ಮನೆಯಂದರೆ ಹೀಂಗಿರೊ

June 29, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನೆಯಂದ್ರೆ ಹೀಂಗಿರೊ
ಸುಣ್ಣಾ ಬಣ್ಣಾ ಮಾಡ್ಸಿರೋ
ಗಾಳಿ ಬೆಳ್ಕು ಬಪ್ಪಾಂಗೆ
ಕಿಟ್ಕಿ ಬಾಗ್ಲು ಹಾಕ್ಸಿರೋ||

ಮನೆಯಂದ್ರೆ ಹೀಂಗಿರೊ
ಗುಡ್ಸಿ ವರ್ಸಿ ಮಾಡ್ತೀರೊ
ಚೊಕ್ಕಾಗ್ ತೊಳ್ದು ಬಳ್ದು
ಚೆಂದಕ್ ಇಟ್ಟಿರೊ||

ಮನೆಯಂದ್ರೆ ಹೀಂಗಿರೊ
ಮನೆ ತುಂಬಿ ಜನಾ ಇರೋ
ನಗ್ತಾ ನಗ್ತಾ ಮಾತುಕತೆ
ಆಡ್ಕತ್ ಕೆಲ್ಸ ನೋಡ್ತಿರೋ||

ಮನೆಯಂದ್ರೆ ಹೀಂಗಿರೊ
ನೆಂಟ್ರು ಇಷ್ಟರು ಬತ್ತಿರೊ
ಊಟಾ ಆಸ್ರಿ ಹರಟೆ ಹಾಸ್ಯ
ಅರಶ್ನ ಕುಂಕುಮಾ ಎಲ್ಲಾ ಇರೊ||

ಮನೆಯಂದ್ರೆ ಹೀಂಗಿರೊ
ನೆಮ್ಮದಿ ಸುಖಾ ಸದಾ ಇರೊ
ದಾಂಪತ್ಯ ಜೀವ್ನದಲ್ಲಿ ಕಷ್ಟಾ ಸುಖಾ ಹಂಚ್ಕಂಡಿರೊ
ಸಂಸಾರ ಬಂಧನದಲ್ಲಿ ಸಂಬಂಧಾನೇ ಕೂಡಿರೊ||

ಮನೆಯಂದ್ರೆ ಹೀಂಗಿರೊ
ದುಡ್ನ ಬೆಲೆ ಗೊತ್ತಿರೊ
ಮನೆ ಮರ್ಯಾದೆ ವಳಿಸಿ
ವಳ್ಳೆ ಚಿಂತ್ನೆ ಮಾಡ್ತಿರೊ||

ಮನೆಯಂದ್ರೆ ಹೀಂಗಿರೊ
ದೇವ್ರ ಗುಡಿಯಾಂಗಿರೊ
ನ್ಯಾಯ ನೀತಿ ಧರ್ಮಕ್ಕೆ ಹೆಗ್ಲ ವಡ್ವಾಂಗಿರೊ
ಮನೆತನದ ಗೌರವ ಜನ್ರ ಬಾಯ್ಲಿ ನಿಂತಿರೊ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

  1. K.Narasimha Bhat Yethadka

    ಕೊಶಿ ಆತು.

    [Reply]

    VA:F [1.9.22_1171]
    Rating: 0 (from 0 votes)
  2. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಲಾಯಿಕಿದ್ದು,
    “ವಡ್ವಾಂಗಿರೊ” – ಇದರ ಅರ್ಥ ಹೇಳಿ ಅಕ್ಕ.

    [Reply]

    ಡಾಮಹೇಶಣ್ಣ

    ಡಾಮಹೇಶಣ್ಣ Reply:

    ಎನ್ನ ಊಹೆ ಇದು –
    ವಡ್ವ = ಒಡ್ಡುವ / ಕೊಡುವ
    ಹೆಗ್ಲ ವಡ್ವಾಂಗಿರೊ = ಹೆಗಲು ಕೊಡುವ ಹಾಂಗಿರೆಕು.
    ಸರಿಯಾ?

    [Reply]

    VN:F [1.9.22_1171]
    Rating: 0 (from 0 votes)
  3. ಗೋಪಾಲಣ್ಣ
    GOPALANNA

    ‘ಒಡ್ಡುವ ಹಾಂಗೆ ಇಪ್ಪ ‘ಹೇಳಿ ಇದರ ಅರ್ಥ ಆಗಿಕ್ಕು.ನ್ಯಾಯ ನೀತಿ ಧರ್ಮಕ್ಕೆ ಹೆಗಲು ಕೊಟ್ಟು ಆಧರಿಸಿ ಮುನ್ನಡೆಸುವ ಮನೆ ಆಗಿರೆಕ್ಕು ಹೇಳಿ ಮಹದಾಶಯ.

    [Reply]

    VA:F [1.9.22_1171]
    Rating: 0 (from 0 votes)
  4. ಕಲ್ಪನಾ ಅರುಣ್
    kalpanaarun

    ವಡ್ವಾಂಗಿರೋ ಇದರ ಅರ್ಥ ಸರಿಯಾಗ್ ಕೊಟ್ಟಿದ್ರಿ ಕ್ರತಜ್ನತೆಗಳು

    [Reply]

    VA:F [1.9.22_1171]
    Rating: 0 (from 0 votes)
  5. ಯಮ್.ಕೆ.

    ನ್ಯಾಯ ನೀತಿ ಧರ್ಮಕ್ಕೆ ಹೆಗ್ಲ ವಡ್ವಾಂಗಿರೊ
    ಮನೆತನದ ಗೌರವ ಜನ್ರ ಬಾಯ್ಲಿ ನಿಂತಿರೊ||———-
    ಇದರ ಓದಿ ಅಪ್ಪಗ,
    ಇ೦ದು ಉದಿಯಪ್ಪಗ ಬೈಟೂ ಕಾಪಿ ಕುಡಿವಾಗ ಭೀಮಗುಳಿಯವು ಬರೆದ ಕೌರವನ ಮನೆ ಅಜ್ಜಿಯ ಲಹರಿ ಓದಿದ ನೆ೦ಪಾತು.
    ೨ಊ ಉತ್ತಮ ಆಯಿದು.

    [Reply]

    ಸುರೇಖಾ ಚಿಕ್ಕಮ್ಮ

    surekha bheemaguli Reply:

    ಓದಿ, ಅಭಿಪ್ರಾಯ ಬರದು, ಪ್ರೋತ್ಸಾಹಿದಕ್ಕೆ ಧನ್ಯವಾದಂಗೊ.

    [Reply]

    VA:F [1.9.22_1171]
    Rating: 0 (from 0 votes)
  6. ಸುಭಗ

    ಸತ್ಯವಾದ ಮಾತು.
    ಮನೆ ಹೇದರೆ ಬರೇ ಇಟ್ಟಿಗೆ-ಸಿಮೆಂಟಿನ ಕಟ್ಟೋಣ ಅಲ್ಲ; ಅದಕ್ಕೆ ಚೆಂದ ಬಪ್ಪದು ಬಣ್ಣ ಬಣ್ಣದ ಪೈಂಟು ಬಳಿವದರಿಂದಲೋ, ಶೋಕೇಸು ಫರ್ನಿಚರು ತುಂಬುಸುವುದರಿಂದಲೋ ಅಲ್ಲ; ಒಳ್ಳೆಯ ಸಂಸ್ಕಾರ, ಒಳ್ಳೆಯ ಮನಸ್ಸು ಇಪ್ಪ ಜೆನಂಗೊ ಅಲ್ಲಿ ಇದ್ದರೆ ಮಾಂತ್ರ ಅದು ನಿಜವಾದ ಮನೆ ಆಗಿರ್ತು ಹೇಳುದರ ಕವನಲ್ಲಿ ಚೆಂದಕೆ ನಿರೂಪಣೆ ಮಾಡಿದ್ದಿ ಕಲ್ಪನಕ್ಕಾ..
    ಅಭಿನಂದನೆಗೊ..

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಪಟಿಕಲ್ಲಪ್ಪಚ್ಚಿಅನುಶ್ರೀ ಬಂಡಾಡಿಮಂಗ್ಳೂರ ಮಾಣಿಸಂಪಾದಕ°ಬೋಸ ಬಾವಪುಣಚ ಡಾಕ್ಟ್ರುದೇವಸ್ಯ ಮಾಣಿಅಜ್ಜಕಾನ ಭಾವಚುಬ್ಬಣ್ಣಚೂರಿಬೈಲು ದೀಪಕ್ಕಜಯಗೌರಿ ಅಕ್ಕ°ಅನಿತಾ ನರೇಶ್, ಮಂಚಿಅನು ಉಡುಪುಮೂಲೆಜಯಶ್ರೀ ನೀರಮೂಲೆಕಜೆವಸಂತ°ಶ್ಯಾಮಣ್ಣಶಾಂತತ್ತೆದೊಡ್ಡಭಾವಅಡ್ಕತ್ತಿಮಾರುಮಾವ°ಡಾಮಹೇಶಣ್ಣಬಂಡಾಡಿ ಅಜ್ಜಿಚೆನ್ನೈ ಬಾವ°ಶುದ್ದಿಕ್ಕಾರ°ದೊಡ್ಮನೆ ಭಾವವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ