ಭೂತಕನ್ನಡಿಲಿ ವಿರಾಟ್ ದರುಶನ

ಕೆಸರ ಚೇಪುವ ರಾಜಕೀಯದಾಟಲಿ ಪೈಸೆ
ಯೊಸರ ಮೂಲವ ಕಂಡು ಹಿಡಿವವಂಗಾಸೆ
ಮೊಸರ ಪಾತ್ರೆಲಿ ಹಾಲ ಹುಡುಕೊದೆಂತಗೆ ಕೂಸೆ
ದಸರೆಯಾನೆಯ ನೋಡಿ ಮರೆ ಸಮಸ್ಯೆ

ಅವನಿವನ ಇವ° ಅವನ ಬೈದು ಭಂಗಿಸಿದರೂ
ಅವನಿಬಯಕೆಲಿ ಮಾ೦ತ್ರ ಒಂದೆಲ್ಲರೂ
ಅವನಿಜೆಯ ಕರಪಿಡಿದ ದೇವ ರಘುರಾಯರೀ
ಗವನತಿಯ ನೋಡಿ ಕಣ್ ಕಣ್ ಬಿಟ್ಟರೂ

ನವಭಾರತದ ಕನಸು ನನಸಪ್ಪೊದದು ಸುಳ್ಳು
ನವವಿಧದ ನಾಯಕರ ಮಾತು ಪೊಳ್ಳು
ನವನವೀನತೆಲಿ ಕಾಂಚನವ ದಕ್ಕಿಸೊ ಮರುಳು
ನವರಾತ್ರಿ ಬಂದರೂ ತಲೆಯೆ ಹಾಳು

ಕಳೆ ತುಂಬಿ ಮಂಕಾತು ಧರಣಿದೇವಿಯ ಕಾಂತಿ
ಮಳೆ ಬಂದು ಕೊಳೆ ಕಳೆದರಕ್ಕು ಶಾಂತಿ
ಇಳೆಯ ಪಾಲಕರಿ೦ಗೆ ಧನಸ೦ಗ್ರಹದ ಭ್ರಾ೦ತಿ
ಬೆಳೆದು ನಿಲ್ಲುವ ಮದಲೆ ಕೊಡಿ ವಿಶ್ರಾಂತಿ

ದಿಶೆ ತಪ್ಪಿ ಕಿಶೆ ತುಂಬಿ ಸಹಿಸುಲೆಡಿಯನ್ಯಾಯ
ನಶೆ ಇಳಿಯ, ಧರೆಯ ಹಗರಣವು ಮುಗಿಯಾ
ನಿಶೆ ಕಳುದು ಉಷೆ ಇಳುದು ಆಯೆಕ್ಕು ನವ ಉದಯ
ದಶಶಿರನ ತರಿದವಗೆ ಕೈಯ ಮುಗಿಯಾ

ಮುಳಿಯ ಭಾವ

   

You may also like...

7 Responses

 1. Ganesha Perva says:

  ವ್ಹಾ… ವ್ಹಾ… ಪಷ್ಟುಕ್ಲಾಸಾಯಿದು..

 2. ವರ್ಣನೆ ಲಾಯಿಕ ಆಯಿದು ಮಾವ..

 3. ಶರ್ಮಪ್ಪಚ್ಚಿ says:

  [ನಿಶೆ ಕಳುದು ಉಷೆ ಇಳುದು ಆಯೆಕ್ಕು ನವ ಉದಯ
  ದಶಶಿರನ ತರಿದವಗೆ ಕೈಯ ಮುಗಿಯಾ]
  ಇದುವೇ ಆಶಾವಾದ-ರಾಮರಾಜ್ಯದ ಕನಸು

 4. ಗೋಪಾಲ ಮಾವ says:

  ಐದು ಪದ್ಯಂಗಳುದೆ ಪಸ್ಟ್ ಕ್ಲಾಸ್ ಆಯಿದು. ಕಳುದ ಸರ್ತಿಯ ಹಾಂಗೆ ಪ್ರಾಸ, ತಾಳ, ಅರ್ಥ ಎಲ್ಲವೂ ಇದ್ದು. ರಾಗಲ್ಲಿ ನಾವು ಹಾಡೆಕು ! ಶರ್ಮಪ್ಪಚ್ಚಿ ಹೇಳಿದ ಹಾಂಗೆ ರಾಮರಾಜ್ಯದ ಕನಸು (ಬರಿ ಕನಸು) ನಾವೆಲ್ಲರೂ ಕಾಂಬೊ. ಮುಳಿಯ ಭಾವಯ್ಯಂಗೆ ರಾಜಕೀಯದವು ಹೇಳಿರೆ ಭಾರಿ ಇಷ್ಟವೋ ಹೇಳಿ ಕಾಣುತ್ತು. ಅವನ ಬೆರಳುಗೊ ಇನ್ನೂ ಇಂಥ ತುಂಬಾ ಕವನ/ಲೇಖನಂಗಳ ಕುಟ್ಟಲಿ(!) ಹೇಳಿ ಆಶಿಸುವೊ.

 5. ಮುಳಿಯಭಾವನ ಪದ್ಯ ಕೊಶಿ ಆವುತ್ತು ಓದಲೆ.

  ಬೂತಕನ್ನಡಿ ಹಿಡುದ ಭಾವಂಗೆ ಕಂಡತ್ತು ಬೇರೆಯೇ ಲೋಕ..
  (ಎರಡ್ಣೇ ಗೆರೆಯ ನೆಂಪಾದ ಮತ್ತೆ ಹೇಳಿರೆ ಸಾಕ..?)

  • ರಘುಮುಳಿಯ says:

   ಹೀಂಗೆ ಮೊರೆ ಸಣ್ಣ ಮಾಡಿರೆ ಆಗ ನೆಗೆಗಾರಾ.. ನಾಕು ಮಾತ್ರೆ ಹೆಚ್ಚು ತಿಂದರೆ ಹೆಂಗಾವುತ್ತು ನೋಡು.

   ಬೂತಕನ್ನಡಿ ಹಿಡುದ ಮುಳಿಯದಾ ಭಾವಂಗೆ ಕಂಡತ್ತು ಬೇರೆಯೇ ಲೋಕ
   ಗೀತರೂಪಕ ಬರೆವ ಮರುಳೆಂತು ಶುರು ಆತೊ ಕೊರಪ್ಪಿದರೆ ಬದಲಕ್ಕೊ ನಾಕ

  • ರಘುಮುಳಿಯ says:

   ಹಾಂಗೆ ನೆಗೆ ಬರೆಕ್ಕದ..ಆರು ಚೀಪೆ ಕೊಟ್ಟವು??

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *