ಲೈಫು ಖುಶಿಯಾಗಿರೊ

August 24, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಬೆಳ್ಗೆ ಬೇಗಾ ಎದ್ಕಂಡು
ದೇವ್ರಿಗೆ ಕೈ ಮುಕ್ಕಂಡು
ಸಂಜೆತನ್ಕ ಲೈಫಲ್ಲಿ ಖುಶಿಯಾಗಿರೊ||

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಸ್ತೋತ್ರ ಮಂತ್ರ ಹೇಳ್ಕಂಡು
ವ್ಯಾಯಾಮ ನಡ್ಗೆ ನಡ್ಕಂಡು
ಸಂಜೆತನ್ಕ ಲೈಫಲ್ಲಿ ಖುಶಿಯಾಗಿರೊ||

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಆಸ್ರಿ ಊಟಾ ಉಂಡ್ಕಂಡು
ಕೆಲ್ಸ ಕಾರ್ಯ ಮಾಡ್ಕಂಡು
ಸಂಜೆತನ್ಕ ಲೈಫಲ್ಲಿ ಖುಶಿಯಾಗಿರೊ||

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಮಧ್ಯಾಹ್ನ ನಿದ್ದೆ ಹೊಡ್ಕಂಡು
ಚಾ ತಿಂಡಿ ತಿಂದ್ಕಂಡು
ಸಂಜೆತನ್ಕ ಲೈಫಲ್ಲಿ ಖುಶಿಯಾಗಿರೊ||

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಪರೋಪಕಾರ ಮಾಡ್ಕಂಡು
ದಾನ ಧರ್ಮ ನಡೆಸ್ಕಂಡು
ಬಾಳ ಪೂರಾ ಲೈಫಲ್ಲಿ ಖುಶಿಯಾಗಿರೊ||

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಬಾಳಲ್ಲಿದ್ರೆ ಆದರ್ಶ
ಕಣ್ಣಲ್ಲಿತ್ತು ಆ ದೃಶ್ಯ
ಮಾದರಿ ಈ ಲೈಫಲ್ಲಿ ಖುಶಿಯಾಗಿರೊ||

ಖುಶಿಯಾಗಿರೊ ಲೈಫು ಖುಶಿಯಾಗಿರೊ
ಸಾಯೋತನ್ಕ ಪ್ರೀತಿ ಮಮತೆ
ಸಂಸಾರದಲ್ಲಿ ಧರ್ಮದ್ ಘನತೆ
ಬೆಳ್ದ ಬಂದ ಲೈಫಲ್ಲಿ ಖುಶಿಯಾಗಿರೊ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಶಾಂತತ್ತೆಪೆಂಗಣ್ಣ°ಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ಜಯಶ್ರೀ ನೀರಮೂಲೆಪುಟ್ಟಬಾವ°ಗೋಪಾಲಣ್ಣಬೊಳುಂಬು ಮಾವ°ದೊಡ್ಡಭಾವಚೆನ್ನಬೆಟ್ಟಣ್ಣಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ಬಟ್ಟಮಾವ°ಮಂಗ್ಳೂರ ಮಾಣಿರಾಜಣ್ಣನೀರ್ಕಜೆ ಮಹೇಶವಿಜಯತ್ತೆವಿನಯ ಶಂಕರ, ಚೆಕ್ಕೆಮನೆಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಜಯಗೌರಿ ಅಕ್ಕ°ಶುದ್ದಿಕ್ಕಾರ°ದೇವಸ್ಯ ಮಾಣಿಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ