“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79)

February 8, 2017 ರ 4:53 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ ,ಅಸಲಿಲ್ಲದ್ದೆ ಬಡ್ಡಿ ಇಲ್ಲೆ,”-(ಹವ್ಯಕ ನುಡಿಗಟ್ಟು-79)

ಮಜ್ಜಿಗೆ ಇಲ್ಲದ್ದೆ ಉಂಬಲೆ ಮೆಚ್ಚ. ಅದೂ ಬ್ರಾಹ್ಮಣರಿಂಗೆ ಮಜ್ಜಿಗೆ ಇಲ್ಲದ್ದ ಊಟ ಉಂಡಾಂಗಾಗ!. ಇದು ಸಾರ್ವತ್ರಿಕ ಅನುಭವ. ಅದಕ್ಕಾಗಿಯೇ ಮದಲಿಂಗೆ ಹವ್ಯಕರ ಮನೆಲಿ ಎಂತ ಇಲ್ಲದ್ರೂ ಒಂದು ಕರವ ದನ ಇಕ್ಕು.ಹಟ್ಟಿತುಂಬಾ ದನಗೊ ಇದ್ದರೆ ಅವು ಶ್ರೀಮಂತರೂಳಿ ಲೆಕ್ಕ. ಆದರೀಗ!!. ಹಟ್ಟಿತುಂಬಾ ದನಗಳ ನೋಡೆಕ್ಕಾರೆ ರಾಮಚಂದ್ರಾಪುರ ಮಠಕ್ಕೆ ಹೋಯೆಕ್ಕು.

ಹೀಂಗೊಂದು ದಿನ ಮನೆಲಿ, ಕರವ ದನ ಜಾನ್ಸಿದ್ದರಿಂದ ಬೇಗ ಕರವು ಮತಿ ಆಗಿ ಒಂದು ವಾರ ಆತು.ಚನೆ ಇಳಿಶಿಗೊಂಡಿದ್ದ ದನ ಇನ್ನೊಂದು ನಾಲ್ಕು ದಿನಹೋಕು ಕಂಜಿ ಹಾಕಲೆ. ಕೂಡಿ ಮಡಗಿದ ಮಜ್ಜಿಗೆಯೂ ಮುಗುದು ಉಂಬಲೆ ಮಜ್ಜಿಗೆ ನೀರಿಂಗೆ ತತ್ವಾರಾತು.ಚಾಯ-ಕಾಪಿಗೆ ಆಚಮನೆ ಹಾಲೇ ಉಳ್ಳೊ!.

 ಉಂಬಲೆ ಕೂದಂಡಿದ್ದ ಎಂಗೊ ಮಕ್ಕೊ “ಮಜ್ಜಿಗೆ  ಬೇಕು” ಹೇಳುಗ   “ಹಾಲಿಲ್ಲದ್ದೆ ಮಸರು,ಮಜ್ಜಿಗೆ  ಎಲ್ಲಿಂದ ಮಕ್ಕಳೆ? ಇನ್ನೊಂದೆರಡು ದಿನ ಸುಧರ್ಸಿ” ಅಬ್ಬೆ ಹೇಳಿದೊವು. ಅದಪ್ಪಲ್ಲೊ ಮಕ್ಕೊಗೆ ಮತ್ತೆಯೇ ಮನಸ್ಸಿಂಗೆ ಹೋಪದು!.

ಮದಲಿಂಗೆ  ಕಡಗಟ್ಟು ವೈವಾಟುಗೊ ಪೈಸೆಕ್ಕಾರಂಗೊ-ಪಾಪದವರ ಒಳ ಇಕ್ಕಷ್ಟೆ. ಈಗಾಣಾಂಗೆ ಬೇಂಕುಗಳಲ್ಲಿ ಸಾಲ ಕೇಳ್ಲೂ ಪೈಸೆ ಮಡಗಲೂ ಹೋಪದು ಕಮ್ಮಿ.

ಒಬ್ಬ ಆಢ್ಯನತ್ರೆ ಒಂದರಿ ಹೀಂಗೇ ಮಾತಾಡುತ್ತಾ ಎನ್ನಪ್ಪ ಕೇಳಿದೊವು “ಹೇಂಗೆ ಭಾವಯ್ಯ ವರ್ಷದ  ಆರು ತಿಂಗಳ ಖರ್ಚಿಂಗೆ ಬಡ್ಡಿ ಪೈಸವೇ ಸಾಕಾಗದೋ”

ಆ  ಮನುಷ್ಯ ಮೋರೆ ಹುಳಿ-ಹುಳಿ ಮಾಡೆಂಡು  “ಕೊಂಡೋದ ಖದೀಮಂಗೊ  ಅಸಲನ್ನೇ ಮುಳುಕ್ಸಿಕ್ಕಿ ಓಡಿದೊವು  ಅಸಲಿದ್ದರಲ್ಲೊ ಬಡ್ಡಿಯ ಪ್ರಶ್ನೆ?!!” ಹೇಳುವಗ, ಅಯ್ಯೋ ಹಾಂಗಾತೊ? ಹೇಳಿಕ್ಕಿ ಅಪ್ಪ

“ಅದಪ್ಪು ನಿಂಗೊ ಹೇಳುಸ್ಸು ಸರಿ.ನಿಂಗೊಗೆ ’ಅಸಲಿಲ್ಲದ್ದೆ ಬಡ್ಡಿ ಇಲ್ಲೇಳಿ  ಆದರೆ ಎಂಗಳಲ್ಲಿ ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ’ ಹೇಳುವ ಗಾದೆಯೇ ಆಯಿದು.

ಈ ಮೇಲಣ ಮಾತುಗಳ ಬೇರೆ ಕೆಲಾವು ಸಂದರ್ಭಲ್ಲಿ ಬಳಸಿಗೊಳ್ತವು. ಒಟ್ಟಿಲ್ಲಿ ಮೂಲ ವಸ್ತು ಇಲ್ಲದ್ದೆ ಅದರಿಂದ ಮತ್ತಾಣ ಉತ್ಪನ್ನ ಎಲ್ಲಿಂದ!? ಹೇಳುವ ಅರ್ಥಕ್ಕೆ ಉಪಯೋಗ ಮಾಡ್ತವು.

                        ——೦——

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆದಾಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಧನ್ಯವಾದ ಗೋಪಾಲ. ( ಇತ್ತೀಚೆಗೆ ಬಯಲಿಂಗೆ ಇಳಿವವು ಕಮ್ಮಿ ಆಯಿದವೊ!)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಡಾಗುಟ್ರಕ್ಕ°ಅಕ್ಷರದಣ್ಣಪವನಜಮಾವನೀರ್ಕಜೆ ಮಹೇಶಜಯಶ್ರೀ ನೀರಮೂಲೆಸುವರ್ಣಿನೀ ಕೊಣಲೆವಿಜಯತ್ತೆಶರ್ಮಪ್ಪಚ್ಚಿಮಂಗ್ಳೂರ ಮಾಣಿವಿನಯ ಶಂಕರ, ಚೆಕ್ಕೆಮನೆvreddhiಅನಿತಾ ನರೇಶ್, ಮಂಚಿವಿದ್ವಾನಣ್ಣಸಂಪಾದಕ°ದೇವಸ್ಯ ಮಾಣಿಪೆರ್ಲದಣ್ಣಶ್ರೀಅಕ್ಕ°ಬಂಡಾಡಿ ಅಜ್ಜಿಉಡುಪುಮೂಲೆ ಅಪ್ಪಚ್ಚಿಡೈಮಂಡು ಭಾವಪೆಂಗಣ್ಣ°ದೀಪಿಕಾವೇಣೂರಣ್ಣಮಾಲಕ್ಕ°ಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ