“ಮನೆ ಕಟ್ಟಿದವ ಬಲ್ಲ, ಮದುವೆ ಮಾಡಿದವ ಬಲ್ಲ೦”-(ಹವ್ಯಕ ನುಡಿಗಟ್ಟು-97)

 

“ಮನೆಕಟ್ಟಿದವᵒ ಬಲ್ಲᵒ ಮದುವೆ ಮಾಡಿದವᵒ ಬಲ್ಲᵒ”-(ಹವ್ಯಕ ನುಡಿಗಟ್ಟು-97)

ಮನೆ ಕಟ್ಟೆಕ್ಕಾರೂ ಮದುವೆ ಮಾಡೆಕ್ಕಾರೂ ಎಳ್ಪದ ಕೆಲಸವೇನೂ ಅಲ್ಲ.ಈಗ ಕಾಂಟ್ರೆಕ್ಟರುಗೊ ಇದ್ದವು ಬೇಕಾದಷ್ಟು!.  ಕೈಲಿ ತಕ್ಕಷ್ಟು ಪೈಸ ಇದ್ದರೆ; ಸೈಟು ತೆಗದತ್ತು, ಕಾಂಟ್ರೆಕ್ಟರನ ನಂಬರಿಂಗೆ ದೆನಿಗೇಳಿತ್ತು. ಅದೇನೂ ಕಷ್ಟ ಅಲ್ಲಾಳಿ ಕಾಂಗು!.

ಆದರೆ ಹಿಂದಾಣಕಾಲಲ್ಲಿ ಗೆದ್ದೆಲಿಯೋ ಮುಳಿ ಆವುತ್ತ ಹಿತ್ತಿಲಿಲ್ಲಿಯೋ ಮನೆಕಟ್ಟವು. ಮನಗೆ ಬರೆಯ ನೀಕ ತೆಗೆಕು.ಕೂಲಿ ಕೆಲಸಲ್ಲಿ ಆಯೆಕ್ಕು.ಈಗಾಣಾಂಗೆ ಬುಲ್ಡೋಝರ್ ಇಲ್ಲೆ. ಪಿಕ್ಕಾಸಿಲ್ಲಿ ಮೋಂಚಿಯೇ ಆಯೆಕ್ಕು.ಮತ್ತೆ ಆಚಾರಿ,ಮೇಸ್ತ್ರಿ, ಕೂಲಿಯಾಳುಗೊ ಎಲ್ಲದಕ್ಕೂ ಮಧ್ಯವರ್ತಿ ಇಲ್ಲೆ. ಏನಿದ್ದರೂ ಮನೆ ಎಜಮಾನನೇ ಸಂಪರ್ಕ ಮಾಡಿ ಒಪ್ಪುಸಿಯೇ ಆಯಕ್ಕು. ಹೆಮ್ಮಕ್ಕೊಗೂ ಅಷ್ಟೆ; ಸಣ್ಣ ಸಣ್ಣ ಮಕ್ಕಳ  ಚಾಕರಿ ಒಟ್ಟಿಂಗೆ ಈ ಆಳುಗೊಕ್ಕೆ, ಒಂದಾರು ತಿಂಗಳ, ಅಡಿಗೆ ಮಾಡಿಹಾಕೆಕ್ಕು!.ಮಿಕ್ಸಿ,ಗ್ರೈಂಡರ್, ಗೇಸ್, ಏವದೂ ಇಲ್ಲೆ!! ಇದೂ ಒಂದು ಚಾಲೆಂಜ್ !!!.

ಇನ್ನು ಮದುವೆ ವಿಷಯಕ್ಕೆ ಬಂದರೆ ಮತ್ತೂ ಕಷ್ಟ!.ಮನೆತನ,ಮಾಣಿ,ರೂಪ,ಗುಣನಡತೆ ಒಟ್ಟಿಂಗೆ, ಒಳ್ಳೆ ಕುಳವಾರಾಯೆಕ್ಕು,ಈಗಾಣಾಂಗೆ ಫೇಸ್ ಬುಕ್, ಮೊಬೈಲು, ಇಂಟರ್ನೆಟ್ ಇಲ್ಲೆ. ಒಂದುವೇಳೆ ನೋಡಿ, ಎಲ್ಲವೂ ಒಪ್ಪಿ ನಿಜಾತು ಇನ್ನು ಹೆದರಿಕೆ ಇಲ್ಲೇಳುವಾಂಗಿಲ್ಲೆ. ಕೂಸು ಯಾ ಮಾಣಿಯ ಮನೆ ಪೈಕಿ ಆರಾರು ಅಕಾಲ ಮರಣವಾದರೆ; ಮತ್ತೆ ಆ ಮದುವೆ ಮುರುದತ್ತೂಳಿಯೇ ಲೆಕ್ಕ!!. ಈಗ ಹಾಂಗಲ್ಲ, ಮಾಣಿ,ಕೂಸು ಪರಸ್ಪರ ಒಪ್ಪಿಗೆ ಬಿದ್ದರೆ ಮತ್ತೆ ಆ ಮದುವೆ ಕಳುದತ್ತೂಳಿಯೇ ಲೆಕ್ಕ!. ಮದುವೆ ಕಳುದ ಮತ್ತಾಣ ಅನುಭವದ ಮೂಟೆಯೇ ಹೇಳ್ಲಕ್ಕು  ಅವರತ್ರೆ!! (ಒಂದು ವೇಳೆ ಮದುವೆ ಕಳುದು ಪರಸ್ಪರ ಹೊಂದಾಣಿಕೆ ಆಗದ್ರೆ ಡೈವರ್ಸ್ ಆವುತ್ತು.ಅದು ಮದುವೆ ಕಳುದ ಮೇಲಾಣ ಮೋಡರ್ನ್!!!).

ಮನೆ ಕಟ್ಟುವದಕ್ಕೂ ಮದುವೆ ಮಾಡ್ಸುದಕ್ಕೂ ಇದ್ದ ಬವಣೆ, ಬಙವ ಬಂದು ಪಕ್ವ ಆದವು ಏವದಾರೂ ಕಷ್ಟದ ಕೆಲಸವ ಎದುರುಸುವಾಗ ಈ ಗಾದೆಯ ಉದಾಹರಣೆ ಕೊಡ್ತವು.

——-೦——-

 

ವಿಜಯತ್ತೆ

   

You may also like...

15 Responses

 1. ಆರ್ಥಿಕ ಅಡಚಣಿ ಒಂದು ಕಾರಣ ವಿಜಯಕ್ಕ , ಈ ಗಾದೆಯ ಉದಯಕ್ಕೆ. ಎರಡೂ ಆಯೆಕ್ಕಾದ ಕೆಲಸ. ಪೈಸೆ ಇಲ್ಲ ದ್ರೆ ಎಂತ ಮಾಡೋದು. ಈಗ ಸ್ವಲ್ಪ ಮಟ್ಟಿಂಗೆ ಒಳ್ಳೆದು ಆಯಿದು ಹೇದು ತೋರುತ್ತು. ವಶೀಕರಣದ ಬಗ್ಗೆ ಎನ್ನ ಅತ್ತೆ ಬರದ ಲೇಖನ ನೀನು ಓದಿಪ್ಪೆ. ಇವರ ಅಪ್ಪ ಕರ್ನಾಟಕ ಕಂಡ ದೊಡ್ಡ ಕವಿ, ನಿನಗೆ ಗೊಂತಿಕ್ಕು.

  • pattaje shivarama bhat says:

   ನಿಂಗಳ ಗಾದೆಯ ೨ ಐಟೆಮ್ಗಳನ್ನು ಆನು ಬೆಂಗಳೂರಿಲ್ಲಿ (ಊರಿಲ್ಲಿ ಅಲ್ಲ) madidde. ದೇವರ ದಯಂದ

  • ಸೇಡಿಯಾಪು ಕೃಷ್ಣ ಭಟ್ಟರ ಸೊಸೆ ಎನ್ನ ಬಾಲ್ಯ ಸ್ನೇಹಿತೆ. ಆನು ಬಡೆಕ್ಕಿಲ ಅತ್ತೆಯ ಲೇಖನವ ಮೊನ್ನೆದು ಓದಿ ಲೈಕ್ ಕೊಟ್ಟಿದೆ

   • pattaje shivarama bhat says:

    ಸೇಡಿಯಾಪು ಕೃಷ್ಣಜ್ಜನ ಸೊಸೆಯೋ , ಮಗಳೋ ಬಾಲ್ಯ snehite?

 2. ಶಿವರಾಮ, ಸಾರು ಬರಲಿ, ಕೊದಿಲು ಬರಲಿ ಹೇದರೆ ಅವಕ್ಕೆ ಬರದು ಆಯೆಕ್ಕನ್ನೆ ಮಾರಾಯ.

 3. ಶರ್ಮಪ್ಪಚ್ಚಿ says:

  ಎರಡು ಕೂಡಾ ಅನುಭವಕ್ಕೆ ಸಿಕ್ಕಿದ್ದದೇ. ಗಾದೆ ಮಾತು ಸುಳ್ಳಲ್ಲ.
  ಈಗಾಣ ಕಾಲಲ್ಲಿ ಪೈಸೆಗೆ ವ್ಯವಸ್ಥೆ ಆವ್ತು ಆದರೆ ಬಾಕಿಪ್ಪ ಸಂಗತಿಗಳ ನಾವೇ ಅನುಭವಿಸೆಕ್ಕಾವ್ತು

 4. K.Narasimha Bhat Yethadka says:

  ಎರಡೂ ಮಾಡಿದವ ಮಲ್ಲನೇ ಸೈ!

 5. ವಿಜಯಕ್ಕ , ಎನ್ನ ಅತ್ತೆ ಸೇಡಿಯಾಪು ಕೃಷ್ಣ ಭಟ್ಟರ ಮಗಳು. ಸೊಸೆ ಅಲ್ಲ. ಅಜ್ಜನ ಸೊಸೆ ಲಕ್ಶಮಿ ಅತ್ತೆ. ಅವು ಜಯರಾಮ ಮಾವನ ಯೆಜಮಾಂತಿ. ಎಂತಾರು ಪ್ರಶ್ನೆ ಇದ್ದೊ ವಿಜಯಕ್ಕ?

  • ಕೃಷ್ಣ ಭಟ್ಟರ ಸೊಸೆ (ಮಗನ ಹೆಂಡತಿ} ಕೆ.ಕೆ. ಲಕ್ಷ್ಮಿ {ಕಟಾರಿಂದ ಮದುವೆ ಆದ್ದು ಎನ್ನ ಬಾಲ್ಯ ಸ್ನೇಹಿತೆ ಹೇಳಿದ್ದಾನು. ಮತ್ತೆ….,ಸೊಸೆಯೋ ಮಗಳೋ ಕೇಳಿರೆ….?

 6. Venugopal Kambaru says:

  ಲಾಯಕ ಇದ್ದು ಗಾದೆಯ ವಿಮರ್ಶೆ. ಕಟ್ಟಿದ ಮನೆ ತೆಗೆಯೆಕ್ಕಾರು ಕಷ್ಟ ಇದ್ದು.

 7. ಯಮ್.ಕೆ. says:

  ಮನೆ ಕಟ್ಟದ್ದೇ, ಮದುವೆ ಆಗಿ ನೋಡು !

  ಆಗದೋ?

 8. ಬೊಳುಂಬು ಗೋಪಾಲ says:

  ಅರ್ಥವತ್ತಾಗಿದ್ದು ನುಡಿಗಟ್ಟು. ಈಗಾಣ ಕಾಲಕ್ಕು ಸರಿಯಾಗಿ ಹೊಂದುತ್ತು. ಮನೆ ಕಟ್ಟುವುದಾದರು ಮಾಡ್ಳಕ್ಕು. ಒಂದು ಮದುವೆ ಸೆಟ್ ಆಯೆಕಾರೆ ಈಗಾಣ ಕಾಲಲ್ಲಿ ಭಾರೀ ಕಷ್ಟ ಇದ್ದು.

 9. ಬೊಳುಂಬು ಗೋಪಾಲ says:

  ವಿಜಯಕ್ಕ, ನಿಂಗೊ ವಾಟ್ಸ್ ಅಪ್ಪಿಲ್ಲಿ ಹಾಕಿದ ಮದುವೆ ಗೌಜಿ ನಮ್ಮ ಬೈಲಿಂಗುದೆ ಬರಳಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *