Oppanna.com

ಸಂಕ್ರಮಣ

ಬರದೋರು :   ಗೋಪಾಲಣ್ಣ    on   13/04/2012    4 ಒಪ್ಪಂಗೊ

ಗೋಪಾಲಣ್ಣ

ದಾಟಿದರೆ ಹೊಸ್ತಿಲಿನ ಕಾಣುತ್ತು ಲೋಕ
ದಾಟಿದರೆ ವೈತರಣಿ,ಸಿಕ್ಕುತ್ತು ನಾಕ
ದಾಟಿದರೆ ಹೊಳೆಯಾಚೆ ಸಿಕ್ಕುತ್ತು ಮಾವು
ದಾಟಿದರೆ ಕಡಲಾಚೆ ಸಿಕ್ಕುತ್ತು ನೆಲವು
ದಾಟಿದರೆ ಬಾಲ್ಯವಾ,ಜವ್ವನದ ಹಮ್ಮು
ದಾಟಿದರೆ ಯೌವನವ,ಮುಪ್ಪಿನಾ ದಮ್ಮು
ದಾಟಿದರೆ ಶಾಲೆಯಾ ಬಂತು ಕಾಲೇಜು
ದಾಟಿದರೆ ಸಂಕವಾ ಕೊಡೆಕಲ್ಲೊ ಫೀಜು?
ದಾಟಿದರೆ ಕೋಟೆಬದಿ,ಶುದ್ಧಜಲ ಹೊಂಡ
ದಾಟಿದರೆ ಗದ್ದೆಹುಣಿ,ಸಿಕ್ಕುತ್ತು ಬೊಂಡ
ದಾಟಿದರೆ ತಿಂಗಳಿನ, ಬಕ್ಕು ಸಂಕ್ರಾಂತಿ
ದಾಟಿದರೆ ಸಂಕಟವ,ಸಿಕ್ಕುತ್ತು ಶಾಂತಿ
ದಾಟಿದರೆ ಭವದಾಶೆ, ಸಿಕ್ಕುತ್ತು ಮುಕ್ತಿ
ದಾಟಿದರೆ ನಾಸ್ತಿಕ್ಯ, ಉಕ್ಕುತ್ತು ಭಕ್ತಿ
ದಾಟದ್ದೆ ಕೂದೊಂಡ್ರೆ ಏನೇನೂ ಸಿಕ್ಕ
ದಾಟುತ್ತಿರೆಕು ಹೇಳಿ ವಿಷುದಿನದ ಲೆಕ್ಕ
ದಾಟುತ್ತ ರಾಶಿಗಳ ಗ್ರಹದ ಸಂಚಾರ
ದಾಟಿಸುಗು ನಮ್ಮ ಈ ಜೀವನದಿ ತೀರ.

[ಬೈಲಿನ ಎಲ್ಲೋರಿಂಗೂ ವಿಷುವಿನ ಶುಭಾಶಯಂಗೊ]

4 thoughts on “ಸಂಕ್ರಮಣ

  1. ಗೋಪಾಲಣ್ಣ೦ಗೆ ಹಾಂಗೂ ಎಲ್ಲೋರಿಂಗೂ ವಿಷುವಿನ ಶುಭಾಶಯಂಗೋ… ನಿನ್ನೆ ಜಯಕ್ಕಂಗೆ ಎದುರಾದ ಪರಿಸ್ಥಿತಿ ಮತ್ತು ಬೈಲಿನ ಪ್ರೇರಣೆ ಈ ಪದ್ಯವ ಬರೆಶಿತ್ತು…

    ನೋಡಿದರೆ ಕಣಿ ದಾಂಟುಲೆ ಎಡಿಗು ಗಂಡಿ;
    ಪ್ರೇರಣೆ ನೀಡಿದ ಒಪ್ಪಣ್ಣ|
    ದಾಂಟುವುದೆ ವಿಷು ಸಂಕ್ರಮಣ;
    ಕಲಿಶಿದವು ಗೋಪಾಲಣ್ಣ|
    ಸಮಾಜಲ್ಲಿಪ್ಪ ಒಂದು ಕಣಿ;
    ತೋರುಸುತ್ತು ಜಯಕ್ಕ|

    ನಮ್ಮವರ ಮದುವೆಗೆ ನಿನ್ನೆ ಹೋದ ಶ್ರೀಚರಣ
    ಗಮ್ಮತಿಲಿ ಅಲ್ಲಿ ತಿಂದ ನಾಲ್ಕೈದು ಐಸ್ಕ್ರೀಂ
    ಅಮ್ಮನತ್ರೆ ಶುದ್ದಿ ಹೇಳಿದ ಬಂದ ಮೇಲೆ
    ಅಮ್ಮಂಗೆ ಬಂತು ಕಣ್ಣಿಲಿ ನೀರು ||

    ಅಮ್ಮಂದಿರ ಕಣ್ಣೀರೊರೆಸಿ
    ಕಂದಮ್ಮಗಳ ಭವಿಷ್ಯ ಉಜ್ವಲವಾಗಿಸಿ
    ಬಾಳ ಹಸನಾಗಿಸಿ; ರಾಮ ರಾಜ್ಯ ಕಟ್ಟುವ
    ದೃಢ ಸಂಕಲ್ಪವ ಮಾಡಿತ್ತು||

    ಬನ್ನಿ ಎಲ್ಲರು ಒಂದಾಗಿ
    ಕಣಿ,ಗಂಡಿ ಎಲ್ಲ ದಾಂಟಿ
    ಸಮುದ್ರವನ್ನೇ ಹಾರುವ
    ರಾಮ,ಹನುಮರ ಅನುಗ್ರಹ ಬೇಡುವ||

  2. ದಾಟಿದರೆ ಪದ್ಯದ ದಾಟಿ, ಅದರ ಭಾವ ಮನಸ್ಸಿನ ಮೀಂಟಿತ್ತು. ಗೋಪಾಲಣ್ಣನ ಪದ್ಯಕ್ಕೆ ಸರಿಸಾಟಿ ಇಲ್ಲೆ. ಬೈಲಿನ ಸರ್ವರಿಂಗು ವಿಷುಹಬ್ಬದ ಶುಭಾಶಯಂಗೊ. ಹೊಸ ವರ್ಷ ಶುಭವನ್ನೇ ತರಲಿ.

  3. ಚಿಕ್ಕ ಕವನ ಚೊಕ್ಕ ಆಯ್ದು. ವಿಷುಹಬ್ಬದ ಶುಭಾಶಯಂಗೊ ಗೋಪಾಲಣ್ಣ ಮತ್ತು ಬೈಲಿನ ಸಮಸ್ತರಿಂಗು ಹೇಳುತ್ತು -‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×