“ಮನೆ ಎಜಮಾನ ಮೆಟ್ಟುಕಲ್ಲಿನ ಹಾಂಗೆರೆಕು” [ಹವ್ಯಕ ನುಡಿಗಟ್ಟು-19]

November 5, 2014 ರ 11:04 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನೆ ಎಜಮಾನ ಮೆಟ್ಟುಕಲ್ಲಿನ ಹಾಂಗಿರೆಕು—[ಹವ್ಯಕ ನುಡಿಗಟ್ಟು-19]

ಮನಗಳಲ್ಲಿ ಕಾರ್ಬಾರು ಮಾಡುತ್ತವಕ್ಕೆ ಮನೆ ಎಜಮಾನ ಹೇಳ್ತು ನಾವು, ಮನೆಲಿದ್ದ ಎಲ್ಲೋರ ಸುಖ-ದುಃಖವನ್ನೂ ಆ  ಎಜಮಾನ ನೋಡಿಗೊಂಡು, ಎಲ್ಲೋರಿಂಗೂ ಬೇಕಾದ ಹಾಂಗೆ ಒಪ್ಪಿಗೆ ಆವುತ್ತ ಹಾಂಗೆ ನೆಡಕ್ಕೊಳೆಕ್ಕಾರೆ ಅದೆಷ್ಟು ತಾಳ್ಮೆ ಇದ್ದರೂ ಸಾಲ!.ಸ್ಥಿತಿ-ಗತಿಲಿ ಪಾಪದವಾದರೆ, ಮನೆತುಂಬ ಜೆನವೂ ಇದ್ದರೆ  ಅವನ ಪರಿಸ್ಥಿತಿ  ಕೇಳುವದೇ ಬೇಡ!! ಮದಲಾಣ ಕಾಲಲ್ಲಿ ಗವರ್ಮೆಂಟು ಕೆಲಸವೂ ಇರಯಿದ. ಖರ್ಚಿಗೆ ತತ್ವಾರ. ಮನೆ ಒಳ ಇದ್ದ ಮನುಷ್ಯರ ಹೊಟ್ಟೆ-ಬಟ್ಟೆ ನೋಡಿಗೊಳೆಕ್ಕು!. ಒಟ್ಟಿಂಗೆ ಹಟ್ಟಿಲಿದ್ದ ದನಗಳ,ತೋಟ ಇದ್ದವಕ್ಕೆ ಕೆಲಸದಾಳುಗಳ ಸಂಬಳ!! ಇದೆಲ್ಲ ಆಯೆಕ್ಕು.ಮನೆ ಒಳಾಣ ಹೆಮ್ಮಕ್ಕಳತ್ರೆ ವ್ಯವಹರುಸೆಕ್ಕಾರು ಜಾಗ್ರತೆ ಬೇಕು!, ಅಬ್ಬೆ ಹೇಳಿದ ಹಾಂಗೆ ಕೇಳಿರೆ, ಹೆಂಡತ್ತಿಗೆ ಕೋಪ ಬಕ್ಕು,ಹೆಂಡತ್ತಿ ಹೇಳಿದ ಹಾಂಗೆ ಕೇಳಿರೆ, ಅಬ್ಬಗೆ ಪಿಸುರು ಎಳಗ್ಗು!. ಅಪ್ಪನ ಮನೋಭಿಲಾಷೆ ಬೇರೆಯೇ ಇಕ್ಕು.ಮಕ್ಕಳ ಬೇಡಿಕೆಯೋ ಇನ್ನೊಂದು ನಮುನೆ!!. ಈ ಎಲ್ಲ ಮಜಲುಗಳ ಮರ್ಯಾದಿಗೆ ದಾಂಟಿ ಬಪ್ಪದೊಂದು ಹರಸಾಹಸವೇ ಸರಿ!.!. ಈಗೀಗ ಕೂಡುಕುಟುಂಬ ಹೋಗಿ, ಗೆಂಡ-ಹೆಂಡತಿ ಮಾಂತ್ರ ಇದ್ದಲ್ಲಿ  ಇಂತಾ ಸಮಸ್ಯೆ ರಜ ಕಮ್ಮಿ ಹೇಳ್ಲಕ್ಕು.ಆದರೂ ಎಜಮಾನ ಆದವಂಗೆ ಒತ್ತಡ ಕಮ್ಮಿಯೇನಲ್ಲ!. ಎಷ್ಟೇ ಮೆಟ್ಟಿ ತೊಳುದರೂ ಸಹಿಸೆಂಡಿಪ್ಪ ಮೆಟ್ಟು ಕಲ್ಲಿನ ಹಾಂಗಿರೆಕು ಹೇದೊಂಡು ಹೋಲಿಕೆ ಕೊಡುಸ್ಸು ನಮ್ಮ ಹೆರಿಯವು,  ಸಹಿಸುತ್ತ ಸಹನೆಯ ಶಕ್ತಿಗೊಂದು ಸಂದೇಶ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. K.Narasimha Bhat Yethadka

    “ಇದ್ದರೂ ಸಾಲ,ಇಲ್ಲದ್ದರೂ ಸಾಲ”ಇಂದ್ರಾಣ ಪರಿಸ್ಥಿತಿ.ಎಷ್ಟು ತಾಳ್ಮೆ ಇದ್ದರೂ ಸಾಲ.ಒಳ್ಳೆದಾಯಿದು ವಿಜಯಕ್ಕ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಬೋಸ ಬಾವಕಾವಿನಮೂಲೆ ಮಾಣಿಪುತ್ತೂರಿನ ಪುಟ್ಟಕ್ಕದೊಡ್ಡಮಾವ°ಒಪ್ಪಕ್ಕಬಟ್ಟಮಾವ°ಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡುವಿಜಯತ್ತೆವಸಂತರಾಜ್ ಹಳೆಮನೆವಾಣಿ ಚಿಕ್ಕಮ್ಮರಾಜಣ್ಣಡಾಗುಟ್ರಕ್ಕ°ನೆಗೆಗಾರ°ಮುಳಿಯ ಭಾವvreddhiಚುಬ್ಬಣ್ಣಅಡ್ಕತ್ತಿಮಾರುಮಾವ°ಪುತ್ತೂರುಬಾವಸುಭಗಶ್ಯಾಮಣ್ಣವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ