ಸುಭಾಷಿತ – ೨೮

June 2, 2017 ರ 5:58 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅತ್ಯಂಬುಪಾನಾನ್ನ ವಿಪಚ್ಯತೇsನ್ನಮ್।

ನಿರಂಬುಪಾನಾಚ್ಚ ಸ ಏವ ದೋಷಃ।।

ತಸ್ಮಾನ್ನರೋ ವಹ್ನಿವಿವರ್ಧನಾಯ।

ಮುಹುರ್ಮುಹುರ್ವಾರಿ ಪಿಬೇದಭೂರಿ।।

 

ಪದಚ್ಛೇದ:

ಅತ್ಯಂಬುಪಾನಾತ್ ನ ವಿಪಚ್ಯತೇ ಅನ್ನಮ್ ನಿರಂಬುಪಾನಾತ್ ಚ ಸಃ ಏವ ದೋಷಃ।

ತಸ್ಮಾತ್ ನರಃ ವಹ್ನಿವಿವರ್ಧನಾಯ ಮುಹುರ್ಮುಹುಃ ವಾರಿ ಪಿಬೇತ್ ಅಭೂರಿ।।

 

ಅನ್ವಯ:

ಅತ್ಯಂಬುಪಾನಾತ್(ಅತಿಯಾಗಿ ನೀರು ಕುಡಿವದರಂದ) ಅನ್ನಂ(ಆಹಾರ) ನ ವಿಪಚ್ಯತೇ(ಜೀರ್ಣ ಆವುತ್ತಿಲ್ಲೆ)

ನಿರಂಬುಪಾನಾತ್ ಚ (ನೀರು ಕುಡಿಯದೇ ಇದ್ದರೂ) ಸ ಏವ ದೋಷಃ (ಅದೇ ದೋಷ- ಜೀರ್ಣ ಆವ್ತಿಲ್ಲೆ)

ತಸ್ಮಾತ್ (ಹಾಂಗಾಗಿ) ನರಃ ( ಮನುಷ್ಯ) ವಹ್ನಿವಿವರ್ಧನಾಯ(ಜಠರಾಗ್ನಿ ಹೆಚ್ಚಪ್ಪಲೆ ಬೇಕಾಗಿ) ಮುಹುರ್ಮುಹುಃ(ಆಗಾಗ) ಅಭೂರಿ(ಸ್ವಲ್ಪ ಸ್ವಲ್ಪವೇ) ವಾರಿ ಪಿಬೇತ್(ನೀರು ಕುಡಿಯೆಕ್ಕು)

 

ಏನೇ ಮಾಡ್ತರೂ ಅದು ಅತಿ ಅಪ್ಪಲಾಗ. ಒಂದೋ ಆರು ಮೊಳ ಇಲ್ಲದ್ದರೆ ಮೂರು ಮೊಳ ಹೇಳಿ ಮಾಡ್ಲಾಗ. ಅತಿಸರ್ವತ್ರ ವರ್ಜಯೇತ್ ಹೇಳ್ತವನ್ನೆ.

ಊಟ ಮಾಡುವಗ ಲೆಕ್ಕಂದಚ್ಚಿಗೆ ನೀರಾಗಲೀ ದ್ರವಾಹಾರ ಆಗಲೀ ತೆಕ್ಕೊಂಬಲಾಗ. ಜೀರ್ಣ ರಸಂಗೊ ಚಪ್ಪೆ ಆಗಿ ಸರಿಯಾಗಿ ಜೀರ್ಣ ಆಗ.

ನೀರು ಅಥವಾ ದ್ರವಾಹಾರವೇ ಇಲ್ಲದೆ ಬರೇ ಗಟ್ಟಿ ಆಹಾರ ಮಾತ್ರ ಸೇವಿಸುಲೂ ಆಗ. ನೀರಿಲ್ಲದ್ದೆ ಆವಗಳೂ ಜೀರ್ಣ ಸರಿಯಾಗಿ ಆಗ.

ಅಷ್ಟಾಂಗಹೃದಯಲ್ಲಿ ಹೇಳಿದಾಂಗೆ ಜಠರದ ಅರ್ಧಭಾಗ ಗಟ್ಟಿ ಆಹಾರ,ಅದರರ್ಧ ದ್ರವಾಹಾರ ಸೇವಿಸೆಕ್ಕು ಒಳುದ ಕಾಲುಭಾಗ ಖಾಲಿ ಬಿಡೆಕ್ಕು ವಾಯುಸಂಚಾರಕ್ಕೆ.

ಜಠರಂ ಪೂರಯೇದರ್ಧಂ ತದರ್ಧಂ ತು ಜಲೇನ ಚ।

ವಾಯೋಃ ಸಂಚರಣಾರ್ಥಾಯ ಪಾದಮೇಕಂ ಪರಿತ್ಯಜೇತ್।।

ಜೀರ್ಣಕ್ರಿಯೆ ಸರಿಯಾಗಿ ಆಯೆಕ್ಕಾರೆ ಮಧ್ಯೆ ಮಧ್ಯೆ ರಜರಜವೇ ನೀರು ಕುಡಿಯಕ್ಕು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನೀರು ಯಾವರೀತಿ ಕುಡಿಯೆಕ್ಕು ಹೇಳಿ ತಿಳಿಶಿ ಕೊಟ್ಟ ಒಳ್ಳೆ ಸೂಕ್ತಿ

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ತ್ರಿಕಾಲಾಬಾಧಿತ ಸತ್ಯ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಅಜ್ಜಕಾನ ಭಾವಜಯಶ್ರೀ ನೀರಮೂಲೆದೊಡ್ಡಭಾವಮಂಗ್ಳೂರ ಮಾಣಿಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆvreddhiತೆಕ್ಕುಂಜ ಕುಮಾರ ಮಾವ°ಪೆರ್ಲದಣ್ಣಮುಳಿಯ ಭಾವಸುಭಗಕಜೆವಸಂತ°ಶ್ಯಾಮಣ್ಣಸುವರ್ಣಿನೀ ಕೊಣಲೆಶಾ...ರೀದೊಡ್ಮನೆ ಭಾವಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಬೊಳುಂಬು ಮಾವ°ಒಪ್ಪಕ್ಕದೊಡ್ಡಮಾವ°ಚುಬ್ಬಣ್ಣಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ