“ಸಾಸಮೆ ಕಾಳು ಹೋಪಲ್ಲಿ ಅಡಪ್ಪಿ, ಕುಂಬಳಕಾಯಿ ಹೋಪಲ್ಲಿ ಬಿಡುದು-{ಹವ್ಯಕ ನುಡಿಗಟ್ಟು-39}

“ಸಾಸಮೆ  ಹೋಪಲ್ಲಿ ಅಡಪ್ಪಿ, ಕುಂಬಳಕಾಯಿ ಹೋಪಲ್ಲಿ ಬಿಡುದು”-{ಹವ್ಯಕ ನುಡಿಗಟ್ಟು-39}

 

ಮದಲಿಂಗೆ ಕಿಟ್ಟಜ್ಜ ಹೇದೊಬ್ಬ ಇದ್ದಿದ್ದಂ.ಅವನ ಎಜಮಾನ್ತಿ  ಐತ್ತಮ್ಮಜ್ಜಿ. ಅವರೊಳ  ಅನ್ಯೋನ್ಯತೆ  ಇದ್ದತ್ತು. ಹಾಂಗಾರು ಅವಕ್ಕೆ ಒಂದೊಂದಾರಿ ಕೊಂಗಾಟದ ಲಡಾಯಿ ಅಕ್ಕಿದ.

ಕಿಟ್ಟಜ್ಜ ರಜ ಪೀನಾರಿ ಹೇಳ್ಲಕ್ಕು.ಬೇಕಾದ್ದಕ್ಕೆ ಖರ್ಚು ಮಾಡ್ಳೆ ಅವಂಗೆ ಆಶೆ ಬಿಡ. ಐತ್ತಮ್ಮಂಗೆ ಪೀನಾರಿತನ ಆಗ. ದನಗೊಕ್ಕೆ ಅಕ್ಕಚ್ಚು ಕೊಡ್ಳೆ ಹಿಂಡಿ ಮುಗುದತ್ತು ಹೇಳಿರೆ, ಕಿಟ್ಟಜ್ಜಂಗೆ ಹಿತ ಆಗ.ಇಷ್ಟು ಪಕ್ಕ ಹಿಂಡಿ ಮುಗುದತ್ತೊ!?.ರಜ ಸಮಯ ಹಿಂಡಿ ಹಾಕದ್ದೆ ಅಕ್ಕಚ್ಚು ಕೊಡಿ ಹೇಳುಗು.ಅಷ್ಟೊತ್ತಿಂಗೆ

“ಹಿಂಡಿ ಹಾಕದ್ದೆ ಇದ್ದರೆ ಕರವ ಎಮ್ಮೆ,ದನಗೊಕ್ಕೆ ಹಾಲು ಸಿಕ್ಕ. ರಜ ಸಮಯಪ್ಪಗ ಅವು ಆಲಿ ಬಚ್ಚಿ, ಸಾವಲಡ್ಪುಗು”.ಹೇಳುಗು ಐತ್ತಮ್ಮ.

ಗೆದ್ದೆ ಬೇಸಾಯಕ್ಕೂ ಅಡಕ್ಕೆ ತೋಟದ ಕೃಷಿಗೂ ಈಟು ಹಾಕಲೆ ಅಜ್ಜಂಗೆ ಆಶೆ ಬಿಡ. “ನಿಂಗೊ ಸಾಸಮೆ ಕಾಳು ಹೋಪಲ್ಲಿ ಅಡಪ್ಪಿ ಕುಂಬಳಕಾಯಿ ಹೋಪಲ್ಲಿ ಬಿಟ್ಟ ಹಾಂಗಕ್ಕು ಹೇಳಿ ಪರಂಚುಗು ಎಜಮಾನ್ತಿ.

ಅಪ್ಪು ಹೀಂಗೆ ಸಣ್ಣ ಪೈಸವ ಉಳಿತಾಯ ಮಾಡ್ಳೆ ಹೋಗಿ ದೊಡ್ಡದರ ಕಳವ ವ್ಯವಹಾರಕ್ಕೆ  ಈ  ನುಡಗಟ್ಟಿನ  ಬಳಸಿಗೊಳ್ತವು.

 

 

ವಿಜಯತ್ತೆ

   

You may also like...

5 Responses

 1. indiratte says:

  ‘ಸೂಜಿ ಹೋಪಲ್ಲಿ ಮುಚ್ಚಿ ದಬ್ಬಣ ಹೋಪಲ್ಲಿ ಹೊಲಿಗು ‘- ಇದುದೇ ಇದೇ ಸಾಲಿನ ನುಡಿಗಟ್ಟು ಆದಿಕ್ಕಲ್ಲದಾ….ಅರ್ಥಪೂರ್ಣವಾದ ನುಡಿಗಟ್ಟಿನ ತಿಳಿಸಿಕೊಟ್ಟದಕ್ಕೆ ಧನ್ಯವಾದಂಗ ವಿಜಯತ್ತೆ.

 2. ಬೊಳುಂಬು ಗೋಪಾಲ says:

  ಗೂಡಂಗಡಿಲಿ ಇಪ್ಪತ್ತೈದು ಪೈಸೆಗೆ ಚರ್ಚೆ ಮಾಡಿದವ, ಬಿಗ್ ಬಜಾರಿಲ್ಲಿ ಹುಳಿ ಹುಳಿ ನೆಗೆ ಮಾಡಿ ದೊಡ್ಡ ನೋಟು ಕೊಟ್ಟು ಸಾಮಾನು ತೆಕ್ಕೊಂಡನಾಡ. ಇದುದೆ ಹಾಂಗೆಯೊ ಹೇಳಿ. ಕರೆಂಟು ಒಳುಶೆಕು ಹೇಳಿ ಇರುಳು ಅಂಬಗಂಬಗ ಪವರು ಕಟ್ಟು ಮಾಡಿಕ್ಕಿ, ಹಗಲಿಡೀ ಮಾರ್ಗದ ಕರೆಲಿ ದೊಡ್ಡ ಹೆಲೊಜಿನ್ ಲೈಟು ಹೊತ್ತೆಂಡಿದ್ರುದೆ ಆರ ಕಣ್ಣಿಂಗುದೆ ಬೀಳ್ತಿಲ್ಲೆ, ಅಲ್ಲದೊ ಅಕ್ಕಾ. ಗಟ್ಟಿ ನುಡಿಗಟ್ಟಿನ ಕೊಟ್ಟಿದಿ, ಸರಿಯಾಗಿದ್ದು.

 3. ಚೆನ್ನೈ ಭಾವ° says:

  ಕುಂಬಳಕ್ಕಾಯಿ ಹೋಪಲ್ಲಿ ಅಡಪ್ಪಿರೆ ಕೊಳದು ನಾರುಗು ಹೇದು ಹೇಳ್ತ ಓ ಇಲ್ಲ್ಯೊಬ್ಬ !!

 4. ಇಂದಿರತ್ತೆ.., ಸೂಜಿ ಹೋಪಲ್ಲಿ ಹೊಲುದು ದಬ್ಬಣ ಹೋಪಲ್ಲಿ ಬಿಡುದು ಹೇಳಿ ಆದಿಕ್ಕೊ?. ಚೆನೈಭಾವನತ್ರೆ ಹೇಳಿದವನ ಆಲೋಚನೆ ಸೂಪರ್!. ಆದರೆ ಎನ್ನತ್ರೆ ಒಬ್ಬ ಹೇಳಿದ ಸಾಸಮೆ ಹೋಪಲ್ಲಿ ಅಡಪ್ಪುದು ಬೇಡ. ಸಾಸಮೆ ಮಾಡಿ ಉಂಬದು ಹೆಂಗೆ!?. ಈಗ ನಾವೆಂತ ಮಾಡ್ಳಕ್ಕು!!!. ಬೊಳುಂಬು ಗೋಪಾಲನ ವಾದ ಸರಿ .

 5. indiratte says:

  ಅಪ್ಪು ವಿಜಯತ್ತೆ … ಆನು ಬರವಗ ಅತ್ತಿತ್ತೆ ಆತು.. ತಿದ್ದಿದಕ್ಕೆ ಥ್ಯಾಂಕ್ಸ್ ಆತಾ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *