ಮುಂಬೆಳಗು

ಹೆಗ್ಡೆಮನೆ ನಾಲ್ಕನೆ ತಲೆಮಾರಿನ ತಲೆಗಳಲ್ಲಿ ಉಳ್ಕಂಡದ್ದು ಈಗ ಮಂಜುನಾಥ ಮಾವ ಒಬ್ನೆ. ಈ ತಲೆಮಾರಲ್ಲಿ ಕುಪ್ಪೈಯ ಮತ್ತೆ ಪರಮೆಶ್ವರಿಗೆ ಐದ ಜನಾ ಗಂಡುಮಕ್ಕೊ. ಹಾಂಗೆ ನಾಲ್ಕ ಜನಾ ಹೆಣ್ಣಮಕ್ಕೊ. ಕಡೆಗೆ ದಾಯವಾದಿಯಕ್ಕೊಯೆಲ್ಲಾ ಸೇರಿ ೨೫ಜನಾ ಮಕ್ಕೊ. ಹಬ್ಬ ಹರಿದಿನಾ ಆತು ಅಂದ್ರೆ ಮನ್ತುಂಬಾ ಜನಾ. ಮಕ್ಕಳ ಗಲಾಟೆ ಮಾತು ಕತೆ ಹೇಳುಲೆ ಆಗ್ದಿದ್ದಶ್ಟು ಖುಶಿ. ದೊಡ್ಡ್ಮನೆತುಂಬಾ ಪಂಕ್ತೀಲಿ ಕೂತುಂಬೂ ದ್ರಶ್ಯ ಮಂಜುನಾಥ್ಮಾವ್ನ ಕಣ್ಣ್ಮ್ಂದೆ ನಿಲ್ತು. ಆದ್ರೆ ಈಗ ಮನೆ ಜನಾಯೆಲ್ಲಾ ಕೆಲ್ಸ ಹುಡ್ಕಂಡಿ ಹೆರಂಗ್ ನಡದ್ದೊ.
ಹಬ್ಬದ್ವೇಳೆಗೆ ಮನೆಮಕ್ಕೊ ಮೊಮ್ಮಕ್ಕೊಯೆಲ್ಲಾ ದೊಡ್ಮ್ ನೇಗ್ ಬಂದಿದ್ದೊ. ರಾತ್ರೆಗ್ ಹಾಂಗೆ ಕೂತವ್ಕೊ ಕತೆ ಹೇಳೊ ಅಜಾ ಹೇಳಿ ಶುರು ಮಾಡ್ದೊ. ಆಗಾ ಮಂಜುನಾಥ ಮಾವಂಗೆ ಕುಲದೇವ್ರ ಕತೆ ಹೇಳೊ ಅನ್ಸ್ತು. “ಹ್ಹಾ… ಹೇಳ್ತೆ. ಸರಿಯಾಗ್ ಕೇಳ್ಸಕಳಿ, ಕೂತ್ಗಳಿ.” ಹೇಳ್ಕಂಡಿ ಸುರು ಮಾಡ್ದ.
ನಂಗ್ಳ ಕುಲದೇವ್ರು ಕಡತೋಕಾ ಶ್ರೀ ಸ್ವಯಂಬುದೇವ್ರು. ಸುಮಾರು 400 – 500 ವರ್ಶದ್ ಹಿಂದೆ ದನಕರುಯೆಲ್ಲಾ ಗುಡ್ಡದ್ ಮೇಲೆ ಮೇಲೆ ಮೇಯುಲೆ ಹೊಗ್ತಿತ್ತಡಾ. ಅದ್ರಲ್ಲಿ ಒಂದ್ ದನಾ ಒಂದ್ ಗಿಡಾಗಂಟಿ ಹತ್ರಾ ಹೋಗಿ ಹಾಲಾ ಸುರಿಸಿಕ್ ಬತ್ತಿತ್ತಡಾ. ಒಂದಿನಾ ಸೊಪ್ಪ ಕೋಯ್ಯುಲೆ ಹೊಪಂವ ಒಬ್ಬಂವಾ ನೋಡ್ದ್ನಡಾ. ಅಂವಾ ಉರಿಗ್ ಬಂದಂವಾ ಯೆಲ್ಲಾರಿಗೂ ಹೆಳ್ದನಡಾ. ಊರಿನ್ ಜನಾ ಸೇರಿ ಅಲ್ಲೆಲ್ಲಾ ಅಗೆಸ್ದ್ವಡಾ. ಒಂದ್ ಪಾಣೀಪೀಟ ಈಶ್ವರ ಲಿಂಗ ಶಿಕ್ಕ್ತಡಾ. ಈ ಸುದ್ದಿಯಾ ತಜ್ನರಿಗೆಲ್ಲಾ ಹೇಳ್ದವಡಾ. ಅದು ಊರಾಕಾಯೂಲೇ ಬಂದದ್ದು. ತ್ರಿಕಾಲ ಪೂಜೆಯಾ ಶಾಸ್ತ್ರೋಕ್ತವಾಗಿ ಮಾಡೊಹೇಳಿ ಹೇಳ್ದವಡಾ. ಆ ದೇವ್ರು ಸ್ವಯಂ ಆಗಿ ಕಾಣ್ಸಕಂಡು ಪೂಜೆ ತಕಂಡದ್ದರಿಂದ ಅದ್ಕೆ ಸ್ವಯಂಬೂ ಹೇಳಿ ಹೆಸ್ರು. ಹಿಂಗೆ ಅಜ್ಜಾ ಮೊಮ್ಮಕ್ಕೊಗೆ ಅಲ್ಲಿ ನಿಯಮಾ ಹೇಳ್ದಾ. ಅಜ್ಜಂಗೆ ಮೊಮ್ಮಕ್ಕೊಗೆ ದೇವಸ್ತಾನದ ಕತೆ ಹೇಳದ್ದು ರಾಶಿ ಕುಶಿ ಆತು. ಮೊಮ್ಮಕ್ಕೊ ಅಜ್ಜಾ ಹೆಳ್ದ ಕತೆಯಿಂದಾ ಕುಶಿ ಆಗಿ ನಾಳೆ ದೇವಸ್ತಾನಕ್ಕೆ ಹೋಗಿ ಬರೊ ಹೇಳಿ ಮಾತ ಆಡ್ಕಂಡೊ.

ಅಜ್ಜಂಗೆ ಮಕ್ಳ ನಿರ್ಣಯ ನೋಡಿ ಅಶ್ಚರ್ಯ ಆಗಿ ಊಟಕ್ಕೆ ಕೂತಾಗ ತನ್ನ ಮಕ್ಕೊಗೆ ಹೇಳ್ದಾ. ಮಕ್ಕೊಗೆ ನಮ್ಮ ಸಂಪ್ರದಾಯಾಯೆಲ್ಲಾ ಕತೆ ರೂಪದಲ್ಲಿ ಹೇಳ್ರೊ. ಅವ್ಕೆ ಕುಶಿ ಆಗ್ತು. ಮುಂದೆ ಕಲ್ತ್ಕತ್ತೊ. ನಾ ಹೇಳ್ದ ಕತಿಂದಾ ಅವ್ಕೆ ನಾಳೆ ದೇವಸ್ತಾನಕ್ಕೆ ಹೋಗೊ ಹೇಳಿ ಕಂಡಿದ್ದು. ಮುಂಬೆಳಗಿಗೆ ಸೂರ್ಯ ಬೆಳ್ದು ಬೆಳ್ಕಾ ಕೊಡ್ವಾಂಗೆಯಾ ಈ ಮಕ್ಕೊ. ಊಟಾ ಮುಗತ್ತು. ಮತ್ತೆ ಕತೆ ಹೇಳು ಅಜ್ಜ ನೆನಪಲ್ಲಿ ತೇಲ್ತಾ ಇದ್ದಾಂಗೆ ಕಂಡಾ..

You may also like...

2 Responses

  1. ಚೆನ್ನೈ ಭಾವ° says:

    ಅಂತಿಮ ಪಾರಾಗ್ರಾಫಿಂಗೆ ಹರೇ ರಾಮ. ಎಲ್ಲರಿಂಗೂ ಮನಮುಟ್ಟಲಿ ಹೇಳ್ವದೀಗ ಆಶಯ

  2. ರಘುಮುಳಿಯ says:

    ಶುದ್ದಿ ಕೆಲವೇ ವಾಕ್ಯದ್ದಾದರೂ ಮನಸ್ಸು,ಹೃದಯವ ಮುಟ್ಟಿತ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *