“ಮನಗೊಂದು ಅಜ್ಜಿ, ಒಲಗೊಂದು ಕೊಳ್ಳಿ”–{ಹವ್ಯಕ ನುಡಿಗಟ್ಟು-59}

-ಮನಗೊಂದು ಅಜ್ಜಿ, ಒಲಗೊಂದು ಕೊಳ್ಳಿ-{ಹವ್ಯಕ ನುಡಿಗಟ್ಟು-59}

“ಮನೆತುಂಬ ಮಕ್ಕೊಬೇಕು, ಅವರ ಸರಿದಾರಿಲಿ ಕೊಂಡುನೆಡೆಶಲೆ ಹೆರಿಯೊವು ಬೇಕು”.ಇದು ಮದಲಿಂದಲೇ ಅನುಭವಸ್ಥರು ಹೇಳುತ್ತಾ ಬಪ್ಪ ಮಾತು.ಆದರೆ ಈಗಾಣಕಾಲವೋಂ!. ಅಬ್ಬೆ, ಅಪ್ಪಂ, ಹೆಚ್ಚೂಳಿರೆ ಎರಡು ಮಕ್ಕೊ!. ಆದರೀಗೀಗ ಕೂಸಾಗಲೀ ಮಾಣಿಯಾಗಲೀ ಒಂದೇ ಒಂದು..!, ಅದು ಮದ್ದಿನಕೊಂಬು!!. ಹಾಂಗಾದಕಾರಣ ಅಬ್ಬೆಹೊಟ್ಟೆಯೊಳ ಅಂಕುರಾದ ಲಾಗಾಯ್ತಿಂದ ಅದಕ್ಕೆ ಮದ್ದುಮಾಡೆಕ್ಕಿದ!!. ನಮ್ಮ ಶ್ರೀಸಂಸ್ಥಾನ ಎಷ್ಟೋ ಸರ್ತಿ ಹೇಳುದು ಕೇಳಿದ್ದೆ. “ಕುಟುಂಬ ಯೋಜನೆ ಮಾಡೆಡಿ. ಅದು ಪ್ರಕೃತಿಯೇ ಮಾಡ್ತು.ಈಗ ನೂರಕ್ಕೆ ಐವತ್ತು ಜೆನ, ಮುಂದಿನ ಹಂತಲ್ಲಿ; ಇಪ್ಪತ್ತೈದು, ಮತ್ತೆ, ಅದರರ್ಧ,ಹೀಂಗೆ ಆದರೆ…, ಹವ್ಯಕರ ಜೆನ ಎಲ್ಲಿಗಿಳಿಗು!!. ನಿಂಗೊಗೆ ಸಾಂಕಲೆಡಿಯದ್ರೆ, ಮಠಕ್ಕೆ ಕೊಡಿ. ಮಠಲ್ಲಿ ಅವರ ಚೆಂದಕೆ ಸಾಂಕಿ, ವಿದ್ಯಾಭ್ಯಾಸಕೊಟ್ಟು, ಯೋಗ್ಯ ಪ್ರಜೆಯಾಗಿ ಬೆಳವಲೆ ಅನುವು ಮಾಡಿಕೊಡ್ತಿಯೊಂ”. ಆದರೆ ಈ ಮಾತಿನ ಆರು ಕೇಳಿದ್ದೊವು?.ಉಮ್ಮಪ್ಪ!. ಅಲ್ಲಾ..,ಆಗದ್ದವಕ್ಕೆ ಆವುತ್ತಿಲ್ಲೇಳಿಯಾತು.ಆವುತ್ತವಕ್ಕೆ…?. ನಮ್ಮಲ್ಲಿ ಏವದೇ ಧೋರಣೆಯ ಪಾಲುಸದ್ರೂ ಕುಟುಂಬಯೋಜನೆಯ ಚಾಚೂ ತಪ್ಪದ್ದೆ ಪಾಲುಸುತ್ತೊವು!!!.ಹೋಗಲಿ.., ಅದೆಲ್ಲ ಅವರವರ ವೈಯಕ್ತಿಕ ವಿಚಾರ ಹೇಳುಗು.

ಅಜ್ಜಿ-ಅಜ್ಜಂ, ಮನೆಲಿದ್ದರೆ ಒಳುದವಕ್ಕೆ ಅದೆಷ್ಟೋ ಉಪಕಾರಂಗೊ. ಅಜ್ಜಂ  ಕೃಷಿವೈವಾಟು, ಲೇವಾದೇವಿ ನೋಡಿಯೊಂಡರೆ; ಅಜ್ಜಿ, ಮನೆ ಒಳಾಣ,ಯೋಗಕ್ಷೇಮ, ಮಕ್ಕಳ ಲಾಲನೆ-ಪಾಲನೆ,ಕಸ್ತಲಪ್ಪಗ ಮಕ್ಕೊಗೆ ಮಗ್ಗಿ,ಬಾಯಿಪಾಠ ಹೇಳ್ಸುದು,ಕತೆ ಹೇಳುದು, ಹಟ್ಟಿ-ಹಸುಗಳ ಹಾಕು-ಚೋಕು, ಹಾಲು-ಮಜ್ಜಿಗೆ ವೆವಹಾರ ಹೀಂಗೆ ಕೊಂಡುನೆಡೆಶುತ್ತ  ಗಟ್ಟಿ ಹೆಮ್ಮಕ್ಕೊ ಹೇಳಿರೆ, ಅಜ್ಜಿಯೇ ಸೈ!. ಹಾಂಗೇ ಒಳ ಅಡಿಗೆ ಮಾಡ್ತ ಒಲೆಲಿಯೂ ಒಂದು ಗಟ್ಟಿ ಕೊಳ್ಳಿ [ಹೆಜ್ಜೆ ಬೇವನ್ನಾರ ನಿಂದು ಹೊತ್ತುತ್ತಿಪ್ಪ ಸೌದಿ] ಇದ್ದರೆ; ನೀರು ಕೊದಿವಗ ಅಕ್ಕಿ ಹಾಕಿಕ್ಕಿ ಹೋದರೆ, ಮತ್ತೆ ಬೇವಲಪ್ಪ ಅಂದಾಜಿಗೆ ಬಂದು ನೋಡಿರೆ ಸಾಕು.

ಆದರೀಗ ಮನೆಗಳಲ್ಲಿ ಅಜ್ಜಿಯೂ ಇಲ್ಲೆ!. ಸೌದಿ ಒಲೆಯೂ ಇಲ್ಲೆ!!.ಈ ನುಡಿಗಟ್ಟಿನ ನೆಂಪೂ ಮಾಸುತ್ತಾ ಹೋವುತ್ತು!!!. ಎಂತ ಹೇಳ್ತಿ?. ಆನು ಹೇಳಿದ್ದು ಹೆಚ್ಚಿಗೆ ಆದಾಂಗಿದ್ದೋ?.

———೦———

ವಿಜಯತ್ತೆ

   

You may also like...

8 Responses

 1. ಚೆನ್ನೈ ಭಾವ° says:

  ಹೇದ್ದು ಸಾರ ಇಲ್ಲೆ ಆದರೆ ಹೇದ್ದರ್ಲಿ ಸಾರ ಇದ್ದಿದಾ. ಹೇಳ್ವವು ಬೇಕು. ಹೇಳ್ವವು ಇಲ್ಲದ್ದಿಪ್ಪಗ ಹೇಳ್ವವು ಬೇಕು ಹೇಳ್ಸು ನೆಂಪಾವ್ತಪ್ಪೋ

 2. ಹರೇರಾಮ , ಚೆನ್ನೈ ಭಾವ . ಓದುವವು ಇದ್ದವೂಳಿ ಆದರೆ ಬರವವಕ್ಕೆ ಉತ್ಸ್ಸಾಹ. ಚೆನ್ನೈಭಾವ ಬಂದಪ್ಪಗ , ಬಯಲಿಂಗೊಂದು ನೋಟ ಬಂತಿದಾ!.

 3. ಹಾಂ. ಓದಿರೆ ಸಾಲ, ಶ್ರೀ ಗುರುಗೊ ಹೇಳಿದ್ದರ; ಆನು ನೆಂಪು ಮಾಡಿದ್ದರ , ಪಾಲುಸುವೊವು ಬೇಕಿದ.

 4. sheelalakshmi says:

  ಅಪ್ಪು ವಿಜಯಕ್ಕ , ನಿಂಗೊ ಹೇಳಿದ್ದು ಸರಿಯೇ ಇದ್ದು. ನಿಂಗಳ ಹಾಂಗಿಪ್ಪ ಹಿರಿಯವು ಹಿಂಗಿದ್ದೆಲ್ಲ ಹೇಳೀಕಾದ್ದೇ.

 5. S.K.Gopalakrishna Bhat says:

  ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ

 6. ಅಪ್ಪು ಗೋಪಾಲ ಹೇಳಿದಾಂಗೆ ಸರ್ವಜ್ಞ ವಚನಲ್ಲಿಯೂ ಇದ್ದು.

 7. ಗೋಪಾಲ ಬೊಳುಂಬು says:

  ಕೂಡು ಕುಟುಂಬ ಭಾರೀ ಒಳ್ಳೆದು ಹೇಳುವುದರ ನುಡಿಗಟ್ಟಿಲ್ಲಿ ಗಟ್ಟಿಗೆ ಕಟ್ಟಿ ಕೊಟ್ಟಿದವು. ವಿಜಯಕ್ಕ ಹೇಳಿದ್ದು ಖಂಡಿತಾ ಹೆಚ್ಚಾಯಿದಿಲ್ಲೆ. ಸರಿಯಾಗಿ ಹೇಳ್ತವಿಲ್ಲದ್ದೆ ಸಂಸಾರ ಹಾಳಾವ್ತದರ ನಾವು ಕಾಣ್ತಾ ಇದ್ದು. ಹಿರಿಯರ ಹಿತೋಪದೇಶದ ಮಾತುಗವಕ್ಕೆ ಕಿರಿಯರು ಬೆಲೆ ಕೊಟ್ಟರೆ ಕಂಡಿತಾ ದೇಶ ಉದ್ದಾರ ಅಕ್ಕು.

 8. ಶರ್ಮಪ್ಪಚ್ಚಿ says:

  ವಿಜಯತ್ತಿಗೆಯ ಅನುಭವವೂ ನುಡಿಗಟ್ಟೂ ಸೇರಿ ಒಂದು ತೂಕವೇ ಸೈ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *