂಸಾರ. ಆದಾಯ ಕಡಮ್ಮೆ. ಮನೆ ಖರ್ಚಿಂಗೆ ತತ್ವಾರ. ಮನೆಯೋರ ಎಲ್ಲಾ ಬಳಕೆಗೆ ಬೇಕಾದ ನೀರಿನ ಕೈ ಪಂಪಿಲಿ ಅವನೇ ತುಂಬಿಸಿ (ಸುಮಾರು ಎರಡು ಗಂಟೆ ಕೆಲಸ), ತೋಟಕ್ಕೆ ಹೋಗಿ ಒಂದಾಳಿನ ಕೆಲಸ ಮಾಡೆಕ್ಕು. ಹೀಂಗೆಲ್ಲಾ ಮಾಡಿರೂ, ಅಡಕ್ಕೆಗೆ ಬೆಲೆ ಇಲ್ಲದ್ದ ಆ ಕಾಲಲ್ಲಿ ಹೇಂಗೋ ಸಾಲ, ಸೋಲ ಮಾಡಿ ಮಕ್ಕಳ ಅವರವರ ದಡ ಸೇರಿಸಿದ.

ಗಂಡು ಮಕ್ಕ ಉದ್ಯೋಗಕ್ಕೆ ಸೇರಿ ಸಂಪಾದನೆ ಸುರು ಮಾಡಿದ ಮೇಲೆ ಸಾಲ ಎಲ್ಲ ತೀರಿತ್ತು, ಮರ್ಯಾದೆಲಿ ಬದುಕ್ಕುವ ಹಾಂಗಾತು. ಪುಳ್ಳಿಯಕ್ಕ, ಅವರ ಮಕ್ಕ ಎಲ್ಲ ಆದವು. ಇವ ಈಗ ಮುದಿ ಅಜ್ಜ. ಪ್ರಾಯ ಆದ ಹಾಂಗೇ ಕಣ್ಣು, ಮೆದುಳು, ಕೈ ಕಾಲು ಸ್ವಾಧೀನ ತಪ್ಪುಲೆ ಸುರು ಆತು. ಎಲ್ಲೋರೂ ಮುದಿ ಅಜ್ಜನ ದುಡಿಮೆಯ ಮರವಲೆ ಸುರು ಮಾಡಿದವು. ಒಂದು ದಿನ ಮುದಿ ಅಜ್ಜ ಕಣ್ಣು ಕಾಣದ್ದೆಯೋ ಅಲ್ಲಾ ಕಾಲು ಸ್ವಾಧೀನ ತಪ್ಪಿಯೋ ಡಂಕಿ ಉಪ್ಪಿನ ಕಾಯಿ ಭರಣಿಯ ಒಡದು ಹಾಕಿದ. ತೆಕ್ಕೊಳ್ಳಿ ಅವಂಗೆ ಆ ದಿನಂದ ‘ಭರಣಿ ಒಡದ ಮುದಿ ಅಜ್ಜ’ ಹೇಳ್ತ ಹೆಸರು ಖಾಯಂ ಆತು. ಆರೇ ಅದರೂ ಎಂತಾರೂ ಅವನ ಬಗ್ಗೆ ಹೇಳಿಕ್ಕಾದರೆ ‘ಭರಣಿ ಒಡದ ಮುದಿ ಅಜ್ಜ’ ಹೇಳೊದೇ.

ಕತೆ ಇಲ್ಲಿಗೆ ಮುಗುತ್ತು. ಮಾಡಿದ ಸಾವಿರ ಒಳ್ಳೆ ಕೆಲಸಂಗಳ ಮುದಿ ಪ್ರಾಯಲ್ಲಿ ಪ್ರಮಾದಂದಾಗಿ ಆದ ತಪ್ಪು ಹೇಂಗೆ ಮರೆಸುತ್ತು!

ಎನ್ನ ಮನೆಲಿ ಎನ್ನ ಅಪ್ಪನೂ ಹೀಂಗೇ ಪ್ರಾಯ ಆದೋರು. ಅವರ ಬಗ್ಗೆಯೂ ಒಂದೊಂದರಿ ಎನಗೆ ‘ಒಂದು ಚೂರು’ ಹೀಂಗೆ ಕಂಡುಗೊಂಡು ಇತ್ತು – ಎನ್ನ ‘ಜೋಸ್ತಿ’ಯ ಕತೆ ಕೇಳುವಲ್ಲಿ ವರೆಗೆ. ಈಗ ತಿದ್ದಿಗೊಂಡಿದೆ.

ನಿಂಗಳಲ್ಲೂ ಹೀಂಗಿಪ್ಪ ಅಜ್ಜನೋ, ಅಜ್ಜಿಯೋ ಇದ್ದರೆ ಈ ಕತೆ ನೆಂಪು ಮಾಡಿಗೊಳ್ಳಿ – ಅವರರಿಂದ ಎಂತಾದರೂ ವಯೋ ಸಹಜ ತಪ್ಪು ಆದರೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಕತೆ ಸಣ್ಣದಾದರೂ ಗಹನವಾದ ವಿಚಾರದತ್ತ ಬೆಳಕು ಬೀರಿದ್ದು. ಇದನ್ನೆಯೋ ಓ ಅತ್ಲಾಗಿಯಾಣೋರು ‘ಶಾರ್ಟ್ ಏಂಡ್ ಕ್ಯೂಟ್ ಸ್ವೀಟ್’ ಹೇಳುಸ್ಸು!.
  ನಿಂಗಳಾಂಗಿಪ್ಪ ಹಿರಿಯೋರ ವಿಚಾರ, ಜೀವನಾನುಭವ ಬೈಲಿಂಗೆ ಸದಾ ಬೇಕು ಅಪ್ಪಚ್ಚಿ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ಅಪ್ಪಚ್ಹಿ,
  ಒಳ್ಲೆ ವಿಚಾರ. ನಿ೦ಗೊ ಬರದಪ್ಪಗ ಎನಗೂ ಒ೦ದು ಕತೆ ನೆನಪ್ಪಾತು.
  ಒ೦ದು ಹೆಮ್ಮಕ್ಕೊ ಅದರ ವೃದ್ಧಾಪ್ಯಲ್ಲಿಪ್ಪ ಮಾವ೦ಗೆ ಒ೦ದು ಹಳೆ ಚೋಕಟೆ ಅಲುಮಿನಿಯಮ್ ಪಾತ್ರಲ್ಲಿ ದಿನಾಗಳು ಅಶನ ಬಳುಸಿಯೊ೦ದಿತ್ತಡ. ಗ೦ಡ, ಮಗ೦ಗೆ ಅದಕ್ಕೆ ಸ್ಟೀಲಿನ ಬಟ್ಲು. ಮಾವ ತೀರಿ ಹೋದ. ಕೆಲವು ದಿನ ಕಳುದಪ್ಪಗ ಗುಜುರಿ ಸಾಮಾನಿನ ಜೆನಕ್ಕೆ ಆ ಪಾತ್ರವ ಮಾರಿತ್ತಡ. ಇದರ ನೋಡಿದ ಅದರ ೫ ವರ್ಶದ ಸಣ್ಣ ಮಾಣಿ ಹಟ ಮಾಡಿ ವಾಪಸ್ಸು ಆ ಪಾತ್ರವ ಗುಜುರಿದರತ್ತರೆ ಕೇಳಿ ತೆಕ್ಕೊ೦ಡ. ಗುಜುರಿದು ಹೋದ ಮತ್ತೆ ಅಮ್ಮ ಕೇಳಿತ್ತು- ಎ೦ತಕೆ ಮಗ ಅಷ್ಟು ಹಟ ಮಾಡಿ ಆ ಪಾತ್ರವ ತೆಕ್ಕೊ೦ಡೆ? ಅದು ಇನ್ನೆ೦ತ ಉಪಯೋಗಕ್ಕೆ? ಮುಗ್ಡ ಮನಸ್ಸಿನ ಮಾಣಿ ಹೇಳಿದಡೊ-ಅಮ್ಮಾ, ಅಜ್ಜನ ನೀನುದೆ ಅಪ್ಪ೦ದೆ ನೋಡಿಗೊ೦ಡ ಹಾ೦ಗೆ ದೊಡ್ಡಪ್ಪಗ ಆನುದೆ ಎನ್ನ ಹೆ೦ಡತಿದೆ ನಿ೦ಗಳ ನೋಡಡದಾ? ಅಸ್ಟಪ್ಪಗ ನಿ೦ಗೊಗೆ ಅಶನ ಕೊಡ್ಲೆ ಆ ಪಾತ್ರವ ವಾಪಾಸು ತೆಕ್ಕೊ೦ಡೆ ಆನು.
  ”ತಲಗೆರದ ನೀರು ಕಾಲಿ೦ಗೆ ಬಾರದ್ದಿಕ್ಕೊ” ಹೇಳುವ ಹಾ೦ಗೆ ಆತು.

  [Reply]

  VA:F [1.9.22_1171]
  Rating: +2 (from 2 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಳ್ಳೆ ಸಂದೇಶ ಅಪ್ಪಚ್ಚಿ.

  [Reply]

  VN:F [1.9.22_1171]
  Rating: 0 (from 0 votes)
 4. ರಾಮಚಂದ್ರ ಮಾವ°
  a ramachandra bhat

  ವಿಅಾರ ಸರಿ ಆದ್ದೆ. ಆದರೆ ನೆತ್ತರಿನ ಕಾವು ಇಪ್ಪಾಗಳೇ ಗೊಂತಾದರೆ ಎಷ್ಟೋ ಹಿರಿಯೋರ ಬದುಕು ಹಗುರ ಆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಕತೆ ಮನಮುಟ್ಟುವಂತದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಸುಭಗಶರ್ಮಪ್ಪಚ್ಚಿಪೆಂಗಣ್ಣ°ಸರ್ಪಮಲೆ ಮಾವ°ಸಂಪಾದಕ°ಬಂಡಾಡಿ ಅಜ್ಜಿರಾಜಣ್ಣಕಾವಿನಮೂಲೆ ಮಾಣಿಪುತ್ತೂರಿನ ಪುಟ್ಟಕ್ಕಅಕ್ಷರ°ಸುವರ್ಣಿನೀ ಕೊಣಲೆಪವನಜಮಾವಚೂರಿಬೈಲು ದೀಪಕ್ಕಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಬೊಳುಂಬು ಮಾವ°ವೆಂಕಟ್ ಕೋಟೂರುವೇಣೂರಣ್ಣವೇಣಿಯಕ್ಕ°ನೀರ್ಕಜೆ ಮಹೇಶವಿದ್ವಾನಣ್ಣಗಣೇಶ ಮಾವ°ಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ