“ಮೂಗಿಲ್ಲಿ ಉಂಡರೆ ಹೊಟ್ಟೆ ತುಂಬ”–{ಹವ್ಯಕ ನುಡಿಗಟ್ಟು-27}

-“ಮೂಗಿಲ್ಲಿ ಉಂಡರೆ ಹೊಟ್ಟೆ ತುಂಬ”-  [ಹವ್ಯಕ ನುಡಿಗಟ್ಟು-27}

ಆನು ಸಣ್ಣದಿಪ್ಪಗ ಒಂದ್ಸರ್ತಿ  ಏವದೋ ಒಂದು ಕಲೆಕ್ಷನಿಂಗೆ ಒಬ್ಬ ಬಂದ ಮನಗೆ.ಅವಂಗೆ   ಯಥಾನುಶಕ್ತಿ ಪೈಸವ ಕೊಟ್ಟೊವು ಎನ್ನಪ್ಪಂ. ಅಪ್ಪ ತೀರ್ಮಾನ ಮಾಡಿದಷ್ಟೇ ಕೊಡ್ಳೆ ಚಿಲ್ಲರೆ ಇಲ್ಲದ್ದ ಕಾರಣ;ರಶೀದಿಲಿ ಬರದ ಲೆಕ್ಕಲ್ಲಿ  ಆ ಮನುಷ್ಯ ವಾಪಾಸು ಇತ್ಲಾಗಿ ಒಂದು ರೂಪಾಯಿ ಕೊಡೆಕು. ಅವಂ ಕೊಟ್ಟಿದನಿಲ್ಲೆ. ಅವ  ಹೋದ ಮತ್ತೆ “ ಒಂದು ರೂಪಾಯಿ ಬಿಟ್ಟದೆಂತಕೆ?”.[ಆ ಕಾಲಕ್ಕೆ ಒಂದು ರೂಪಾಯಿ ಬರೆ ಚಿಕ್ಕಾಸಲ್ಲ!.] ಎನ್ನಬ್ಬೆ ಕೇಳಿತ್ತು.ಹೇಳಿರೆ.., ಅಂಬಗಣ ಆರ್ಥಿಕ ಪರಿಸ್ಥಿತಿಯೂ ಒಳ್ಳೆದಿತ್ತಿಲ್ಲೆಯಿದ. “ಹೋಗಲಿ, ಮೂಗಿಲ್ಲಿ ಉಂಡ್ರೆ ಹೊಟ್ಟೆ ತುಂಬ”. ಹೇಳಿದೊವು ಅಪ್ಪಂ.

ಹಾಂಗೇ ಇನ್ನೊಂದಾರಿಯಣ ಕತೆ ನೆಂಪಾವುತ್ತಿದ!.

ಕೆಲವು ಜೆನ ಇದ್ದೊವು. ಬರೇ ಪಿಟ್ಟಾಸುಗೊ!.ಒಂದು…, ಮುಕ್ಕಾಲುದೆ ಬಿಚ್ಚದ್ದವು!.ಅಂತವು ಕೊಡೆಕಾದಲ್ಲಿ ಕೊಡದ್ದದು ಮಾಂತ್ರ ಅಲ್ಲ!.ಬರೆಕಾದಲ್ಲಿಯುದೆ ಮುಕ್ಕಾಲು ಬಿಡವು!. ಎನ್ನಪ್ಪ ಜೆನಿವಾರ [ಕಿರುಹತ್ತಿ ಗೆಡು ಬೆಳೆಶಿ, ಆ ಹತ್ತಿಯ ತಕಲಿಲಿ ನೂಲು ನೈದು ಜೆನಿವಾರ ಸ್ವತಃ] ಮಾಡಿಗೊಂಡಿತ್ತಿದ್ದೊವು.ಕೇಳಿಯೊಂಡು ಬಂದವಕ್ಕೆ ಮಾರಿಗೊಂಡಿದ್ದಿದ್ದೊವು. ಒಬ್ಬ ಚಙಾಯಿ ಜೆನಿವಾರಕ್ಕೆ ಬಂದ. ಜೆನಿವಾರ ತೆಕ್ಕಂಡಿಕ್ಕಿ “ ನೀನು ಜೆನಿವಾರಕ್ಕೆ ಎನ್ನತ್ರಂದ ಪೈಸೆ ತೆಗೇಡ ಬಾವ, ಆನು ಕೊಡುತ್ತಿಲ್ಲೆ” ಹೇದಪ್ಪಗ; “ನಿನ್ನತ್ರೆ ಪೈಸೆ ಇಲ್ಲೇಳಿ ಆದರೆ, ಸಾರ ಇಲ್ಲೆ.ಎನ್ನತ್ರೆ ಜೆನಿವಾರ ಇದ್ದು. ತೆಕ್ಕೊಂಡೋಗಿ ಹಾಕು” ಹೇಳಿದೊವು ಅಪ್ಪಂ. ತೆಕ್ಕೊಂಡೋದಂ. ಅಷ್ಟೊತ್ತಿಂಗೆ  “ಮೊನ್ನೆ ಅಲ್ಲಿಂದ ಎರಡು ಕುಡ್ತೆ ಹಾಲು ತಂದದರ ಪೈಸವ ಬಿಡದ್ದವಂಗೆ ಈಗ ನವಗೆ ಬತ್ತ ಪೈಸವ ನಾವು ಬಿಡೆಕಿದ! ಹೇಂಗಿದ್ದು ಅವನ  ಞಾಯ!?”  ಅಬ್ಬೆ ಕೇಟಪ್ಪಗ;  “ಜೆನಿವಾರವ ದರ್ಮಕ್ಕೇ ತೆಕ್ಕೊಂಡು ಹಾಕಲಾಗ ಹೇದಿದ್ದು. ಪುಕ್ಕಟೆ ಕೊಟ್ಟವಕ್ಕೆ ಹಾಳಲ್ಲ ಒಳ್ಳೆದು.ಮೂಗಿಲ್ಲಿ ಉಂಡ್ರೆ ಹೊಟ್ಟೆ ತುಂಬ”. ಹೇದೊಂಡೊವು ಅಪ್ಪಂ. ಹೀಂಗೆ ಮೂಗಿಲ್ಲಿ ಉಣುತ್ತವರ ದೃಷ್ಟಾಂತ ನಿಂಗೊಗೂ ಬೇಕಾದಷ್ಟು ಆಗಿಕ್ಕಲ್ಲೊ!? ಎಂತ ಹೇಳ್ತಿ?.

ವಿಜಯತ್ತೆ

   

You may also like...

2 Responses

  1. ಚೆನ್ನೈ ಭಾವ° says:

    ಹ್ಹೋ!! ಮುಗಿಲಿ ಉಣ್ತೋರ ಕತೆ ಇದುವೇಯೋ!! ಲಾಯಕ ಹೇದಿ ನಿಂಗೊ. ಹರೇ ರಾಮ

  2. ಹರೇ ರಾಮ, ಚೆನ್ನೈಭಾವಂಗೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *