“ಮೀಸುತ್ತವಂಗೆ ಮೀಸೆ ಭಾರ ಅಕ್ಕೊ”-(ಹವ್ಯಕ ನುಡಿಗಟ್ಟು-102)

August 12, 2017 ರ 11:33 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

 “ಮೀಸುತ್ತವಂಗೆ ಮೀಸೆ ಭಾರ ಅಕ್ಕೊ?”-(ಹವ್ಯಕ ನುಡಿಗಟ್ಟು-102)

ಮದಲಿಂಗೆ  ಮೂಲೆಮನೆ ಚುಬ್ಬಣ್ಣಜ್ಜನ ಮನೆಲಿ ತುಂಬಾಜೆನ. ಕೂಡು ಕುಟುಂಬ. ವರ್ಷವೂ ಮನೆಲಿ ಮದುವೆ,ಉಪನಯನ, ಹೇಳಿ ದೊಡ್ಡಜೆಂಬಾರಲ್ಲದ್ದೆ; ತ್ರಿಕಾಲ ಪೂಜೆ, ಸತ್ಯನಾರಾಯಣ ಪೂಜೆ,ಆಟಿ ತಿಂಗಳ ಹೊಡಾಡಿಕೆ,ಹರಿಸೇವೆ,ದೇವಕಾರ್ಯ, ಹೀಂಗೆ ಗರ್ಗಟ್ಳೆ ಒಂದಲ್ಲದ್ರೆ ಒಂದು ಅನುಪತ್ಯ ಆಗೆಂಡೇ ಇಕ್ಕು.

ಒಂದೊರುಷ ತಂಗೆಯ ಮದುವೆ ಮಾಡಿಕೊಟ್ಟು, ಮೂರುತಿಂಗಳಾಯಿದಷ್ಟೆ.ಆ ಭಾವ  ವಾಹನ ಅಪಘಾತಲ್ಲಿ ತೀರಿಹೋದ!. ಆ ಮತ್ತೆ ತಂಗೆಯನ್ನೂ ಕರಕ್ಕೊಂಡು ಬಂದು ಮನೆಲೇ ಮಾಡಿಗೊಂಡಪ್ಪಗ ; ಒಬ್ಬ ಚಙಾಯಿ,ಕೇಚಣ್ಣ ; “ಕೊಟ್ಟ ಕೂಸುಗಳ ಜವಾಬ್ದಾರಿಯನ್ನೂ ಹೊರೆಕಾಗಿ ಬಂತನ್ನೆ ಚುಬ್ಬಣ್ಣಾ!” ಹೇಳುವಗ

“ನಾವು ಸಂಸಾರ ಸಮುದ್ರಲ್ಲಿ ಮೀಸುವದು. ಮೀಸುತ್ತವಂಗೆ ಮೀಸೆ ಭಾರ ಅಕ್ಕೊ ಕೇಚಣ್ಣ?”  ಹೇಳುವಗ ; ಎಷ್ಟು ತಾಳ್ಮೆಯ ಖನಿ ಈ ಚುಬ್ಬಣ್ಣ! ಹೇಳಿ ಕಂಡತ್ತು  ಕೇಚಣ್ಣಂಗೆ!!.

ದೊಡಾ…ಹೊರೆ ಬೆಳೂಲಕಟ್ಟ ತಲೆಲಿಪ್ಪಗ    ಅದರ ಮೇಗೊಂದು ಸಣ್ಣ ಸೂಡಿ ಮಡಗೀರೆ , ಅದೊಂದು ಭಾರ ಅಲ್ಲ, ಹೇಳುವ ಮಾತಿನಾಂಗೆ  ಇದರ ಬಳಕೆ ಮಾಡ್ತವು.

                                    ————–೦————

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಈ ನುಡಿಗಟ್ಟು ಹೊಸತಾಗಿ ಕೇಳ್ತಾ ಇಪ್ಪದು.
  ವಿವರಣೆ ಲಾಯಿಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಗೋಪಾಲ

  ಪ್ರಾಸಬದ್ಧವಾಗಿ ಲಾಯಕಿದ್ದು ನುಡಿಗಟ್ಟು. ಒಪ್ಪುವಂತಹ ಮಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ವಿನಯ ಶಂಕರ, ಚೆಕ್ಕೆಮನೆಪವನಜಮಾವಕೇಜಿಮಾವ°ದೀಪಿಕಾವಸಂತರಾಜ್ ಹಳೆಮನೆಶರ್ಮಪ್ಪಚ್ಚಿವಿದ್ವಾನಣ್ಣಅಜ್ಜಕಾನ ಭಾವದೇವಸ್ಯ ಮಾಣಿನೆಗೆಗಾರ°ಪುಣಚ ಡಾಕ್ಟ್ರುವಿಜಯತ್ತೆವೇಣಿಯಕ್ಕ°ಸುಭಗಅನುಶ್ರೀ ಬಂಡಾಡಿvreddhiತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆಶಾ...ರೀಚೂರಿಬೈಲು ದೀಪಕ್ಕವೇಣೂರಣ್ಣಬಂಡಾಡಿ ಅಜ್ಜಿಪುತ್ತೂರುಬಾವಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ