ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತಮಾವ (ಅಕ್ಷರಾಂಜಲಿ)

August 26, 2017 ರ 9:59 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತ ಮಾವ– (ಕೊಡಗಿನಗೌರಮ್ಮನ ಸುಪುತ್ರ)

ಕೆಲವು ಜೆನ ಈ ಲೋಕಂದ ಹೋಗಿಯಪ್ಪಗ ಅವರ ಹೆಸರೂ ಮಾಸುತ್ತು.ಇನ್ನು ಕೆಲವು ಜೆನ ರಜ ಸಮಯ ನೆಂಪಿಲ್ಲಿ ಒಳಿತ್ತವು.ಇನ್ನು ಕೆಲವು ಜೆನರ ದೇಹ ಹೋದರೂ ಜನಮಾನಸಲ್ಲಿ ಸದಾ ಬದುಕ್ಕಿರುತ್ತೊವು. ಈ ಮೂರನೆ ಸಾಲಿಂಗೆ ಸೇರಿದವರಲ್ಲಿ ಒಬ್ಬᵒ, ಕೊಡಗಿನಗೌರಮ್ಮನ ಮಗ; ಬಿ.ಜಿ.ವಸಂತಮಾವ.ನಮ್ಮ ಕೊಡಗಿನಗೌರಮ್ಮ ಕಥಾಸ್ಪರ್ಧಗೆ ಸದಾ ಒರತ್ತೆ ಹಾಂಗಿತ್ತಿದ್ದ ವಸಂತಮಾವ ೮-೭-೨೦೧೭ರಲ್ಲಿ ತನ್ನ ಅಮ್ಮನ ಪಾದ ಸೇರಿದೊವು ಹೇಳ್ವ ಸುದ್ದಿ ಹಳತ್ತಾವುತ್ತೇ ಇಲ್ಲೆ.ಅವರ ಅಬ್ಬೆ, ಇಹಲೋಕ ಬಿಡುವಗ ಅವಕ್ಕೆ ಕೇವಲ ಐದು ವರ್ಷ.ಅಬ್ಬೆಯ ಒಡನಾಟ ಸರಿಯಾಗಿ ನೆಂಪು ಬಾರದ್ದ ಬಾಲ್ಯ. ವಸಂತಮಾವ 83 ವಸಂತ ಕಂಡು ತನ್ನ ಅಬ್ಬೆಯ ಹೆಸರಿಂಗೂ,ಅಬ್ಬೆಯ ಸಾಹಿತ್ಯ ವೇದಿಕೆಲಿಯೂ ಮಡಿಕೇರಿ ಲೋಕಲ್ಲಿಯೂ ವಸಂತ ಹಂಚಿ, ಅದರ ಒಳುಶಿಕ್ಕಿ,ಬಿಟ್ಟುಹೋದೊವು.

ಒಂದಾರಿ ಅವಕ್ಕೆ ಶ್ರದ್ಧಾಂಜಲಿಯ ಈ ಬಯಲಿಲ್ಲಿ ಆನು ಅಕ್ಷರ ರೂಪಕ್ಕೆ ತಯಿಂದೆ. ವಾಪಾಸು ನಿಂಗಳ ಮುಂದೆ ಎಂತಕೆ ತತ್ತೆ ಕೇಳಿರೆ; ನಾಡ್ದು ೪-೯-೨೦೧೭ಕ್ಕೆ ಗಿರಿನಗರ ಶ್ರೀಮಠಲ್ಲಿ ಇವರಿಯಾಣ (೨೦೧೭)ಕತಾಸ್ಪರ್ಧೆಯ ವಿಜೇತರಿಂಗೆ ಬಹುಮಾನ ಶ್ರೀಗುರುಗಳ ಅಮೃತ ಹಸ್ತಂಗಳಿಂದ ವಿತರಣೆ ಆವುತ್ತು.ಈ ಸಂದರ್ಭಲ್ಲಿ ದತ್ತಿನಿಧಿ ಪ್ರಾಯೋಜಕರ ನೆಂಪು ಮಾಡಿಗೊಂಬದು ನಮ್ಮ ಆದ್ಯ ಕರ್ತವ್ಯ.

ಇದೀಗ ರಾಷ್ಟ್ರೀಯ ಮಟ್ಟಲ್ಲಿ ನೆಡದು ಬಪ್ಪ; ನಮ್ಮ ಕೊಡಗಿನಗೌರಮ್ಮ ಕಥಾಸ್ಪರ್ಧಗೆ ಇಪ್ಪತ್ತೆರಡನೇ ವರ್ಷ. ೧೯೯೬ ರಲ್ಲಿ,ಏತಡ್ಕ ಮನೆತನದ ಕೇಶವಭಟ್ಟರ ನೇತೃತ್ವಲ್ಲಿ; ಡಾ|ಕೃಷ್ಣಮೂರ್ತಿ,ಚಂದ್ರಶೇಖರ ಏತಡ್ಕ,ಮೊದಲಾದವರ ಆತ್ಮೀಯ ಸಹಕಾರಂದ ಪ್ರಾರಂಬಗೊಂಡು, ಈ ಕಥಾವೇದಿಕೆ; ಉಸಿರು ಓಳಿಶಿಗೊಂಡು ಬಪ್ಪಲೆ ವಸಂತಮಾವನೇ ಒರತ್ತೆ. ಕಥಾಸ್ಪರ್ಧೆ ಸುರುವಾದ ಮತ್ತೆ…, ಅದಲ್ಲಿ ಪ್ರಶಸ್ತಿ ಪಡದ ಕತೆಯ ಹತ್ತು ವರ್ಷಪ್ಪಗ;ಹತ್ತೆಸಳು-೧,ಹಾಂಗೂ ಇಪ್ಪತ್ತು ವರ್ಷಕ್ಕೆ ಮತ್ತೆ ಹತ್ತು ಕತೆಗಳ ಹತ್ತೆಸಳು-೨ ಹೇಳಿ ಎರಡು ಕೃತಿಗಳ ಪ್ರಕಟಮಾಡಿದ್ದು.ಇದೆಲ್ಲದಕ್ಕೂ ಅವ್ರದ್ದೇ ಸಹಕಾರ ಆದರೂ ೨೦೧೨ ರಲ್ಲಿ ನೆಡದ ಕೊಡಗಿನಗೌರಮ್ಮ ಶತಮಾನೋತ್ಸವ ಸಂದರ್ಭಲ್ಲಿ ನೆಡದ ಸಣ್ಣಕತಾ ಕಮ್ಮಟ ಹಾಂಗೂ ಹತ್ತೆಸಳು-೨ ಕೃತಿಗೆ ಕೂಡಾ ನಮ್ಮ ಈ ಒಪ್ಪಣ್ಣ ಬಯಲಿಂದ ಸಹಾಯ ಹಸ್ತ ಸಿಕ್ಕಿದ್ದು ಹೇಳ್ವದರ ಇಲ್ಲಿ ನೆಂಪು ಮಾಡಿಗೊಳ್ತೆ.

ನಾಡ್ದು ಶ್ರೀಸಂಸ್ಥಾನದವರ ಸಮ್ಮುಖಲ್ಲಿ ನೆಡವ ಈ ಕಾರ್ಯಕ್ರಮಕ್ಕೆ ಬಯಲಿನೊವು,ಇಲ್ಲಿ ಗುರ್ತಾಗಿ ವ್ಯವಹರಿಸುವ ಎಲ್ಲಾ ಅಣ್ಣ-ತಮ್ಮಂದ್ರೂ ಅಕ್ಕ-ತಂಗೆಕ್ಕಳೂ ಬಂದು ಶುಭಹಾರೈಸೆಕ್ಕೂಳಿ ಕೇಳಿಗೊಳ್ತೆಯೊಂ.

ಅಖಿಲ ಭಾರತ ಮಟ್ಟದ  ಕೊಡಗಿನಗೌರಮ್ಮ ಕಥಾಸ್ಪರ್ಧೆ.

ಅಧ್ಯಕ್ಷೆ                                                                                                                                   ಸಂಚಾಲಕಿ

ಶ್ರೀಮತಿ ಈಶ್ವರಿ ಶ್ಯಾಮಭಟ್,ಬೇರ್ಕಡವು.                                                                                             ವಿಜಯಾಸುಬ್ರಹ್ಮಣ್ಯ,ಕುಂಬಳೆ.

———೦———

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ವಸಂತ ಮಾವಂಗೆ ಶ್ರದ್ಧಾಂಜಲಿ

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ವಿಷಾದಂಗೊ. ಶ್ರದ್ಧಾಂಜಲಿ . ಸದ್ಗತಿಯಾಗಲಿ. ಕಥಾವೇದಿಕೆ ಅವರ ನೆಂಪುಮಾಡುಸುತ್ತ ಇರಳಿ

  [Reply]

  VN:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ವಿಜಯತ್ತೇ,
  ವಸಂತ ಮಾವ ಎಲ್ಲಾ ಕಾಲಕ್ಕೂ ಎಲ್ಲಾ ಮಕ್ಕೊಗೂ ಆದರ್ಶ.
  ಸಾಹಿತ್ಯಲೋಕಕ್ಕೆ ಬಹುಮುಖ್ಯ ಕಾಣಿಕೆ ಸಲ್ಲುಸಿದ ಕೊಡಗಿನ ಗೌರಮ್ಮ ನಮ್ಮ ಸಮಾಜದ ಆಸ್ತಿ. ಆ ಮಹಾತಾಯಿ ಇನ್ನೂ ಸಾಧನೆ ಮಾಡುವ ಹೊಸ್ತಿಲಿಲಿ ಇಪ್ಪಗಳೇ ಲೋಕಂದ ಮರೆಯಾಗಿ ಹೋದ್ದದು ನವಗೆಲ್ಲೊರಿಂಗೂ ತುಂಬುಸುಲಾಗದ್ದ ನಷ್ಟ. ಅಬ್ಬೆಯ ನೆಂಪು ಕನಸಿಲಿ ಕಂಡ ಹಾಂಗೆ ಇಪ್ಪ ಪ್ರಾಯಲ್ಲಿ ಅಬ್ಬೆಯ ಕಳಕ್ಕೊಂಡ ವಸಂತಮಾವನ ಮನಸ್ಸಿನ ಬೇನೆ ನಮ್ಮ ಕಲ್ಪನೆಂದಲೂ ಮೀರಿದ್ದದು. ಅಬ್ಬೆಯ ನೆಂಪಿನ ಶಾಶ್ವತ ಮಾಡ್ಲೆ ಹೆರಟು ಗೌರಮ್ಮನ ಹೆಸರಿನ ಮನೆ-ಮನಕ್ಕೆ ತಲುಪಿಸಿದ ಸಾರ್ಥಕ ಬದುಕು ವಸಂತಮಾವಂದು. ಅಬ್ಬೆಯ ಋಣದ ಒಟ್ಟಿಂಗೆ ನೆಲದ-ಕನ್ನಡದ ಋಣವೂ ತೀರ್ಸಿಹೋದವು ವಸಂತಮಾವ.
  ಅವರ ಮನೆಯ ಇನ್ನಾಣ ಕುಡಿಗಳೂ ವಸಂತಮಾವನ ದಾರಿಲಿಯೇ ನೆಡದು ಸಮಾಜಕ್ಕೆ ಮಾದರಿ ಆಗಲಿ..

  [Reply]

  VN:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಶ್ರೀ ದೇವಿ ನೀನು ಹೇಳಿದ್ದು ಅಕ್ಷರಶಃ ಸತ್ಯ. ನೀನು ಹೇಳಿದ ಕೊನೆ ವಾಕ್ಯವೇ ಎನ್ನ ಮನಸ್ಸೂ ಹೇಳುದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಡಾಗುಟ್ರಕ್ಕ°ಚುಬ್ಬಣ್ಣಪುಣಚ ಡಾಕ್ಟ್ರುವೆಂಕಟ್ ಕೋಟೂರುಶರ್ಮಪ್ಪಚ್ಚಿಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಕೆದೂರು ಡಾಕ್ಟ್ರುಬಾವ°ವಿಜಯತ್ತೆಕೇಜಿಮಾವ°ನೀರ್ಕಜೆ ಮಹೇಶಬಂಡಾಡಿ ಅಜ್ಜಿವೇಣೂರಣ್ಣಅನು ಉಡುಪುಮೂಲೆಸುಭಗಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ಪುಟ್ಟಬಾವ°ಪೆರ್ಲದಣ್ಣವೇಣಿಯಕ್ಕ°ಕಜೆವಸಂತ°ಅಕ್ಷರ°ಮಾಷ್ಟ್ರುಮಾವ°ಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ