‘ವಿದ್ಯಾ ದೇಗುಲದ ಪ್ರಾರಂಭೋತ್ಸವಕ್ಕೆ ಕುಞ್-ಕುಞ್ ಮಕ್ಕಳ ತಕ-ಪಕ’

-ವಿದ್ಯಾದೇಗುಲದ  ಪ್ರಾರಂಭೋತ್ಸವಕ್ಕೆ  ಚಿಣ್ಣರ ಕಲರವ-

ಎಲ್ಲಾ ಶಾಲಗಳಲ್ಲೂ ಜೂನ್ 2 ನೇ ತಾರೀಕಿಂಗೆ ಶಾಲೆ ಸುರುವಾದ ಹಾಂಗೆ, ಮುಜುಂಗಾವಿನ ಶ್ರೀಭಾರತೀವಿದ್ಯಾಪೀಠಲ್ಲಿಯೂ ಅದೇ ದಿನ ಪ್ರಾರಂಭೋತ್ಸವ ಕಳಾತು. ಈ ಸರ್ತಿ ವೈವಿಧ್ಯಮಯ ರೀತಿಲಿ ಕಾರ್ಯಕ್ರಮ ಒಪ್ಪಕೆಚೊಕ್ಕಲ್ಲಿ ಆತಿದ.  ಬಾಲವಾಡಿ ’ಅರುಣ’(ಬಾಲವಾಡಿ ಮೊದಲ ಹಂತ) ವಿಭಾಗಕ್ಕೆ ಸೇರಿದ ಇಪ್ಪತ್ತು ಪುಟಾಣಿ ಮಕ್ಕಳ ತರ-ತರದ ಬಣ್ಣದ ಅಂಗಿಲಿ ನೋಡುವದೇ ಚೆಂದ. ಅವೆಲ್ಲ ಸಾಲಾಗಿ ವೇದಿಕಗೆ ಬಂದು ಮುಖ್ಯ ಅತಿಥಿಗಳಾಗಿ ವೇದಿಕೆಲಿದ್ದ  ವಿಶ್ರಾಂತ ಮಾಸ್ಟ್ರು,ಕರಟದ ಕರಕುಶಲ ನಿಪುಣರೂ ಆದ ಶ್ರೀಮಾನ್ ಕೈಲಂಕಜೆ ವೆಂಕಟ್ರಮಣ ಮಾವನತ್ರಂದ  ಅಕ್ಷರ ಮಾಲೆ ಪುಸ್ತಕ,ಪೆನ್ಸಿಲು,ರಬ್ಬರು, ಕಡ್ಡಿ,ಅಷ್ಟಲ್ಲದ್ದೆ ಒಂದೊಂದು ದೊಡ್ಡ ಬುಗ್ಗೆ,  ತೆಕ್ಕೊಂಡು ಕೊಣುಕ್ಕೊಂಡು ವೇದಿಕೆಂದ ಕೆಳ ಇಳಿವ ದೃಶ್ಯ ಬಹು ಅಪ್ಯಾಯವಾಗಿದ್ದತ್ತು..

ಮುಖ್ಯಮಾಸ್ಟ್ಟ್ರಾದ,ಶ್ರೀಯುತ,ಶಾಂಭಟ್,ದರ್ಬೆಮಾರ್ಗ,ರಕ್ಷಕಶಿಕ್ಷಕಸಮಿತಿಯಕಾರ್ಯದರ್ಶಿಗ

ಳಾದ ಶಾಮರಾಜ ದೊಡ್ಡಮಾಣಿ,ಇವು ವೇದಿಕೆಲಿದ್ದ ಗಣ್ಯರು.ಕೈಲಂಕಜೆ ವೆಂಕಟರಮಣ ಮಾವ ದೊಡ್ಡ ಮಕ್ಕೊಗೆ ಹಿತವಚನ ಹೇಳ್ತಾ “ನೀವು ಪ್ರತಿಯೊಂದು ವಿಷಯಕ್ಕು ಏನು?,ಎತ್ತ?,ಹೇಗೆ?ಎಲ್ಲಿ?ಏಕೆ? ಯಾವಗ?ಹೀಗೆ ಆರು ಪ್ರಶ್ನೆಗಳನ್ನು ತಮ್ಮೊಳಗೇ ಕೇಳಿ ಅದಕ್ಕುತ್ತರ ಹುಡುಕಿದರೆ, ನಿಮ್ಮ ಚಿಂತನ ಮಂಥನ ಸರಿಯಾದ ದಾರಿಲಿ ಸಾಗುತ್ತದೆ, ಸಂಶಯ ಬಂದ ಕೂಡಲೇ ಅಧ್ಯಾಪಕರಿಗೆ ಪ್ರಶ್ನೆ ಹಾಕುತ್ತಿರಬೇಕು. ಪಾಠವಾದ ವಿಷಯಗಳನ್ನ ಮಗದೊಮ್ಮೆ  ಮನನ ಮಾಡಿಕೊಳ್ಳಬೇಕು. ಹಾಗೆಯೇ ಶಾಲೆಗೆ ಸೇರಿದ ಉದ್ದೇಶವನ್ನು ಮರೆಯಬಾರದು” ಹೇಳ್ತ ಕಿವಿಮಾತು ಹೇಳಿದೊವು. ಶ್ರೀಯುತ ಶ್ಯಾಂಭಟ್ ಪ್ರಸ್ತಾವನೆ ಮಾಡಿದೊವು ಒಟ್ಟಿಂಗೆ ಕಳೆದ ಮಾರ್ಚಿಲಿ.ಎಲ್.ಸಿ  ಕ್ಲಾಸಿಲ್ಲಿ ಎಲ್ಲಾಮಕ್ಕಳೂ ಪಾಸಾಗಿ 2ಜೆನ ಡಿಸ್ಟ್ರಿಂಕ್ಷನಿಲ್ಲಿ ಪಾಸಾದ ಸಂಗತಿ ಹೇಳಿದೊವು.ಶ್ಯಾಮರಾಜ್,ಎಸ್.ಎಸ್ ದೊಡ್ಡಮಾಣಿ ಮಕ್ಕೊಗೆ ಹಿತವಚನ ಹೇಳಿದೊವು. ಹತ್ತನೆ ತರಗತಿಯ ಕು|ಶ್ರೀಜಾ  ಸ್ವಾಗತಿಸಿ, ಕು|ರೇಶ್ಮಾ ನಿರೂಪಣೆ ಮಾಡಿ ಕು|ಚೈತ್ರ    ಧನ್ಯವಾದ ಹೇಳಿತ್ತು,       ವರ್ಷಂದ ವರ್ಷಕ್ಕೆ ಅಭಿವೃದ್ಧಿಯಾಗ್ತಾ ಇಪ್ಪ ಈ ವಿದ್ಯಾಲಯ ಮುಂದೆ ಇನ್ನೂ ಪುರೋಭಿವೃದ್ದಿಯಾಗಿ ;ಶ್ರೀ ಗುರುಗಳ  ಆಶಯ ಆದಷ್ಟು ಬೇಗ ಈಡೇರಲಿ ಹೇಳಿ ನಮ್ಮೆಲ್ಲರ ಪ್ರಾರ್ಥನೆ.

ವಿಜಯತ್ತೆ

   

You may also like...

6 Responses

 1. ಲಕ್ಷ್ಮಿ ಜಿ.ಪ್ರಸಾದ್ says:

  ಸುದ್ದಿ ಓದಿ ಎನಾಗು ಒಂದರಿ ಮುಜುಂಗಾವಿಂಗೆ ಬಂದು ನೋಡಕ್ಕೂ ಹೇಳಿ ಅನ್ಸಿತ್ತು ಎನಗೆ ,ಶುಭ ಹಾರೈಕೆಗ

 2. ಲಕ್ಷ್ಮಿ, ಖಂಡಿತ ನೀನು ಬಪ್ಪಲೇ ಬೇಕು ಮುಜುಂಗಾವು ವಿದ್ಯಾ ಪೀಠಕ್ಕೆ.ಪ್ರತಿ ತಿಂಗಳು ಸಭಾಭಾರತಿ ಹೇಳಿ ಆವುತ್ತು.ಮಕ್ಕಳೇ ನೆಡೆಶುವ ಈ ಸಭಾಕಾರ್ಯಕ್ರಮಲ್ಲಿ ವೈವಿದ್ಯತೆ ಇರ್ತು.ಅದಕ್ಕೆ ಪ್ರತಿ ತಿಂಗಳೂ ಆರನ್ನಾರು ಗಣ್ಯರ ಮುಖ್ಯ ಅತಿಥಿಯಾಗಿ ಕರೆಸುದು. ಅಧ್ಯಕ್ಷತೆ ಮಕ್ಕಳಲ್ಲೆ ಆರಾರೊಬ್ಬ. ಕಾರ್ಯಕ್ರಮ ರೂಪುರೇಶೆಲ್ಲ ಅವರದ್ದೆ.[ಎಲ್ಲಾ ತರಗತಿಂದಲೂ ಒಂದೊಂದು ಕಾರ್ಯಕ್ರಮ ಇರುತ್ತು.] ಮಧ್ಯಾಹ್ನ 2 ಗಂಟೆಂದ 3-30 ರ ತನಕ ಇರ್ತು. ತಿಂಗಳ ಕೊನೆದಿನ ಇಪ್ಪ ಇದಕ್ಕೆ ನಿನ್ನ ಒಂದಾರಿ ಕರೆಶುಸೆಕ್ಕು ಕಾಣ್ತೆನಗೆ.

  • ಲಕ್ಷ್ಮಿ ಜಿ.ಪ್ರಸಾದ್ says:

   ನಿಂಗಳ ಅಭಿಮಾನಕ್ಕೆ ಧನ್ಯವಾದಂಗ ವಿಜಯಕ್ಕ ,ಆನು ಅಪ್ಪನ ಮನೆ ವಾರಣಾಸಿಗೆ(ಕೋಳ್ಯೂರಿಂಗೆ) ಬಂದಿಪ್ಪಗ ಮುಜುಂಗಾವಿಂಗೆ ಬತ್ತೆ ,

 3. ಗೋಪಾಲಣ್ಣ says:

  ಸಂತೋಷ .

 4. ಚೆನ್ನೈ ಭಾವ° says:

  ಶುದ್ದಿ ಓದಿ ಕೊಶಿಯಾತು . ಹರೇ ರಾಮ

 5. ಶಾರದಾಗೌರೀ says:

  ವಿದ್ಯಾದೇಗುಲದ ಪ್ರಾರಂಭೋತ್ಸವದ ದಿನವ ವರದಿ ಲಾಯ್ಕಾಯಿದು ವಿಜಯತ್ತೆ.
  ಪುಟ್ಟು ಮಕ್ಕಳ ಶಾಲೆಯ ಪ್ರವೇಶದ ವಿವರ ಚೊಕ್ಕಕ್ಕೆ ಬಯಿಂದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *