“ಸತ್ತ ಎಮ್ಮಗೆ ಹತ್ತುಕುತ್ತಿ ಹಾಲು”-{ಹವ್ಯಕ ನುಡಿಗಟ್ಟು-34}

September 7, 2015 ರ 6:53 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು”{ಹವ್ಯಕ ನುಡಿಗಟ್ಟು-34}

ಆಚ  ಬಯಲಿನ ಬೋಚಣ್ಣಜ್ಜನ ಹೆಂಡತ್ತಿ ಅಕ್ಕಮ್ಮಕ್ಕ  ಸತ್ತತ್ತಾಡ. ಅದರ ಸೊಸೆ ಹೇದೊಂಡು ಹರಿಯೊ-  ಮುರಿಯೊನೆ ಕೂಗಿತ್ತು.ಈ ಶುದ್ದಿ ಮನೆ ಎಜಮಾನ್ತಿ  ಹೇದಪ್ಪಗ ..,

” ಸತ್ತದು ಸೊಸಗೆ ಒಳ್ಳೆದಾತಾಯಿಕ್ಕು. ಅತ್ತೆ-ಸೊಸಗೆ ಏವತ್ತೂ ವಾದಾಂಟ ಆಗೆಂಡಿದ್ದತ್ತು”.ಎಜಮಾನನ ಪ್ರತ್ಯುತ್ತರಕ್ಕೆ,

‘’ಅಯ್ಯೋ.., ಒಳ್ಳೆದಾತು ಹೇಳ್ತೀರೊ?.ಅದರ ಸೊಸೆ ಸರಸು; ಅತ್ತೆಂದಾಗಿ ಎಷ್ಟು ಉಪಕಾರ ಆಗಿಂಡಿದ್ದತ್ತು ಹೇದು ಶುದ್ದಿ ಹೇದೊಂಡು ಬಿಕ್ಕಿ-ಬಿಕ್ಕಿ ಕೂಗಿತ್ತಪ್ಪ!’’.

ಅದೆಲ್ಲಾ ಬರೀ ನಟನೆ!. ‘ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು’  ಹೇಳ್ತ ನಮುನೆಲಿ ಮಾತಾಡುವದಿದ.

ಹೀಂಗೆ ಅವರಿಬ್ಬರ ಮಾತುಕತೆ ಅಪ್ಪಗ; “ಆ ಅಜ್ಜಿ ಸತ್ತದಕ್ಕೂ ಈ ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು ಸಿಕ್ಕುವದಕ್ಕೂ ಎಂತ ಸಂಬಂಧ!?”.ಅವರ ಪುಳ್ಳಿಯ ಕುತೂಹಲ!.

ಅದಲ್ಲೇ ಇಪ್ಪದದ ವಿಷಯ!.ಪ್ರಾಕಿಲ್ಲಿ ಒಂದು ಮನೆಲಿಸುಮಾರು ಕರವು ಕರದು ಮುದಿ ಆದ ಒಣಕ್ಕಟೆ ಎಮ್ಮೆ “ಒಂದಾರಿ ಸಾಯಲಿ ಇದು” . ಸುಮ್ಮನೇ ಅಕ್ಕಚ್ಚು,ಬೆಳೂಲು ದೆಂಡ. ಹೇದು ಗ್ರೇಶೆಂಡಿಪ್ಪಗ  ಒಂದಿನ ಅದು ಕೊಟ..ಕ್ಕು ಹೇಳೇಕ್ಕೊ!. ಅದು ಸತ್ತಪ್ಪಗ ಪೇಚಾಡೆಂಡವು.ಸುಮಾರು ವರ್ಷ ಹಾಲು ಕೊಟ್ಟು ನಮ್ಮ ತಾಂಗಿದ ಎಮ್ಮೆ ಅದು.ದಿನಕ್ಕೆ ಹತ್ತು ಕುತ್ತಿ ಹಾಲು ಕರದ ಎಮ್ಮೆ. ಅದಿನ್ನು ಕೆಲವು ವರ್ಷಾದರೂ ಬದುಕ್ಕೆಕ್ಕಾತು. ಗೊಬ್ಬರಾದರೂ ಒಂದಿಷ್ಟು ಆವುತಿತು.ಇಷ್ಟು ಬೇಗ ಸಾಯಿಗೂಳಿ ಗ್ರೇಶಿದ್ದೇ ಇಲ್ಲೆ!.ತುಂಬಲಾರದ ನಷ್ಟ ಹೇಳೆಂಡೊವು. ಅಲ್ಲಿಂದ ಸುರುವಾತಿದ ಈ ನುಡಿಗಟ್ಟು!. ಸತ್ತ ಮತ್ತೆ, ಕೈ ತಪ್ಪಿ ಹೋದ ಮತ್ತೆ, ಹೊಗಳಿ ಏರ್ಸಿ ಮಡುಗುವ ಮಾತಿಂಗೆ    ಈ ನುಡಿಗಟ್ಟಿನ ಬಳಸಿಗೊಳ್ತವು.ಒಂದು ರೀತಿಲಿ ರಾಜಕಾರಿಣಿಗೊ; ವಿರೋಧ ಪಕ್ಷದೊವು ಸತ್ತಪ್ಪಗ ಮಾಡುವ ನುಡಿನಮನ ಹೇಳ್ಲಕ್ಕೊ? ನಿಂಗೊ ಹೇಳಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಇದು ಎಲ್ಲ ದಿಕ್ಕೂ ಕಾಂಬಲೆ, ಕೇಳುಲೆ ಸಿಕ್ಕುತ್ತು ಈಗೀಗ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಎಂತಾರು ಇಲ್ಲದ್ದೆ ಆಗಿಯಪ್ಪಗಳೇ ಅದರ ನಿಜವಾದ ಬೆಲೆ ಗೊಂತಪ್ಪದು. ಇಬ್ಲೀಸಿನ ಓಲ್ಡ್ ಈಸ್ ಗೋಲ್ಲ್ಡ್ ಹೇಳಿರುದೆ ರಜ್ಜ ಈ ನುಡಿಗಟ್ಟಿನ ಹತ್ರೆ ಬತ್ತೋ ಹೇಳಿ.
  ವಿಜಯಕ್ಕ, ನಿಂಗೊ ಬರೆತ್ತಾ ಇಪ್ಪ ಹವ್ಯಕ ನುಡಿಗಟ್ಟುಗಳ ಓದುತ್ತಾ ಇದ್ದೆ. ಓದಿ ಅಪ್ಪಗ “ಅಪ್ಪದು” ಹೇಳಿ ಕಾಣುತ್ತು. ಹಳೆಯ ನುಡಿಗಟ್ಟುಗಳ ಈಗಾಣ ಮಕ್ಕೊಗೆ ಪರಿಚಯಿಸುತ್ತಾ ಇಪ್ಪದು ಸಂತೋಷದ ವಿಚಾರ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಗಣೇಶ ಮಾವ°ಅಡ್ಕತ್ತಿಮಾರುಮಾವ°ಅನಿತಾ ನರೇಶ್, ಮಂಚಿವಿಜಯತ್ತೆತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆದೊಡ್ಡಭಾವದೇವಸ್ಯ ಮಾಣಿಚೆನ್ನಬೆಟ್ಟಣ್ಣವಿದ್ವಾನಣ್ಣಪುಣಚ ಡಾಕ್ಟ್ರುದೀಪಿಕಾರಾಜಣ್ಣದೊಡ್ಮನೆ ಭಾವಶುದ್ದಿಕ್ಕಾರ°ಶಾ...ರೀಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುಜಯಶ್ರೀ ನೀರಮೂಲೆಡಾಗುಟ್ರಕ್ಕ°ಮಾಲಕ್ಕ°ಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ